*ಮಾಡಿದ್ದೇ ಉಣ್ಣುವದು...*
ಉಣ್ಣುವದು ಎನ್ನುವದೇನಿದೆ ನಾವು ಮಾಡಿದ್ದೇ. ನಾನು ಮಾಡದಿರುವದು ನನ್ನಿಂದ ಉಣ್ಣುವದಾಗುವದಿಲ್ಲ. ಇನ್ನೊಬ್ಬರು ಮಾಡಿದ್ದೂ ನಾನು ಉಣ್ಣುವದಾಗುವದಿಲ್ಲ. ಏನು ಉಣ್ಣುವ ಹೆಬ್ಬಯಕೆ ಇದೆ ಅದೇ ಮಾಡುವದು ಶ್ರೇಷ್ಠ.
*ಒಂದು ಸುಂದರ ಕಥೆ...*
ಸೋಮಕ ರಾಜ. ಆ ರಾಜನಿಗೆ ನೂರು ಜನ ಹೆಂಡತಿಯರು. ಒಬ್ಬರಿಗೂ ಸಂತಾನವಿರಲಿಲ್ಲ. ಕೊನೆಗೆ ಮುಪ್ಪು ಬರುವ ಹಂತ ಬಂದಾಗ ಒಂದು ಸಂತಾನವಾಗುತ್ತದೆ. "ಜಂತು" ಎಂದು ನಾಮಕರಣ ಮಾಡುತ್ತಾರೆ.
ಹೀಗಾದ ಪ್ರಸಗದಲ್ಲಿ ಒಬ್ಬ ದುಷ್ಟ ಪುರೋಹಿತ ಬಂದು ಹೇಳುವ ಈ "ಜಂತು"ವನ್ನು ಹೋಮದಲ್ಲಿ ಬಲಿಯಾಗಿಸಿ ಅವನ ಹವನದ ಹೊಗೆಯನ್ನು ನಿನ್ನ ನೂರು ಜನ ಹೆಂಡತಿಯರು ಸ್ವೀಕರಿಸಿದರೆ ನಿನಗೆ ನೂರು ಜನ ಮಕ್ಕಳಾಗುತ್ತಾರೆ ಎಂದು. ಉತ್ಸಾಹಿತನಾದ ರಾಜ ಆ ಕ್ರಮದಲ್ಲಿಯೇ ಯಾಗ ಮಾಡಿ, ಹಿರೆಯ ಮಗನನ್ನು ಕೊಂದು, ಯಾಗಪೂರ್ಣ ಗೊಳಿಸಿ, ತಾನೂ ನೂರು ಜನ ಮಕ್ಕಳನ್ನು ಪಡೆಯುತ್ತಾನೆ.
*ಪುತ್ ನರಕದಿಂದ ರಕ್ಷಿಸುವವ ಪುತ್ರ*
ಪುತ್ ಎಂಬ ನರಕದಿಂದ ಪಾರು ಮಾಡುವ ಮಗ ಹಿರೆಯ ಮಗ. ಅವನನ್ನೇ ಸಂಹರಿದ್ದಕ್ಕೆ ಮಹಾ ಘೋರ ನರಕ ರಾಜನಿಗೆ. ಸಂಹಾರಕ್ಕೆ ಪ್ರೇರಕ ಗುರುವಿಗೂ ಘೋರ ನರಕ.
*ಇಬ್ಬರಿಗೂ ನರಕದಲ್ಲಿ ಭೆಟ್ಟಿ...*
ನರಕದ ದುಃಖದಲ್ಲಿ ಮುಳುಗಿದ ಗುರುವಿನ ಘೋರ ದುಃಖವನ್ನು ಕಂಡು ಮರುಗಿದ ರಾಜ. ನನಗಾಗಿ ಯಾಗ ಮಾಡಿಸಿದ್ದಾರೆ ಗುರು. ಹಾಗಾಗಿ ್ಉರುವಿನ ದುಃಖ ದ
ನಾ ಉಣ್ಣುವೆ, ನನಗೇ ಆ ಶಿಕ್ಷೆಯಾಗಲಿ ಎಂದು ಯಮ ಧರ್ಮನಿಗೆ ಬೇಡಿಕೊಂಡ. ಯಮನು ಉತ್ತರಿಸುವ...
*"ನಾನ್ಯಃ ಕರ್ತುಃ ಫಲಂ ರಾಜನ್ನುಪಭುಂಕ್ಷೇ ಕದಾಚನ"* ಮಹಾಭಾರತ.
"ಒಳಿತಾದ ಅಥವಾ ಕೆಟ್ಟದಾದ ಯಾವದೇ ಕರ್ಮ ಮಾಡಿರಲಿ, ಆ ಕರ್ಮದ ಫಲ ಮತ್ತೊಬ್ಬರಿಗೆ ಸಿಗಲಾರದು". ಎಂದು ಮೇಲಿನ ಶ್ಲೋಕದ ಸಂದೇಶಕೊಟ್ಟು ನಿರ್ಣಯವನ್ನೂ ಹೇಳುವ ಯಮ ಧರ್ಮರಾಜ. ಯಾರು ಯಾವ ಕರ್ಮವನ್ನು ಮಾಡಿದ್ದಾರೆ ಅವರೇ ಆ ಕರ್ಮದ ಫಲವನ್ನೂ ಭೋಗಿಸುವದು ಎಂದು.
*ಮಾಡುವವರಿಗೆ ಮೂಗುದಾಣ...*
"ಕರ್ಮ ಮಾಡುವವ ನಾನು, ತಿನ್ನುವವ ಮತ್ತೊಬ್ಬ ಎಂದಾದರೆ ಏನು ಮಾಡಲೂ ಮಾಡುವವ ಹಿಂಜಿರಿಯಲಾರ". ಮಾಡುವವ ಮಾಡುತ್ತಾ ಸಾಗುವವ. ಉಣ್ಣುವವ ಉಣ್ಣುತ್ತಾ ಸಾಗುವ ಎಂದಾಗುತ್ತಿತ್ತು. ಹಾಗಾಗದಿರಲೇ ದೇವರು ಮಾಡಿದ ಒಂದು ನಿಯಮ *ಯಾರು ಏನು ಮಾಡುತ್ತಾರೆಯೋ ಅದನ್ನು ಅವರೇ ಉಣ್ಣಬೇಕು* ಎಂದು. ಈ ಕ್ರಮದಲ್ಲಿ ಕರ್ಮ ಮಾಡುವವರಿಗೆ ಮೂಗುದಾಣವನ್ನೇ ದೇವರೇ ಕಟ್ಟಿಹಾಕುವ.
ಆದ್ದರಿಂದ *ಏನನ್ನೇ ಮಾಡಿದರೂ ಉಣ್ಣುವದಕ್ಕೆ ಸಿದ್ಧರಾಗಿಯೇ ಮಾಡೋಣ, ಉಣ್ಣುವ ಅಪೇಕ್ಷೆ ಏನಿದೆ ಅದಕ್ಕನುಗುಣವೇ ಕರ್ಮಗಳನ್ನು ಮಾಡೋಣ*
*ಕರ್ಮ ನಾಶ ಮಾಡಲು ದೇವನು ಸಮರ್ಥನಲ್ಲವೇ...*
ನಾ ಮಾಡಿದ ಕರ್ಮ ಸುಟ್ಟು ಹಾಕಲು ದೇವರು ಅತ್ಯಂತ ಸಮರ್ಥ ಇದರಲ್ಲಿ ಸಂಶಯವೇ ಇಲ್ಲ. ಹಾಗಿದ್ದರೂ ನಾ ಮಾಡಿದ ಕರ್ಮ ಉಣ್ಣಿಸದೇ ಬಿಡಲಾರ. ಯಾವ ಯೋನಿಯಲ್ಲಿ, ಎಂದು, ಯಾವ ಕ್ಷಣದಲ್ಲಿ ಏನನ್ನು ಉಣ್ಣುವ ಕರ್ಮವಿದೆ , ಅದನ್ನು ಆ ಯೋನಿಯಲ್ಲಿ ಅದಕ್ಕನುಗುಣ ಆ ಕ್ಷಣದಲ್ಲಿ ಉಣ್ಣಿಸದೇ ಇರಲಾರ.
ಸತ್ಕರ್ಮ ಮಾಡಿಸು. ನಮ್ಮಿಂದ ಸತ್ಕರ್ಮವನ್ನೇ ಮಾಡಿಸುವ, ಪ್ರೇರಿಸುವ, ಪ್ರಚೊದಿಸುವ ತಂದೆ ತಾಯಿ ಗುರು ಹಿರಿಯ ಗೆಳಯರನ್ನೇ ದಯಪಾಲಿಸು ಎಂದು ಕರ್ಮಫಲ ಉಣಿಸುವ ದೇವರಿಗೇ ಮೊರೆ ಹೋಗೋಣ.
*✍🏼ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments