*ಅಮೂಲ್ಯ ವಜ್ರವನ್ನು ತೌಡಿನಿಂದ ಮುಚ್ಚುವದೇಕೆ....*
*ಅಮೂಲ್ಯ ವಜ್ರವನ್ನು ತೌಡಿನಿಂದ ಮುಚ್ಚುವದೇಕೆ....*
"ಅತ್ಯಮೂಲ್ಯವಾದ ಅನ್ಯೋನ್ಯ ಸಂಬಂಧಗಳಲ್ಲಿ ನಯವಿನಯಗಳ ಸಮ್ಮಾರ್ದವವೇ ಒಂದು ಅದ್ಭುತ. ಸ್ವಗುಣ - ಪರಗುಣಗಳ ಸಮ್ಮಿಶ್ರ ಕ್ರಾಂತಿಯೇ ಒಂದು ದೊಡ್ಡ ಮಾನವನ ಸೊಬಗು."
ಜೀವನ ಅತ್ಯಮೂಲ್ಯವಾದ ವಜ್ರದಂತಹ ಅದ್ಭುತವಾದ ಗುಣಗಳು ಇಂದಿನ ಈ ಯಾಂತ್ರಿಕತೆಯ ತೌಡಿನಲ್ಲಿ ಮುಚ್ಚಿಹೋಗಿವೆ. ಜೀವನದಲ್ಲಿ *ಅನ್ಯೋನ್ಯತೆ* ಅನ್ಯೋನ್ಯತೆಯ ಸಮೃದ್ಧಿಗೆ ಕಾರಣವಾದ *ಗುಣಗ್ರಹಿಕೆ* ಗಳ ಸೊಬಗು ಇಂದು ಮರೀಚಿಕೆಯಾಗಿವೆ.
ಹೃದಯ ಹೃದಯಗಳ ಮೇಲನದಿಂದ ಆಗುವ ಕಾರ್ಯಗಳೆಲ್ಲವೂ ಇಂದು ಯಂತ್ರಗಳಿಂದ ಆಗುತ್ತಿವೆ. ಯಂತ್ರಗಳು ನಮ್ಮೆಲ್ಲ ಗುಣಗಳನ್ನು ಮುಚ್ಚಿ ಹಾಕುತ್ತಿವೆ.
ಮನುಷ್ಯನ ಸ್ಥಾನಕ್ಕೆ ಯಂತ್ರಗಳು. ಆ ಯಂತ್ರಗಳ ಮೂಲಕವೇ ಎಲ್ಲ ಕಾರ್ಯ ನಿರ್ವಹಣೆ. ಒಂದು ವಿವಾಹ ಪತ್ರಿಕೆ ಬರೆಯುವದಿದೆ, ಅಂದು ಬರೆಯುವ ಪತ್ರಿಕೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿರುತ್ತಿತ್ತು. ಕೈಯಿಂದ ಪತ್ರ ಬರೆಯುವಾಗ ಮನಸದಸು, ಉದ್ದೇಶ್ಯದಲ್ಲಿ ಇರುವ ವ್ಯಕ್ತಿಯ ಯೋಗ್ಯತೆ, ಆ ತನಿಗೆ ಸಲ್ಲಲೇ ಬೇಕಾದ ಪ್ರೀತಿ ಗೌರವ ಇತ್ಯಾದಿಗಳನ್ನು ನೆನಿಸಿಯೇ ಕೈ ಕದಲಿಸುತ್ತಿತ್ತು. ಪ್ರತ್ಯೇಕತೆಯಲ್ಲಿ *ಗುಣಗಳನ್ನು ಗುರುತಿಸುವ ಸೌಭಗ* ಎದ್ದು ಕಾಣುತ್ತಿತ್ತು. ಅಂತೆಯೇ ಪರಸ್ಪರ ಅನ್ಯೋನ್ಯತೆ persnl touch ದೃಢವಾಗಿ ಇರುತ್ತಿತ್ತು. ಸಮಯದ ಉಳಿತಾಯದ ನೆಪದಲ್ಲಿ ಇಂದಿನ ಈ ಯಂತ್ರ ನಮ್ಮವರ ಗುಣ ಗುರುತಿಸುವಿಕೆಯನ್ನೇ ನಿಲ್ಲಿಸಿ ಬಿಟ್ಟಿತು. ಅಂತೆಯೇ ಅನ್ಯೋನ್ಯತೆ ಶಿಥಿಲವಾಯಿತು.
ಅಂದು ಬಳಗದ ಜನ, ಆತ್ಮೀಯ ವರ್ಗ ಮನೆಗೆ ಬರುತ್ತಾರೆ ಎಂದರೆ ಎಲ್ಲಿಲ್ಲದ ಖುಶಿ. ಬರುವ ಮೂರು ದಿನ ಮೊದಲೇ ಉಪಹಾರಗಳ ತಿಂಡಿ ತಿನಿಸುಗಳ ತಾಂಡವ ಇರುತ್ತಿತ್ತು. ಇಂದು ಹೊಟೆಲ್ ಗೋ ಅಥವಾ street panipuri ಎಂದೋ ಹೋಗುವದಾಗಿದೆ. ಇಲ್ಲವೋ ಅಲ್ಲಿಯ ರುಚಿ ತಿನಸುಗಳನ್ನು ಆರ್ಡರ್ ಮಾಡಿ ತರಿಸುವದು ಬಂದಿದೆ. ನಿಜ ಹೊಟೆಲ್ಲಿನ ಅಡಿಗೆ ತಿನಿಸು ರುಚಿ ಇರಬಹುದು ವಿಚಾರವಿಲ್ಲ. ಆದರೆ ಪ್ರೀತಿ ಮಮಕಾರ ಬರಲು ಸಾಧ್ಯವೇ ಇಲ್ಲ.
ಅಂದು ಪಚ್ಚಕರ್ಪೂರ, ಕೇಸರ ಇವುಗಳಿಂದ ತೇಯ್ದ ಗಂಧದ ಪರಿಮಳ ಇರುತ್ತಿತ್ತು. ಇಂದು ಸೆಂಟ್ ಬಂದಿದೆ. *ಸ್ವಾಭಾವಿಕ ಸ್ಥಾನಕ್ಕೆ ಕೃತಕದ ಪ್ರಭಾವ ಹೆಚ್ಚಾಗ್ತಿದೆ.*
ಅಂದು ತಮ್ಮ ತಮ್ಮ ಕೆಲಸಗಳಲ್ಲಿ ಪ್ರೀತಿ ಇರುತ್ತಿತ್ತು. ಅಭಿಮಾನವಿರುತ್ತಿತ್ತು. ಹೆಮ್ಮೆಯೂ ಇರುತ್ತಿತ್ತು. "ಕೆಲಸ ಕೂಲಿಗಾಗಿ" ಎಂಬ ಭಾವನೆ ಇರುತ್ತಿರಲಿಲ್ಲ. ಸಂಪಾದನೆಯೇ ಬೇಡ ಎಂಬ ಭಾವನೆ ಸರ್ವಥಾ ಇರುತ್ತಿರಲಿಲ್ಲ. ಅಂದಿನ ಜನ ತುಂಬ ಬಡವರು. "ದುಡಿಮೆ, ಪ್ರೀತಿಯಿಲ್ಲದ ಹಣ ಮೈಗೆ ಹತ್ತದು" ಎಂದು ದೃಢವಾಗಿ ನಂಬಿದ್ದರು.
