*ಭಯದ ಸುಳಿಯಲ್ಲಿಯೇ ಜೀವನ....*

*ಭಯದ ಸುಳಿಯಲ್ಲಿಯೇ ಜೀವನ....*

ಭಯ ಇಲ್ಲದ ಕ್ಷಣವಿಲ್ಲ.
ಭಯಭೀತನಿಗೆ ಸೌಲಭ್ಯಗಳಿಲ್ಲ.
ಭಯಭೀತ ಸನ್ಮರ್ಗದಲ್ಲಿ ಇರುವ.
ಭಯಗ್ರಸ್ತ ಪರಪ್ರಕಾಶನಾಗಿ ದುರ್ಮಾರ್ಗಿಯಾಗುವ. 

ಮಾಡಿದ ತಪ್ಪುಗಳ ಭಯ ಒಂದೆಡೆ ಆದರೆ, ಮತ್ತೆ ತಪ್ಪುಗಳನ್ನೇ ಮಾಡಿ ಇನ್ನೂ ಕೆಳಬೀಳುವ ಭಯ ಮತ್ತೊಂದೆಡೆ. ಹೀಗಾಗಿ ಭಯಗಳು  ತನ್ನ ಸುಳಿಯಲ್ಲಿ ನರನನ್ನು ಮೇಲೇಳದ ಹಾಗೆ ಬಂಧಿಸಿ ಇಟ್ಟಿವೆ... . ಭಯದ ಸುಳಿಗಳೇ ಹಾಗೆ.... 

*ಭಯಗಳು ಎಷ್ಟು ವಿಧ*

ಭಯಗಳು ನಾನಾವಿಧ. ಕೆಲವು ಭಯಗಳು ಜೀವನನ್ನು ಎತ್ತರ ಮಟ್ಟಕ್ಕೆ ಒಯ್ದರೆ, ಇನ್ನು ಕೆಲಭಯಗಳು ಮೇಲೇಳದಂತೆಯೇ ಮಾಡುತ್ತವೆ. ಕೆಲ ಭಯಗಳು ಒಳಗೊಳಗೆ ಕುಗ್ಗಿಸಿದರೆ, ಮತ್ತೆ ಹಲವು ಭಯಗಳು‌ ಸರಿದಾರಿಯಲ್ಲಿ ಇಡುತ್ತವೆ. 

*ಬೆಂಬಿಡದ ಭೂತ "ಭಯ..."*

ಮೊದಲಿಗೆ ಹಾದಿಗೆ ಬಿಟ್ಟು ಏಳೇ ಭಯ ಆವರಿಸಿರುತ್ತದೆ. ಸ್ಕೂಲಿನ ಭಯ... ಪರೀಕ್ಷೆಯ ಭಯ. ಕೆರಿಯರ್ ಭಯ. ಸೆಟ್ಲ ಆಗುವ ಭಯ. ನೌಕರಿಯ ಭಯ. ಪ್ರೇಮ - ವಿವಾಹಗಳ ಭಯ. ಮಕ್ಕಳ ಭಯ. ಸಣ್ಣ ಬೆನ್ನು ನೋವಿನ ಭಯ. ಶುಗರ್ ಮೊದಲಾದ ರೋಗಗಳ ಭಯ. ಮನೆ ಕಟ್ಟುವ ಭಯ. ಕೊನೆಗೆ ಬಿಳಿ ಕೂದಲಿನ ಭಯ... ಹೀಗೆ ಭಯಭೀತನಿಗೆ ಭಯಗಳು ಪೆಡಂಭೂತವಾಗಿ ಬೆನ್ನುಹತ್ತೇ ಇರುತ್ತವೆ.

ಮಕ್ಕಳ ಮದುವೆ ಭಯ. ಅವನ ಸೆಟ್ಲಮೆಂಟಿನ ಭಯ. ಮಕ್ಕಳನ್ನು ಬಿಟ್ಟಿರಬೇಕಲ್ಲ ಎಂಬ ಭಯ. ವೃದ್ಧಾಪ್ಯದ ಭಯ. ರೋಗ ರುಜಿನಗಳ  ಕೊನೆಗೆ ಸಾವು ಬಂತಲ್ಲ ಎಂಬ ಭಯ. ಹೀಗೆ ಒಂದಿಲ್ಲ ಒಂದು ಭಯ ಕಾಡುವದು ಸಹಜ. ಈ ತರಹದ ಕಾಡಾಟಗಳ ಸುಳಿವಿನಲ್ಲೇ ಜೀವನ ಕಳೆದು ಹೊಗುತ್ತದೆಯಾ... ??? ಅರ್ಧ ಕಳೆದು ಹೋಗಿದೆ. 

ಈ ತರಹದ ಕ್ಷುಲ್ಲಕ ಭಯಗಳು, ನಮ್ಮನ್ನು  ನಿತ್ಯವೂ ಒಂದಿಲ್ಲ ಒಂದು ಸಂಘರ್ಷಗಳಲ್ಲೇ ಸಿಕ್ಕು ಬೀಳುವಂತೆ ಮಾಡಿ ಕೊಳೆಯುವಂತೆ ಮಾಡುತ್ತವೆ. ಸರ್ವಥಾ ಮೇಲೇಳದಂತೆ ಮಾಡುತ್ತವೆ. 

*ಮೇಲೇಳಿಸುವ ಭಯಗಳೂ ಇವೆಯಾ... ????*

ನೂರಾರು ಭಯಗಳು ಜೀವನವನ್ನು ಉಚ್ಛ್ರಾಯಸ್ತೀಗೆ ಒಯ್ಯುತ್ತವೆ. 
*ಓದದ ವ್ಯಕ್ತಿಗೆ ಪರೀಕ್ಷೆಯ ಭಯ. ಅವನು ಎಂದಿಗೂ ಉತ್ತೀರ್ಣನಾಗಲಾರ. ಓದದಿರುವಾಗಿನ ಅನರ್ಥದ ಭಯ ಇದ್ದವನು ಮಾತ್ರ ಉತ್ತೀರ್ಣನಾಗುವ. ತಲೆ ಎತ್ತಿ ಓಡಾಡುವ.* ಇದು ಉದಾಹರಣೆ ಮಾತ್ರ.  ಧರ್ಮ ಮಾಡದವನಿಗೆ ಧರ್ಮಾಧರ್ಮಗಳ ಭಯ ಇರುವದಿಲ್ಲ. ಅಧರ್ಮ ಮಾಡಿದರೆ ಇಂಥಿಂಥ ಭಯಗಳು ಇವೆ ಎಂದು ತಿಳಿದವನು ಮಾತ್ರ ಮಹಾ ಧಾರ್ಮಿಕನು ಆಗುವ. 

ತಪ್ಪುಗಳ ಭಯ ಮತ್ತೊಂದೆಡೆ. ತಪ್ಪು ತಪ್ಪೇ ಎಂದು ತಿಳಿಯದಿರುವಾಗ ತಪ್ಪುಗಳೇ ಆವರ್ತಿಸುತ್ತವೆ. ಆಗ ಆ ಎಲ್ಲ ತಪ್ಪುಗಳೂ ಕುಳಿತಲ್ಲಿ ನಿಂತಲ್ಕಿ ಅನಾಯಾಸೇನ ಸಾಗುತ್ತಿರುತ್ತವೆ. ತಪ್ಪುಗಳು ಬೆಳೆದಷ್ಟು ಸುಪ್ತಭಯ ಕಾಡದೇ ಬಿಡುವದಿಲ್ಲ.  ಭಯಗ್ರಸ್ತನನ್ನಾಗಿ ಮಾಡಿ ತಲೆ ಎತ್ತದಂತೆ ಮಾಡುತ್ತವೆ. *ತಪ್ಪು ಮಾಡಿದರೆ ಇಂಥಿಂಥ ಅನರ್ಥವಿದೆ ಎಂಬ ಭಯವೇನಿದೆ, ಆ ಭಯ ತಪ್ಪುಗಳನ್ನು ಮಾಡಿಸದೇ, ಮಾಡಿದ ತಪ್ಪುಗಳನ್ನೂ ತಿದ್ದಿಸಿ, ಸರಿಪಡಿಸಿ ತಲೆ ಎತ್ತಿ ನಡೆಯುವಂತೆ ಮಾಡಿಸುತ್ತದೆ.*

ಸಾಧನೆಯಾಗದಿರೆ  ಅನರ್ಥದ ಭಯ... ಪುಣ್ಯ ಮಾಡದಿದ್ದರ ಭಯ.. ಸಂಧ್ಯಾವಂದನಾದಿಗಳ ತಪ್ಪಿಸುವದರ ಭಯ... ಜಪ ತಪಗಳನ್ನು ಲೋಪಮಾಡಿದ್ದರ ಭಯ. ಓದದಿದ್ದರ ಭಯ.... ಕಂಡಲ್ಲಿ ತಿನ್ನುವದರ ಭಯ... ಕಂಡವರ ಸಹವಾಸದ ಭಯ... 
ಸಜ್ಜನರ ಪ್ರೀತ್ಯಾಸ್ಪದರ ಸಹವಾಸ ಬಿಟ್ಟಿದ್ದರ ಭಯ...  
ದೇವ ದೇವತಾ ಗುರು ಪೂಜೆ ಬಿಟ್ಟಿದ್ದರ ಭಯ..  
ಗುರುಸೇವೆ ತಪ್ಪಿಸಿದರ ಭಯ... ದುರ್ಗುಣಿಯಾದದ್ದರ ಭಯ... ಸುಗುಣಿಯಾಗದಿದ್ದರ ಭಯ...  ಎಲ್ಲದರ ಮೇಲೆ ಜ್ಙಾನ ಬೆಳಿಸಿಕೊಳ್ಳದವನ ಅವಸ್ಥೆಯ ಭಯ.... ವಿರಕ್ತ ನಾಗದವನ ಸ್ಥಿತಿಯ ಭಯ...  ಭಕ್ತಿಮಾಡದಿದ್ದರ ಭಯ... 
 ಈ ತರಹದ ಎಲ್ಲ ಭಯಗಳೂ ಮೇಲೇಳಿಸುವವವೇ. ಈ ಭಯಗಳ ಸುಳಿಯಲ್ಲಿ ಸಿಕ್ಕುಬಿದ್ದರೆ ಮಾತ್ರ ಅವನು ನಿರ್ಭೀತಿ ಸ್ಥಾನ ಹೊಂದಲುವಸಾಧ್ಯ.

ಕಟ್ಟಿ ಹಾಕುವ ಸುಳಿಯೇ,  ಸುಳುಹು ಮಾರ್ಗವಾಗಿ ನಿರ್ಭಯತಾಣವಾದ ಪ್ರಶಾಂತವೆಂಬ ಶಾಂತಿದಡವನ್ನು ತಲುಪಿಸಿ, ಶಾಂತಿಪತಿ ಪ್ರಶಾಂತ ಮೂರುತಿ ಹರಿಯನ್ನೇ  ಸೇರಿಸಿಬಿಡುತ್ತದೆ ಭಯ. ಈ ತರಹದ ಭಯಭೀತನಾದರೆ ಮಾತ್ರ ನಿರ್ಭೀತ ಸ್ಥಾನವನ್ನು ತಲುಪಬಹುದು. *ಓಯ್ ನ್ಯಾಸ.......*  ಯಾವ ತರಹದ ಭಯದ ಸುಳಿಯಲ್ಲಿ ಸಿಕ್ಕುಬೀಳುತ್ತೀಯಾ ವಿಚಾರಿಸಿ ತಿಳಿದುಕೋ......  😊😊😃😃

*✍🏽✍🏽✍🏽🌹ನ್ಯಾಸ.....*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.

Comments

Anonymous said…
ದಾಸೇ ಇಂದಿನ ಕರೋನಾ ಭಯವೂ ಒಂದುನ
Unknown said…
👌🏻🙏
Unknown said…
👌🏻🙏
Unknown said…
Hare karparesha

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*