*ದಾನವೇ ಜಯಕೆ ದಿವ್ಯ ಉಪಾಯ..*
*ದಾನವೇ ಜಯಕೆ ದಿವ್ಯ ಉಪಾಯ..*
ಸೋಲಿಗೆ ಕಾರಣವಾದ ಕಷ್ಟಗಳನ್ನು ಎತ್ತಿಕಟ್ಟಿ, ಅಪಜಯವನ್ನು ಸೊಳಿಸಿ, ಅಪಮೃತ್ಯುವನ್ನು ಓಡಿಸಿ, ರೋಗಗಳನ್ನು ಹೆಣ ಎತ್ತಿ, ಪಾಪಗಳನ್ನು ಕಳಚಿ, ಗೆಲವು ನಮ್ಮದಾಗಿಸಲು ಒಂದು ಸುಂದರ ಉಪಾಯ *ಅದು ದಾನ.*
ಅಂತೆಯೇ ಹಿಂದಿನ ರಾಜಾಧಿರಾಜರುಗಳು ನಿತ್ಯವೂ ದಾನ ಮಾಡುತ್ತಿದ್ದರು. ಇಂದಿನ ರಾಜಸ್ಥಾನದಲ್ಲಿ ಇದ್ದು ವಿದ್ವಾಂಸರ ಪೋಶಿಸುವ ಜವಬ್ದಾರಿ ಪೆತ್ತ ಅನೇಕ ಯತಿಗಳು, ಆಚಾರ್ಯರುಗಳು, ಸದ್ಗೃಹಸ್ಥರು ನಿತ್ಯ, ಮಾಸಿಕ, ವಾರ್ಷಿಕ ವಿಭಾಗಗಳನ್ಬು ಮಾಡಿಕೊಂಡು ದಾನಮಾಡುವ ಪಾರಿಪಾಕವನ್ನು ಉಳಿಸಿದ್ದಾರೆ.
*ಇಂದಿನ ಆಪತ್ತಿನಲ್ಲಿ ದಾನ...*
ಅನ್ನ ಮತ್ತು ಹಣ ಇಂದು ಅನಿವಾರ್ಯ. ಇಂದಿನ ಈ ಸ್ಥಿತಿಯಲ್ಲಿ ಹಣ ಸಂಪಾದನೆ ನಿಂತಿದೆ. ತುತ್ತಿನ ಅನ್ನಕ್ಕೆ ಕಷ್ಟವಾಗಿದೆ. ಈ ಪರಿಸ್ಥಿತಯಲ್ಲಿಯ "ಒಂದು ರೂಪಾಯಿಯ ದಾನ, ಒಂದು ತುತ್ತಿನ ದಾನ ಮಹಾಮೇರುವಿಗೆ ಸಮ" ಎಂದರೆ ತಪ್ಪಾಗದು.
*ದಾನಂ ಧೃವಂ ಫಲತಿ*
ಯೋಗ್ಯರಿಗೆ ಪಾತ್ರರಿಗೆ ಕೊಡುವ ದಾನ ಶೀಘ್ರದಲ್ಲಿ ಸ್ಥಿರವಾದ ಫಲ ತಂದು ಕೊಡತ್ತೆ.
ಯೋಗ್ಯರಾದ , ವಿಷ್ಣು ಭಕ್ಯರಾದ , ತಪೋನಿಷ್ಠರಾದ, ಸದಾಚಾರಿಗಳಾದ, ನಿರಂತರ ಪಾಠಪ್ರವಚನ ದೀಕ್ಷಾಬದ್ಧರಾದ, ನಮ್ಮ ಕರ್ನಾಟಕ ಆಂಧ್ರ ತೆಲಂಗಾನಾ ಮಹಾರಾಷ್ಟ್ರ ತಮಿಳುನಾಡು ಈ ಪ್ರಾಂತಗಳಲ್ಲಿ ನೂರಾರು ವಿದ್ವಾಂಸರು, ಪುರೋಹಿತರು, ಪೂಜಾದಿಗಳಲ್ಲಿಯೇ ರತರಾದ ಸದ್ಗೃಹಸ್ಥರು ಸಿಗುತ್ತಾರೆ. ಆ ಎಲ್ಲ ಮಹನೀಯರುಗಳನ್ನು ಹುಡುಕಿ ಹೋಗಿ ಕೊಡುವ ದಾನ ಮಹಾಫಲಕಾರಿ. ಶೀಘ್ರಫಲಕಾರಿ. ವಿಷ್ಣುಪ್ರಿಯಕಾರಿಯೂ ಆಗುತ್ತದೆ.
