*ಓ ಶರ್ವರೀಕರ !!!! ನಿನಗೆ ನಮಃ*

*ಓ ಶರ್ವರೀಕರ !!!! ನಿನಗೆ ನಮಃ*

ವಿಷ್ಣು ಸಹಸ್ರನಾಮದ ಸಾವಿರ ನಾಮಗಳಲ್ಲಿ ಒಂದು ನಾಮ *ಶರ್ವರೀಕರ* ಎಂಬ ನಾಮ. ಯುಗಾದಕೃತ್ ಆದ ಶ್ರೀಹರಿಯೇ *ಶರ್ವರೀ ನಾಮ ಸಂವತ್ಸರದ* ನಿಯಾಮಕನೂ ಆಗಿರುವ. ಆ ಭಗವದ್ರೂಪದ ಹೆಸರೇ *ಶರ್ವರೀಕರ.*

ಶರ್ವರೀಕರ ರಾತ್ರಿ ನಿಮನ ಮಾಡುವ ಚಂದ್ರ. ಚಂದ್ರಾಂತರ್ಯಾಮಿ ಭಗವದ್ರೂಪ ಶರ್ವರೀಕರ. ಚಂದ್ರ ರಾತ್ರಿ ಹೊತ್ತಿನಲ್ಲಿ ತನ್ನ ಕಿರಣಗಳಿಂದ ಓಷಧಿ ವನಸ್ಪತಿಗಳನ್ನು ಬೆಳಿಸುತ್ತಾನೆ. ಆ ಓಷಧಿ ವನಸ್ಪತಿಗಳ ಮುಖಾಂತರ ಆರೋಗ್ಯವನ್ನು ದಯಪಾಲಿಸುತ್ತಾನೆ. 

*ಇಂದಿನ ಸ್ಥಿತಿ...*

ಕಳೆದ ವರ್ಷದಲ್ಲಿ ಧರ್ಮ ವಿಮುಖರು ಆಗಿರುವದರಿಂದ, ಸಹನೆ ಕಳೆದುಕೊಂಡಂತೆ ಆದ  ವಿಕಾರಿ ಸಂವತ್ಸರ, ಬಹಳ ಮುನಿಸಿಕೊಂಡಂತೆ ದೊಡ್ಡ ಶಿಕ್ಷೆಗೆ ಗುರಿ ಮಾಡಿ ತಾನು ಹೊರಟು ಹೋಗಿದೆ. ಕಳೆದ ವರ್ಷ ಮಾಡಿದ ತಪ್ಪು ಈ ವರ್ಷವೂ ಮಾಡಿದರೆ ಇನ್ನೂ ಘೋರ ಮಾರಿಗಳು ನಮ್ಮ ಬೆನ್ನಿಗೇ ಬಂದು ಬೀಳಲಿವೆ. 

*ಪ್ರಾಣಿ ಪಶು ಪಕ್ಷಿಗಳ ಶಾಪ...*

ಮಾನವನ ತಂಟೆಗೇ ಬಾರದಂತೆ ಕಾಡಿನಲ್ಲೇ ಇರುವ ಪ್ರಾಣಿ ಪಶು ಪಕ್ಷಿಗಳನ್ನು ಮನಸೋ ಇಚ್ಛೆ ಕೊಂದು ತಿಂದದ್ದರ ಶಾಪ ಇಂದು ಇಪ್ಪೊಂದು ದಿನ ಮನೆಯಲ್ಲಿ ಬೀಳುವ ಪ್ರಸಂಗ ಬಂದಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಪ್ರಾಣಿ ಪಶು ಪಕ್ಷಿಗಳನ್ನು ಕೊಂದು ತಿನ್ನಬೇಕೆರ ಬೇಡವೇ ಎಂದು... ಅದರಂತೆಯೇ ಗಿಡಗಳನ್ನು ಕತ್ತರಿಸುವಾಗಲೂ ಯೋಚಿಸಬೇಕು, ಮುಂದೊಂದು ದಿನ ಹೆಗಲಿಗೆ ಆಮ್ಲಜನಕ (ಆಕ್ಸಿಜನ್) ಹೊತ್ತುಕೊಂಡು ಓಡಾಡುವ ದಿನ  ಬರತ್ತೆ ಎಂದೂ ಯೋಚಿಸುವದು ಅನಿವಾರ್ಯ. 

