ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!*
*ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!* ಜಗತ್ತಿನ ಹಿತಕ್ಕಾಗಿ ಅನೇಕ ಜ್ಙಾನಿಗಳು ಜಗತ್ತಿನ ಎಲ್ಲ ಜನರಿಗೂ ಅನ್ವಯಿಸುವಂತೆ ಲಕ್ಷ ಲಕ್ಷ ಆಚಾರ ವಿಚಾರಗಳನ್ನು ರೂಢಿಸಿದರು. ಕಾಲದ ಪ್ರಭಾವದಿಂದ ಆಚಾರ ವಿಚಾರಗಳು ಬ್ರಾಹ್ಮಣರಲ್ಲಿ ಮಾತ್ರ ಉಳಿದುಕೊಂಡವು. ಈಗಿನ ಕಾಲದಲ್ಲಿ ಅನೇಕ ಬ್ರಾಹ್ಮಣರೂ ಆ ಆಚಾರ ವಿಚಾರಗಳನ್ನು ಕಳೆದುಕೊಂಡರು ಎನ್ನುವದಕ್ಕಿಂತ ಹಠ ಮಾಡಿ ಬಿಟ್ಟರು. ಆಚಾರ ವಿಚಾರ ಧರ್ಮಗಳನ್ನು ಬಿಡುವದೇ ಒಂದು fassion ಆಗಿ ಹೋಯಿತು. *ಆಚಾರವಂತ ಬ್ರಾಹ್ಮಣನ ಅವಸ್ಥೆ.....* ಆಚಾರ ವಿಚಾರ ಮಡಿ ಮೈಲಿಗೆ social distince ಇದು ಇಂದಿನದು ಅಲ್ಲ. ಅನಾದಿ ಸತ್ಸಂಪ್ರದಾಯದಿಂದ ಬಂದವು. ಈ social distince ಬ್ರಾಹ್ಮಣರು ಮಾಡಿದರೆ ಅನ್ನುವದಕ್ಕೆ, ನಿಂದಿಸಲು, ಅವಮಾನ ಮಾಡಲು ಅದರ ಮಹತ್ವವನ್ನು ಅರಿಯದ, ತಿಳಿಯದ ನೂರು ಜನ ಸಿದ್ಧ. *ಅಂದು -- ಇಂದು* ಇಂದು ಇಪ್ಪತ್ತು ಸೆಕೆಂದು ಕೈ ತೊಳಿ ಎಂದು ಹೇಳಿದರೆ ಸಿದ್ಧ. ಹೊರ ಓಡಾಡಿ ಬಂದರೆ ಸ್ನಾನ ಮಾಡಲೂ ಸಿದ್ಧ. ಈ ಎಲ್ಲ ತರಹದ ಆಚಾರಗಳನ್ನೂ ಅನುಸರಿಸುತ್ತಿದೆ. ಜಗತ್ತು ಒಪ್ಪಿಕೊಂಡಿತು. ಶುದ್ಧಿಗಾಗಿ ಮೃತ್ತಿಕಾ ಶೌಚ ಮಾಡಿದ ಬ್ರಾಹ್ಮಣನ ಅವಸ್ಥೆ ಬೈಸಿಕೊಳ್ಳುವದೆ ಆಯ್ತು. ಬ್ರಾಹ್ಮಣ ಮುಟ್ಟದೇ ದೂರ ನಡೆದರೆ, ದೂರದಿಂದ ಇಸಕೊಂಡರೆ ಮೂಗು ಮುರಿವ ಜನರೇ.... ಇವತ್ತು ಯಾರನ್ನೂ ಮುಟ್ಟದೆ ದೂರ ದೂರ ಇರುವದು...