*corona virus ಕಣ್ಣಿಗೆ ಕಾಣ್ಸಲ್ಲವೇ...??*
*corona virus ಕಣ್ಣಿಗೆ ಕಾಣ್ಸಲ್ಲವೇ...??*
"corona virus ಕಣ್ಣಿಗೆ ಕಾಣ್ಸಲ್ಲವೇ...??" ನನ್ನಂತಹ ಪೆದ್ದುಗಳ ಅನೇಕರ ಪ್ರಶ್ನೆ.
ಕಣ್ಣಿಗೆ ಕಾಣಿಸುತ್ತಿಲ್ಲ ಅಂತೆಯೇ ಇಪ್ಪತ್ತೊಂದು ದಿನಗಳ ಕಾಲ ನೂರಮೂವತ್ತು ಕೋಟಿ ಜನರ ದಿಗ್ಬಂಧನ. ಇದರಿಂದ ಎಷ್ಟು ನಷ್ಟವಿದೆ ಎಂದು ಊಹಿಸಲೂ ಅಸಾಧ್ಯ. ಹೀಗೆ ದಿಗ್ಬಂಧನ ಮಾಡುವದರಿಂದ ಕಣ್ಣಿಗೆ ಕಾಣಿಸಲ್ಲ ಎಂದು ಉತ್ತರ ಹೇಳುವದು ತುಂಬ ಕಷ್ಟ. ಏನಕ್ಕೆ.....
"corona virus ಕಣ್ಣಿಗೆ ಕಾಣ್ಸಲ್ಲ ಅಂದ್ರೆ ನಗು ಬರತ್ತೆ...... *ಕೊರೊನಾ ವೃರಸ್ಸಿನ ಅಡ್ರೆಸ್ಸೂ ನಮ್ಮ ದೇಶದ ಕಡೆ ಇದೆ.* ಯಾರು ಹೊರದೇಶದಿಂದ ಬಂದರೋ ಅಂತಹವರಿಂದಲೇ ಈ ವೈರಸ್ಸು ಹರಡಿರುವದು. ಇದು ಆವಿಪಾಲ ಗೋಪಾಲನಿಂದ ಮೊದಲು ಮಾಡಿ ಪ್ರಧಾನಿಯವರೆಗೆ ಎಲ್ಲರಿಗೂ ನಿಶ್ಚಿತ. ಆ ಹತ್ತಿಪ್ಪತ್ತು ಸಾವಿರ ಜನರನ್ನು ಹುಡುಕಿ, ಅವರನ್ನು ದಿಗ್ಬಂಧನಗೊಳಿಸಿ, ಅವರ ಕುಟುಂಬವನ್ನೂ ದಿಗ್ಬಂಧಿಸಿ, ಅವರೆಲ್ಲರ ಸಂಪರ್ಕದಲ್ಲಿ ಬಂದವರನ್ನೂ ಪರೀಕ್ಷೆಗೆ ಒಳಪಡಿಸಿದರೆ ಆಯ್ತು, ಅವರ ಮನೆಯನ್ನೇ ಹಾಸ್ಪಿಟಲ್ ಮಾಡಿದರೆ ಮುಗಿದೇ ಹೋಗತ್ತೆ. ನಾವೆಲ್ಲ ಅರಾಮವಾಗಿ ಇರಬಹುದು.
*ಕೋತಿ ತಾ ಕೆಡೋದಲ್ಲದೇ ವನವನ್ನೇ ಕೆಡಿಸಿತು ಅಂತೆ*
ಈ ಗಾದೆ ಈ ಪ್ರಸಂಗದಲ್ಲಿ ತುಂಬ ಉಪಯೋಗಕ್ಕೇ ಬರತ್ತೆ. ಕೋತಿಗಳನ್ನು ವಿದೇಶದಿಂದ ಸ್ವಾಗತ ಮಾಡಿ, ರೆಡ್ ಕಾರ್ಪೇಟ್ ಹಾಸಿ ಬರಮಾಡಿಕೊಂಡು, ಅವರನ್ನು ಊರೆಲ್ಲ ದೇಶವೆಲ್ಲ ತಿರುಗಲು ಅಂದು ಬಿಟ್ಟು, ಇಂದು ಹುಡಕದೇ ಬಿಟ್ಟರೆ ವನ ಕೆಡುವದಲ್ಲ ದೇಶವೇ ಕೆಡುತ್ತದೆ. ಅದು ಬಿಟ್ಟು *ಕೋತಿಗಳನ್ನೇ ಕಟ್ಟಿ ಹಾಕಿಟ್ಟರೆ ವನವೂ ಉಳಿಯತ್ತೆ, ದೇಶವೂ ಪ್ರಗತಿಯಲ್ಲಿ ಸಾಗತ್ತೆ, ಲಕ್ಷ ಲಕ್ಷ ಕೋಟಿ ಕೋಟಿ ಜನರು ನೆಮ್ಮದಿಯ ಉಸಿರಾಡ್ತಾರೆ.
*ಬಡ ಜನರ ಕಷ್ಟ ಸಿರಿವಂತರಿಗೆ ಅರ್ಥವಾಗದು..*
ಆ ದಿನದ ಸಂಪಾದನೆ ಅಂದಿನ ಊಟ. ಇದು ಕೆಲವರಿಗಾದರೆ, ಹಲವರಿಗೆ ಇದ್ದವರು ಊಟ ಕೊಟ್ಟರೆ ಊಟ. ಈ ತರಹದ ಜನ ಕೋಟಿ ಕೋಟಿ ಜನ ನಮ್ಮ ದೇಶದಲ್ಲಿ ಇದ್ದಾರೆ. ಅವರ ಕಷ್ಟ ದಿಗ್ಬಂಧನ ಮಾಡುವದರಿಂದ ಪರಿಹಾರ ಆಗದು. ಅವರೆಲ್ಲರ ಕಣ್ಣೀರಿನಿಂದ ದೇಶಕ್ಕೇನು ಹಿತವಾಗದು.
"ಒಂದು ಸೈಕಲ್ ರಿಕ್ಷಾದ ಮೇಲೆ ಎಂಟು ಕೂಸುಗಳನ್ನು ಇಟ್ಟುಕೊಂಡು ನಾಲ್ಕುನೂರು ಕಿಲೋಮೀಟರ್ ದೂರದ ಗ್ರಾಮಕ್ಕೆ ತಂದೆ ತಾ ತೆರಳುವ ನಿರ್ಧಾರ ಮಾಡುತ್ತಾನೆ ಎಂದರೆ" ಅವನ ಕಣ್ಣೀರು ಎಲ್ಲಿಗೆ ಮುಟ್ಟಿರ ಬಹುದು ಎಂದು ಸಿರಿವಂತ ಯೋಚಿಸಲಾರ.
ಈ ದೊಡ್ಡ ಯಾತ್ರೆಯಲ್ಲಿ ಆ ಎಂಟು ಕೂಸುಗಳ ಹೊಟ್ಟೆಗಾಗಿ ಇರುವದು ಕೇವಲ ಎರಡು ಪಾರ್ಲೇ ಬಿಸ್ಕತ್ತು ಮಾತ್ರ. Zometo ಅಲ್ಲಿ order ಮಾಡಿ ತಿನ್ನುವ ವ್ಯಕ್ತಿಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಇಷ್ಟಾಗಿ *ಅವನು ತನ್ನ ಊರು ಮುಟ್ಟುತ್ತಾನೆ ಎಂಬ ಭರವಸೆ ನನಗಿಲ್ಲ. ದೊಡ್ಡ ಊರಲ್ಲಿ ಇದ್ದರೆ ಅನ್ನ ಕಾಣುವ ಆಸೆ ಅವನಿಗಿಲ್ಲ.* ಇದು ಒಂದು ದೃಷ್ಟಾಂತ.
ಹೇಗೋ ಮಾಡಿ ಕಷ್ಟಪಟ್ಟು ಅಂತಹ ಅನೇಕರು ತಮ್ಮ ಹಳ್ಳಿಗಳಿಗೆ ಸುರಕ್ಷಿತ ಹೋಗಿ ಮುಟ್ಟಿದಾರೆ ಎಂದರೆ ಅವರಿಗೆ ದಾರಿ ಮಧ್ಯದಿ ಲಾಟಿ ಏಟಿನ ರುಚಿ ಸವಿದೇ ಮುಟ್ಟಿರಬೇಕು. ಅಲ್ಲಿ ಹೋದರೆ ಈ ಬಡ ಅನ್ನ ಕಾಣದ ಹಸಿದ ವ್ಯಕ್ತಿಯನ್ನು corona ಹೊತ್ತು ಕೊಂಡು ಬಂದಿದ್ದಾನೆಯೋ ಏನೋ ಎಂದೆ ದುರುಗುಟ್ಟಿ ನೋಡುವ ಜನ. ಊರಿಗೆ ಬರಲೇ ಬೇಡ ಎಂದು ಹೊರಗೆ ಅಟ್ಟುವ ಜನ.
*ಏನೀ ಪರಿಸ್ಥಿತಿ....... ಯಾಕೆ ಈ ಪರಿಸ್ಥಿತಿ... ಯಾಕೇ ದುರವಸ್ಥೆ..??*
ಉತ್ತರ ಸರಳ *ಅಂದು ಕೋತಿಗಳನ್ನು ವನಕ್ಕೆ ಸ್ವಾಗತ ಮಾಡಿದ್ದು. ಇಂದು ಎಲ್ಲಿವೇ ಎಂದು ಅಡ್ರೆಸ್ ಗೊತ್ತಿದ್ದೂ ಕೋತಿಗಳನ್ನು ಹಿಡಿಯದೇ ಇದ್ದದ್ದು...*
ನಿಮ್ಮ ಅಭಿಪ್ರಾಯವೇನೂ.......
Comments
The country s top brass really erred in this auspect 💯@%
Had they just not allowed people coming from foreign countries from last week of February..20, when we came to know about deadly virus...corona. Today....no necessity of lock down... whole country.... abundant losses to the poor n middle class people like us.
That too the very sorrowful tears of the poor villagers trying to return to their villages.... definitely this couny would face the consequences of the curses n tears of these poor people.
Acharyare, whenever I expressed such kind of my Frank opinion with our near n dear ones...they start scolding me saying au r antimodi..... As they r all by Modi fans....blind followers.
Our country economy is now back by a decade...
Had they kept this foreign arrivals in a make shift medical camps outside all airports cities mainly Bengaluru...inyetnational airpory...managed by army personnel....we would not have faced this huge n terrible....side effects of lockdown n poor people tears n curses.
Acharyare, if u need I will join hands with u to mobilise such opinion till it reaches to top brass of country.
My request is please take n post it opinion to top brass of Karnataka n India....am with you.