ಅಕ್ಷೋಭ್ಯತೀರ್ಥರು (ಮಳಖೇಡ)
*ಅಕ್ಷೋಭ್ಯತೀರ್ಥರು*
ಕ್ಷೋಭೆಗಳೇ ಇಲ್ಲದ ಶ್ರೀಮದಾಚಾರ್ಯರಿಂದ ದೀಕ್ಷೆ ಪಡೆದ ಕಾರಣ ಒಂದಾದರೆ, ಜಗತ್ತಿಗೇ ಕ್ಷೋಭೆ ಬರದಂತೆ ಮಾಡುವ ಶಾಸ್ತ್ರ ರಚನೆ ಮಾಡಿದ, ಶ್ರೀಮಟ್ಟೀಕಾಕೃತ್ಪಾದರ ಗುರುಗಳು ಆದ ಕಾರಣ ಈ ಮಹಾಮುನಿಗಳ ನಾಮ *ಅಕ್ಷೋಭ್ಯತೀರ್ಥರು* ಎಂಬುವದು ಅತ್ಯಂತ ಸಾರ್ಥಕ ಎಂದೆನಿಸುತ್ತದೆ. ಈ ಮಹಾ ಗುರುಗಳನ್ನು ನೆನೆಸುವ, ಸ್ಮರಿಸುವ, ವಂದಿಸುವವರು ಪಾಮರರು ಎಂದೇ ಆಗಲಾರರು. ಅವರುಗಳಿಗೆ ಸರ್ವಥಾ ಮನಃಕ್ಷೋಭೆ ಇರದು.
*ವಾದಿಮಾರ್ತಾಂಡ*
ವಿದ್ಯಾರಣ್ಯರಂಥ ಮಹಾ ಪಂಡಿತರನ್ನು ವಾದದಲ್ಲಿ ಪರಾಭವಗೊಳಿಸಿದ ಧಿರ. ಅದರ ಕುರುಹು ಇಂದಿಗೂ ಮುಳಬಾಗಿಲಿನ ಪರ್ವತಸ್ಥಾನದಲ್ಲಿ ವಿಜಯಸ್ಥಂಭವನ್ನು ನೋಡುತ್ತೇವೆ.
*ಮಹಾಗುರು*
*ಶುಕವತ್ ಶೀಕ್ಷಿತಸ್ಯ ಮೇ* ಎಂದು ಸ್ವಯಂ ಶ್ರೀಮಟ್ಟೀಕಾಕೃತ್ಪಾದರು ಹೇಳಬೇಕು ಎಂದರೆ ಶ್ರೀಮಟ್ಟೀಕಾಕೃತ್ಪಾದರಿಗೆ ಎಷ್ಟು ಅದ್ಭತ ರೀತಿಯಿಂದ ಪಾಠ ಮಾಡಿರಬಹುದು ಎಂಬುವದನ್ನು ಊಹಿಸಲೂ ಅಸಾಧ್ಯ.
*ಅಪಾರ ದೂರದೃಷ್ಟಿ*
ಶ್ರೀಮದಾಚಾರ್ಯರ ಗರಡಿಯಲ್ಲಿ ತಯಾರು ಆದ, ಅಥವಾ ಶ್ರೀಮದಾಚಾರ್ಯರ ಸಾಕ್ಷಾತ್ ಪ್ರಶಿಷ್ಯರಾದಂಥ ಮಹಾ ಮಹಾ ವಿದ್ವಾಂಸರುಗಳು ನೂರಾರು ಜನ ಇರಬಹುದು. ಆ ಎಲ್ಲರನ್ನೂ ಬಿಟ್ಟು ಒಬ್ಬ ಈಗತಾನೆ ಎರಡೆರಡು ಮದುವೆಗಳನ್ನು ಮಾಡಿಕೊಂಡ *ರಾಜಕುಮಾರ* ನನ್ನು ಹುಡಕಬೇಕು, ಆರಿಸಬೇಕು ಎಂದರೆ ಆ ಮಹಾ ಮುನಿಗಳ ದೂರದೃಷ್ಟಿ ಆಗಾಧವೇ.
*ಮಾತಿನಲ್ಲಿ ಸರಸ್ವತಿ*
*ಕಿಂ ಪಶುಃ ಪೂರ್ವ ದೇಹೇ* ರಾಜಕುಮಾರ ಬೇಟೆಗೋಸ್ಕರ ಕುದುರೆಯ ಸವಾರಿ ಮಾಡುತ್ತಾ ಇರುವಾಗ, ತುಂಬ ತೃಷೆಯಾಗಿದೆ. ಕುದುರೆಯನ್ನು ನದಿಯಲ್ಲಿ ಓಡಿಸಿ, ನದಿಗೆ ಮುಖವನ್ನೇ ಹಚ್ಚಿ ನೇರವಾಗಿ ನೀರು ಕುಡಿಯುತ್ತಿರುವಂತಹ ವ್ಯಕ್ತಿಗೆ ಮೇಲನ ಮಾತು ಹೇಳಿದಾಕ್ಷಣ *ಎಲ್ಲವನ್ನೂ ತ್ಯಜಿಸಿ, ನಾನು ನಿಮ್ಮ ಶಿಷ್ಯ, ಎನ್ನನು ಸ್ವೀಕರಿಸಿ* ಎಂದು ಕಾಲಿಗೆ ಬೀಳಬೇಕು ಎಂದರೆ ನಾಲಿಗೆಯಲ್ಲಿ ಸರಸ್ವತಿ ಇರದೇ ಇನ್ಯಾರು ಇರಲು ಸಾಧ್ಯ....
*ತಪೋಮೂರ್ತಿ*
ಒಬ್ಬ ಬ್ರಾಹ್ಮಣ. ತಪ್ಪಿ ಬ್ರಹ್ಮಹತ್ಯೆ ಮಾಡಿದಾನೆ. ಅದರಿಂದ ಊರಿನ ಜನ ಬಹಿಷ್ಕರಿಸಿದ್ದಾರೆ. ನೊಂದು ಬೆಂದು ಹೋದ ಆ ಬ್ರಾಹ್ಮಣನಿಗೆ, ದಾರಿ ಕಂಡಿರುವದು *ಶ್ರೀಮದಕ್ಷೊಇಭ್ಯತೀರ್ಥರು.*
ನೇರವಾಗಿ ಅವರ ಬಳಿಬಂದು ನನ್ನ ಬ್ರಹ್ಮಹತ್ಯೆಯನ್ನು ಪರಿಹರಿಸಿ, ಎಂದು ಪ್ರಾರ್ಥಿಸಿದಾಕ್ಷಣ, ಅವನ ಪಾಪಪ್ರಾಯಶ್ಚಿತ್ತವನ್ನು ಅರಿತ ಮಹಾಜ್ಙಾನಿಗಳು *ಶ್ರೀಮನ್ಮೂಲ ರಾಮ, ದಿಗ್ವಿಜಯರಾಮ, ಸೀತಾದೇವಿ, ಐದು ರೂಪದ ವೇದವ್ಯಾಸರ ದೇವರ* ತೀರ್ಥ ಪ್ರೋಕ್ಷಣೆಯಿಂದ, ಬ್ರಹ್ಮ ಹತ್ಯೆ ಪರಿಹಾರವಾಯಿತು ಎಂದು ಹೇಳಿ, *ಬ್ರಹ್ಮಹತ್ಯೆಯಿಂದ ಮುಕ್ತನನ್ನಾಗಿಸುತ್ತಾರೆ* ಶ್ರೀಮದಕ್ಷೋಭ್ಯತೀರ್ಥರು.
*ತೀರ್ಥ ಮಹಾತ್ಮ್ಯಾವಬೋಧಕರು*
ಜನರು ತೀರ್ಥ ಕೇವಲ ಪ್ರೋಕ್ಷಣೆಯಿಂದ ಬ್ರಹ್ಮ ಹತ್ಯೆಯ ಪರಿಹಾರ ಹೇಗೆ ಎಂದು ಗೊಗೊರೆದಾಗ, ಶ್ರೀಮದಕ್ಷೋಭ್ಯತೀರ್ಥರು ಒಂದು ಹೊಸದಾದ ಬಿಳಿ ಬಟ್ಟೆಯನ್ನು ತರಿಸಿ, ಆ ಬಟ್ಟೆಯನ್ನು ಮೂರು ತುಂಡು ಮಾಡಿ ಎರಡನ್ನು ಗೇರೆಣ್ಣೆಯಲ್ಕಿ ನೇಯಿಸಿ, ಬಿಳಿಯದಾದ ಹಾಗೂ ಗೇರೆಣ್ಣೆಯಲ್ಲಿ ನೇಯ್ದ ಎರಡು ತುಂಡುಗಳನ್ನು ತಮ್ಮ ಬಳಿ ಇರಿಸಿಕೊಂಡು, ಒಂದು ತುಂಡನ್ನು ಅವರಿಗೆ ಕೊಟ್ಟು, ಗಂಗಾದಿ ಸಕಲ ತೀರ್ಥಗಳಲ್ಲಿ ನೀವೂ ಸ್ನಾನ ಮಾಡಿ, ಈ ಬಟ್ಟೆಯ್ಯನ್ನೂ ತೋಯಿಸಿಕೊಂಡು ಬನ್ನಿ ಎಂದು ಆಜ್ಙಾಪಿಸಿ ಕಳುಹಿಸುತ್ತಾರೆ.
ಆ ಬ್ರಾಹ್ಮಣರು ಒಂದು ವರ್ಷಗಳ ಕಾಲ ತೀರ್ಥಯಾತ್ರೆ ಮಾಡಿ, ಬಟ್ಟೆಯನ್ನು ತಂದು ಕೊಡುತ್ತಾರೆ. ಆ ಬಟ್ಟೆಯನ್ನು ಒಂದೆಡೆ ಇಟ್ಟು, ತಮ್ಮ ಬಳಿ ಇರುವ ಮತ್ತೆರಡು ಬಟ್ಟೆಗಳನ್ನು ತರಿಸಿ, ಗೇರೆಣ್ಣೆಯಲ್ಲಿ ನೇಯ್ದ ತೋಯ್ಯಿಸಿದ ಒಂದು ಬಟ್ಟೆಯನ್ನು ತೀರ್ಥದಲ್ಲಿ ಮುಣುಗಿಸಿ ತೆಗೆಯುತ್ತಾರೆ, ಆ ಕ್ಷಣಕ್ಜೆ ಆ ಬಟ್ಟೆ ಬಿಳಿಯಾಗಿ ಮಾರ್ಪಾಡು ಆಗುತ್ತದೆ.
ಎಲ್ಲರಿಗೂ ಆಶ್ಚರ್ಯ. ಕೆಲವರಿಗೆ ಸಂಶಯ. ಅದ್ಹೇಗೇ ಸಾಧ್ಯ ಎಂದು. ಆ ಸಂಶಯ ಒರಿಹಾರಕ್ಜೆ ಮೂರು ಬಟ್ಟೆಗಳನ್ನು ಒಂದೆಡೆ ಇಟ್ಟು ತೋರಿಸುತ್ತಾರೆ. ೧) ಗಂಗಾದಿಯಲ್ಕಿ ಮಿಂದು ಬಂದ ಬಟ್ಟೆ. ೨) ತೀರ್ಥದಲ್ಲಿ ಮಿಂದ ಬಟ್ಟೆ. ೩) ಶುದ್ಧಬಟ್ಟೆ. ಈ ಮೂರನ್ನೂ ನೋಡಿ ಎಂದು ತೋರಿಸುತ್ತಾರೆ.
ಗಂಗಾದಿಗಳಲ್ಲಿ ಮಿಂದ ಬಟ್ಟೆ ಸ್ವಲ್ಪ ಬಿಳಿ ಬಿಳಿ ಆಗಿರುತ್ತದೆ. ಶುದ್ಧ ಬಟ್ಟೆ ಹೇಗಿತ್ತೋ ಹಾಗೆಯೇ ಇರುತ್ತದೆ, ತೀರ್ಥದಲ್ಲಿ ಬಟ್ಟೆ ಮಿರಿ ಮಿರಿ ಮಿಂಚತಾ ಇರತ್ತೆ. ನೋಡಿದ ಎಲ್ಲ ಜನರಿಗೂ ಮನವರಿಕೆಯಾಗುತ್ತೆ. ಆ ಮುಖಾಂತರ ತೀರ್ಥದ ದಿವ್ಯ ಮಹಿಮೆಯನ್ನೂ ಸಾರುತ್ತಾರೆ *ಶ್ರೀಮದಕ್ಷೊಭ್ಯತೀರ್ಥರು.*
ಇಂದಿಗೂ ಮಳಖೇಡವಾಸಿಗಳಾಗಿ ಬಂದ ಭಕ್ತರ ಕ್ಷೋಭೆಗಳನ್ನು ಕಳೆಯುತ್ತಾ ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳಾಗಿ ಇದ್ದಾರೆ. ಆ ಮಹಿಮರ ಆರಾಧನೆ ಇಂದು ಇದೆ.
"ಅಸಿನಾ ತತ್ತ್ವಮಸಿನಾ
ಪರಜೀವಪ್ರಭೇದಿನಾ .
ವಿದ್ಯಾರಣ್ಯಮಹಾರಣ್ಯಂ
ಅಕ್ಷೋಭ್ಯಮುನಿರಚ್ಛಿನತ್"
"ಯೋ ವಿದ್ಯಾರಣ್ಯ ವಿಪಿನಂ
ತತ್ವಮಸ್ಯಸಿನಾಚ್ಛಿನತ್.
ಶ್ರೀಮದಕ್ಷೋಭ್ಯತೀರ್ಥಾರ್ಯ-
ಹಂಸೇನಂ ತಂ ನಮಾಮ್ಯಹಮ್"
ಈ ಶ್ಲೋಕವನ್ನು ೧೦೮ ೧೦೦೮ ಸಲ ಪಠಿಸಿ ಆ ಮಹಾಗುರಗಳ ಮಹಾನ್ ಅನುಗ್ರಹಕ್ಜೆ ಪಾತ್ರರಾಗೋಣ....
(ಈ ಮಹಾಮಹಿಮರ ಸೇವೆಯ ಸೌಭಾಗ್ಯ ನಮ್ಮ ತಮ್ಮನಿಗೆ ಒದಗಿಬಂದಿರುವದಕ್ಕೆ ಅನಂತನಮನಗಳನ್ನು ಸಲ್ಲಿಸುತ್ತಾ, ಅವರ ಸೇವೆ ಪರಿಪೂರ್ಣವಾಗಿ ಆಗುವಂತೆ ಆಗಲಿ)
*✍🏽✍🏽✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments