*ಅಶ್ವವಾಹನದಲ್ಲಿ ಮೆರೆದು ಬರುತ್ತಿರುವ ಅಮ್ಮನವರು*

*ಅಶ್ವವಾಹನದಲ್ಲಿ ಮೆರೆದು ಬರುತ್ತಿರುವ ಅಮ್ಮನವರು*

ತಿರುಚಾನೂರುನಲ್ಲಿ *ಪದ್ಮಾವತೀ ದೇವಿಯ ವೈಭವದ ಬ್ರಹ್ಮೋತ್ಸವ* ಇಂದಿಗೆ ಮುಕ್ತಾಯವಾಯಿತು. ಅನೇಕ ಉತ್ಸವಗಳಿಂದ ಕೂಡಿದ ಕಾರ್ತೀಕ ಬ್ರಹ್ಮೋತ್ಸವ. ಕೊನೆಯ ಉತ್ಸವ *ಆಶ್ವವಾಹನ* ತುಂಬ ಮನೋಹರವಾದ ಅತ್ಯದ್ಭುತವಾದ ಉತ್ಸವ. ಈ ಆಶ್ವವಾಹನ  ಉತ್ಸವದಲ್ಲಿ ನನಗೂ ಪುಟ್ಟ ಸೇವೆಯು ದೊರೆತಿತ್ತು. ಪುಟ್ಟ ವಿವರವನ್ನು ತಿಳೊಯುವ ಪ್ರಯತ್ನ ಮಾಡೋಣ.

*ಆಶ್ವಾರೂಢ* ನಾಗಿ ಶ್ರಿಹರಿ ಮೆರೆದು ಬರುವದು ಕಲ್ಕಿ ಅವತಾರದಲ್ಲಿ. ಸ್ವಯಂ ಆಶ್ವನಾಗುವದು  ಹಯಗ್ರೀವನಾದಾಗ. ಅಶ್ವವನ್ನೇ ಆಹುತಿಯಾಗಿ ಭೋಗಿಸುವದು *ಆಶ್ವಮೇಧ* ದಲ್ಲಿ. ಆಶ್ವಕ್ಕೆ ಸಂಬಂಧಿಸಿದಂತೆ ಈ ಮೂರು ಕಾರ್ಯಗಳನ್ನು ದೇವರು ಮಾಡುತ್ತಾನೆ. ಇಂತಹ ನೂರು ಸಾವಿರ ಕೋಟಿ ಅನಂತ ರೂಪಗಳು, ಕಾರ್ಯಗಳೂ ಇವೆ.

*ಕಲ್ಕೀ ಕಲೇ ಕಾಲಮಲಾತ್ ಪ್ರಪಾತು* ಎಂದು ಹೇಳಿದಂತೆ ಕಲ್ಕಿ ಅವತಾರದ ಭಗವತ್ಸ್ಮರಣೆಯಿಂದ  ಕಲಿಕಾಲದ ಪ್ರಭಾವದಿಂದ ಉಂಟಾದ ಎಲ್ಲ ದೋಷಗಳನ್ನು ಕಳೆಯುತ್ತಾನೆ, ಆ ದೋಷಗಳ ಪ್ರಭಾವ ಆಗದಿರುವ ಹಾಗೆಯೂ ಸಂರಕ್ಷಿಸುತ್ತಾನೆ. ೨) ಸ್ವಯಂ ಕುದುರೆಯೇ ಆಗಿ ಹಯಗ್ರೀವನಾದಾಗ ಋಗ್ವೇದ ಯಜುರ್ವೇದ ಸಾಮವೇದ, ಪಂಚರಾತ್ರ ಮೊದಲಾದ ಅನಂತ ವೇದ ಉಪನಿಷತ್ತು ಪಂಚರಾತ್ರ ಮೊದಲಾದವುಗಳನ್ನು ನಿರಂತರ ತನ್ನ ಮುಖದಿಂದ ಉಚ್ಚಾರಣೆ ಮಾಡುತ್ತಾ ಬ್ರಹ್ಮಾದಿ‌ಮುಕ್ತಿಯೋಗ್ಯ ಜಗತ್ತಿಗೆ ಜ್ಙಾನವನ್ನು ಸುರಿಯುತ್ತಾನೆ. ಆ ಕಾರ್ಯ ಇಂದಿಗೂ ನಡೆಯುತ್ತಿದೆ.  ೩) ಬ್ರಹದೇವರೇ ಒಂದು ರೂಪದಿಂದ ಆಶ್ವರಾದರೆ, ಆಶ್ವದಲ್ಲಿ ಲಕ್ಷ್ಮಿಯಿಂದಾರಂಭಿಸಿ ಸಕಲ ದೇವತೆಗಳೂ ಅದರಲ್ಲಿ ಆಶ್ರಯಿಸುತ್ತಾರೆ. ಹೀಗೆ ಸರ್ವ ದೇವಮಯವಾದ *ಅಶ್ವ* ವನ್ನು ಅಶ್ವ ಮೇದದಲ್ಲಿ ಬಳಿಸಿದಾಗ ಅದರಿಂದ ನಿತ್ಯತೃಪ್ತನಾದ ಶ್ರೀಹರಿ ಪರಮಸಂತುಷ್ಟನಾದ ಎಂದು ಹೇಳುತ್ತದೆ ಶಾಸ್ತ್ರ.

ಅದೇರೀತಿಯಾಗಿ ಶ್ರೀನಿವಾಸನ ಮಡದಿಯಾದ ಪದ್ಮಾವತಿಯೂ ಈ ಮೂರೂ ಕಾರ್ಗಳನ್ನು ಮಾಡುತ್ತಾಳೆ ಎಂಬುವದನ್ನು *ಅಶ್ವವಾಹಿನಿಯಾಗಿ* ನಮಗೆ ತೋರಿಸಿ ಕೊಡುತ್ತಾಳೆ.

೧) ಕಲ್ಕಿಯ ಕಾರ್ಯ....

ಕೈಅಲ್ಲಿ ಹಿಡಿದ ಪಾಶವನ್ನು ಗಮನಿಸಿದಾಗ ಅಧಾರ್ಮಿಕರಿಗೆ ಶಿಕ್ಷೆ ಕೊಡುವದು ಒಂದೊಡ್ಡ ಕಾರ್ಯವನ್ನು ಮಾಡುತ್ತಾಳೆ.  ಅದೇರೀತಿಯಾಗಿ ಧಾರ್ಮಿಕರು  ಧರ್ಮಮಾಡಬೇಕಾದರೆ ಹಿಂದೊಂದು ಭಯವಿರಬೇಕು. ಭಯವಿಲ್ಲದರೆ ಯಾವ ಜೀವನೂ ಸರಿಯಾದ ಮಾರ್ಗದಲ್ಲಿ ಇರಲಾರ.  ಆ ತರಹದ  ಭಯವನ್ನು ಹುಟ್ಟಿಸಿ ಧರ್ಮ ಮಾಡಿಸಿ ಸಂರಕ್ಷಿಸುತ್ತಾಳೆ. ಅಶ್ವವಾಹಿನಿಯಾದ, ಪದ್ಮಾವತಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ ದೇವಿ.  ಮತ್ತು ಕಾಲದ ಪ್ರಭಾವದಿಂದ ಅಧರ್ಮಗಳನ್ನೇನಾದರೂ ಮಾಡಿದ್ದರೆ, ಕರುಣೆ ಮಾಡಿ ಅಧರ್ಮದಿಂದಾಗುವ ಅನಾಹುತಗಳಿಂದ  ಪಾರೂ ಮಾಡುತ್ತಾಳೆ...

೨) ಹಯಗ್ರೀವ ರೂಪಿಯ ಕಾರ್ಯ...

ಎರಡನೇಯದು ಸ್ವಯಂ ಹಯಗ್ರೀವನಾದ ಭಗವಂತ. ಹಾಗೆಯೇ ಲಕ್ಷ್ಮೀದೇವಿಯೂ ಶ್ರೀನಿವಾಸನಿಗೆ ಶ್ರೀಹರಿಗೆ *ಕುದುರೆ* ಯಾಗಿ ಬರುತ್ತಾಳೆ. ನಿಶ್ಶೇಷ ಅನಂತ ವೇದಾಭಿಮಾನಿಯಾದ, ಅನಂತ ವೇದಪ್ರತಿಪಾದ್ಯಳಾದ  ಮಹಲಕ್ಷ್ಮೀ ದೇವಿ ಬ್ರಹ್ಮಾದಿ ಸಕಲ ಜೀವರಿಗೆ ತತ್ವಜ್ಙಾನೋಪದೇಶಕಳಾಗಿ ಇದ್ದಾಳೆ. ಸತ್ವಗುಣಕ್ಕೆ ಅಭಿಮಾನಿಯಾದ  ಲಕ್ಷ್ಮಿಯ ಅನುಗ್ರಹವಿದ್ದರೆ ಮಾತ್ರ ಜ್ಙಾನವಿದೆ. ಅಂತೆಯೇ *ವಿಶುದ್ಧ ವಿಜ್ಙಾನ ಸುಖೈಕ ದೋಗ್ಧ್ರೀ* ಎಂದಿತು ಶಾಸ್ತ್ರ.

೩) ಕುದರೆಯಿಂದ ಸಂತೃಪ್ತಿ...

ಸರ್ವ ದೇವತಾಮಯವಾಗಿದೆ ಅಶ್ವಮೇಧದ ಕುದುರೆ. ಆ ಕುದುರೆಯ ಮೇಲೆ ಸವಾರು ಮಾಡುವ ಅಧಿಕಾರ ಇರುವದೇ ಒಡೆಯನಾದ ದೇವರಿಗೆ, ಒಡತಿಯಾದ ಲಕ್ಷ್ಮೀದೇವಿಗೆ ಮಾತ್ರ. ಅಶ್ವಮೇಧದಿಂದ ದೇವರನ್ನು ಸಂತೋಷಗೊಳಿಸಿದಂತೆ, ಕುದುರೆಯಲ್ಲಿ ಇರುವ ಎಲ್ಲ‌ ದೇವತೆಗಳ ಸೇವೆಯಿಂದಲೇ ಲಕ್ಷ್ಮೀದೇವಿಗೆ ಸಂತೃಪ್ತಿ. ದೇವತೆಗಳೇ ಸಂತೃಪ್ತಪಡಿಸಲು ಸಮರ್ಥರು.  ಸಂತೃಪ್ತಳಾದ ಲಕ್ಷ್ಮೀ ದೇವಿ ಆ ಎಲ್ಲ ದೇವತೆಗಳಿಗೆ ಮೋಕ್ಷಾದಿ ಪುರುಷಾರ್ಥಗಳನ್ನೂ ದಯಪಾಲಿಸುತ್ತಾಳೆ. *ಕುದುರೆಯಂತೆ ಸಮರ್ಪಣಾಭಾವದಿಂದ ಸಂತೋಷ ಪಡಿಸಿದರೆ, ಕುದುರೆಯಂತೆ ಇರುವ ಸಂಸಾರವನ್ನು ಅವಳು ನಾಶಮಾಡುತ್ತಾಳೆ.*

ದೇವರ ಸಾಕ್ಷಾತ್ ಪ್ರತಿಬಿಂಬಳಾದ ಲಕ್ಷ್ಮೀ ದೇವಿ ದೇವರು ಯಾವ ರೂಪವನ್ನು ಹೇಗೆ ಸ್ವೀಕರಿಸುತ್ತಾನೆಯೋ ಲಕ್ಷ್ಮೀದೇವಿಯೂ ಸಹ ಆ ರೂಪವನ್ನು ಹಾಗೆಯೇ ಸ್ವೀಕರಿಸುತ್ತಾಳೆ. ಆರೀತಿಯಾದ ಫಲವನ್ನೇ ಕೊಡುತ್ತಾಳೆ.

ಅಂತಹ ಲಕ್ಷ್ಮೀದೇವಿಯ ದಿವ್ಯ ಸಾನ್ನಿಧ್ಯದಿಂದ ಯುಕ್ತಳಾದ ಪದ್ಮವತೀ ದೇವಿಯೂ ಸಹ ಅಶ್ವಾರೂಢಳಾಗಿ ನಿಂತಾಗ, ನಮಗೆ ಅಧರ್ಮ ಮಾಡಿದರೆ ಉಂಟಾಗುವ ಅನರ್ಥದ ತಿಳುವಳಿಕೆ ಕೊಟ್ಟು ಭಯ ಹುಟ್ಟಿಸಿ, ಧರ್ಮ ಮಾರ್ಗದಲ್ಲಿರಿಸಲಿ, ಮೋಕ್ಷಕ್ಕೆ ಜ್ಙಾನವೇ ಕಾರಣ ಹಾಗಾಗಿ ಹಯಗ್ರೀವರೂಪದಿಂದ ಜ್ಙಾನಗಂಗೆಯನ್ನೇ ಹರಿಸಲಿ. ದೇವತೆಗಳನ್ನೇ ಆಶ್ವವನ್ನಾಗಿಸಿ ಅವರಿಂದ ಸೇವೆ ಕೈಗೊಂಡು ಅವರಿಗೆ ಮುಕ್ತಿ ಕೊಟ್ಟಂತೆ ನಮ್ಮಿಂದಲೂ ಸೇವೆ ಮಾಡಿಸಿಕೊಂಡು ಸಂತೃಪ್ತಳೂ ಆಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ಈ ಪುಟ್ಟ ಸೇವೆಯನ್ನು ಪದ್ಮಾವತಿಯ ಅಡದಾವರಗಳಲ್ಲಿ, ಆ ತಾಯಿಯ  ಮುಖಾಂತರ ನಮ್ಮೆಲ್ಕರ ಕುಲದ ಹೆದ್ದೈವನಾದ ಶ್ರೀನಿವಾಸನ ಅಡೆದಾವರೆಗಳಲ್ಲಿ ಸಮರ್ಪಿಸುವೆ.....

*✍🏽✍🏽✍🏽ನ್ಯಾಸ .*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*