*"ಮಠ-ಮಾನ್ಯಗಳು ಮಾಡಿದ ವಿದ್ವತ್ಪೋಷಣೆ*
ಶ್ರೀಶ್ರೀಸತ್ಯಾತ್ಮತೀರ್ಥರು ಮಠ ಮತ ನೋಡದೆ, ಕನಿಷ್ಠ ಸಾವಿರ ಜನ ವಿದ್ವಾಂಸರುಗಳಿಗೆ ಅನ್ನದಾನ ದ್ರವಿಣದಾನ ಮಾಡಿದರು. ಸಂಭಾವನೆ ಎಷ್ಟು ಕೊಟ್ಟಿದ್ದಾರೋ , ಎಷ್ಟು ಜನರಿಗೆ ಕೊಟ್ಟಿದ್ದಾರೋ ಲೆಕ್ಖವಿಲ್ಲ. ಅಷ್ಟು ಅನುಗ್ರಹ ಕಳಕಳಿ. ಪೋಷಣೆಗೆ ಮುಂದು ಇದುವೇ ಫೋಷಕರ ವಿಚಾರ.
ಅದೇರೀತಿಯಲ್ಲಿ ನನಗೆ ತಿಳಿದಂತೆ ಶ್ರೀ ರಾಯರ ಮಠಾಧೀಶರಾದ, ಶ್ರೀ ಶ್ರೀಸುಭುದೇಂದ್ರತೀರ್ಥರು, ಶ್ರಿ ವ್ಯಾಸರಾಜಮಠಾಧೀಶರು, ಭಂಡಾರಿಕೇರಿ ಮಠಾಧೀಶರು, ಇನ್ನೂ ಅನೇಕ ಮಠಾಧೀಶರುಗಳು, ಈ ಎಲ್ಲ ಮಹನೀಯರುಗಳು ವಿದ್ವತ್ಪೋಷಣೆಗೆ ಮುಂದು ನಿಂತು ಪೋಷಣೆ ಮಾಡಿದ್ದಾರೆ. ಇಂದಿಗೂ ಮಾಡುತ್ತಿದ್ದಾರೆ. ಈ ಎಲ್ಲರ ದಾನ ಸುಪ್ತ ಗುಪ್ತ. ಸ್ವೀಕರಿಸಿದವರಿಗೆ ಗೊತ್ತು. ಎಲ್ಲ ಮಹನೀಯರುಗಳಿಗೂ ಅನಂತ ನಮಸ್ಕಾರಗಳು.
ಮಧ್ವಸಿದ್ಧಾಂತ ಉನ್ನಾಹಿನೀ ಸಭಾ , ಅಖಿಲಬ್ರಾಹ್ಮಣ ಮಹಾಸಭಾ, ವಿಶ್ವಮಧ್ವಮಹಾಪರಿಷತ್, ಮೊದಲು ಮಾಡಿ ಅನೇಕ ಸಂಘ ಸಂಸ್ಥೆಗಳು ನೂರಾರು ವಿದ್ವಾಂಸರುಗಳಿಗೆ ದಾನ ಮಾಡಿವೆ. ವಿಷ್ಣುಭಕ್ತರ, ಪಾಠಪ್ರವಚನ ದೀಕ್ಷಾಬದ್ಧರ ಪೋಷಣೆಗೆ ನಿಂತಿವೆ.
