*"ಅಹಂ" ಎಂಬ ಚಕ್ರವ್ಯೂಹ.......*
*"ಅಹಂ" ಎಂಬ ಚಕ್ರವ್ಯೂಹ.......*
ಜೀವನ ಇದು ಶಿಕ್ಷೆ ಅಲ್ಲ. ಶಿಕ್ಷೆ ಎಂದು ಆಗಲೇ ಬಾರದು. ಜೀವನ ಪಾಠವೇ ಪ್ರತಿದಿನವೂ ಹೊಸಪಾಠ ಆಗಬೇಕು. ಪ್ರತಿವ್ಯಕ್ತಿಗಳೂ ಹೊಸ ಗುರುವೇ ಆಗಬೇಕು. ಜೀವನ ಕಲಿಸುವ ಯಾವ ಪಾಠಗಳಲ್ಲಿಯೂ ಪುಸ್ತಕಗಳು ಇರುವದಿಲ್ಲ. ಗುರುಗಳು ಶಿಷ್ಯರು ಮಾತ್ರ ಬಂದು ಹೋಗುತ್ತಿರುತ್ತಾರೆ....
ನಮ್ಮ ನಾನಾ ತರಹದ ಸಂಬಂಧಗಳಲ್ಲಿ ಸಾಮರಸ್ಯ ಇರುವಾಗ, ಜೀವನದಲ್ಲಿಯೂ ಸಾಮರಸ್ಯವಿರುತ್ತದೆ. ಇಲ್ಲವಾದಲ್ಲಿ ಇಲ್ಲ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಂಡುಕೊಳ್ಳುವ ಕಲೆಯನ್ನು "ಬಾಗಿದ ಮನಸ್ಸು" ನಮಗೆ ಕಲಿಸಿಕೊಟ್ಟರೆ, ಸಾಮರಸ್ಯಕೆಡುವಂತಹ ಕಲೆಯನ್ನು "ಅಹಂ" ಕಲಿಸುತ್ತದೆ.
*ಶಿಷ್ಯ ಗುರುಗಳ ಬಳಿ ಬಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಬಗೆ...*
"ಅಹಂ" ಹೇಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ. ತುಂಬ ವಿಚಿತ್ರ. ಒಂದು ಸುಂದರ ಕಥೆ.
ಶಿ..) ಗುರುಗಳೇ !! "ನಾನು ದುಷ್ಟರ ಸಹವಾಸದಿಂದ ನಾನೊಬ್ಬನೇ ಕುಡಿತದ ಚಟಕ್ಕೆ ಬಿದ್ದು ಹಾಳಾಗುತ್ತಿದ್ದೇನೆ" ಬೇಸರದ ಸಂಗತಿ ಏನೆಂದರೆ ಅವರೆಲ್ಲರೂ ನಿಮ್ಮ ಶಿಷ್ಯರೇ....!! ನಿಮ್ಮ ಯಾವ ಉಪದೇಶವನ್ನೂ ಪಾಲಿಸುತ್ತಿಲ್ಲ.... ತಿಳಿಸಿ ಬುದ್ಧಿ ಹೆಳಿ.
ಗುರು) ಶಿಷ್ಯೋತ್ತಮ ಯಾವ ಉಪದೇಶವನ್ನು ನನ್ನ ಶಿಷ್ಯರು ಪಾಲಿಸುತ್ತಿಲ್ಲ... ?? ಸ್ವಲ್ಪ ಬಿಡಿಸಿ ಹೇಳುತ್ತೀಯಾ...
ಶಿಷ್ಯ..) ಓಹ್ ಗುರುಗಳೇ !! "ಗೆಳೆಯರ ಜೊತೆಗೆ ಎಲ್ಲವನ್ನೂ ಹಂಚಿಕೊಳ್ಳಬೇಕು, ಏನು ಮಾಡಿದರೂ ಎಲ್ಲರೂ ಸೇರಿಯೇ ಮಾಡಬೇಕು" ಎಂದು ನಿಮ್ಮ ಆಜ್ಙೆ ತಾನೆ...?? ನಾನು ತಂದ ಮದ್ಯವನ್ನು ಈವರೆಲ್ಲರಿಗೂ ಹಂಚಲು ಯತ್ನಿಸಿದರೆ ಅವರಲ್ಲಿ ಯಾರೂ ಸ್ವೀಕರಿಸಲಿಲ್ಲ.... ನಿಮ್ಮ ಮಾತು ಯಾರೂ ಪಾಲಿಸಲಿಲ್ಲ.... *ತಂದ ಮದ್ಯವನ್ನು ಏನು ಮಾಡಲಿ...?? ಹಾಗಾಗಿ ಅಷ್ಟನ್ನೂ ನಾನೇ ಕುಡಿಯಬೇಕಾಗಿ ಬಂತು.* ಹಾಗಾಗಿ ಕುಡುದೆ.
