*ಆತ್ಮೀರೆಲ್ಲರಿಗೂ "ಶಾರ್ವರೀ ನಾಮ" ಸಂತ್ಸರದ ಪ್ರೀತಿಯ ಶುಭಾಷಯಗಳು......🌹🌹*

*ಆತ್ಮೀರೆಲ್ಲರಿಗೂ "ಶಾರ್ವರೀ ನಾಮ" ಸಂತ್ಸರದ ಪ್ರೀತಿಯ ಶುಭಾಷಯಗಳು......🌹🌹*

ವಿಕಾರಿ ನಾಮ ಸಂವತ್ಸರ ತನ್ನ ಪೂರ್ಣ ಇರುವಿನಲ್ಲಿ ಅತ್ಯುತ್ತಮ ಸಹಸ್ರ ಸಹಸ್ರ ವಿಕಾರಗಳನ್ನು ಭಕ್ತರಿಗೆ ಭಕ್ತಿ ಮಾರ್ಗ ತೋರಿಸಿ ಭಕ್ತಿ ಮಾರ್ಗದಲ್ಲಿ ಇರಿಸಿ ಆನಂದವಿಕಾರವಾನ್ನು ಮಾಡಿ, ಧಾರ್ಮಿಕರಿಗೆ ಧರ್ಮಬೋಧಿಸಿ ಧಾರ್ಮಿಕತೆಯ ವಿಕಾರ ಒದಗಿಸಿ,  ಕೊನೆಭಾಗದಲ್ಲಿ ದುಷ್ಟರಿಗೆ ಅಧಾರ್ಮಿಕರಿಗೆ ತನ್ನ ಕರಾಳಮುಖದ ಪ್ರಭಾವದ ಮಹಾರೋಗದ  ವಿಕಾರವನ್ನು  ತೋರಿಸಿಕೊಟ್ಟು ಭಯಭೀತರನ್ನಾಗಿ ಮಾಡಿದೆ. ಈಗ ಪುನಃ ಹೊಸ ವರ್ಷವಾದ *ಶಾರ್ವರಿ ನಾಮ ಸಂವತ್ಸರ*  ತನ್ನ ಭಕ್ತಿ ಧರ್ಮ ಜ್ಙಾನ ಶುದ್ಧತೆ ಆರೋಗ್ಯ ಸಮೃದ್ಧಿ ಐಶ್ವರ್ಯ ಇತ್ಯಾದಿಗಳನ್ನು ಒದಗಿಸಿ ನಮ್ಮನ್ನು ನಿರಾಳಗೊಳಿಸಬೇಕಿದೆ.  

*ಕರಾಳ ದಿನಗಳಲ್ಲಿಯೂ ನಿರಾಳಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು.....*

ರಾಹುವಿನ ಕರಿನೆರಳಿನ ಪ್ರಭಾವದಿಂದ, ಲಕ್ಷಲಕ್ಷ ಕೋಟಿ ಕೋಟಿ ಜನರುಗಳು ತಮ್ಮ ತಮ್ಮ  ಪ್ರಾರಬ್ಧದಿಂದ ಇಂದು ಮಹಾ ಕರಾಳದಿನಗಳನ್ನು ಎದರಿಸುತ್ತಿದ್ದಾರೆ. ನಾವೂ ಎದುರಿಸುತ್ತಿದ್ದೇವೆ.  ನಮ್ಮ ಕಳೆದ ಜೀವನದಲ್ಲಿಯೇ ಈ ತರಹದ ಮರೆಯಲಾರದ ಕರಾಳ ದಿನಗಳನ್ನು ಅನುಭವಿಸಿಲ್ಲ.  ಇಂದು ಅನುಭವಿಸುತ್ತಿದ್ದೇವೆ.

*ಓ ಪವಮಾನ !!! ಕರಣಿಸು ದಯೆ ತೋರು...* 

"ಸಂಸಾರಾತ್ಪಾವಯಿತ್ವಾ ಯತ್ ಮಹಾನಂದೇ ಮಿನೋತ್ಯಯಂ" ಸಂಸಾರದಲ್ಲಿ ಬರುವ ನೂರಾರು ಸಾವಿರಾರು ದೋಷಗಳೆಂಬ ದುಃಖಗಳೆಂಬ ರುಜಿನಗಳೆಂಬ ಕೂಪದಿಂದ ಪಾರು ಮಾಡಿ ಧರ್ಮ ಭಕ್ತಿ ಜ್ಙಾನ ಮಹಾ ಆನಂದ ಎಂಬ ಸಾಗರಗಳಲ್ಲಿ  ಮುಣುಗಿಸುವ ಮಹಾ ದೊರೆಯಾದ ಹೇ ಪವಮಾನ.. !! ಕರುಣಿಸು ದಯೆತೋರು.