*ನಮ್ಮ ಗುರುಗಳು*
ಸ್ವಯಂ ತಾವು ಮುಂಬಯಿ ಮಹಾನಗರದಲ್ಲಿ ಇದ್ದು. ನೂರಾರು ವಿದ್ಯಾರ್ಥಿಗಳನ್ನು ತಮ್ಮ ಒಡಲಲ್ಲೆ ಇಟ್ಟುಕೊಂಡಿದ್ದರೂ, ನೂರಾರು ಜನರಿಗೆ ಅವರವರು ಇರುವಲ್ಲಿಯೇ ಏನು ಅವಶ್ಯಕತೆ ಇದೆಯೋ ಅದೆಲ್ಲದರ ವ್ಯವಸ್ಥೆಯನ್ನು ಕಲ್ಪಿಸಿ, ಸಮೃದ್ಧವಾಗಿ ಧನ ಧಾನ್ಯಗಳನ್ನು ಕಳುಹಿಸಿ ಎಲ್ಲರ ಕಾಳಜಿಹೊತ್ತುಕೊಂಡ ಆಚಾರ್ಯ( ಮಾಹುಲೀ ಆಚಾರ್ಯರು) ರಿಗೆ ಎಷ್ಟು ನಮಸ್ಕಾರಗಳನ್ನು ಸಲ್ಲಿಸಿದರೂ ಕಡಿಮೆಯೆ. ನಿತ್ಯವೂ ವಿದ್ಯಾರ್ಥಿಗಳಿಗೋಸ್ಕರ, ವಿದ್ವಾಂಸರಿಗೋಸ್ಕರ, ಸಮಾಜಕ್ಕಾಗಿ ಜಪತಪ ಕಡಿಮೆ ಮಾಡದೆ, ಪಾಠ ಪ್ರವಚನ ಕ್ಷಣ ನಿಲ್ಲಿಸದೇ, ಇಷ್ಟೆಲ್ಲ ಮಾಡುವ ಪೂಜ್ಯ ಆಚಾರ್ಯರಿಗೆ *ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ*
ಅದೇರೀತಿ ಹಿರಿಯ ನೂರಾರು ಪಂಡಿತರು ಅನೇಕ ಕಿರಿಯ ನೂತನ ವಿದ್ವಾಂಸರುಗಳಿಗೆ ವ್ಯವಸ್ಥೆಯನ್ನು ಸ್ವತಃ ತಾವು, ಇಲ್ಲವೇ ತಮ್ಮ ಶಿಷ್ಯರ ಮುಖಾಂತರ ನಡೆಸಿಕೊಡುತ್ತಿದ್ದಾರೆ.
*ಈ ಎಲ್ಲ ಮಹನೀಯರುಗಳ ಉದ್ಯೇಶ್ಯವೇನು...??*
ದೇಶದಲ್ಲಿ, ಸಮಾಜದಲ್ಲಿ, ವಿದ್ವಾಂಸರಿಂದ ಪಾಠಪ್ರವಚನ ನಿಂತಿತೂ ಎಂದಾಗಬಾರದು. ಅವರವರು ಮಾಡುವ ಜಪತಪಗಳು ಕಡಿಮೆ ಆಯಿತೂ ಎಂದಾಗಬಾರದು. ಈ ಪಾಠ ಪ್ರವಚನವೇ ಜಪತಪಗಳೇ ಈಗಿರುವ ರೋಗಕ್ಕೆ ಆಪತ್ತಿಗೆ ಪರಮಾದ್ಭುತ ಔಷಧಿ ಎಂದು ದೃಢವಾಗಿ ನಂಬಿದ ಮಹಾತ್ಮರು ಈ ಕಾರ್ಯದಲ್ಲಿ ತೊಡಗಿದ್ದಾರೆ.