ಗುರುಗಳು ಇನ್ನೂ ಬೇಹೋಷ್ ಇಂದ ಎದ್ದೇ ಇಲ್ಲ....😅😅😂....
ತಾನು ಮಾಡಿದ ತಪ್ಪುಗಳನ್ನು ಅಹಂಕಾರ, ತನಗೆ ಬೇಕಾದ ತಾರ್ಕಿಕ ಸಮರ್ಥನೆಯನ್ನು ಹುಡಿಕೊಳ್ಳುತ್ತದೆ, ಸಮರ್ಥನೆಯನ್ನು ಅತ್ಯಂತ ಸುಭದ್ರರೀತಿಯಲ್ಲಿ ಮಾಡಿಕೊಳ್ಳುತ್ತದೆಯೂ ಸಹ. "ಅಹಂ" ನ ತರ್ಕ, ತನ್ನ ಸಂಕೊಲೆಯಲ್ಲಿ ನಮ್ಮನ್ನು ಕಟ್ಟಿ ಹಾಕುತ್ತದೆಯೇ ವಿನಹ ಬಿಡಿಸುವದಿಲ್ಲ.
*ಈ ಸಂಕೋಲೆಯಿಂದ ಮುಕ್ತಿ ಹೇಗೆ.... ??*
ಅಹಂಕಾರದ ಸಂಕೋಲೆಯಿಂದ ಮುಕ್ತಿಗೊಳಿಸುವದು ಕೇವಲ *ಧರ್ಮ* ಮಾತ್ರ. ಧರ್ಮವೇ ನಮ್ಮನ್ನು ಮುಕ್ತಗೊಳಿಸಬೇಕು. ಆದರೆ ತುಂಬ ವಿಚಿತ್ರ "ಧರ್ಮದ ಹೆಸರಿನಿಂದಲೇ ಜನ ಬಂಧಿತರಾಗಿದ್ದಾರೆ" ಇದು ತುಂಬ ವಿಪರ್ಯಾಸ. ನಿಜವಾಗಿ ಧರ್ಮದ ಗುಣ ಬಂಧನಗಳಿಂದ ಮುಕ್ತಗೊಳಿಸುವದೇ ಆಗಿದೆ.......
ಅಹಂಕಾರ ಸಂಕಟಕ್ಕೇ ಈಡು ಮಾಡುತ್ತದೆ. ಧರ್ಮ ಮುಕ್ತನನ್ನಾಗಿಸುತ್ತದೆ. ಧರ್ಮದ ಬಲದಿಂದ, ಅಹಂನಿಂದ ಮುಕ್ತನಾದರೆ ಆನಂದ ತನ್ನಿಂದ ತಾನೇ ಹೊರ ಹೊಮ್ಮುತ್ತದೆ.
"ಅಹಂ" ಕೇವಲ ಮಾಹಿತಿಗಳನ್ನೋ ಅಥವಾ ತರ್ಕಗಳನ್ನೋ ಕಲೆ ಹಾಕಿದರೆ, ನಿರಹಂಕಾರದ ಸ್ಥಿತಿಗೆ ಬಂದ ವ್ಯಕ್ತಿಗೆ ಧರ್ಮ ಬುದ್ಧಿಯನ್ನೇ ಪ್ರಚೋದಿಸುತ್ತದೆ. ಒಂದು ಸಲ ಬುದ್ಧಿಗೆ ಕೆಲಸವನ್ನು ಕೊಟ್ಟೆವೂ ಎಂದಾದರೆ ಎಲ್ಲ ತರಹದ ಸಂಬಂಧಗಳಲ್ಲಿ ಸಾಮರಸ್ಯವೇ. ಸಂಬಂಧಗಳಲ್ಲಿ ಸಾಮರಸ್ಯ ಬಂದಿತೂ ಎಂದಾದರೆ ಜೀವನದಲ್ಲಿಯೂ ಸಾಮರಸ್ಯವೇ.... 😊😊
*ಬುದ್ಧಿಯ ಕಾರ್ಯ....*
ಗೆಳೆಯನ ಮನೆಗೆ ಹೋಗಿದ್ದೆ. ಗೆಳೆಯ electrical engineer. ಅವನ ಒಂದು ರಿಸರ್ಚ ಕೋಣೆ. ಕೋಣೆಗೆ ಹಳ್ಳಿ ಗುಗ್ಗ ನಾನು ಪ್ರವೇಶಿಸಿದೆ. ಅಲ್ಲಿ ಏನು ಬಳಿಸಲು ತಿಳಿಯದು. ಏನು ಮುಟ್ಟಿದರೂ shock ಹೋಡಿತಿದೆ. ಇಲ್ಲೇನೂ ಭೂತ ಚೇಷ್ಟೇ ಇರಬಹುದು ಎಂದು ಹೆದುರಿ ಕಂಗಾಲಾಗಿ ತಿರುಗಿ ಬಂದೆ...
ಕೆಲ ಹೊತ್ತಿಗೆ ಗೆಳೆಯ ಬಂದ. ಆ ಕೋಣೆಯಲ್ಲಿ ಏನೆಲ್ಲ ಇವೆ, ಅವುಗಳನ್ನು ಹೇಗೇ ಬಳಿಸಬೇಕು... ಎಂದು ವಿವರವಾಗಿ ತಿಳಿಸುತ್ತಾ ಬುದ್ಧಿಗೆ ಕೆಲಸ ಕೊಟ್ಟ.... ನೋಡು ನೋಡುತ್ತಾ ಸ್ಪಷ್ಟ ತಿಳಿಯುತ್ತಾ ಹೋಯಿತು. ಕರೆಂಟ್ ಶಾಕ್ ಹೊಡಿತಿಲ್ಲ. ಭೂತದ ದೊಂಬರಾಟದ ಹೆದುರಿಕೆ ಇಲ್ಲ. ಅದೊಂದು ಅದ್ಭುತವಾಗಿಯೇ ಕಾಣಿಸಿತು. ಆಶ್ಚರ್ಯವೋ ಆಶ್ಚರ್ಯ. ಹೀಗೆಯೇ ಈ ಪ್ರಪಂಚ.
ಇದೊಂದು ಅದ್ಭುತ ವಿದ್ಯುದಾಗಾರ. ಬುದ್ಧಿ ಪೂರ್ವಕ ಬಳಿಸಿ ಸಂಬಂಧಗಳನ್ನು ಉಳಿಸಿಕೊಂಡರೆ ನಿಜವಾಗಿಯೂ ಸ್ವರ್ಗವೇ, ಅಹಂನಿಂದ ಏನೋ ಹುಚ್ಚು ತರ್ಕಗಳನ್ನು ಮಾಡುತ್ತಾ ಅಹಂ ಒಳಗೇ ಸಿಕ್ಕುಬಿದ್ದರೇ "ಬದುಕಿಯೂ ಸತ್ತಂತೆ, ಸ್ವರ್ಗದಲ್ಲಿ ಇದ್ದೂ ನರಕ ಅನುಭವಿಸಿದಂತೆ."
ತಿಳುವಳಿಕೆಯ ಮುಖಾಂತರ ಬುದ್ಧಿಗೆ ಶಕ್ತಿ ನೀಡಿ, ಬುದ್ಧಿಬಲದಿಂದ ಕೂಡಿದ ಧರ್ಮ ನಮ್ಮ ಬಳಿ ಬರುವಂತಾದರೆ ಸಾಕು *ಅಹಂಕಾರದ ವರ್ತುಲಗಳಂತೆ ಇರುವ ಸಂಕೋಲೆಗಳಿಂದ ಹೊರಬರಬಹುದು.* ಅಂತೆಯೇ ದಾಸರ ನುಡಿ *ಧರ್ಮವೇ ಜಯವೆಂಬ ಮೂಲ ಮೂಲ ಮಂತ್ರ* ಎಂದು.
ತೆರೆ ತೆರೆಗಳಂತೆ ನಿರಂತರ ಉಕ್ಕಿ ಬರುವ ನಮ್ಮ ಆನಂದವನ್ನೇ ಕಿತ್ತಿಕೊಳ್ಳುವ ಅಹಂಕಾರ (ego attitude) ಇವುಗಳನ್ನು ಕಿತ್ತಿ ಬಿಸಾಡೋಣ. ಅಥವಾ ಅಹಂಕಾರದ ಸಂಕೋಲೆಗಳಿಂದ ನಾವು ಹೊರಗೆ ಬರೋಣ. ನಮ್ಮದೇ ಆದ ಆನಂದವನ್ಮು ಚೆನ್ನಾಗಿ ಅನುಭವಿಸೋಣ.
*✍🏽✍🏽✍🏽ನ್ಯಾಸ.....*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
Comments