*ಭಗವನ್ ವಿಧೇಹಿ ಶಮ್...*

ಮಡದಿಯಾದ ಭುವಿಯ ಭಾರ ಇಳುಹುವ ಹೇ ವರಾಹ ರೂಪಿ ಹರಿಯೇ... !! ನಿನ್ನ ಮನೆಯಾದ ಈ ಭಾರತಖಂಡದಲ್ಲಿ ಆಕ್ರಮಿಸಿದ ಕಸದಂತೆ ಇರುವ ಈ ರೋಗ ರುಜಿನಗಳನ್ನು ಕಸಗೂಡೊಸುವ ಕೆಲಸ ನಿನ್ನದೇ ಅಲ್ಲವೇ..  ಅಧರ್ಮ ಮಾಡಿ ಕಸ ಹಾಕುವದು ನನಗೆ ಗೊತ್ತು. ಧರ್ಮಮಾಡಿ ಕಸಗುಡಿಸುವದು ಗೊತ್ತಿಲ್ಲ. ನನಗೆ ಗೊತ್ತಿಲ್ಲದ, ನನ್ನಿಂದ ಆಗದ ಕೆಲಸ ನಿನ್ನದೇ ಜವಾಬ್ದಾರಿ ಅಲ್ಲವೇ....

*ಕಸ ಹೋದರೆ ಹಸ*

ರೋಗ ರುಜಿಗಳೆಂಬ ಕಸ ಹೋದರೆ ರಸವೇ ಸಿಗುವದು. ಮನೆ ಹಸನಾಗಿ ಇರುವದು. ಮನೆ ಹಸನಾದಾಗ ಆಗುವ  ಆನಂದಕ್ಕೆ ಪಾರವೇ ಇಲ್ಲದು... ಹಾಗೆಯೇ ಈ ರೋಗ ರುಜಿಗಳೆಂಬ ಕಷ್ಟದ ಮಡುವಿನಿಂದ ಆನದದ ಮುಣುಗಿಸಿ *ಶಂ ಸುಖವನ್ನು, ಸುಖಸ್ವರೂಪಿ ದೇವರನ್ನೂ* ವಿಧೆಹಿ ಕರುಣಿಸಿ ಎಂದು ಬೇಡಿಕೆ....

ನಾವೋ ನಿನ್ನ ಮಕ್ಕಳು. ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಮನೆತುಂಬ ಕಸ ಹಾಕಿಬಿಡುತ್ತೇವೆ. ಅದರಿಂದ ನಮಗೇ ಹಾನಿ ಇರುತ್ತದೆ. ನಿನ್ನ ಮಕ್ಕಳಾದ ನಮ್ಮ ಮೇಲೆ ದಯೆ ತೋರಿ ಕಸಗೂಡಿಸಿ.. ಸ್ವಚ್ಛ ಮಾಡುವ ಜವಬ್ದಾರಿಯೂ ನಿನ್ನದೇ ಅಲ್ಲವೇ... ರೋಗ ರುಜಿಗಳಿಂದಪಾರು ಮಾಡಿ, ಧರ್ಮದಲ್ಲಿರಿಸಿ, ಜ್ಙಾನ ಬೆಳಿಸಿ ಭಕ್ತಿ ದೃಢವಾಗಿಸಿ  ಶಂ ಸುಖವನ್ನು ಆನಂದವನ್ನು ಕರುಣಿಸು. ಅನುಗ್ರಹಿಸು ಎಂದು ನಿನ್ಮ ಅಡೆದಾವರಗಳಲ್ಲಿ ಪ್ರಾರ್ಥಿಸುತ್ತಾ ಪುನಹ *ಶಾರ್ವರೀ ನಾಮ ಸಂವತ್ಸರದ ಶುಭ ಆಶಂಸನೆಗಳನ್ನು* ಅರ್ಪಿಸುತ್ತಾ ಲೇಖನಿಯನ್ನು ಕೆಳಗಿಡುತ್ತೇನೆ...

*✍🏽✍🏽ನ್ಯಾಸ ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
ಹೊಸ ವರ್ಷದ ಹೃತ್ಪೂರ್ವಕ ಶುಭಾಷಯಗಳು
NYASADAS said…
*ರಾಮ‌ನವರಾತ್ರೋತ್ಸವ ನಿಮಿತ್ತ "ರಾಮಾಯಣ" ಉಪನ್ಯಾಸ*

ಪಂ.ಸರ್ವೋತ್ತಮಚಾರ್ಯ ಮನೆ. ಬೆಂಗಳೂರು

https://drive.google.com/folderview?id=1-W48sqbPYuGalaekvJeig7dHs4Od-Nhj

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*