ತೀರ್ಥಯಾತ್ರೆ ಸುಲಭ... ಅತ್ಯಂತ ದುರ್ಲಭ ಭಕ್ತಿ ವಿಶ್ವಾಸಗಳು*

*ತೀರ್ಥಯಾತ್ರೆ ಸುಲಭ... ಅತ್ಯಂತ ದುರ್ಲಭ ಭಕ್ತಿ ವಿಶ್ವಾಸಗಳು*

ತೀರ್ಥಯಾತ್ರೆಗೆ ಹಣ ಅತ್ಯಲ್ಪ ಕಷ್ಟ ಸಹಿಷ್ಣುತೆ ಇವುಗಳು ಇದ್ದರೆ ಅತ್ಯಂತ ಸುಲಭ. ಈಗಿನ ಕಾಲದಲ್ಲಿ ಅನುಕೂಲವೂ ಇದೆ. ಕೈತುಂಬ ಹಣವೂ ಇದೆ. ಅನೇಕ ಸೂಟಿಗಳೂ ಸಿಗುತ್ತವೆ. ಮನಸ್ಸು ಮಾಡಬೇಕು. ಸ್ವಲ್ಪ ಕಷ್ಟಗಳನ್ನು ಸಹಿಸಿಕೊಳ್ಳಬೇಕು. ತೀರ್ಥಯಾತ್ರೆ ಮುಗಿಯತ್ತೆ. ಆದರೆ......

...... ತೀರ್ಥಕ್ಷೇತ್ರಸ್ಥ ದೇವರಲ್ಲಿಯೋ, ದೇವತೆಗಳಲ್ಲಿಯೋ, ತೀರ್ಥಾಭಿಮಾನಿಗಳಲ್ಲಿಯೋ ಭಕ್ತಿ ವಿಶ್ವಾಸಗಳು ಬರುವದು ತುಂಬ ಕಠಿಣ. 

ಬದರಿ ಮೊದಲಾದ ಕ್ಷೇತ್ರಗಳಿಗೆ ಹೋದವರು ತುಂಬ ಜನ ಇದಾರೆ. ಅನೇಕ ತೀರ್ಥಗಳಿಗೆ ಸಂಚಾರ ಮಾಡಿದವರು ಅನೇಕರುಂಟು. ಆವರುಗಳಲ್ಲಿ ಭಗವದನುರಾಗಿಗಳು ಎಷ್ಟು ಜನ... ?? ವೈರಾಗ್ಯ ಸಾಧಿಸಿಕೊಂಡವರೆಷ್ಟು ಜನ... ?? ಮನಃಶ್ಶೋಧನೆ ಮಾಡಿಕೊಂಡವರೆಷ್ಟು ಜನ.. ?? ಇದ್ದಾರೆ ನಾಲ್ಕಾರು ಜನ ಇರಬಹುದು ಅಷ್ಟೆ. 

ಅಧ್ಯಾತ್ಮ‌ಮಾರ್ಗ ತುಂಬ ಕಠಿಣ ಮಾರ್ಗ. ಜೀವಂತ ಆದರ್ಶಗಳು ಇಲ್ಲದವರಿಗೆ ಈ ಮಾರ್ಗದಲ್ಲಿಯ ಸಂಚಾರ ತುಂಬ ಕಠಿಣವೇ. ದೈವ ವಶಾತ್ ಆದರ್ಶ ಮಾನವನ ಸಂಬಧವಾದರೆ ಸ್ವಲ್ಪಮಟ್ಟಿಗೆ ಅಧ್ಯಾತ್ಮ ಮಾರ್ಗದಲ್ಲಿ ಪ್ರಗತಿ ಸಾಧಿಸಿಕೊಳ್ಳಬಹುದು. ಇಲ್ಲದೇ ಹೋದರೆ ಅಧ್ಯಾತ್ಮ ಮಾರ್ಗವೇ ದುಸ್ಸಾಧ್ಯ. ಪ್ರಗತಿ ಕನಸೇ ಆಗಿ ಉಳಿಯಬಹುದು.  ಅಧ್ಯಾತ್ಮ ಮಾರ್ಗವೇ ದುಸ್ಸಾಧ್ಯ ಎಂದಾದಮೇಲೆ *ಭಕ್ತಿ ವಿಶ್ವಾಸಗಳಿಗೆ* ಆಸ್ಪದವೇ ಇರದು. 

ಇಂದಿಗೆ ಯಾತ್ರೆಯಲ್ಲಿ ತಾನು ಕೇಂದ್ರನಾಗುವ. ಕೇಂದ್ರಸ್ಥ ದೇವ ಮೂಲೆಗುಂಪಾಗುವದು ಸಹಜವಾಗಿದೆ. *ತಾನು ತನ್ನನ್ನು ಎಷ್ಟು ಪ್ರೀತಿಸುತ್ತಾನೆಯೋ ಅದರ ಹತ್ತಂಶವೂ ದೇವರನ್ನು ಪ್ರೀತಿಸ* ಇದುವೇ ದೇವರು ಮೂಲೆಗುಂಪಾಗಲು ಮೂಲ. 

ಯಾತ್ರೆಯಲ್ಲಿ ದುಡ್ಡು, ಸ್ವೆಟರ್, ಬ್ಯಾಗ್, ತರಹತರಹದ ವಸ್ತ್ರಗಳು, ನಾನಾವಿಧ ಆಭರಣಗಳು, ತಿಂಡಿ ತಿನಿಸುಗಳು, ಇಲ್ಲಿಗೆ ಬ್ಯಾಗ್ ಓವರ್ ಲೋಡ್ ಆಯ್ತು. ದೇವರ ಪೆಟ್ಟಿಗೆ, ದೇವರ ವಸ್ತ್ರ, ತುಳಸಿ, ಪುಸ್ತಕಗಳು ಇವುಗಳಿಗೆ ಜಾಗವೇ ಇಲ್ಲ. ಮನಸ್ಸಿನಲ್ಲಿಯೇ ಜಾಗವಿಲ್ಲ ಆದ್ದರಿಂದ ಬ್ಯಾಗಿನಲ್ಲಿಯೂ ಜಾಗ ಇಲ್ಕದಾಗಿದೆ. 

ಬಾಹ್ಯವಾದ ಪ್ರತಿಮೆ,  ಪುಸ್ತಕಗಳಿಗೇ ಜಾಗವಿಲ್ಲದಾದಾಗ, ಆಂತರಿಕವಾದ ಆ ಕೇಂದ್ರಸ್ಥ ದೇವರ ಕಾರುಣ್ಯ, ಅವನ ಮಾಹಾತ್ಮ್ಯ, ಅಲ್ಲಿಯ ವೈಭವ ಸವಿಯಲು ಸಮಯವಾದರೂ ಎಲ್ಲಿಂದ  ಸಿಗುವದು... ?? ಹೀಗೆ ಭಕ್ತಿಗೆ ಆಸ್ಪದವೇ ದೊರೆಯುವದಿಲ್ಲ. 

ಭಕ್ತಿ ಇಲ್ಲದಾದಾಗ *ವಿಶ್ವಾಸ* ಅಸಾಧ್ಯದ ಮಾತು. ಯಾಕೆ.. ?? ದೇವರಲ್ಲಿ ಭಕ್ತಿ ಮಾಡಿದಾಗ, ಭಕ್ತಿಯ ಪ್ರಭಾವದಿಂದ *ಪಾಪಕಳೆದು, ಇಷ್ಟಾರ್ಥಗಳು ಈಡೇರಲು ಕಾರಣವಾಗಬಹುದು* ಆಗ ಪಾಪ ಕಳೆದೆ ತೀರತ್ತೆ, ಇಷ್ಟಾರ್ಥಗಳೆಲ್ಲವೂ ಸಿದ್ಧ ಎಂಬ ಭರವಸೆ ವಿಶ್ವಾಸಗಳು ಮೂಡ ಬಹುದು. ಹಾಗಾಗಿ ಭಕ್ತಿ ವಿಸ್ವಾಸಗಳು ಬರುವದು ತುಂಬ ಕಠಿಣ. ಯಾತ್ರೆಯು ಸುಗಮವಾಗಿ ಆಗಬಹುದು. 

*ಭಕ್ತಿ ವಿಶ್ವಾಸಗಳು ಮೂಡದ ಯಾತ್ರೆ, ಯಾತ್ರೆ ಎಂದೆನಿಸಿಕೊಳ್ಳದೆ, trip ಎಂದಾಗಿಬಿಡುತ್ತದೆ* ಯಾತ್ರೆಗೆ ತೊಡುಗುವಾಗ ಎಚ್ಚರದಿಂದ ಯಾತ್ರೆಯ ಸಿದ್ಧತೆ ಮಾಡಿಕೊಳ್ಳೋಣ.... 

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*