*ದೇವರ ಅನುಗ್ರಹ*
ಸಮಾಜವನ್ನೇ ನಂಬಿದ ಅನೇಕ ವಿದ್ವಾಂಸರಿಗೆ ಇಂದಿಗೂ ಸಮಾಜ ಕಡಿಮೆ ಮಾಡಿಲ್ಲ. ಅವರ ಪೂರ್ಣ ಜವಾಬ್ದಾರಿ ಹೊತ್ತಿದೆ. ಅಂತೆಯೇ ಸಮಾಜ ನಡೆಸುವ ಎಲ್ಲ ಗೃಹಸ್ಥರಿಗೂ work from home ಕೊಟ್ಟು ದೇವರು ಕರುಣಿಸಿದ್ದಾನೆ. ಸರಕಾರದ ಕೆಲಸದಲ್ಲಿ ಇರುವವರಿಗೂ ಕೆಲಸವಿದೆ. Privet ಕಂಪನಿಗಳಲ್ಲಿ ಇರುವಂತಹವರೆಗೂ ಕೆಲಸವಿದೆ.
ಮನೆಯಲ್ಲಿಯೇ ಇರುವದರಿಂದ ನೂರು ತರಹದ ಖರ್ಚುಗಳು ಕಡಿಮೆಯಾಗಿವೆ. ಇದೊಂದು ದೇವರ ಅನುಗ್ರಹ. ಈ ದೇವರ ಅನುಗ್ರಹ, ನಮ್ಮ ಖರ್ಚಿನ ಉಳಿತಾಯವನ್ನು "ಸೂಕ್ತರಿಗೆ ದಾನ ಮಾಡಿದಾಗ ಪರಮಾನುಗ್ರಹವಾಗಿ ಮಾರ್ಪಾಡು ಆಗುತ್ತದೆ" ಇದರಲ್ಲಿ ಸಂಶಯವೂ ಇಲ್ಲ.
*ಒಬ್ಬರಿಗೆ, ಇಬ್ಬರಿಗೆ, ನಾಲ್ಕು ಜನರಿಗೆ, ಹತ್ತು ಜನರಿಗೆ ದಾನ ಕೊಡಬಾರದೇತಕೆ...??*
ಈಗಾಗಲೇ ನನಗೆ ಪರಿಚಯವಿದ್ದ ನೂರಾರು ಸದ್ಗೃಹಸ್ಥರು ನಾನಾವಿಧವಾಗಿ ದಾನಗಳನ್ನು ಕೊಟ್ಟಿದ್ದಾರೆ. ಇನ್ನು ಮುಂದೆಯೂ ಎಷ್ಟೆಲ್ಲ ಸಾಧ್ಯವಿದೆ ಅಷ್ಟು ದಾನ ಮಾಡೋಣ. ಜಪ ತಪ ಪೂಜೆ ಪಾಠ ಪ್ರವಚನ ನಿಲ್ಲುವದು ಬೇಡ. ಅದರಿಂದಲೇ ದೇಶ ಸಮಾಜ ಸಮೃದ್ಧವಾಗಿ ಇರುತ್ತದೆ. ರೋಗ ರುಜಿನಗಳು ಮಾಯವಾಗುತ್ತವೆ. *ಮನೆಯಲ್ಲಿಯೇ ಇದ್ದೇವೆ. ಹಾಗಾಗಿ ಪಾಠ ಹೇಳಿ ಎಂದು ಒತ್ತಾಯ ಮಾಡಿಯಾದರೂ ಪಾಠ ಹೇಳಿಸಿಕೊಳ್ಳೋಣ.* ನಿತ್ಯವೂ ಜಪ ಮಾಡೋಣ. ಸ್ವಲ್ಪವಾದರೂ ದಾನಕ್ಕಾಗಿ ತೆಗೆದಿಡೋಣ. "ಈ ದಾನವೆಂಬ ಉಪಾಯದಿಂದ ಎಲ್ಲವನ್ನೂ ಗೆದ್ದುಬರೋಣ. ದೇವರು ಗೆಲ್ಲಿಸಿಯೇ ಉಸಿರು ತೆಗೆದುಕೊಳ್ಳುತ್ತಾನೆ."
*ಈ ಸಲ ಗೆಲವು ನಮ್ಮದೇ.. ಈ ಸಲ ಗೆಲುವು ನಮ್ಮದೇ...🌹🌹💐💐✌🏽✌🏽✌🏽*
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments