*ಓ ಭಯ ಸಂಹರನೇ ನಿನಗೇ ನಮಃ...*
*ಓ ಭಯ ಸಂಹರನೇ ನಿನಗೇ ನಮಃ...*
"ಇಂದೂ ಕಾಡುವ ಮುಂದೆಯೂ ಕಾಡದೇ ಬಿಡದ ಒಂದು ವಿಶಿಷ್ಟ ಪದಾರ್ಥ ಎಂದರೆ ಅದು ಭಯಗಳು" ಮಾತ್ರ. ಕೆಲವೊಂದು ಸಲ ಭಯ ನಮ್ಮ ನ್ಯೂನತೆಗಲಿಂದ ಬರುತ್ತವೆ. ಮತ್ತೆ ಹಲವು ಸಲ ನಮ್ಮ ತಪ್ಪಿನಿಂದ ಬರುತ್ತವೆ. ಮತ್ತೆ ಇನ್ಯಾರದೋ ತಪ್ಪಿನಿಂದ ಬರುತ್ತವೆ. ಇನ್ನನೇಕ ಸಲ ಯಾಕೆ ಭಯಗಳು ಬಂದಿವೆ ಎನ್ನುವದೇ ಗೊತ್ತಾಗುವದಿಲ್ಲ ಹಾಗೆ ಭಯಗಳು ನಮ್ಮನ್ನು ಆವರಿಸಿರುತ್ತವೆ. ಭಯಗಳಿಂದ ಮೇಲೆಳಲೇ ಬೇಕು. ನಿರ್ಭೀತ ಮುನ್ನುಗ್ಗಿ ಸಾಧಿಸುತ್ತಾನೆ. ಭಯಭೀತ ಏನನ್ನೂ ಸಾಧಿಸಲಾರ. ಅಂತೆಯೇ ಭಯಗಳು ಪರಿಹರಿಸಿಕೊಳ್ಳಲೇಬೇಕು.
*ಭಯಗಳು ಇದ್ದರೆ ಆಗುವ ಅನರ್ಥಗಳೇನು...??*
ಮೊದಲಿಗೆ ಭಯಗಳು ಜೀವನ ಪ್ರಗತಿಗೆ ಮಾರಕ. ಈಗೆ ಭಯ ಪಡುವ ಅಗತ್ಯವಿಲ್ಲದಿದ್ದರೂ ಭಯಗ್ರಸ್ತರಾಗಿಯೇ ಜೀವನ ನಡೆಸುತ್ತಾ ಇದ್ದೇವೆ. ಪ್ರಚಲಿತವಾದ *ಕೊರೋನಾ* ಎಂಬ ರೋಗ. ಈ ರೋಗ ನಮ್ಮತನ ಬಂದಮೇಲೆ ಭಯಪಡುವದು ಒಂದಾದರೆ ನಮ್ಮತನ ಎಲ್ಲಿ ಬರತ್ತೋ ಎಂಬ ಭಯದಲ್ಲಿಯೇ ದಿನ ಕಳೆಯುವಂತಾಗಿದೆ. ಇನ್ನೊಬ್ಬರು ಖೇಮ್ಮಿದಾಗ ಭಯ ಪಡುವದು ಒಂದಾದರೆ, *ನಾನೇ ಖೆಮ್ಮಿದಾಗಲೂ ನನಗೇ ಎಲ್ಲಿ ಕೊರೊನಾ ಬಂದುಬಿಡ್ತೋ* ಎಂದು ಭಯಪಡುವ ದಿನ ಇಂದಾಗಿದೆ. ಇದು ಒಂದು ನಿದರ್ಶನ ಇಂತಹ ನೂರಾರು ಸಾವಿರಾರು ಭಯಗಳು.
*ಈ ಭಯಗಳ ಪರಿಹಾರ ಹೇಗೇ....??*
ವೈಷ್ಣವರಾದ ನಾವು ನಿತ್ಯ ವಿಷ್ಣು ಸಹಸ್ರನಾಮ ಪಠೀಸುತ್ತೇವೆ. ಈ ವಿಷ್ಣು ಸಹಸ್ರನಾಮವೇ ಎಲ್ಲತರಹದ ಭಯಪರಿಹಾರಗಳಿಗೆ ಮೂಲ. ಸಹಸ್ರನಾಮಗಳಲ್ಲಿ ಒಂದು ವಿಶೇಷ ನಾಮ *"ಭಯಾಪಹಃ* ಓ ಹರಿಯೇ !! ಭಯವನ್ನು ಅಪಹರಿಸು" ಎಂದು ಹಾಗೆಯೇ ಇನ್ನೊಂದು ನಾಮ *"ಭಯನಾಶನಃ* ಎಂದು. ಓ ವಿಷ್ಣುವೇ !! ಬಂದ ಬರುವ ಭಯಗಳನ್ನು ನಾಶಮಾಡು" ಎಂದು ಈ ಎರಡು ನಾಮಗಳನ್ನು ವಿಶೇಷವಾಗಿ ನಿತ್ಯ ಪಠಿಸುವದರಿಂದ *ಕೊರೋನ* ಮೊದಲಾದ ಎಲ್ಲ ಭಯಗಳೂ ಪರಿಹಾರವಾಗುತ್ತವೆ.
*ಯಾರೆಲ್ಲರಿಗೆ ಭಯಗಳು ಪರಿಹಾರವಾಗುತ್ತವೆ...??*
ವಿಜಯದಾಸರು ತುಂಬ ಸೊಗಸಾದ ಹಾಡಿನಲ್ಲಿ ತಿಳುಹಿಸಿ ಕೊಡುತ್ತಾರೆ "ಎಲ್ಲೂ ಭಯಗಳು ಹರಿಯ ಭಕುತರಿಗೆ ಉಂಟೇ" ಹರಿಯ ಭಕುತರಿಗೆ ಎಲ್ಲೆಲ್ಲೂ ಭಯಗಳು ಇರುವದಿಲ್ಲ" ಎಂದು. ಮುಂದೆ ಕೊನೆಗೆ ಸುಂದರವಾದ ಒಂದು ಮಾತನ್ನು ತಿಳಿಸುತ್ತಾರೆ *ಬಾರವೋ ಭಯಗಳು, ಬಂದರೋ ನಿಲ್ಲವು, ಹಾರಿಹೋಗುವವು ದಶದಿಕ್ಕುಗಳಿಗೇ* ಯಾರು ದೇವರ ಪಾದಾರವಿಂದಗಳ ಅರಾಧಕರಾಗಿದ್ದು, *ಭಯಾಪಹಃ - ಭಯನಾಶನಃ* ಇತ್ಯಾದಿ ನಾಮಗಳಿಂದ ಯಾರು ಭಜಿಸುತ್ತಾರೆ ಅವರಿಗೆ ಭಯಗಳೇ ಬರುವದಿಲ್ಲ. ಬಂದರೂ ನಿಲ್ಲುವದಿಲ್ಕ. ಹತ್ತುದಿಕ್ಕಿಗೆ ದಿಕ್ಕಪಾಲಾಗಿ ಓಡಿ ಹೋಗುತ್ತವೆ ಎಂದು.
ಇಂದು *ಕೊರೋನಾ* ಮೊದಲಾದ ದೊಡ್ಡ ದೊಡ್ಡ ರೋಗಗಳು, ನಾನಾ ವಿಧ ಆಪತ್ತುಗಳು ಬರಬಹುದು ಎಂಬ ಭಯ ತುಂಬ ಇದೆ. ಮೇಲೆ ತಿಳಿಸಿದ *ಭಯಾಪಹಃ - ಭಯನಾಶನಃ* ಈ ಎರಡು ನಾಮಗಳನ್ನು ಜಪಿಸಿ ಸ್ತುತಿಸಿ ಭಯ ಪರಿಹರಿಸಿಕೊಳ್ಳೋಣ....
*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments