*ಜನವಿದೂರ ಜ್ವರ ವಿದೂರ....*

 *ಜನವಿದೂರ ಜ್ವರ ವಿದೂರ....*

ಜನರಿಂದ ದೂರ ಇರುವದು ನಮ್ಮ ಪದ್ಧತಿ. ಜನರಿಂದ ದೂರ ಇದ್ದಷ್ಟು ಜ್ವರ ವಿದೂರ. ಜ್ವರಗಳು ಅನೇಕ ವಿಧ. ಆ ಎಲ್ಲ ತರಹದ ಜ್ವರಗಳಿಗೂ ಜನವಿದೂರತೆಯೇ ಮೊದಲ ಮದ್ದು. ಜ್ವರಗಳು ಎಂದರೆ ರೋಗ.‌ ಆರೋಗಗಳು ದೇಹ ಇಂದ್ರಿಯ ಮನಸ್ಸು ಇವುಗಳಿಗೆ ಬರುವಂತಹದ್ದು.  ಆ ರೋಗಗಳ ಉಪಶಮನ ಎಲ್ಲದರಿಂದ ದೂರಾಗಿ ತಾನಿರುವದರಿಂದಲೇ.

"ಪಾಪ" ಎಂಬ ಜ್ವರ ಬರದಿರಲೀ ಎಂಬ ಉದ್ದೇಶ್ಯದಿಂದ ಬ್ರಾಹ್ಮಣ ತಾ ಮಡಿ ಮಡಿ ಎಂದು ಯೋಚಿಸುತ್ತಾ ಇರುತ್ತಾನೆ. ತಾನು ಮಡಿಯಿಂದ ಇರುವಾಗಲೂ, ಅದೇ ಮಡಿಯಲ್ಲಿ ಇದ್ದ ತನ್ನವರನ್ನೂ ತಾ ಮುಟ್ಟಲಾರ. ಪಾಪ ಜ್ವರ ಬರಬಾರದು ಎಂದು. ಇದು ಬ್ರಾಹ್ಮಣರ ಪದ್ಧತಿ. ಈ ಪದ್ಧತಿಗೆ ಬೈದವರೇ ಹೆಚ್ಚು. ಆದರೆ  ಇವತ್ತು ಇದೇ ಸ್ಥಿತಿ ಸಮಸ್ತ ದೇಶಕ್ಕೂ, ದೇಶದ ಜನರಿಗೂ,  ವಿದೇಶದ ಸಕಲರಿಗೂ ಒದಗಿಬಂದಿದೆ.  ತನ್ನವರನ್ನೂ ತಾನು ಮುಟ್ಟದಂತೆ ಒಂದು ಜ್ವರ ತಾನು ಮಾಡಿಟ್ಟಿದೆ. ಈ ಜ್ವರದ ಪರಿಹಾರ "ಯಾರನ್ಬೂ ಮುಟ್ಟದೆ, ಎಲ್ಲದರಿಂದಲೂ ದೂರಾಗಿ ತಾನು ಇರುವದು" ಈ ನಿಯಮವೇ ಅತ್ಯಂತ ಪರಿಪಾಲನೀಯ ಎಂದಾಗಿದೆ.

*ಜನವಿದೂರತೆಯೇ ಜನಾರ್ದನನ ಒಲುಮೆಗೆ ಮೆಟ್ಟಲು...*

ಜನರ ಎಲ್ಲ ರೋಗಗಳನ್ನು ಅರ್ದನ ಮರ್ದನ ಮಾಡುವ *ಜನಾರ್ದನ* ನ ಆರಾಧನೆಗೆ ಇಂದು ಜನರ ಅಸಡ್ಢೆ. ಅಸಡ್ಢೆ ತೋರಿದ ಎಲ್ಲ ಜಗತ್ತನ್ನೇ ತಲ್ಲಣಿಸಿ ಇಟ್ಟಿದೆ ಸಣ್ಣ ಜ್ವರ. ಈ ಜ್ವರದ ಹರಡುವಿಕೆಯನ್ನು ನಿಲ್ಲಿಸಲು ಜನವಿದೂರತೆ ಬೇಕು. ಜ್ವರವನ್ನು ಕೊಂದೇ ಹಾಕಲು ಜನಾರ್ದನನ ಒಲುಮೆ ಬೇಕು. ಜನಾರ್ದನ ಒಲಿಯುವದು ಜನವಿದೂರತೆಯಲ್ಲಿಯೇ. 

*ನಾಳೆಯ ದಿನ ಜನರಿಂದ ದೂರ ಇರುವದಿನ*

ಜನರಿಂದ ದೂರ ಇರುವ ಸ್ಥಿತಿ ಬಂದಾಗಲೇ, ಜನಾರ್ದನನ ಒಲುಮೆ. ಜನಾರ್ದನನ ಒಲುಮೆಗೆ ಜನರಿಂದ ಅಂತರ ಕಾಯ್ದುಕೊಳ್ಳುವದು.  ನಾಳೆಯ ದಿನ ಜ್ವರ ಪರಿಹಾರಕ್ಕೆ ಜನರಿಂದ ದೂರ. ಜನರಿಂದ ದೂರ ಇದ್ದಾಗಲೇ ಜನಾರ್ದನನ ಆರಾಧನೆಯ ವೈಭೊಗ. ಜನಾರ್ದನನ ಆರಾಧನೆಯೇ ಜ್ವರಹರಕ್ಕೆ ಮೂಲ. 

ಜನರಿಂದ ದೂರ ಇದ್ದ ನಾಳೆಯದಿನ ಕನಿಷ್ಠ ಅತೀ ಹೆಚ್ಚಿನ ಮಟ್ಟದಲ್ಲಿ ಜನಾರ್ದನನ ಆರಾಧನೆ ಆಗಲೇಬೇಕು. ಕೇವಲ ಜನರಿಂದ ದೂರ ಇದ್ದವನಿಗೆ ಜ್ವರದ ನಿಗ್ರಹ ಆದೀತು. ಆದರೆ ಜ್ವರ ಸತ್ತು ಹೋಗದು. ಜ್ವರ ಸಾಯುವಿಕೆಗೆ ಜನಾರ್ದನನ ಒಲುಮೆಯೇ ಅತೀ ಮುಖ್ಯ. ಜ್ವರ ಸತ್ತರೆ ನಾನು ಸ್ಥಿರ. ಜ್ವರ ಆವರಿಸಿದರೆ ನನ್ನವರೂ ಅಸ್ಥಿರ. 

*ನಾಳೆಯ ದಿನ ಜನಾರ್ದನನ ಆರಾಧನೆಯ ದಿನ*

ಜ್ವರ ತನ್ನ ಪ್ರಭಾದಿಂದ ಸಂಬಂಧಗಳನ್ನೇ ಕೆಡಿಸಿ ಹಾಕಿದ  ಈ ಕಾಲದಲ್ಲಿ ಸಂಬಂಧಿಗಳೊಂದಿಗೆ ಕುಳಿತ ಈ ದಿನದಲ್ಲಿ ಜನಾರ್ಧನನ ಆರಾಧನೆಯೂ ಆಯ್ತು ಎಂದಾದರೆ ಜ್ವರವೂ ಇಲ್ಲ. ಜನಾರ್ಧನನೂ ಸಿಗುವ. 

*ಹೇಗೆ ಜನಾರ್ಧನನ ಆರಾಧನೆ...*

"ಅಚ್ಯುತಾನಂತ ಗೋವಿಂದ" ನಾಮಸ್ಮರಣ ಜಪವೇ ಜನಾರ್ದನನ ಆರಾಧನೆಗೆ ಯೋಗ್ಯ. ನನ್ನ ಆರೋಗ್ಯಕ್ಕೂ ಸೂಕ್ತ. ದೇವನಿಗೂ ಪ್ರೀತಿ. ನನಗೋ ಸೌಭಾಗ್ಯ. ನೂರೆಂಟು ಬಾರಿ ನಿತ್ಯಪಠಣ. ನಾಳೆ ಕನಿಷ್ಠ ಸಾವಿರದೆಂಟುಬಾರಿ. ಅರ್ಥಾನುಸಂಧಾನ ಅವಲೋಕಿಸೋಣ. 

*ಹೇ ಅಚ್ಯುತ* ನಿನ್ನಲ್ಲಿರುವ ಆರೋಗ್ಯ ವೈಭವ ಸ್ಥಾನ ಮಾನ ಯಾವುದರಿಂದಲೂ ಚ್ಯುತನಾಗದವ ನೀನು.
*ಓ ಅನಂತ* ಆರೋಗ್ಯ ಭಾಗ್ಯ ಜ್ಙಾನ ಇತ್ಯಾದಿ ಏನಿವೆ ಅದೆಲ್ಲವನ್ನೂ ಅನಂತವಾಗಿ ಹೊಂದಿದವ ನೀನು. 
*ರೇ ಗೋವಿಂದ* ಏಕಾಂತಪ್ರಿಯರಾದ ಜ್ಙಾನಿಗಮ್ಯನಾದ ಅಂತೆಯೇ ಗೋವಿಂದನಾದ ಹೇ ಭಗವನ್ !!!! ನಿನ್ನ ಹಾಗೆ ನಾನೂ,  ನಾನು‌ ಪಡೆದ ಜ್ಙಾನ ಆರೋಗ್ಯ ಸೌಭಾಗ್ಯ ಮುಂತಾದ ಯಾವುದರಿಂದಲೂ ಚ್ಯುತನಾಗಬಾರದು. ಜಗಕ್ಕೂ ಹಿತವಾಗಲೇಬೆಕು. ಏನನ್ನು ಪಡೆದಿದ್ದೀಯೋ ಅದೆಲ್ಲವೂ ಅನಂತವಾಗಿಯೇ ಇದೆ. ಎನಗೂ ಆರೋಗ್ಯ ಭಾಗ್ಯ ಸೌಭಾಗ್ಯ ಅನಂತವಾಗಿಯೇ ದಯಪಾಲಿಸು.
ಜ್ಙಾನಿಗಳು ಮಾತ್ರ ನೀನು ತಿಳಿದು ಬರುವಂತೆ, 
ನನ್ನನ್ನೂ ಜ್ಙಾನಿಗಳೆ ಹರಿಸಲಿ. ಆಶೀರ್ವದಿಸಲಿ. ನನ್ನನ್ನೂ  ಜ್ಙಾನಿಗಳೇ ಸ್ವೀಕರಿಸಲಿ. ಎಂಬ ಈ ಸ್ವಾರ್ಥಕ್ಕಾದರೂ *ಅಚ್ಯುತಾನಂತ ಗೋವಿಂದ* ಎಂಬ ನಾಮವನ್ನು ಕನಿಷ್ಠ ನಾಳೆಯ ದಿನ ಜಗದ್ರಕ್ಷಣೆಗೆ ಜಗದ್ಧಿತಕ್ಕೆ ಸಾವಿರದೆಂಟು ಬಾರಿಯಾದರೂ ಪಠಿಸೋಣ. ಜನಾರ್ದನನ ಒಲುಮೆ ಇದೆ. ಈ ಜನಾರ್ದನನೇ ಬಂದ ಬರಬಹುದಾದ ಜ್ವರವನ್ನೂ ರೋಗಗಳನ್ನೂ ಮಾಡಿಸಿಯೇ ತೀರುವ. ಆದ್ಧರಿಂದ ನಾವು ಜನವಿದೂರನಾಗಿ, ಜನಾರ್ದನನ ಆರಾಧನೆ ಮಾಡಿ ಜ್ವರಗಳಲಿಂದ ದೂರ ಆಗೋಣ.....

*✍🏽✍🏽ನ್ಯಾಸ...*
ಗೋಪಾಲ ದಾಸ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*