ತೀರ್ಥಯಾತ್ರೆ ಸುಲಭ... ಅತ್ಯಂತ ದುರ್ಲಭ ಭಕ್ತಿ ವಿಶ್ವಾಸಗಳು*
*ತೀರ್ಥಯಾತ್ರೆ ಸುಲಭ... ಅತ್ಯಂತ ದುರ್ಲಭ ಭಕ್ತಿ ವಿಶ್ವಾಸಗಳು* ತೀರ್ಥಯಾತ್ರೆಗೆ ಹಣ ಅತ್ಯಲ್ಪ ಕಷ್ಟ ಸಹಿಷ್ಣುತೆ ಇವುಗಳು ಇದ್ದರೆ ಅತ್ಯಂತ ಸುಲಭ. ಈಗಿನ ಕಾಲದಲ್ಲಿ ಅನುಕೂಲವೂ ಇದೆ. ಕೈತುಂಬ ಹಣವೂ ಇದೆ. ಅನೇಕ ಸೂಟಿಗಳೂ ಸಿಗುತ್ತವೆ. ಮನಸ್ಸು ಮಾಡಬೇಕು. ಸ್ವಲ್ಪ ಕಷ್ಟಗಳನ್ನು ಸಹಿಸಿಕೊಳ್ಳಬೇಕು. ತೀರ್ಥಯಾತ್ರೆ ಮುಗಿಯತ್ತೆ. ಆದರೆ...... ...... ತೀರ್ಥಕ್ಷೇತ್ರಸ್ಥ ದೇವರಲ್ಲಿಯೋ, ದೇವತೆಗಳಲ್ಲಿಯೋ, ತೀರ್ಥಾಭಿಮಾನಿಗಳಲ್ಲಿಯೋ ಭಕ್ತಿ ವಿಶ್ವಾಸಗಳು ಬರುವದು ತುಂಬ ಕಠಿಣ. ಬದರಿ ಮೊದಲಾದ ಕ್ಷೇತ್ರಗಳಿಗೆ ಹೋದವರು ತುಂಬ ಜನ ಇದಾರೆ. ಅನೇಕ ತೀರ್ಥಗಳಿಗೆ ಸಂಚಾರ ಮಾಡಿದವರು ಅನೇಕರುಂಟು. ಆವರುಗಳಲ್ಲಿ ಭಗವದನುರಾಗಿಗಳು ಎಷ್ಟು ಜನ... ?? ವೈರಾಗ್ಯ ಸಾಧಿಸಿಕೊಂಡವರೆಷ್ಟು ಜನ... ?? ಮನಃಶ್ಶೋಧನೆ ಮಾಡಿಕೊಂಡವರೆಷ್ಟು ಜನ.. ?? ಇದ್ದಾರೆ ನಾಲ್ಕಾರು ಜನ ಇರಬಹುದು ಅಷ್ಟೆ. ಅಧ್ಯಾತ್ಮಮಾರ್ಗ ತುಂಬ ಕಠಿಣ ಮಾರ್ಗ. ಜೀವಂತ ಆದರ್ಶಗಳು ಇಲ್ಲದವರಿಗೆ ಈ ಮಾರ್ಗದಲ್ಲಿಯ ಸಂಚಾರ ತುಂಬ ಕಠಿಣವೇ. ದೈವ ವಶಾತ್ ಆದರ್ಶ ಮಾನವನ ಸಂಬಧವಾದರೆ ಸ್ವಲ್ಪಮಟ್ಟಿಗೆ ಅಧ್ಯಾತ್ಮ ಮಾರ್ಗದಲ್ಲಿ ಪ್ರಗತಿ ಸಾಧಿಸಿಕೊಳ್ಳಬಹುದು. ಇಲ್ಲದೇ ಹೋದರೆ ಅಧ್ಯಾತ್ಮ ಮಾರ್ಗವೇ ದುಸ್ಸಾಧ್ಯ. ಪ್ರಗತಿ ಕನಸೇ ಆಗಿ ಉಳಿಯಬಹುದು. ಅಧ್ಯಾತ್ಮ ಮಾರ್ಗವೇ ದುಸ್ಸಾಧ್ಯ ಎಂದಾದಮೇಲೆ *ಭಕ್ತಿ ವಿಶ್ವಾಸಗಳಿಗೆ* ಆಸ್ಪದವೇ ಇರದು. ಇಂದಿಗೆ ಯಾತ್ರೆಯಲ್ಲಿ...