ಅಂದು ಕೂಡಿದ ಮನೆ. ಒಬ್ಬ ಯಜಮಾನ. ಇಂದು ಛಿದ್ರಮನೆ. ನೂರು ಯಜಮಾನರು. ಅಂದಿನ ದಾರಿದ್ರ್ಯದಲ್ಲಿಯೂ ಕಷ್ಟವೆನಿಸುತ್ತಿರಲಿಲ್ಲ. ಇಂದಿನ ಶ್ರೀಮಂತಿಕೆಯ ಸುಪ್ಪರಿಗೆಯಲ್ಲಿಯೂ ತೃಪ್ತಿ ಇಲ್ಲ. ಒಟ್ಟಾರೆಯಾಗಿ ನಮ್ಮವು ಎಂಬುವದೇನೇನಿದೆ ಎಲ್ಲವೂ ಮುಚ್ಚಿ ಹೋಗಿವೆ. ನನ್ನ ಕೈಯಾರಿಯೇ ಮುಚ್ಚಿ ಹಾಕಿದ್ದೇನೆ.
ಅಂದು ದೇವರಿದ್ದ. ದೇವರಿಗಾಗಿಯೇ ದೇವರು ಇದ್ದ. ದೇವರ ಪ್ರೀತಿಯನ್ನೇ ಬಯಸುತ್ತಿದ್ದರು. ಇಂದೂ ದೇವರು ಇದ್ದಾನೆ. ನಮಗಾಗಿ ನಮ್ಮಿಂದ ದೇವರು ಎಂದು ಆಗಿದೆ. ದೇವರ ಅವಸ್ಥೆ. ಹೀಗೆ ನಮ್ಮಲ್ಲಿರುವ ನಮ್ಮದೇ ಪ್ರತಿಯೊಂದು ಅತ್ಯದ್ಭುತ ಹಾಗೂ ಅಮೂಲ್ಯವಾದ ವಜ್ರಗಳಂತಿರುವ ಎಲ್ಲವನ್ನೂ ಇಂದಿನ ಈ ಯಾಂತ್ರಿಕತೆ ಎಂಬ ತೌಡು ಮುಚ್ಚಿ ಹಾಕಿಬಿಟ್ಟಿವೆ. ನಮ್ಮತನ ನಮಗೆ ಸಿಗುತ್ತಿಲ್ಲ. ನಮ್ಮ ಅಮೂಲ್ಯ ಗುಣಗಳು ನಮಗೇ ಕಾಣುತ್ತಿಲ್ಲ.
ಮುಚಿದ ತೌಡನ್ನು ಸರಿಸಿ ಹಾಕಿ ಮತ್ತೆ ನಮ್ಮತನವನ್ನೆಲ್ಲವನ್ನೂ ಪಡೆಯಲೇಬೇಕು. ಅದು ಇಂದೆ ಆಗಬಹುದು. ಅಥವಾ ಮುಂದೊಂದು ದಿನವೂ ಆಗಬಹುದು. ಆದರೆ ಇಂದೇ ಆದರೆ ತುಂಬ ಚಂದ. ಮುಂದಿನದು ದೇವರ ಅಂದಕ್ಕೆ ಬಿಟ್ಟ ವಿಚಾರ.
ನಮ್ಮಲ್ಲಿ, ನಮ್ಮವರಲ್ಲಿ ಅನ್ಯೋನ್ಯತೆ ಬೆಳೆಯಲೇಬೇಕು. ಅದಕ್ಕಾಗಿ ನಮ್ಮವರ ಗುಣವಂತಿಕೆಯ ಗುರುತಿಸುವಿಕೆ ಇಂದಿನಿಂದಲೇ ಆರಂಭಿಸಬೇಕು. ಪರರ ಗುಣವನ್ನು ಗುರುತಿಸುವದೇ ಗುಣವಂತರ ಒಂದು ಅಮೂಲ್ಯ ವಜ್ರ ಎಂದರೆ ತಪ್ಪಾಗದು. ಜಗತ್ತನ್ನು ಬೆಳಗುವ ಚಂದ್ರನನ್ನು ಕ್ಷುದ್ರ ತಲೆಯಿಂದ ಮುಚ್ಚುವಂತಾಗಬಾರದು .....
*✍🏽✍🏽✍ನ್ಯಾಸ..*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments