ತೃಪ್ತಿ (satisfaction) ಸಮಾಧಾನ ಎಲ್ಲಿ ಸಿಗತ್ತೆ... ??
ತೃಪ್ತಿ (satisfaction) ಸಮಾಧಾನ ಎಲ್ಲಿ ಸಿಗತ್ತೆ... ?? .
ತೃಪ್ತಿ (satisfaction) ಸಮಾಧಾನ ಎಲ್ಲಿ ಸಿಗತ್ತೆ... ?? ಇದು ಒಬ್ಬರ ಪ್ರಶ್ನೆ.
ದುಡಿತದಲ್ಕಿ ಹಣ ಸಿಗತ್ತೆ. ಒಂದು ಹಣ ದೊರೆತರೆ ಎಲ್ಲವೂ ದೊರೆಯತ್ತೆ ಎಂಬ ಭ್ರಮೆ ಬೇರೆ. ಮೋಬೈಲಿನಲ್ಲಿ ನೆಟ್ ಇದೆ. ಊಳುವದರಿಂದ ಧಾನ್ಯಗಳು ಸಿಗತ್ತೆ. ಇಂದಿನ ಮಾಲ್ ಗಳಿಗೆ ಹೋದರೆ ಎಲ್ಲವೂ ಸಿಗತ್ತೆ ಹಾಗೆ *ತೃಪ್ತಿಯೂ* ಮಾರ್ಕೆಟಿನಲ್ಲಿ ಸಿಗುವದಾಗಿದ್ದರೆ ಕೊಡುಕೊಳ್ಳುತ್ತಿದ್ದೆವೆಯೋ ಏನೋ. ಕೊಂಡುಕೊಳ್ಳಲು ಎಲ್ಲಿಲ್ಲಿಯೂ ಸಿಗುವದೇ ಇಲ್ಲ. ಅಂತೆಯೇ ಏನೆಲ್ಲ ಕೊಂಡುಕೊಂಡರೂ ತೃಪ್ತಿ ಪಡೆಯಲಾಗುವದಿಲ್ಲ. ತೃಪ್ತಿಯಿಂದ ಇರಲು ಆಗುವದೇ ಇಲ್ಲ.
ಸಿಗದ ತೃಪ್ತಿಯಿಂದ, ತೃಪ್ತಿ ಪಡೆಯುವದು ಹೇಗೆ.... ??
ತೃಪ್ತಿ ಸಿಗುವ ವಸ್ತು ಅಲ್ಲ. ಅದು ಅಭಿವ್ಯಕ್ತಗೊಳಿಸುವ ವಸ್ತು. *ಯಾವದು ಅತ್ಯಮೂಲ್ಯವಾಗಿದೆ ಅದೆಲ್ಲ ನಮ್ಮಲ್ಲಿಯೇ ಇದೆ* ಯಾವದು ಕಚಡಾ ವಸ್ತು ಇದೆ ಅದು ಮಾರ್ಕೆಟಿನಲ್ಲಿ ಇದೆ. ನಮಗೇನು ಬೇಕು ಅದನ್ನು ಅಲ್ಕಿ ಹುಡುಕೋಣ. ಅಮೂಲ್ಯವಾದ ತೃಪ್ತಿಯೂ ಸಹ ನಮ್ಮಲ್ಲಿಯೇ ಇದೆ. ಅದನ್ನು ಅನುಭವಿಸುವ ಕಲೆ ತಿಳಿಯಬೇಕು. ಅಭಿವ್ಯಕ್ತಗೊಳಿಸುವ ಬಗೆ ಗೊತ್ತಿರಬೇಕು.
ಊಟ - ನಿದ್ರೆ - ವಾಕಿಂಗ್ - ಅಧ್ಯಯನ - ಪೂಜೆ - ಸಂಧ್ಯಾವಂದನೆ - ನಮ್ಮ ನಮ್ಮ ಆಫೀಸಿನ ಕೆಲಸ - ಟಿವಿ ಮೋಬೈಲು ಇತ್ಯಾದಿಗಳಲ್ಲಿ ಬ್ಯಸಿ ಇರುವಾಗ, ಕೇಲಸಗಳನ್ನು ಮಾಡಿದಾಗ ಯಾರಿಗೆ ತೃಪ್ತಿಯಾಗಿದೆ ಹೇಳಿ.. ?? ಎಂದು ಕೇಳಿದರೆ ಒಬ್ಬರೂ "ನನಗೆ ತೃಪ್ತಿಯಾಗಿದೆ" ಎಂದು ಕೈ ಎತ್ತಿ ಹೇಳಲಾರ. ಆ ತರಹದ ದುರವಸ್ಥೆಯಲ್ಕಿ ನಾವಿದ್ದೇವೆ.
"ಎಲ್ಲಿ ಯಾಂತ್ರಿಕತೆ ಇದೆ, ಅಲ್ಲಿ ತೃಪ್ತಿ ಇರದು" ಯಂತ್ರ ಹೇಗೆ ಇಷ್ಟಿಷ್ಟು ಕೆಸಗಳನ್ಬು ಮಾಡಬೇಕು ಎಂದು ನಿರ್ಧರಿಸಿದಂತೆ, ನಾವೂ ಇಷ್ಟಿಷ್ಟು ಕೆಲಸಗಳನ್ನು ಮೆಕಾನಿಕಲ್ ಆಗಿ ಮಾಡಿದಾಗ, ಹೊತ್ತ ಕೆಲಸಗಳನ್ನು ಮುಗಿಸಬಹುದೇ ಹೊರತು, ತೃಪ್ತಿ ಪಡೆಯಲಾಗದು.
ಅತೀ ಸಹಜ ಕೆಲಸ ಊಟ. ನಿತ್ಯವೂ ಮಾಡುತ್ತೇವೆ. ಆದರೆ ಊಟವಾಗಿರತ್ತೆ ಊಟ ಮಾಡಿದ ಅನುಭವ ಇರುವದೇ ಇಲ್ಲ. ಊಟ ನಡೆದಾಗ ಟೀವಿ, ಮೊಬೈಲು, ಹರಟೆ, ಸಮಯದ ಒತ್ತಡ - ಗಡಿಬಿಡಿ, ಆಫೀಸು, ಝಗಳ, ಇವುಗಳ ಕಡೆ ಲಕ್ಷ್ಯ ಕೊಡುವದರಲ್ಲಿಯೇ ಮುಗಿದಿರತ್ತೆ. ಊಟ ಮಾಡಿದ ತೃಪ್ತಿ ಇರುವದೇ ಇಲ್ಲ. ವಿಚಿತ್ರ ನೀರು ಕುಡಿಯುವ ಕ್ರಿಯೆಯೂ ತೃಪ್ತಿಯಿಂದ ಮಾಡಲಾಗುವದಿಲ್ಲ. ಊಟ ಒಂದು ದಿನನಿತ್ಯದ ಕೆಲಸ ಆಗಬೇಕು ಆಗಬೇಕು ಅಷ್ಟೆ. "ಅತೀ ಸಹಜವಾದ ಕ್ರಿಯೆ ಊಟ, ಅದರಿಂದಲೇ ತೃಪ್ತಿ ಪಡದ ಮನುಷ್ಯ, ಅತೀ ದೊಡ್ಡ ತೃಪ್ತಿ ಬೇಕು ಅಂದರೆ ಅವನಿಂದ ಹೊಂದಲು ಈ ಜನ್ಮವಲ್ಲ ಸಾವಿರ ಜನ್ಮಗಳು ಕಳೆದರೂ ಪಡೆಯಲಾಗದು.
ತೃಪ್ತಿ ಸಿಗಲು ನಾವೇನು ಮಾಡಬೇಕು....??
"ಯಾವ ಕೆಲಸ ಆರಿಸಿಕೊಂಡಿದ್ದೇವೆ, ಆ ಕೆಲಸ ಮುಗಿಯುವವರೆಗೂ ಬೇರೆಯ ಕೆಲಸವನ್ಬು ಈ ಕೆಲಸದಲ್ಲಿ ಸೇರಿಸಬಾರದು" ಇದು ತೃಪ್ತಿ ಪಡೆಯಲು ಮೊದಲ ಸೂತ್ರ. ಎರಡನೇಯದ್ದು "ಆದಷ್ಟು ಮಾತು ಕಡಿಮೆ ಮಾಡುವದು" ಮಾತು ಕಡಿಮೆ ಮಾಡುವದೇನಿದೆ ತೃಪ್ತಿ ಕದಡದಿರುವಂತೆ ನೋಡಿಕೊಳ್ಳುತ್ತದೆ ಜೊತೆಗೆ ತೃಪ್ತಿಯನ್ನು ಅನುಭವಿಸಲು ಬೇಕಾದ ಏಕಾಗ್ರತೆಯನ್ನು ಒದಗಿಸುತ್ತದೆ.
ಮಾಡುವ ಪ್ರತಿ ಕಾರ್ಯದಲ್ಲಿಯೂ "ಭಗವತ್ಕರ್ತೃತ್ವಾನುಸಂಧಾನ, ಭಗವತ್ ತೃಪ್ತಿ" ಇವುಗಳೇ ಉದ್ದೇಶಿತವಾಗಿ ಇರುವಾಗ "ನಾನು - ಮಾಡುವ ಕಾರ್ಯ - ಮಾಡಿಸುವ ದೇವರು" ಮೂರು ಜನರೇ ಇರುತ್ತೇವೆ. ಆಗ ಮನಸ್ಸು ಕದಡುವ ಡಿಸ್ಟರ್ಬ ಆಗುವ ಸಾಧ್ಯತೆ ತುಂಬ ಕಡಿಮೆ ಆಗುತ್ತೆ. ಆಗ ನಿತ್ಯತೃಪ್ತ ದೇವರ ಕರುಣೆಯಿಂದ ನಮ್ಮಲ್ಲಿಯ ತೃಪ್ತಿ ಅಭಿವ್ಯಕ್ತವಾಗುತ್ತಾ ಸಾಗುತ್ತದೆ...... ಈ ತರಹದ ನೂರಾರು ಕ್ರಮಗಳಿವೆ ತೃಪ್ತಿ ಅನುಭವಿಸಲು. ಇಲ್ಲಿ ಒಂದನ್ನು ಮಾತ್ರ ಹೇಳುವ ಪ್ರಯತ್ನ ಮಾಡಿದ್ದೇನಷ್ಟೆ.....
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments