ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!*

*ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!*

ಜಗತ್ತಿನ ಹಿತಕ್ಕಾಗಿ ಅನೇಕ ಜ್ಙಾನಿಗಳು ಜಗತ್ತಿನ ಎಲ್ಲ ಜನರಿಗೂ ಅನ್ವಯಿಸುವಂತೆ  ಲಕ್ಷ ಲಕ್ಷ ಆಚಾರ ವಿಚಾರಗಳನ್ನು ರೂಢಿಸಿದರು. ಕಾಲದ ಪ್ರಭಾವದಿಂದ ಆಚಾರ ವಿಚಾರಗಳು ಬ್ರಾಹ್ಮಣರಲ್ಲಿ ಮಾತ್ರ ಉಳಿದುಕೊಂಡವು. ಈಗಿನ ಕಾಲದಲ್ಲಿ ಅನೇಕ ಬ್ರಾಹ್ಮಣರೂ ಆ ಆಚಾರ ವಿಚಾರಗಳನ್ನು ಕಳೆದುಕೊಂಡರು ಎನ್ನುವದಕ್ಕಿಂತ ಹಠ ಮಾಡಿ ಬಿಟ್ಟರು. ಆಚಾರ ವಿಚಾರ ಧರ್ಮಗಳನ್ನು ಬಿಡುವದೇ ಒಂದು fassion ಆಗಿ ಹೋಯಿತು. 

*ಆಚಾರವಂತ ಬ್ರಾಹ್ಮಣನ ಅವಸ್ಥೆ.....*

ಆಚಾರ ವಿಚಾರ ಮಡಿ ಮೈಲಿಗೆ social distince ಇದು ಇಂದಿನದು  ಅಲ್ಲ. ಅನಾದಿ ಸತ್ಸಂಪ್ರದಾಯದಿಂದ ಬಂದವು. ಈ social distince ಬ್ರಾಹ್ಮಣರು ಮಾಡಿದರೆ ಅನ್ನುವದಕ್ಕೆ, ನಿಂದಿಸಲು, ಅವಮಾನ ಮಾಡಲು ಅದರ ಮಹತ್ವವನ್ನು ಅರಿಯದ, ತಿಳಿಯದ  ನೂರು ಜನ ಸಿದ್ಧ. 

*ಅಂದು -- ಇಂದು*

ಇಂದು ಇಪ್ಪತ್ತು ಸೆಕೆಂದು ಕೈ ತೊಳಿ ಎಂದು ಹೇಳಿದರೆ ಸಿದ್ಧ. ಹೊರ ಓಡಾಡಿ ಬಂದರೆ ಸ್ನಾನ ಮಾಡಲೂ ಸಿದ್ಧ. ಈ ಎಲ್ಲ ತರಹದ ಆಚಾರಗಳನ್ನೂ  ಅನುಸರಿಸುತ್ತಿದೆ. ಜಗತ್ತು ಒಪ್ಪಿಕೊಂಡಿತು.  ಶುದ್ಧಿಗಾಗಿ ಮೃತ್ತಿಕಾ ಶೌಚ ಮಾಡಿದ ಬ್ರಾಹ್ಮಣನ ಅವಸ್ಥೆ ಬೈಸಿಕೊಳ್ಳುವದೆ ಆಯ್ತು. ಬ್ರಾಹ್ಮಣ ಮುಟ್ಟದೇ ದೂರ ನಡೆದರೆ, ದೂರದಿಂದ ಇಸಕೊಂಡರೆ ಮೂಗು ಮುರಿವ ಜನರೇ....  ಇವತ್ತು ಯಾರನ್ನೂ ಮುಟ್ಟದೆ ದೂರ ದೂರ ಇರುವದು, ದೂರದಿಂದ ಇಸ್ಕೊಳ್ಳುವದು, distince mention ಮಾಡುವ ರೂಲು ಇವತ್ತು ಬಂದಾಗ ಅದನ್ನು ಬ್ರಾಹ್ಮಣನ್ನು ಹೀಯಾಳಿಸಿದ ಸಮಗ್ರ ಭಾರತ ಒಪ್ಪಿಕೊಂಡಿತು. ಮಾತ್ರವಲ್ಲ ಜಗತ್ತೇ ಒಪ್ಪಿಕೊಂಡಿತು. ಈ ತರಹದ ನಿಯಮಗಳನ್ನೇ ಜಗತ್ತು ಇಂದು ಅನುಸರಿಸುತ್ತಿದೆ.

*ಬ್ರಾಹ್ಮಣನ ಆಚಾರ ವಿಚಾರ ಜಗದ್ಧಿತವೇ....*

 ಬ್ರಾಹ್ಮಣ ಮಾಡುವ ಆಚಾರ ವಿಚಾರ ತ್ರಿಕಾಲ ಜ್ಙಾನಿಗಳೇ ಹಾಕಿಕೊಟ್ಟ ಮಾರ್ಗ. ಈ ಮಾರ್ಗ ಜಗತ್ತಿಗೆ ಹಿತವೇ. ಒಂದು ಕಾಲದಲ್ಲಿ ಬ್ರಾಹ್ಮಣನ ಆಚಾರ ವಿಚಾರ ಒಪ್ಪಿಕೊಳ್ಳದ ಜಗತ್ತು, ಮುಂದೊಂದು ಕಾಲದಲ್ಲಿ ಅಪ್ಪಿಕೊಳ್ಳತ್ತೆ ಇದು ನೂರು ಪ್ರತಿಶತಃ ಸಿದ್ಧ.  *ಜಗತ್ತು ಒಪ್ಪಿಕೊಳ್ಳುವ ಆಚಾರ ವಿಚಾರಗಳೇ ನಮ್ಮ ಶಾಸ್ತ್ರದಲ್ಲಿ ಇವೆ. ಅವುಗಳನ್ನೇ ಬ್ರಾಹ್ಮಣ ಮಾಡಿಕೊಂಡು ಬಂದ.* ಇದುವೇ ಧರ್ಮ ಶಾಸ್ತ್ರಗಳಲ್ಲಿ ಬಂದ ಆಚಾರವಿಚಾರಗಳ ಮಹತ್ವ.

*ಶಾಸ್ತ್ರದ ಆದೇಶ - ಬ್ರಾಹ್ಮಣನ ನೀತಿ*

ಧರ್ಮಮಾಡುವ, ಧಾರ್ಮಿಕ ಆಚಾರವಂತ,  ತಾ ಮಾಡುವ ಪ್ರತೀ ಧರ್ಮದಲ್ಲಿಯೂ, ತಾ ದೇವರಿಗೆ ಮಾಡುವ ನಮಸ್ಕಾರದಲ್ಲಿಯೂ *ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ* ಜಗತ್ತಿಗೆ ಹಿತ ಬಯಸುವ ಹಿತವುಂಟು ಮಾಡುವ ದೇವನೇ ನಿನಗೆ ನಮಸ್ಕಾರ ಎಂದೇ ಮಾಡುವ. 

*ಸರ್ವೇಜನಾಃ ಸುಖಿನೋ ಭವಂತು - ಸಮಸ್ತಸನ್ಮಾಂಗಲಾನಿ ಭಮತು*

"ಎಲ್ಲ ಜನರೂ ಸುಖವಾಗಿ ಇರಲಿ, ಎಲ್ಲರಿಗೂ ಮಂಗಳವಾಗಲಿ" ಎಂದೇ  ನಿತ್ಯವೂ ಪ್ರಾರ್ಥಿಸು ಎಂದು ಆದೇಶಿಸುವದು ಶಾಸ್ತ್ರವಾದರೆ, ಅದನ್ನೆ ಅಚ್ಚುಕಟ್ಟು ಪಾಲಿಸುವವರೂ ಬ್ರಾಹ್ಮಣರೇ. 

*Lockout ಅಂದೂ ಇತ್ತು....*

Lockout ಇರುವದು ಜಗತ್ತಿನ ಹಿತಕ್ಕಾಗಿ ತನ್ನನ್ನು ತಾನು ಕಟ್ಟಿ ಹಾಕಿಕೊಳ್ಳುವದು. ಬಂಧನದಲ್ಲಿ ಇಟ್ಟುಕೊಳ್ಳುವದು. ಈ ಕೆಲಸ ಅಂದಿನಿಂದ ಬ್ರಾಹ್ಮಣ ಜಗತ್ತಿನ ಹಿತಕ್ಕಾಗಿ ಮಡುತ್ತಾ ಬಂದಿದ್ದಾನೆ. ಆದ್ದರಿಂದ ಈ lockoutಅವನಿಗೆ ಹೊಸದು ಅಲ್ಲವೇ ಅಲ್ಲ. ಇಂತಹ ಪ್ರಸಂಗ ಸಿಕ್ಕರೆ ಜಗತ್ತಿನ ಕ್ಷೇಮಕ್ಕಾಗಿ ಮತ್ತೂ ಪುನಃ ಪಾರಾಯಣ ಜಪತಪ ಮಾಡುವವ ಬ್ರಾಹ್ಮಣ. ಇಂದಾದರೂ ಶಾಸ್ತ್ರದ  ಬ್ರಾಹ್ಮಣರ ಆಚಾರವಿಚಾರಗಳನ್ನು ಒಪ್ಪಿಕೊಂಡ ಭಾರತ ಹಾಗೂ ಜಗತ್ತು ಬ್ರಾಹ್ಮಣರನ್ನು ಮೆಚ್ಚದಿದ್ದರೂ  ಹೀಯಾಳಿಸದೆ ಇದ್ದರೆ ಸಾಕು.... 

ಈ ಲೇಖನ ಓದಿದ ಎಲ್ಲರಿಗೂ ನಮ್ಮ ಗುರುಗಳ ಅದೇಶವಿದೆ... *ವಿಶ್ವಸ್ಯ ಯಃ ಸ್ಥಿತಿಲಯೋದ್ಭವ ಹೇತುರಾದ್ಯಃ ಯೋಗೇಶ್ವರೈರಪಿ ದುರತ್ಯಯಯೋಗಮಾರ್ಗಃ | ಕ್ಷೇಮಂ ವಿಧಾಸ್ಯತಿ ಸ ನೋ ಭಗವಾನ್ ತ್ರ್ಯಧೀಶಃ ತ್ರಾತಾಸ್ಮದೀಯ ವಿಮೃಶೇನ ಕಿಯಾನಿ ಹಾರ್ಥಃ* ಮೂರ್ಲೋಕದ ಸೃಷ್ಟಿ ರಕ್ಷಣೆ ಇತ್ಯಾದಿಗಳನ್ನು ಮಾಡುವ ಭಗವಂತನಿಗೆ ನಮ್ಮನ್ನೊಳಗೊಂಡ ಈ ಜಗತ್ತನ್ನು ರಕ್ಷಿಸುವದು ದೊಡ್ಡದೇ...?? ಅವಶ್ಯವಾಗಿ ರಕ್ಷಿಸುತ್ತಾನೆ. ಈ ಶ್ಲೋಕವನ್ನು ಎಷ್ಟು ಸಾಧ್ಯವಿದೆ ಅಷ್ಟುಹೆಚ್ಚು ಬಾರಿ ಪಠಿಸೋಣ. ಜಗತ್ತಿಗೆ ಹಿತವಾಗಲಿ ಮಂಗಲವಾಗಲಿ ಎಂದು ಬೇಡಿಕೊಳ್ಳೋಣ...

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*