*ಇಂದಿನ ನಮ್ಮ ರಾಜನ ನಿರ್ಧಾರದ ಮಹತಿ....*

ಮಹಾಮಾರಿ *ಕೊರೋನಾ* ವನ್ನು ನಿಗ್ರಹಿಸಲು ಇಪ್ಪೊಂದು ದಿನಗಳನ್ನು ಕೇಳಿದ್ದಾರೆ. ಈ ಇಪ್ಪತ್ತೊಂದು ದಿನಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅತ್ಯಂತ ಕಠೋರ ನಿಯಮ ಎಂದು ಭಾವಿಸಿ ನಾವೇ ನಮ್ಮನ್ನು ನಿಗ್ರಹಿಸಿಕೊಳ್ಳುವದು ಅನಿವಾರ್ಯವೂ ಆಗಿದೆ.. 

*ನಿಗ್ರಹಿಸಿಕೊಳ್ಳದೆ ಮನಸೋ ಇಚ್ಛೆ ಇದ್ರೆ ಏನಾಗಬಹುದು... ????*

"ಹಳೆಯ ಸುಂದರ ಕಥೆಯೊಂದು ನೆನಪಾಗುತ್ತದೆ... ಕಥೆ ಹೇಳುವೆ... ಓದಿದ ನಂತರ ನಿರ್ಧಾರ ನಮ್ಮದು...."

ಹಿಂದೊಮ್ಮೆ ನಮ್ಮ ದೇಶದಲ್ಲಿ ಒಬ್ಬ ರಾಜನಿದ್ದ. ಆ ರಾಜನ ಬಳಿ ಒಬ್ಬ ಠಕ್ಕ ಕಳ್ಳ  ಮೋಸಮಾಡಲು ದರಿದ್ರನ ವೇಶದಲ್ಲಿ  ಹೇಗೋ ಮಾಡಿ ಅರಮನೆಯೊಳಗೆ ಪ್ರವೇಶ ಪಡೆದ.  ರಾಜನ ಬಳಿ ಏನಾದರೂ ನೀಡಬೇಕೆಂದು ಕಾಡಿ ಬೇಡಿದ. ರಾಜನೂ ಹುಮ್ಮಸ್ಸಿನಲ್ಲಿ ಸಾರಾಸಾರ ಯೋಚಿಸದೇ ಏನು ಬೇಕು ಕೇಳು ಅಂದ. ಸಮಯ ಕಾಯುತ್ತಿದ್ದ ಕಳ್ಳ ಠಕ್ಕ  ವ್ಯಕ್ತಿ ಇಂದು ನನಗೆ ಕೇವಲ ಒಂದು ಚಿನ್ನದ ನಾಣ್ಯ ಕೊಡು ಅಂದ. ರಾಜನಿಗೆ ಅವಮಾನವಾದಂತಾಯಿತು. ಆದರೂ ಸಾವರಿಸಿಕೊಂಡು ಅಷ್ಟೇನಾ? ಎಂದು ಕೇಳಿದ. ದರಿದ್ರ ವ್ಯಕ್ತಿ ಇದಕ್ಕೇ ಕಾಯುತ್ತಿದ್ದಂತೆ.....

ಹಾಗಾದರೆ.... *ಓ ರಾಜನೇ ಪ್ರತಿದಿನ ಇಂದು ಕೊಟ್ಟದ್ದರ ಎರಡುಪಟ್ಟು  ಚಿನ್ನದ ನಾಣ್ಯಗಳನ್ನು ಇಪ್ಪತ್ತೊಂದು ದಿನಗಳ ತನಕ ಕೊಡಲು ನಿನ್ನಿಂದ ಸಾಧ್ಯವೇ ????* ಎಂದು ಅಣಕಿಸುವಂತೆ ಕೇಳಿದ. 

ರಾಜ ಈ ವಿಷಯ ಎಲ್ಲಿಯ ವರೆಗೆ ಸಾಗಬಹುದು, ದೇಶದ ಚಿತ್ರಣ ಇನ್ನೇನಾಗಬಹುದು  ಎಂದು ಯೋಚಿಸದೆ ಅಲಕ್ಷಿಸಿದ. ಆಯ್ತು ಎಂದು ಮಾತು ಕೊಟ್ಟ. ಸ್ವಲ್ಪ ಮೈ ಮರೆತ. ಎಚ್ಚರವಾದಾಗ ಇಪ್ಪತ್ತೊಂದು ದಿನಗಳು ಉರುಳಿದ್ದವು... 

ಕಳೆದುಕೊಂಡ ಚಿನ್ನದ ನಾಣ್ಯಗಳು:
1
2
4
8
16
32
64
128
256
512
1024
2048
4096
8192
16384
32768
65536
131072
262144
524288
1048576
ಒಟ್ಟು *2097151* ಚಿನ್ನದ ನಾಣ್ಯಗಳು!!!

 ಇಂದು ಈ ಪರಿಸ್ಥಿತಿಯು ಸ್ವಲ್ಪ ಬದಲಾವಣೆಯೊಂದಿಗೆ  ಪುನರಾವರ್ತಿತವಾಗಿದೆ. ಅಂದು ಬಂದ ಠಕ್ಕನೇ ಇಂದು *ಕೊರೋನಾ* ಆಗಿ ಬಂದಿದೆ. ಇಂದು ರಾಜನಾದ ಮೋದೀಜಿ ನಮಗೆ ಇಪ್ಪತ್ತೊಂದು ದಿನಗಳನ್ನು ಬೇಡಿದ್ದಾರೆ.  ಅಲಕ್ಷ್ಯ ಮಾಡಿದರೆ ಅನರ್ಥವೇನಿದೆ ಮೇಲಿನ ಕಥೆ ಇಂದ ತಿಳಿದರಬಹುದು. ಹಾಗಾಗಿ...

*21 ದಿನಗಳು....ಅತ್ಯಂತ ಜಾಗೃತರಾಗಿರೋಣ....🙏*

*ಶರ್ವರೀಕರ* ಶ್ರೀಹರಿಗೆ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತಾ ಹಿಂದಿನ ತಪ್ಪುಗಳನ್ನು ಮನ್ನಿಸೂ ಎಂದೂ ಪ್ರಾರ್ಥಿಸೋಣ. ಶರ್ವರೀ ನಾಮ ಸಂತ್ಸರದಲ್ಲಿ ಧರ್ಮ ಬೆಳಿಸಿಕೊಳ್ಳೋಣ. ಇಪ್ಪತ್ತೊಂದು ದಿನಗಳ ಸುಸಮಯ ಮತ್ತೊಮ್ಮೆ ಸಿಗದು. ವಿಕಾರಿಯಲ್ಲಾದ ತಪ್ಪು ಈ ವರ್ಷದಲ್ಲಿ ಆಗುವದು ಬೇಡವೇ ಬೇಡ. *ಶಾರ್ವರೀ ಸಂವತ್ಸರ* ಧರ್ಮ ಮಾಡಿಸಿ, ಧರ್ಮ ಉಳಿಸಿ, ಬೆಳಿಸಿ ಸಂಪೂರ್ಣ ಜಗತ್ತಿಗೇ ಹಿತವನ್ನುಂಟು ಮಾಡಲಿ.....

*✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*