*ಉಡುಗೊರೆ....*
*ಉಡುಗೊರೆ....*
ಉಡುಗೊರೆ ಕೊಡುವದು ತೆಗೆದುಕೊಳ್ಳುವದು ಭಾರತೀಯ ಸಮಾಜದ ಒಂದು ಸಂಪ್ರದಾಯ. ಅದೊಂದು ಸುಂದರ ಕಲ್ಪನೆ.
ಕೊಡುವ ಉಡುಗೊರೆ ದೊಡ್ಡದಾಗಿರಬಹುದು, ಬೆಲೆಬಾಳುವಂತಹದ್ದೂ ಆಗಿರಬಹುದು, ಸಾಮಾನ್ಯದ್ದೂ ಆಗಿರಬಹುದು. ಅದರ ಹಿನ್ನಲೆ ಹಾಗೂ ಉದ್ದೇಶ್ಯ ಪ್ರೀತಿ ಅಭಿಮಾನಗಳ ಹಂಚಿಕೆಯ ಮುಖಾಂತರ ಬಾಂಧವ್ಯದ ದೊಡ್ಡ ಬೆಸುಗೆಯೇ ಇದೆ.
ಇಂದು ಕೊಡುವ ಉಡುಗೋರೆಗಳು ನಮ್ಮ ಅಧಿಕಾರ status ಅಂತಸ್ತುಗಳ ಪ್ರಭಾವ ಬೀರುವದಕ್ಕಾಗಿ ಎಂದಾಗಿದೆ. ಅದಾಗದೆ ಅಂತಃಕರಣದ ಪ್ರಭಾವ ಬೀರುವದಕ್ಕಾಗಿ ಎಂದಾಗಬೇಕು. ಹಿಂದೆ ಅದೇರೀತಿಯಾಗಿಯೇ ಇತ್ತು.
*ಉಡುಗೋರೆಯಿಂದ ಉತ್ಕೃಷ್ಟತೆ*
ಆತ್ಮೀಯರ ಮನೆಗೆ ಹೋದಾಗ ಉಡುಗೋರೆಗಳ ಆದಾನ ಪ್ರದಾನಗಳು ನಡೆಯುತ್ತವೆ. ಹಿಂದೆ ಹೂ, ಹಣ್ಣುಗಳು, ಬಟ್ಟೆ ಬರೆಗಳು, ಕೊಡುವದು ತೆಗೆದುಕೊಳ್ಳುವದು ಇತ್ತು. ಆದರೆ ಇಂದು ಚೊಕಲೇಟ್ ಹರಿದ ಹುರಿದ ಹೊರಗಿನ ತಿನಸುಗಳನ್ನು ಕೊಡುವದಿದೆ. ಹೂ ಹಣ್ಣು ಬಟ್ಟೆ ಬರೆಗಳಿಂದು ಕೊಡುವ ಉಡುಗೋರೆಯಲ್ಲಿ ಪ್ರೀತಿ ಎಷ್ಟು ತುಂಬಿರುತ್ತಿತ್ತೋ ಇಂದು ಅದಕ್ಕೆ ವ್ಯತಿರಿಕ್ತವಾಗಿ ನಾವು ಕೊಡುವ ಸ್ವೀಕರಿಸುವ ಉಡುಗೋರೆಯಲ್ಲಿ ಪ್ರೀತಿ ಅಭಿಮಾನಕ್ಕಿಂತಲೂ ಹಣದ ಪ್ರಭಾವವಿದೆ ಎಂದರೆ ತಪ್ಪಾಗದು.... ಅದರಿಂದ ಹುಡಗರೂ ದುರಭ್ಯಾಸಕ್ಕೆ ಒಳಗಾಗುವವರು. ಕೊಟ್ಟವನ ಮಹತ್ವವೂ ಇರದು. ಸಾಧನೆಯಂತೂ ಇರುವದೇ ಇಲ್ಲ....
*ಕೊಡುವ ಉಡುಗೋರೆ ಎಂತಹದ್ದಿರಬೇಕು....*
ಪ್ರೀತಿ ಅಭಿಮಾನಗಳನ್ನು ಬೆಳಿಸಿ, ಬಾಂಧವ್ಯ ಸುವ್ವಸ್ಥಿತ ಹಾಗೂ ಸುದೃಢಮಾಡಿ ಇಡುವ ಉಡುಗೊರೆ ಆಗಿರಬೇಕು. ಮತ್ತೊಂದು "ನಾವು ಕೊಡುವ ಉಡುಗೊರೆ ದೇವರ ಸೇವೆಗೂ ಸಹಕಾರಿಯಾಗಿರಬೇಕು" ಹಾಗೆ ಯೋಚಿಸುವದು ಸೂಕ್ತ.
ತುಳಸಿಯನ್ನು, ಪುಸ್ತಕಗಳನ್ನು, ಉತ್ತಮವಾದ ಗುರು ದೇವತಾ ದೇವರುಗಳ ಪಟವನ್ನು , ದೇವರ ಹಾಡುಗಳ cd ಯನ್ನು. ಗುರು ಹಿರಿಯರುಗಳ ಜ್ಙಾನಿಗಳ ಉಪನ್ಯಾಸದ cd ಗಳನ್ನು , ದೇವರ ಪ್ರತಿಮೆಗಳನ್ನು ಹೀಗೆ ಉಡುಗೊರೆಗಳನ್ನು ಕೊಡುವದು ರೂಢಿಸಿಕೊಳ್ಳಬೇಕು.
ಕೊಡುವ ಕೊಟ್ಟ ಉಡುಗೊರೆ ಇನ್ನೊಬ್ಬರಿಗೆ ಅದನ್ನು ಪಾಸು ಮಾಡುವದಾಗಲಿ, ಅಥವಾ ಕ್ಷಣದಲ್ಲಿ ನಾಶ ಮಾಡುವದಾಗಲಿ, ಅಥವಾ ನಮ್ಮ ಮನಸ್ಸನ್ನೇ ಕೆಡಿಸುವಂಥದ್ದಾಗಲಿ ಇರಬಾರದು. ಉಡುಗೋರೆ ತುಂಬ ದಿನಗಳ ವರೆಗೆ ಅವರ ಮನೆಯಲ್ಲಿ ರಾರಾಜಿಸುವಂತೆ ಇರಬೇಕು, *ಅಬ್ಬಬ್ಬ ಈ ಉಡುಗೊರೆ ಇವರು ನಮಗೆ ಕೊಟ್ಟಿದ್ದು- ನಮಗಂತೂ ಇಷ್ಟು ಲಾಭವಾಗಿದೆ* ಎಂದು ನಾಲಕು ಜನರ ಮುಂದೆ ಹೇಳುವಂತಿರಬೇಕು. ಮಕ್ಕಳ ನಿತ್ಯ ಧಾರ್ಮಿಕತೆಯ ಬೆಳವಣಿಗೆಗೆ ಅತ್ಯಂತ ಉಪಯುಕ್ತವೂ ಆಗಿರಬೇಕು.
ತುಳಸಿ ಹೂವುಗಳನ್ನು ಅರ್ಚಿಸಿದರೆ ಕೊಟ್ಟ ನಮಗೂ ಸ್ವೀಕರಿಸಿದ ಆತ್ಮೀಯರಿಗೂ ಪುಣ್ಯವಿದೆ. ದೇವರ ಚಿತ್ರಗಳನ್ನು ಕೊಟ್ಟಾಗ ದಿನಕ್ಕೆ ಒಂದು ಬಾರಿಯಾದರೂ ಸದ್ಭಾವನೆಯಿಂದ ನಮಸ್ಕಾರ ದರ್ಶನ ಸ್ಮರಣಗಳಾಗುತ್ತವೆ ಇದರಿಂದ ಇಬ್ಬರಿಗೂ ಲಾಭ. ಉಪನ್ಯಾಸಗಳ CD ಗಳನ್ನು ಕೊಡುವದರಿಂದ ಜ್ಙಾನ ಭಕ್ತಿಗಳು ಅಭಿವೃದ್ಧಿಸುತ್ತವೆ. ಇವುಗಳಿಂದ ದೇವರಿಗೂ ಪ್ರೀತಿ. ನಮಗೂ ಸಾಧಕ. ಈ ತರಹದ ಉಡುಗೊರೆಗಳಿಂದ ಸಮಾಜದಲ್ಲಿಯೂ ಸ್ವಾಸ್ಥ್ಯ ಅಭಿವೃದ್ಧಿ, ಮನಸ್ಸಿನ ಸಮಾಧಾನ, ಪುಣ್ಯದಲ್ಲಿ ಪ್ರಗತಿ, ದೇವರ ಪ್ರೀತಿ. ಹೀಗೆ ನೂರಾರು ಪ್ರಯೋಜನಗಳ ಇವೆ.
ಪರಸ್ಪರವಾಗಿ ಸಾಮಾಜದ ಸ್ವಾಸ್ಥ್ಯ, ನಮ್ಮೀರ್ವರ ಸಾಧನೆ, ವಿಷ್ಣುಪ್ರೀತಿ ಇವುಗಳಿಗೆ ಉಪಕಾರವಾದಾಗ ಆಗುವ ಬಾಂಧ್ಯವ್ಯದ ಅಭಿವೃದ್ಧಿ ಅದ್ಭುತವಾಗಿರುತ್ತದೆ. ಆ ಬಾಂಧವ್ಯ ಶಾಶ್ವತವಾಗಿ ಉಳಿಯುತ್ತದೆ.....
ತುಳಸಿ ಮೊದಲಾದ ವೃಕ್ಷಗಳು, ಗುರು ದೇವತಾ ದೆವರುಗಳ ಚಿತ್ರಗಳು, ದೇವರ ವಾಯುದೇವರ ಪ್ರತಿಮೆಗಳು, ಜ್ಙಾನ ಭಕ್ತಿ ಬೆಳೆಸುವ ಪುಸ್ತಕಗಳು ಮೊದಲಾದ ಉಡುಗೊರೆಗಳು ಏನಿವೆ ಸ್ವೀಕರಿಸಿದ ನನಗೂ ಲಾಭ. ನನ್ನ ಮನೆಯಲ್ಲಿರು, ನನ್ನ ನಂತರ ಬರುವ ಪುತ್ರ ಪೌತ್ರರಿಗೂ ಲಾಭ. ತಲ ತಲಾಂತರದ ವರೆಗೆ ಆ ಉಡುಗೊರೆ ಶಾಶ್ವತವಾಗಿ ಉಳಿಯುತ್ತದೆ. ಅದರಿಂದ ಇಬ್ಬರಿಗೂ ಉತ್ಕೃಷ್ಟತೆಯೇ ಇರುತ್ತದೆ....
*ಉಡುಗೋರೆ ನಿತ್ಯ ನೆನಪಿನ ಕಾಣಿಕೆಯಾಗಿರಬೇಕೆ ವಿನಹ, ನಾಶವಾಗುವ, ಹೊರಗೆ ಎಸೆಯುವ ಕಸವಂತೂ ಆಗಿರಬಾರದು* *ಕೊಟ್ಟ ಉಡುಗೊರೆ ಉಳಿಸಿಕೊಳ್ಳಬೇಕು ಎಂಬ ತುಮುಲ ಹುಟ್ಟಿರಬೇಕೇ ವಿನಹ, ನಾಶಮಾಡಬೇಕು, ಕಿತ್ತಿ ಎಸೆಯಬೇಕು ಎಂದು ಕನಸಿನಲ್ಲೂ ಅನಿಸಿರಬಾರದು* ಹಾಗೆ ಕೋಡೋಣ.... ಏನಂತೀರಾ....
ಇಂದು ಹರಿದಿನ. ಹರಿಯನ್ನು ನೆನೆಸುವ ದಿನ. ಆ ಶ್ರೀಹರಿಗೂ *ಉಪವಾಸ- ಮೌನಗಳ* ಉಡುಗೊರೆ ನಾವೆಲ್ಲರೂ ಸೇರಿ ಕೊಡೋಣ. ಅವನಿಂದ ಭಕ್ತಿಯ ಉಡುಗೊರೆ ಪಡೆಯೋಣ....
*✍🏽✍🏽ನ್ಯಾಸ...*
ಗೋಪಾಲದಾಸ,
ವಿಜಯಾಶ್ರಮ. ಸಿರವಾರ.
Comments