*ಪ್ರಾರ್ಥನೆ -- ಪಡೆದುಕೊಳ್ಳಲೋ ?? ಕಳೆದುಕೊಳ್ಳಲೋ...??*

*ಪ್ರಾರ್ಥನೆ -- ಪಡೆದುಕೊಳ್ಳಲೋ ?? ಕಳೆದುಕೊಳ್ಳಲೋ...??*

 ಬೇಡುವವರೇ ನಾವು ಆಗಿದ್ದೇವೆ ಕೊಡುವವರು ಅಲ್ಲ, ಆದ್ದರಿಂದ  "ನಾವು ಪ್ರಾರ್ಥನಾ ಸಮಾಜದಲ್ಲಿ ಬರುವಂತಹವರು." ಪ್ರಾರ್ಥಿಸುವವರೇ ಬೇಡುವವರೇ. 

ಪಡೆಯುವವನಿಗೆ ಪ್ರಾರ್ಥನೆಕಿಂತಲೂ ಮಿಗಿಲಾದಶಕ್ತಿ ಮತ್ತೊಂದು ಇಲ್ಲ ಎಂದು ಹೇಳುತ್ತದೆ ಶಾಸ್ತ್ರ. ಅಂತೆಯೇ  ಪ್ರಾರ್ಥನೆಯಲ್ಲಿ ಮುಣುಗಿ ಹೋಗಿರುತ್ತೇವೆ.  ಏನು ಪಡೆಯಬೇಕಿದೆ ಅದೆಲ್ಲ ಪ್ರಾರ್ಥನೆಯಲ್ಲಿಯೇ ಅಡಗಿದೆ. 

ಪ್ರಾರ್ಥನೆಯನ್ನು ಬೇಡುವದನ್ನು ಕಣ್ಣಿಗೆ ಕಂಡ ಅಥವಾ ಪ್ರತಿಷ್ಠಾಪಿತ, ದೇವರು ಗುರುಗಳಲ್ಲಿ ಮಾತ್ರವಲ್ಲದೆ, ಅರಿಷಿಣ ಕುಂಕುಮ ಹಚ್ಚಿದ ಗುಂಡುಕಲ್ಲು ಕಂಡರೂ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿರುತ್ತೇವೆ. ತುಂಬ ವಿಚಿತ್ರ.  ಕೊಡುವಷ್ಟು ಉದಾರಿಯಂತೂ ಅಲ್ಲವೇ ಅಲ್ಲ.  ಬೇಡಿದರೆ ತನ್ನತನ ಕುಗ್ಗಬಹುದು ಎಂಬ ವಿಚಾರವೂ ಇಲ್ಲದಷ್ಟು ಪ್ರಾರ್ಥನೆಯಲ್ಲಿಯೇ ರತರಾಗಿರುತ್ತೇವೆ.

*ಪ್ರಾರ್ಥನೆಗೆ ಅರ್ಹನಾರು...??.*

ಸ್ವಾಮಿ ದಾಸ್ಯಭಾವ ಅಡಗಿರಬೇಕು. ತುಂಬ ಸೇವೆ ಮಾಡಿರಬೇಕು. ಯಜಮಾನನು ಸಂತುಷ್ಟನೂ ಆಗಿರಬೇಕು. ಭಕ್ತಿಯ ಭಾವ ತುಂಬಿರಬೇಕು. ಪ್ರೀತಿ ಅಂತಃಕರಣಗಳ ಸೆಳವು ತುಂಬಾ ಇದೆ ಎಂದಾಗಿರಬೇಕು. ದೇವರನ್ನು ಸಂತೋಷಗೊಳಿಸುವ ಹಪಹಪಿ ಇರಬೇಕು. ಉಪಕಾರದ ಸ್ಮರಣೆ ಇರಲೇಬೇಕು. ಇವೆಲ್ಲ ಇದ್ದರೆ ಪ್ರಾರ್ಥನೆಗೆ ತುಂಬ ಮಹತ್ವ. ಫಲಕಾರಿಯೂ ಆಗುತ್ತದೆ. ಇಲ್ಲವಾದಲ್ಲಿ ಪ್ರಾರ್ಥನೆಯಾಗಿಯೇ ಉಳಿದು ಹುಸಿಹೋಗಿ ಬಿಡುತ್ತದೆ. 

