*ದಾನವೇ ಜಯಕೆ ದಿವ್ಯ ಉಪಾಯ..*
*ದಾನವೇ ಜಯಕೆ ದಿವ್ಯ ಉಪಾಯ..* ಸೋಲಿಗೆ ಕಾರಣವಾದ ಕಷ್ಟಗಳನ್ನು ಎತ್ತಿಕಟ್ಟಿ, ಅಪಜಯವನ್ನು ಸೊಳಿಸಿ, ಅಪಮೃತ್ಯುವನ್ನು ಓಡಿಸಿ, ರೋಗಗಳನ್ನು ಹೆಣ ಎತ್ತಿ, ಪಾಪಗಳನ್ನು ಕಳಚಿ, ಗೆಲವು ನಮ್ಮದಾಗಿಸಲು ಒಂದು ಸುಂದರ ಉಪಾಯ *ಅದು ದಾನ.* ಅಂತೆಯೇ ಹಿಂದಿನ ರಾಜಾಧಿರಾಜರುಗಳು ನಿತ್ಯವೂ ದಾನ ಮಾಡುತ್ತಿದ್ದರು. ಇಂದಿನ ರಾಜಸ್ಥಾನದಲ್ಲಿ ಇದ್ದು ವಿದ್ವಾಂಸರ ಪೋಶಿಸುವ ಜವಬ್ದಾರಿ ಪೆತ್ತ ಅನೇಕ ಯತಿಗಳು, ಆಚಾರ್ಯರುಗಳು, ಸದ್ಗೃಹಸ್ಥರು ನಿತ್ಯ, ಮಾಸಿಕ, ವಾರ್ಷಿಕ ವಿಭಾಗಗಳನ್ಬು ಮಾಡಿಕೊಂಡು ದಾನಮಾಡುವ ಪಾರಿಪಾಕವನ್ನು ಉಳಿಸಿದ್ದಾರೆ. *ಇಂದಿನ ಆಪತ್ತಿನಲ್ಲಿ ದಾನ...* ಅನ್ನ ಮತ್ತು ಹಣ ಇಂದು ಅನಿವಾರ್ಯ. ಇಂದಿನ ಈ ಸ್ಥಿತಿಯಲ್ಲಿ ಹಣ ಸಂಪಾದನೆ ನಿಂತಿದೆ. ತುತ್ತಿನ ಅನ್ನಕ್ಕೆ ಕಷ್ಟವಾಗಿದೆ. ಈ ಪರಿಸ್ಥಿತಯಲ್ಲಿಯ "ಒಂದು ರೂಪಾಯಿಯ ದಾನ, ಒಂದು ತುತ್ತಿನ ದಾನ ಮಹಾಮೇರುವಿಗೆ ಸಮ" ಎಂದರೆ ತಪ್ಪಾಗದು. *ದಾನಂ ಧೃವಂ ಫಲತಿ* ಯೋಗ್ಯರಿಗೆ ಪಾತ್ರರಿಗೆ ಕೊಡುವ ದಾನ ಶೀಘ್ರದಲ್ಲಿ ಸ್ಥಿರವಾದ ಫಲ ತಂದು ಕೊಡತ್ತೆ. ಯೋಗ್ಯರಾದ , ವಿಷ್ಣು ಭಕ್ಯರಾದ , ತಪೋನಿಷ್ಠರಾದ, ಸದಾಚಾರಿಗಳಾದ, ನಿರಂತರ ಪಾಠಪ್ರವಚನ ದೀಕ್ಷಾಬದ್ಧರಾದ, ನಮ್ಮ ಕರ್ನಾಟಕ ಆಂಧ್ರ ತೆಲಂಗಾನಾ ಮಹಾರಾಷ್ಟ್ರ ತಮಿಳುನಾಡು ಈ ಪ್ರಾಂತಗಳಲ್ಲಿ ನೂರಾರು ವಿದ್ವಾಂಸರು, ಪುರೋಹಿತರು, ಪೂಜಾದಿಗಳಲ್ಲಿಯೇ ರತರಾದ ಸದ್ಗೃಹಸ್ಥರು ಸಿಗುತ್ತಾರೆ....