*ಪ್ರಾರ್ಥನೆ ಅಂದರೆ ಏನು...??*

ಪ್ರಾರ್ಥನೆ ಎಂದರೆ ಶ್ರೀಹರಿಗೆ ಬೇಡುವದು. ಬೇಡುವದು ಎಂದರೆ ಹೊರಗಿನದು ಏನನ್ನೋ ಬೇಡಿ ಪಡೆಯುವದು. ಹಾಗಾದರೆ ಹೊರಗಿನದನ್ನೇ ಬೇಡಿ ಪಡೆಯೋಣವೆ... ??  ಹೊರಗಿನದನ್ನು ಪಡೆದರೆ ಸಂತೃಪ್ತಿ ಸಿಗಬಹುದೇ....?? ಅಥವಾ ಇರುವದನ್ನು ಕಳೆದುಕೊಳ್ಳೋಣವೇ..??

 ಹೊರಗಿನದನ್ನು ಬೇಡಿ ಪಡೆಯುವದು ಸರ್ವಥಾ ಬೇಡ.  *ಹೊರಗಿನದು ಏನಿದ್ದರೂ ಹೊರಗಿನದೆ, ಹೊರಗೇ ಹೋಗುವಂತಹದ್ದು.* ಅದರಿಂದ ಹೆಚ್ಚಿನದೇನು ಲಾಭವಿಲ್ಲ. 

*ನನ್ನದು ಏನಿದೆ ನನಗೆ ದಯಪಾಲಿಸು.* 

 ನನ್ನದು ಏನಿದೆ ಅದು ಹೊರೆಗೆಲ್ಲಿಯೂ ಇಲ್ಲ. ನನ್ನದು ಇರುವದು ನನ್ನಲ್ಲಿಯೇ.  ಇರುವದು. ನನ್ನದೇ ಆದ ಆದರೆ ನೂರಾರು ಸಾವಿರಾರು ಅಡ್ಡಿ ಅತಂಕ ಗಳಿರುವದರಿಂದ ಪಡೆಯಲಾಸಾಧ್ಯ ಎಂದಾಗಿದೆ ನನ್ನದು.  .... *ಆ ಅಡ್ಡಿ ಅತಂಕಗಳೇನಿವೆ ಅವುಗಳನ್ನು ಕಳೆ* ಎಂದು ಅಳೆದುಕೊಳ್ಳುವದು ಅನಿವಾರ್ಯ. ಅಂತೆಯೇ ನಮ್ಮ ಅಡ್ಡಿ ಅತಂಕಗಳನ್ನು *ಕಳೆದು ಕೊಳ್ಳಲು ಪ್ರಾರ್ಥನೆ* ಎಂದಾಗಬೇಕೇ ಹೊರತು *ಪ್ರಾರ್ಥನೆ ಪಡೆಯಲಿಕ್ಕೇ ಎಂದು ಆಗುವದೇ ಬೇಡ.* ಹೊಲಸು ಹೋದರೆ ಶುದ್ಧ ಸಿಗುವದು ನಿಶ್ಚಿತ. ಕೆಟ್ಟದ್ದು ಹೋದರೆ ಒಳ್ಳೆಯದು ಬರುವದೇ.

*ಹತ್ತಿ - ಸುಂದರ ಉದಾಹರಣೆ...*

ಹತ್ತಿ ಇದೆ. ಅದನ್ನು ಬಿಳಿ ಮಾಡಲು ಹೊರಗಿನದು ಏನನ್ನೋ ಕೆಮಿಕಲ್ ಸೇರಿಸುವದು ಬೇಡ, ಹತ್ತಿಯಲ್ಲಿ ಇರುವ ಕಸರನ್ನು, ಕಳೆಯನ್ನು ತೆಗೆದರೆ ಸಾಕು ತನ್ನಷ್ಟಕ್ಕೆ ತಾನೇ ಬಿಳಿಯಾಗುವಂತೆ, ನಮ್ಮಲ್ಲಿ ಇರುವ ಸಿಟ್ಟು ದುರಭಿಮಾನ ಲೋಭ ಆಸೆ ಹಗೆ ಮಾತ್ಸರ್ಯ ಸಂಶಯ ಮುಂತಾದ ಕಸರನ್ನು ಕಳೆ ತಗೆದರೆ ಆಯ್ತು ನಾ ಪರಿಷುದ್ಧ. ಆದ್ದರಿಂದ ದೇವರಲ್ಲಿ ಪಡೆಯಲು ಪ್ರಾರ್ಥನೆ ಬೇಡ,  ಕಳೆದುಕೊಳ್ಳಲು ಪ್ರಾರ್ಥನೆ ಎಂದಾಗಲಿ ......

*✍🏻✍🏻✍ನ್ಯಾಸ.*
(ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ)

Comments

Anonymous said…
ಒಳ್ಳೆ consent :)
NYASADAS said…
Consept aa ... Tq tq

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*