Posts

Showing posts from April, 2020

*ಸಹವಾಸ - ಅತ್ಯಂತ ಯೋಗ್ಯವೇ ಆಗಿರಬೇಕು...*

Image
*ಸಹವಾಸ - ಅತ್ಯಂತ ಯೋಗ್ಯವೇ ಆಗಿರಬೇಕು...* "ಸಜ್ಜನರ ಸಂಗವ ಮಾಡದಿದ್ದರೆ ಎನಗೇ ಆಣೆ ರಂಗ, ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ರಂಗ..." ಸಜ್ಜನರ ಹಿತೈಷಿಗಳ, ನಮ್ಮ ಪರವಾಗಿ ನಮಗೇ ಗೊತ್ತರದ ಹಾನೆ ನಿರಂತರ ಬೇಡಿಕೊಳ್ಳುವ ಮಹಾತ್ಮರ  ಸಹವಾಸ ಮಾಡದಿದ್ದರೆ ಎನಗೆ ಆಣೆ, ದುಷ್ಟರ ಸಹವಾಸ ಬಿಡಿಸದಿದ್ದರೆ ನಿನಗೆ ಆಣೆ ಎಂದು ದಾಸರಾಯರು ಆಣಿ ಹಾಕಿಕೊಳ್ಳುತ್ತಾರೆ. ದೇವರಿಗೂ ಆಣೆ ಹಾಕುತ್ತಾರೆ.  *ಸಹವಾಸದ ಶಕ್ತಿ ಮಹಾನ್ ಆಗಿದೆ* ನಮ್ಮನ್ನ ಬದಲಾಯಿಸುವ ಶಕ್ತಿ ಇರುವದು ಸಹವಾಸದಲ್ಲಿ. ಯಾವ ವ್ಯಕ್ತಿಯ ಎಂಥ ವ್ಯಕ್ತಿಯ ಸಹವಾಸ ಆಗುತ್ತದೆಯೋ ಆ ತರಹ, ಅಂಥ ವ್ಯಕ್ತಿ ತಾನಾಗುತ್ತಾನೆ. ನಮ್ಮನ್ನು ಪೂರ್ಣವಾಗಿ ಬದಲಾಯಿಸಿಬಿಡುತ್ತದೆ ಸಹವಾಸಗಳು.  *ರಾಮಯಾಣದ ಸುಂದರ ಕಥೆ...* ವನದಲ್ಲಿ ಇರುವಾಗ ಸೀತೆ ರಾಮನಿಗೆ ಒಂದು ಕಥೆ ಹೇಳುತ್ತಾಳೆ.... ಒಬ್ಬ ಶ್ರೇಷ್ಠ ಋಷಿಗಳು ೧೦೦೦೦ ವರುಷದ ಸುದೀರ್ಘ ತಪಸ್ಸಿಗೆ ಆಸೀನರಾಗಿರುತ್ತಾರೆ. ಆಗ ಇಂದ್ರದೇವ ಒಬ್ಬ ಸೈನಿಕನ ವೇಶದಲ್ಲಿ ಬಂದು ಒಂದು ಮೊನುಚಾದ ಖಡ್ಗವನ್ನು ಕೊಟ್ಟು ಹೇಳುತ್ತಾರೆ, ನಾ ತಿರುಗಿ ಬರುವವರೆಗೆ ಈ ಖಡ್ಗ ನಿಮ್ಮ ಸನಿಹದಲ್ಲಿರಲಿ. ಸಂರಕ್ಷಣೆ ಮಾಡಿರಿ. ಪುನಃ ಬಂದು ಒಯ್ಯುತ್ತೇನೆ ಎಂದು. ಆ ಮಾತನ್ನು ಒಪ್ಪಿಕೊಂಡ  ಮಹಾತಾಪಸಿ, ಅ ಖಡ್ಗವನ್ನು ತನ್ನ ಸನಿಹ ಇಟ್ಟುಕೊಳ್ಳುವ. ಪ್ರತಿನಿತ್ಯ ಮಲಗುವಾಗ ಏಳುವಾಗ ಆ ಖಡ್ಗವಿದೆಯೋ ಇಲ್ಲವೋ ಎಂದು ನೋಡುತ್...

*ಹೆದರಿಕೆ.....*

Image
*ಹೆದರಿಕೆ.....* ನಿಜವಾಗಿ ಹೆದರಿಕೆ ಇರುವದು ಯಾರಿಂದ..??  ಹೀಗೆ ಉತ್ತರ ಕೊಡಬಹುದು. "ನಮ್ಮಿಂದ ಭಯಭೀತನಾದವನಿಂದ ನಮಗೆ ಹೆದುರಿಕೆ" ಎಂದು. ಸೊಳ್ಳೆಯನ್ನು ಕೊಂದು ಹಾಕಲು ಮುಂದಾಗ್ತೇನೆ ಎಂದರೆ ಸೊಳ್ಳೆಯಿಂದ ಎನಗೆ ಹೆದರಿಕೆ ಆರಂಭವಾಗಿದೆ ಎಂದೇ ಅರ್ಥ. ಹೆದರಿದವನೇ ಕೈ ಎತ್ತುವವನು. ಬಯ್ಯುವವನು.  ನಮ್ಮಿಂದ ಯಾರು ಹೆದರಿದ್ದಾರೋ ಅವರಿಂದ ಆಪತ್ತು ಬಂದೇ ಬರುವದು. ಇದುವೂ ಅಷ್ಟೇ ನಿಶ್ಚಿತ.  ಪ್ರಾಣಿ ಪಶು ಪಕ್ಷಿ ಮೊದಲ ಮಾಡಿ  ಯಾರಿಗೂ ನಮ್ಮಿಂದ ಹೆದರಿಕೆ ಬಂದಿರಬಾರದು. ಹೆದರಿದವ ಸಂಚು ಹಾಕಿ ಹೊಡೆಯುತ್ತಾನೆ. ಇಲ್ಲವೋ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಾನೆ. ಈ ಕ್ರಮದಲ್ಲಿ ಹೆದುರಿಕೆ ಬೆನ್ನಟ್ಟುವದೇ. *ಈ ಎರಡೂ ವಿಷಯದಲ್ಲಿ ಒಂದೊಂದು‌ ಕಥೆ ಸಿಗುತ್ತದೆ..* ರಾವಣ ಹೆದುರಿದ. ರಾಮನನ್ನು ಸಂಹರಿಸಲು ನೂರು ಪ್ರಯತ್ನ ಮಾಡಿದ. ಸೋತ. ಸತ್ತೂ ಹೋದ. ಒಂದು ನಿಜ ಹೆದುರಿದ ರಾವಣ ರಾಮನನ್ನು ಸಂಹರಿಸಲು ನೂರು ಪ್ರಯತ್ನ ಮಾಡಿದ. ಹೆದುರಿದ ದುರ್ಯೋಧನ ಪಾಂಡವರನ್ನು ಸಂಹರಿಸಲು ಅನೇಕ ಪ್ರಯತ್ನಗಳನ್ನೂ ಮಾಡಿದ. ತಪ್ಪು‌ಮಾಡಿ ಹೆದರಿದವ ಕೈ ಎತ್ತುವದು ಮೊದಲೇ. ನಮ್ಮಿಂದ ಯಾರೂ ಹೆದರಿರಬಾರದು. ಅವರು ಹೆದರಿದ್ದರೂ ಎಂದಾದರೆ ನಮಗೆ ಅವರಿಂದ ಆಪತ್ತು ಇದ್ದದ್ದೇ. ಅಂತೆಯೇ  ಶ್ರೀರಾಮ ವನವಾಸದಲ್ಲಿ  ತನ್ನ ಧನುಸ್ಸಿನ "ಜ್ಯಾ"ವನ್ನು ಎಂದೂ ಹೆದೆ ಏರಿಸುತ್ತಿರಲಿಲ್ಲ. ಏನಕ್ಕೆ.... ಜ್ಯಾ ವನ್ನು ...

*ದುಷ್ಟ ಶಿಕ್ಷಕ, ಶಿಷ್ಟರಕ್ಷಕ,ಅಕ್ಷಯ ಫಲದಾಯಕ...‌‌*

Image
*ದುಷ್ಟ ಶಿಕ್ಷಕ, ಶಿಷ್ಟರಕ್ಷಕ, ಅಕ್ಷಯ   ಫಲದಾಯಕ...‌‌* ಅಕ್ಷಯ ತೃತೀಯಾ ಮಹದಿನದ ಶುಭಾಷಯಗಳು.  ಅಪೇಕ್ಷೆಗಳಿಗೆ ಕೊನೆಯಿಲ್ಲ.  ಪಡೆಯುವ ಫಲಗಳೆಲ್ಲವೂ ಕ್ಷಣಿಕ. ಪಡೆದದ್ದರಲ್ಲಿ ಸುತರಾಂ ತೃಪ್ತಿ ಇಲ್ಲ. ಇದು ಇಂದಿನ (ದು)ಸ್ಥಿತಿ. ಶಾಸ್ತ್ರ ತಿಳಿಸತ್ತೆ "ಪಡೆಯುವ ಹಂಬಲವೇ ಇದ್ದರೆ ಎಂದೂ ನಶಿಸದ ಫಲವನ್ನೇ ಪಡೆ" ಎಂದು. ಎಂದಿಗೂ ನಶಿಸದ ಅಂದರೆ ಅಕ್ಷಯವಾದ ಫಲವವೂ ಇದೆ... ಆ ಫಲಕ್ಕೆ  ಅಡ್ಡಿಯಾದವಗಳೂ ಅಕ್ಷಯವಾಗಿವೆ....... ಅಕ್ಷಯವಾದದ್ದನ್ನು ಪಡೆಯಲು ಅಕ್ಷಯವಾದ ಅಡ್ಡಿಗಳು. ಆ ಅಡ್ಡಿಗಳನ್ನು ದಾಟಲು ಸಾಧ್ಯವಿಲ್ಲ. ದಾಟಿ ಆದಮೇಲೆ ಅಕ್ಷಯ ಫಲ ಅದೂ ಅಸಾಧ್ಯದ ಮಾತೇ... ಒಟ್ಟಾರೆಯಾಗಿ ಮೂಗಿಗೆ ಬೆಣ್ಣೆ ಸವರಿದಂತಿದೆ ನಿಮ್ಮ ಮಾತಿನ ಧಾಟಿ..... ಜೀವ ಸತ್ ಚಿತ್ ಆನಂದ ಸ್ವರೂಪ. ತನ್ನದೇ ಆದ,  ತನ್ನ ಸ್ವರೂಪವನ್ನು  ಪಡೆಯಲು ಅನಾದಿಯಿಂದ ಕ್ರಮಿಸಬೇಕು. ಸುದೀರ್ಘ ಸಾಧನೆ ಬೆಕು. ಅನೇಕ ಏಳು ಬೀಳುಗನ್ನು ದಾಟಿ ಕೊನೆಗೆ ಹೊಂದಬೇಕು. ಆ ಕೊನೆ ಎಂದು.. ?? ನಾವು ನಿರ್ಧರಿಸುವ ಹಾಗಿಲ್ಲ, ಅದರ ನಿರ್ಧಾರ ಶ್ರೀಹರಿಯದು.  ಜೀವನಿಗೆ ತನ್ನದೇ ಆದದ್ದನ್ನು ತಾನು ಪಡೆಯಲು ಇರುವ ಅಡ್ಡಿಗಳು ಪ್ರಮುಖವಾಗಿ *ಈಶ್ವರೇಚ್ಛಾ, ಪ್ರಕೃತಿ, ಲಿಂಗದೇಹ, ಜೀವಾಚ್ಛಾದಿಕಾ, ಪರಮಾಚ್ಛಾದಿಕಾ, ಕಾಮ, ಕರ್ಮ* ಹೀಗೆ ಏಳು ಇವೆ.  ಒಂದು ಅಪೇಕ್ಷೆ.‌ ಅದನ್ನು ಈಡೇರಿಸಿಕೊಳ್ಳಲು ಅನೇಕ ಕರ್ಮ....

*"ತುಳಸಿ"ಯಿಂದ ಪ್ರೇರಿತ ಒಂದು ಸಣ್ಣ ವಿಚಾರ.......*

Image
*"ತುಳಸಿ"ಯಿಂದ ಪ್ರೇರಿತ ಒಂದು ಸಣ್ಣ ವಿಚಾರ.......* ತುಲಸಿಗೆ ನಿನ್ನೆ ನೀರು ಹಾಕುವಾಗ ಯೋಚನೆಗೆ ಬಂತು. ರಾತ್ರಿ ಬರೆದು ಹಾಕಿದೆ. ಸರಿ ಇರಲೂ ಬಹುದು.  ಸರ್ವೌಷಧಿ ರೂಪ ತುಲಸೀ. ಶ್ರೀಮನ್ನಾರಾಯಣನ ಪತ್ನೀ ಸ್ಥಾನ ತುಲಸಿಗೆ. ತುಲಸಿ ಇಲ್ಲದ ಪೂಜೆ ದೇವ ತಾ ವಲ್ಲ ಹಾಗೂ ಕೊಳ್ಳ. ಸೌಮಾಂಗಲ್ಯ ಸೌಭಾಗ್ಯಕ್ಕೆ ನಿತ್ಯವೂ ತುಲಸೀ ಪೂಜೆ ವಿಹಿತ. ಸಮುದ್ರಮಥನದ ಪ್ರಸಂಗದಲ್ಲಿ ಪ್ರಾದುರ್ಭವಿಸಿದವಳು ತುಲಸಿ. ಹೀಗೆ ಸಾವಿರಾರು ಗುಣಗಳು ತುಲಸಿಯಲ್ಲಿ ಇದೆ.  ಆದರೆ "ತುಳಸಿ" ಎಂದಿಗೂ  ಹು ಹಣ್ಣು ಹಂಪಲಗಳನ್ನು ಕೊಟ್ಟು ಜನರನ್ನು ಆಕರ್ಷಿಸಲು ಹವಣಿಸಲಿಲ್ಲ. ನೆರಳು ಕೊಡುವದಿಲ್ಲ. ಕಟ್ಟಿಗೆ ಕೊಡುವದಿಲ್ಲ. ಘಮಘಮ ವಾಸೆನೆಯೂ ಇರುವದಿಲ್ಲ.  ತನ್ನಷ್ಟಕ್ಕೆ  ತಾನು ಬೆಳೆಯುತ್ತದೆ. ಇರುತ್ತದೆ. ಆದರೂ  ತುಳಸಿಯ ಕೀರ್ತಿ ಅಜರಾಮರ. ಶಾಶ್ವತ. ಇದು ನಮಗೆ ಒಂದು ನಿದರ್ಶನವೂ ಆಗಬಹುದು. ಯಾಕೆಂದರೆ "ತುಲಸಿ" ತಾನೇನಿದೆ ಹಾಗಿರುತ್ತದೆ. ಬೇಡದ ಉಸಾಬರಿ ಅದಕ್ಕೆ ಬೇಕಿಲ್ಲ. ನನ್ನ ಬಳಿ ಬರುವವರು ನನ್ನ ಗುಣಗಳನ್ನು ಮೆಚ್ಚಿ ಬರಲಿ. ನನ್ನ ಮೇಲ್ನೋಟವನ್ನು ನೋಡಿ ಬರುವ ಯಾವ ಅವಶ್ಯಕತೆ ಇಲ್ಲ. ಎನ್ನುವ ನೀತಿಯನ್ನು ಸಾರುತ್ತದೆ. *ನಾವೇನು ಮಾಡುತ್ತೇವೆ....* ನಮ್ಮ ಸುತ್ತಲಿನ ಜನರನ್ನು ನಮ್ಮತ್ತ ಆಕರ್ಷಿಸಲು ನಾವು ಮಾಡುವ ದೊಡ್ಡ ಕೆಲಸವೆನೆಂದರೆ, ನಮ್ಮನ್ನು ನಾವು "ಇರುವದಕ್ಕಿಂತಲೂ ಹೆಚ್ಚಾಗಿ  ಪ್ರತಿಬಿಂಬಿಸು...

*"ಸರ್ವಮೂಲ ವಿಚಕ್ಷಣ" - ನಮ್ಮ ಜಯತೀರ್ಥಾಚಾರ್ಯರು*

*"ಸರ್ವಮೂಲ ವಿಚಕ್ಷಣ" - ನಮ್ಮ ಜಯತೀರ್ಥಾಚಾರ್ಯರು* ಬಾಲ್ಯದಲ್ಲಿಯೇ ಸತ್ಯಧ್ಯಾನ ವಿದ್ಯಾಪೀಠ  ಕುಲಪತಿಗಳಾದ ಪರಮಪೂಜ್ಯ ಮಾಹುಲೀ ಆಚಾರ್ಯರ ಉಡಿಸೇರಿದ ಪುಣ್ಯಾತ್ಮರು ನಮ್ಮ ಜಯತೀರ್ಥಾಚಾರ್ಯರು. *"ಸರ್ವಮೂಲ ವಿಚಕ್ಷಣ"ರು* ಪೂಜ್ಯ ಆಚಾರ್ಯರ ನೆರಳಾಗಿ ಇಂದಿಗೂ ಅನುಸರಿಸುತ್ತಿರುವ ಜಯತೀರ್ಥಾಚಾರ್ಯರು, ಪೂ ಆಚಾರ್ಯರ ಆದರ್ಶದಲ್ಲಿ  ಸರ್ವಮೂಲ, ಶ್ರೀಮನ್ಯಾಯಸುಧಾ, ಮಹಾಭಾರತ,  ಟೀಕಾಗ್ರಂಥಗಳಲ್ಲಿ ಅಸದೃಶ ಪಾಂಡಿತ್ಯವನ್ನು ಪಡೆದ ಧೀರ. ಸರ್ವಮೂಲದ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳಕಡೆಯೂ ಗಮನ ಇಂದಿಗೂ ಇದ್ದೇ ಇದೆ. ಆ ವಿಶಿಷ್ಟಕಲೆಯನ್ನು ಗಮನಿಸಿಯೇ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ಪರಮಾನುಗ್ರಹ ಪೂರ್ವಕವಾಗಿ‌ *ಸರ್ವಮೂಲ ವಿಚಕ್ಷಣ* ಎಂದು ಬಿರಿದು ಕೊಟ್ಟು ಗೌರವಿಸುವ ಮುಖಾಂತರ ಮಹಾ ಅನುಗ್ರಹವನ್ನು ಮಾಡಿದ್ದಾರೆ.  *ವಿಲಕ್ಷಣವಾದ ವಿಚಕ್ಷಣ* ಚತುಃಶಾಸ್ತ್ರದಲ್ಲಿ ವಿಚಕ್ಷಣರು ಪಂ.ಜಯತೀರ್ಥಾಚಾರ್ಯರು. ಪೂಜ್ಯ ಆಚಾರ್ಯರ ಆಶಯದಂತೆ, ಪಂ ಶ್ರೀನಿವಾಸತೀರ್ಥಾಚಾರ್ಯರಿಂದ ಕೂಡಿಕೊಂಡು  *ಶ್ರೀಮನ್ಮಹಾಭಾರತ ತಾತ್ಪರ್ಯನಿರ್ಣಯ* ಗ್ರಂಥದ ಸಂಶೋಧನೆಯಲ್ಲಿ ಸಂಪೂರ್ಣ ಜೀವನವನ್ನೇ ಸವಿಸಿದರು. ಇಪ್ಪತ್ತೊಂದು ಟಿಪ್ಪಣಿಗಳನ್ನು ಸಂಗ್ರಹಿಸಿ, ಹಸ್ತಪ್ರತಿಗಳ ಕಡೆ ಗಮನಹರಿಸಿ, ಮಹಾಭಾರತದ ನೂರಾರು ಕಥೆ ವಿಷಯಗಳು ಇನ್ನ್ಯಾವ ಪುರಾಣಗಳಲ್ಲಿ ಬಂದಿದೆ ಎಂದು ಹುಡುಕಿ, ಸಾವಿರಾರು ವಿಷಯಗಳನ್ನು ಸಂಗ್ರಿಸಿ, ಈಗಾಗಲೇ...

*ದುಡ್ಡೇ ದೊಡ್ಡಪ್ಪನಾ ? ಅಥವಾ ದುಡ್ಡಿಗೂ ದೊಡ್ಡಪ್ಪನಿದ್ದಾನೆಯಾ ?*

Image
*ದುಡ್ಡೇ ದೊಡ್ಡಪ್ಪನಾ ? ಅಥವಾ ದುಡ್ಡಿಗೂ ದೊಡ್ಡಪ್ಪನಿದ್ದಾನೆಯಾ ?* *ದುಡ್ಡೇ ದೊಡ್ಡಪ್ಪ, ಹಣವಂತನೇ ಗುಣವಂತ* ಇಂದಿನ ಸ್ಥಿತಿಯೂ ಹೀಗೆಯೇ ಇದೆ.  "ಒಬ್ಬ ಸನ್ಯಾಸಿಗೆ ಹೊಡೆದವರು ಒಳ್ಳೆಯ ಗುಣವಂತರಾಗುತ್ತಾರೆ. ಊರಿಗೆ ದಂಗೆ ಎಬ್ಬಿಸುವವರ ವಿರುದ್ಧ ಮಾತಾಡಿದವರು ದೋಷಿಗಳು ಆಗುತ್ತಾರೆ. ಈ ಸ್ಥಿತಿಗೆ ಕಾರಣ *ಹಣವಂತನೇ ಗುಣವಂತ.*   *ದುಡ್ಡೇ ದೊಡ್ಡಪ್ಪ*  " ದುಡ್ಡೇ ದೊಡ್ಡಪ್ಪ" ಇದು ನಿಜ. ದುಡ್ಡಿನಿಂದಲೇ ಎಲ್ಲವೂ ಇದೆ. ದುಡ್ಡು ಇದ್ದವ ಗುಣವಂತನ ಮುಖವಾಡ ಧರಿಸಿ, ನೀರು ಚೆಲ್ಲಿದ ಹಾಗೆ ಚೆಲ್ಲುವ ವ್ಯಕ್ತಿಗಳಿಗೂ  ಅನುಭವಕ್ಕೆ ಬಂದಿದೆ. ದುಡ್ಡನ್ನು ಯಥೇಚ್ಛವಾಗಿ ಖರ್ಚು ಮಾಡುವವರಿಗೆ ಇಂದು ಪಾಠವೂ ಆಗಿದೆ. ದುಡ್ಡನ್ನು ನೀರಿನಂತೆ ಚೆಲ್ಲ ಬಾರದು ಎಂದು. ದುಡ್ಡು ಉಳಿಸಿಕೊಳ್ಳಬೇಕು ಎನ್ನುವದು ಪೂರ್ಣ ಮನವರಿಕೆ ಆಗಿದೆ.  *ದುಡ್ಡಿಗೂ ದೊಡ್ಡಪನಿದ್ದಾನೆ...* ಇಷ್ಟು ದಿನ ದುಡ್ಡೇ ದೊಡ್ಡಪ್ಪ ಎಂದು ತಿಳಿದಿದ್ದೆವು. ಆದರೆ ಇಂದು ದುಡ್ಡಿದ್ದರೆ ನಡಿಯುವದಿಲ್ಲ. ದುಡ್ಡಿಗೂ ದೊಡ್ಡಪ್ಪನಾದ ದೇವರು ಧರ್ಮ ಅತ್ಯವಶ್ಯಕ. ದುಡ್ಡಿಗೂ ದೊಡ್ಡಪ್ಪಂದಿರು ಇದ್ದಾರೆ ಎಂದು ಕ್ಷಣ ಕ್ಷಣಕ್ಕೆ ಎಲ್ಲರ ಅನುಭವಕ್ಕೂ ಬರ್ತಾ ಇದೆ.  *ದುಡ್ಡಿಗೂ ದೊಡ್ಡಪ್ಪಂದಿರಿವರು...* *ಧರ್ಮೇಣ ಜಯತೆ ಲೋಕಾನ್  ಧರ್ಮೇಣ ನಶ್ಯತೇ ರೋಗಾಃ.  ಧರ್ಮೇಣ ಚ ನಿರ್ಮಲಾ ಕೀರ್ತೀಃ  ಅತೋ ಧರ್...

*ಸಾಮಾನ್ಯ ಪ್ರಾರ್ಥನೆಗಿಂತ ಒಂದು ವ್ರತದ ಶಕ್ತಿ ಎಷ್ಟೋ ಪಾಲು ಹೆಚ್ಚು*

Image
*ಸಾಮಾನ್ಯ ಪ್ರಾರ್ಥನೆಗಿಂತ ಒಂದು ವ್ರತದ ಶಕ್ತಿ ಎಷ್ಟೋ ಪಾಲು ಹೆಚ್ಚು* ವ್ರತಗಳು ವರ್ಷಪೂರ್ತಿ ಇರುವವುಗಳು ಇವೆ, ಪ್ರತಿ ತಿಂಗಳು ಬರವ ವ್ರತಗಳೂ ಇವೆ, ಒಂದೇ ತಿಂಗಳು ಮಾಡುವ ವ್ರತಗಳು ಬೇರೆ, ಏಕಾದಶಿ ಮೊದಲಾದವುಗಳು ಒಂದು ದಿನದ ವ್ರತಗಳು. ಜಪ ನಮಸ್ಕಾರ ಮೊದಲಾದ ವ್ರತಗಳು ಒಂದು ಗಂಟೆಯಂತೆ ಉಸಿರಿರುವವರೆಗೂ ಮಾಡುವ ವ್ರಗಳು. ಹೀಗೆ ವ್ರತಗಳು ನೂರಾರು......  *ವ್ರತಗಳನ್ನು ಏಕೆ ಮಾಡಬೇಕು...??* ಬೇಡಲು ನಾನಿದ್ದೇನೆ, ಕೊಡಲು ದೇವರು ಇದ್ದಾನೆ ವ್ರತಗಳು ಏಕೆ ಬೇಕು.. ? ಇದೊಂದು ಸಹಜ ಪ್ರಶ್ನೆ.  *ಸಂಕಟ ಬಂದಾಗ ವೆಂಕಟ ರಮಣ*  ನಮಗೆ ಗೊತ್ತಿರುವದ್ದೆ. ಇಷ್ಟೇ ಸಹಜ ಉತ್ತರ.   'ರೋಗ ಬಂದಾಗ ಔಷಧಿಯ ಹುಡುಕಾಟ ಬೇಡ, ರೋಗ ಬರದಿರುವ ಹಾಗೆ ನೋಡಿಕೊಳ್ಳುವುದೇ  ಜಾಣವಂತಿಕೆ' ಈ ಜಾಣವಂತರು ಮಾಡುವ ಕೆಲಸವೇ ನಿಯಮಗಳು.  ಸಂಕಟಗಳು ಬಾರದಿರುವ ಹಾಗೆ ನೋಡಿಕೊಳ್ಳುವದೇ ವ್ರತಗಳು. ಹಾಗಾಗಿ ವ್ರತಗಳು ತುಂಬ ಮುಖ್ಯ ಪಾತ್ರವಾಹಿನಿಯಲ್ಲಿ ಬಂದಿವೆ.  *'ಬೇಡುವವನಿಗಿಂತಲೂ ಪೂಜಿಸುವವ ಅತ್ಯಂತ ಪ್ರಿಯ' ಪೂಜಿಸುವ ವಿಧಾನವೇ ವ್ರತ. ಅಂತೆಯೇ ವ್ರತಗಳು ದೇವರಿಗೆ ಅತ್ಯಂತ ಪ್ರಿಯ.*  ಕರುಣಾಮಯ ದೇವರು. ಕೇವಲ ಬೇಡಿದರೂ ಕೊಡುತ್ತಾನೆ. 'ಬೇಡಿ ಕಷ್ಟ ಪರಿಹರಿಸಿಕೊಂಡವ ತೃಪ್ತನಾಗಿ ಇರಲಾರ, ಮತ್ತೊಂದು ಕಷ್ಟ ಅವನಿಗೆ ಬಂದಿರತ್ತೆ. ಆ ಕಷ್ಟ ಪರಿಹರಿಸಿಕೊಳ್ಳುವದರಲ್ಲೇ ಮುಗದೊಂದು ಅಥವಾ ಕು...

*ನಮ್ಮೂರೇ ವಾಸಿ.....*

Image
*ನಮ್ಮೂರೇ ವಾಸಿ.....* ಊರು ಬಿಟ್ಟು ದೊಡ್ಡ ಊರಿಗೆ ವಿದೇಶಕ್ಕೆ ಹೋಗುವ ಎಲ್ಲರಿಗೂ ಇಂದು ಅನುಭವಕ್ಕೆ ಬಂದ ಸುಂದರ ಮಾತು ಅಂದರೆ *ನಮ್ಮೂರೇ ವಾಸಿ* ಎಂಬುದು. 2g ಹಿರಿಯರಿಗೆ 3g  ಯುವಕರಿಗೆ 4g ಹುಡುಗರಿಗೆ ನಮ್ಮೂರು ಅಂದರೆ ಅಂದಿನಿಂದ ಅಲರ್ಜಿ. ಮಣ್ಣಿನ ಮನೆ, ಮಣ್ಣಿನ ರಸ್ತೆ, ಆಕಳು, ಗೋಮಯ ಗೋಮೂತ್ರ,  ಹೊಲ, ಇವೆಲ್ಲ ಈ ಎಲ್ಲರಿಗೂ ಸ್ವಲ್ಪ ಏನು ಬಹಳೇ ಅಲರ್ಜಿ ಎಂದು ಭಾವಿಸಿ ಎಲ್ಲರೂ ನಮ್ಮ ಊರು ನಮ್ಮ ಮನೆ ಬಿಟ್ಟು ಪರ ಊರಿಗೆ ಊರಿಗೆ ಹೋಗಿ ಇನ್ನೊಬ್ಬರ ಮನೆಯಲ್ಲಿ ಇದ್ದು ಅದುವೇ ಶಿಸ್ತು ಎಂದೆನಿಸಿ, ಈ ಊರು, ಈ ವಾತಾವರಣ, ಬಿಟ್ಟು "ಈ" (it) ಊರು ಸೇರಿಕೊಂಡವರೆಲ್ಲರೂ ಇಂದು ಹೇಳುತ್ತಿದ್ದಾರೆ "ನಮ್ಮೂರು ಯಾವಾಗ ಸೇರಿಕೊಂಡೆನೋ" ಅಂತ.  ಅದಕ್ಕೆ ದಾಸರು ಹೇಳಿದರು *ನಮ್ಮೂರೇ ವಾಸಿ* ಎಂದು. *ಇಂದು ನಮ್ಮದು ಏನಿದೆ ನಮಗೆ ದೂರವೇ...* ೧) ನಮ್ಮ ದೇವರು ಬೇಡ.  ಏಕೆ...?? ದೇವರನ್ನು ಮನೆಗೆ ಕರೆದರೆ tension. ಅದಕ್ಕೆ ನಮಗೆ ದೇವರು ಬೇಡ, ನಾವು ಕರಿಯಲ್ಲ.  ಅದೇಕೆ tension ..??  ದೇವರನ್ನು ಕರೆದರೆ ತಣ್ಣೀರಿನ ಭಾವಿ ಬೋರ್ ನೀರಿನ ಸ್ನಾನ. ಪೂಜೆ ಮಾಡಬೇಕು. ಪೂಜೆಗೋಸ್ಕರ ಮಂತ್ರಗಳನ್ನು ಕಲಿಬೇಕು. ನೈವೇದ್ಯ ಮಾಡಬೇಕು. ಇದ್ಲಿವಲಿ ಅದು ಇದು ಎನಬೇಕು. ಮಡಿ ಮೈಲಿಗಿ... ಯಪ್ಪಾ ಎಷ್ಟು ಸಮಸ್ಯೆ... ನಮ್ಮ ದೇವರು ನಮಗೆ ಬೇಕು ಎಂದರೆ ಇಷ್ಟು ಸಮಸ್ಯೆಗಳು. ಹಾಗಾಗಿ ನಾವು ನಮ್ಮ ದೇವರನ್ನ...

*ಆಚಾರ್...!! ಏನರೆ ಹೇಳ್ರಿ ಉಪವಾಸ ಮಾಡ್ಲಿಕ್ಕಂತೂ ಆಗಲ್ಲ, ಎಂಬ ಮಾತು ಕೇಳ್ತಿದ್ವೆ.. ಆದರೆ "ಇಂದಿನ ಈ ಏಕಾದಶಿಯ ಉಪವಾಸ ನಮ್ಮದೇ.... Challenge*"

Image
*ಆಚಾರ್...!! ಏನರೆ ಹೇಳ್ರಿ ಉಪವಾಸ ಮಾಡ್ಲಿಕ್ಕಂತೂ ಆಗಲ್ಲ,  ಎಂಬ ಮಾತು ಕೇಳ್ತಿದ್ವೆ.. ಆದರೆ "ಇಂದಿನ ಈ ಏಕಾದಶಿಯ ಉಪವಾಸ ನಮ್ಮದೇ.... Challenge*" ಶಾರ್ವರೀ ಸಂವತ್ಸರದ  ಶುಕ್ಲಪಕ್ಷದ ಏಕಾದಶೀ  ಇಂದು. ಸಂಪಾದೆನೆಗೆ ಬಂದದ್ದು ನಾವು.  ಸಂಪಾದಿಸುವದರಲ್ಲಿ ಜ್ಯೇಷ್ಠವಾದದ್ದು, ಮೊಟ್ಟಮೊದಲನೇಯದ್ದು ಅಂದರೆ ಅದು "ವಿಷ್ಣುಪ್ರೀತಿ"ಯೇ. ನಂತರದ ಸ್ಥಾನ ಉಳಿದೆಲ್ಲ ಸಂಪಾದನೆಗಳದ್ದು.  ಆ ವಿಷ್ಣುಪ್ರೀತಿಗೋಸ್ಕರ  ನಾವೆಲ್ಲರೂ ಸೇರಿ ಇಂದು  ಉಪವಾಸದ challenge ತೆಗೆದುಕೊಳ್ಳೋಣ ಅಲ್ಲವೇ..... ?? *ಉಪವಾಸ ಏಕೆ...* ಜಗತ್ತಿನಲ್ಲಿ ಇರುವ ಪಾಪಗಳೆಲ್ಲವೂ ಇಂದು ತಿನ್ನುವ ಪ್ರತೀ ಅಗಳಿನಲ್ಲಿ ಬಂದು ಸೇರಿರುತ್ತವೆ ಹಾಗಾಗಿ ಉಪವಾಸ. ಜೊತೆಗೆ ಇಂದು ಮಾಡಿದ ಉಪವಾಸದ ಪ್ರಭಾವದಿಂದ ಮಾಡಿದ ಸಕಲ ಪಾಪಗಳೂ ಪರಿಹಾರ ಆಗುತ್ತದೆ.. ಆದ್ದರಿಂದ ಉಪವಾಸ. ಒಂದು ಕೋಟಿ ಜನರಿಗೂ ಹೆಚ್ಚಾದ ನಾವೆಲ್ಲರೂ ಸೇರಿ ಉಪವಾಸ ಮಾಡಿದರೆ ದೇಶದ ಐವತ್ತು ಲಕ್ಷ ಕೇಜಿ ಅಕ್ಕಿ ಉಳಿತಾಯ ಆಗುತ್ತದೆ. ಇನ್ನುಳಿದ ಆಹಾರದ ಉಳಿತಾಯ ಬೇರೆ. ಹಾಗಾಗಿಯೂ ಉಪವಾಸದ challenge ತೊಗೊಳ್ಳೋಣ. ದಿನ ಕಳೆದರೆ ಇಂದ್ರಿಯ ದೇಹ ಮನಸ್ಸು ಇವುಗಳಿಗೆ ವಿಶ್ರಾಂತಿಬೇಕು ಅಂತೆಯೇ ಮಲಗ್ತೇವೆ. ವಾರ ಕಳೆದರೆ, ವಿಶ್ರಾಂತಿಬೇಕು. ಭಾನುವಾರ ಪೂರ್ಣದಿನ ರಜೆ ತೆಗೆದುಕೊಳ್ಳುತ್ತೇವೆ. ಜಡವಾದ ಮಶಿನ್ ಗಳಿಗೆ, ಕಂಪ್ಯುಟರ್ ಗಳಿಗೂ ವಿಶ್ರಾಂತಿ ಬೇಕು. ಹೀ...

*"ಶೂನ್ಯ ಭಾಗ್ಯನ ನೋಡಿ ಸಲಹಯ್ಯ......"*

Image
*"ಶೂನ್ಯ ಭಾಗ್ಯನ ನೋಡಿ ಸಲಹಯ್ಯ......"* ಧರ್ಮ ಹಾಗು ಧರ್ಮ ನಿಯಾಮಕನಾದ ನಿನ್ನನ್ನು ಯಾರು ದೃಢವಾಗಿ ನಂಬಿದಾರೆ ಅವರನ್ನು ರಕ್ಷಿಸುವ ದೋರೆ ನೀನು. ಧರ್ಮ ಹಾಗೂ ಧರ್ಮನಿಯಾಮಕ ನಿನ್ನನ್ನು ಸುಲಭರೀತಿಯಿಂದ ನಂಬುವದು ನನ್ನಿಂದತೂ  ಸಾಧ್ಯವಿಲ್ಲದ ಮಾತು.  ಮಹಾ ಸೌಭಾಗ್ಯವಂತರಿಗೆ ಮಾತ್ರ ಧರ್ಮ ಮತ್ತು ಧರ್ಮನಿಯಾಮಕ ನಿನ್ನಲ್ಲಿ ನಂಬಿಕೆ ಭರವಸೆಗಳು ಬರುತ್ತವೆ. ಮಹಾಸೌಭಾಗ್ಯವಂತರಿಗೆ ಮಾತ್ರ ನೀ ಸಿಗುತ್ತೀಯ. ನಿಮ್ಮಿಬ್ಬರನ್ನು ಯಾರು ಪಡೆದಿದ್ದಾರೆ ಅವರು ಎಲ್ಲವನ್ನೂ ಪಡೆದಿದ್ದಾರೇ ಎಂದೇ ಅರ್ಥ.  ಜಗನ್ನಾಥ ದಾಸರು ತಮ್ಮ ಹಾಡಿಲ್ಲಿ ಹೇಳುತ್ತಾರೆ "ಮಂದಭಾಗ್ಯರಿಗೆ ದೋರಕದು ಇವರ ಮಹಾಸೇವ" ಎಂದು. ಧರ್ಮ ಹಾಗೂ ಧರ್ಮನಿಯಾಮಕ ಶ್ರೀಮನ್ನಾರಾಯಣನಿಗಿಂತಲೂ ತಾರತಮ್ಯದಲ್ಲಿ ಚಿಕ್ಕವರಾದ ಶ್ರೀರಾಘವೇಂದ್ರಸ್ವಾಮಿಗಳ ಸೇವೆಯೇ ಮಂದಭಾಗ್ಯರಾದ ಅಲ್ಪಭಗ್ಯರಾದ ಶೂನ್ಯಭಾಗ್ಯಾರಾದ ಜನರಿಗೆ ದೋರಕುವದಿಲ್ಲ ಎಂದು ಹಳುತ್ತಾರೆ. ಹೀಗಿರುವಗಾವ ಶ್ರೀರಾಯರಗಿಂತಲೂ ಉತ್ತಮೋತ್ತಮರಾದ ಧರ್ಮನಿಯಾಮಕ ಸ್ವಾಮಿಯ ಅಥವಾ ಧರ್ಮದ ಸೇವೆ ಅಲ್ಪಭಾಗ್ಯರಾದ ಇಂದಿನ ಯುವಕರಿಗೆ ಸಿಗುವದು ತುಂಬಾ ಕಷ್ಟದ ಕೆಲಸವೇ. ಧರ್ಮ ಹಾಗೂ ಧರ್ಮನಿಯಾಮಕನ ಸೇವೆ ಇಲ್ಲದಾದಾಗ ಅಪೇಕ್ಷಿತ ಫಲವೂ ದುರ್ಲಭ.  ಧರ್ಮ ಹಾಗೂ ಧರ್ಮನಿಯಾಮಕ ಸ್ವಾಮಿಯ ಸೇವೆ ಆಗದೇ ಅವನ ಪ್ರೀತಿ ಸಂಪಾದಿಸಿಕೊಂಡಿಲ್ಲ ಎಂದಾದರೆ  ನಿಯಮೇನ, ಪ್ರತಿಕಾರ್ಯದಲ್ಲಿಯೂ ಅಡೆತಡೆಗಳು ವಿಘ್ನಗಳು ಅವ್...

*ಭಾವ - ಅಭಾವ - ಪ್ರಭಾವ*

Image
*ಭಾವ - ಅಭಾವ - ಪ್ರಭಾವ* ಭಾವ ಇರುವದು, ಅಭಾವ ಇಲ್ಲದಿರುವದು, ಪ್ರಭಾವ ಪ್ರಭಾವಿತನಾಗಿರುವದು ಈ ಮೂರು ಕಾರಣಗಳಿಂದಲೇ ಒಬ್ಬ ಇನ್ನೊಬ್ಬರಿಗೆ ಸನಿಹನಾಗುವ. ದೂರನೂ ಆಗುವ.  ಭಾವ ಸರಾತ್ಮಕತೆಯ ವಿಚಾರವನ್ನು ಬೋಧಿಸಿದರೆ, ಅಭಾವ ನಕಾರಾತ್ಮಕತೆಯನ್ನೇ ಬೊಧಿಸುವದು. ಭಾವ ಪ್ರೇಮ ಪ್ರೀತಿಯಭಾವವನ್ನು ಬೆಳಿಸಿದರೆ, ಅಭಾವ ದ್ವೇಶ ಮಾತ್ಸರ್ಯ ಅಸಹನೆ ಇವುಗಳನ್ನು ಇಲ್ಲವೆಂದು ಸಾರುತ್ತದೆ.  ಈ ಎರಡು ತಾಹದ ಭಾವ - ಅಭಾವಗಳೇ ಎದುರಿನ ವ್ಯಕ್ತಿಯಲ್ಲಿ ಪ್ರಭಾವ ಬೀರುತ್ತದೆ. ಆಗ ಇವರೀರ್ವರ ಸಂಬಂಧ ಭಾವನೆಗೂ ನಿಲಕದ ಸಂಬಧವಾಗಿ ಇರುತ್ತದೆ.  *ಭಕ್ತ - ಸ್ವಾಮಿ* ಭಕ್ತ ತಾನು ಸ್ವಾಮಿಯಲ್ಲಿ ಕಾಣುವದೇ, ಸ್ವಾಮಿಯಿಂದ  ಬಯಸುವದೇ ಈ ಕ್ರಮದಲ್ಲಿ. ಸ್ವಾಮಿಯಾಗುವವನಲ್ಲಿ ಮೊದಲು ಕಾಣುವದು ಭಾವವನ್ನು. ಇವನು ನನಗೆಷ್ಟು ಪ್ರೀತಿಯನ್ನು ಒದಗಿಸಿದ.. ನನಗಾಗಿ ಎಷ್ಟು ತ್ಯಜಿಸಿದ...   ಹಾಗಾದರೆ ಇವನಲ್ಲಿ ಎಷ್ಟೆಷ್ಟು ಗುಣಗಳು ಇವೆ ಹೀಗೇ ಯೋಚಿಸುತ್ತಾ ಇರುವ.  ಇದೇ ಪ್ರಸಂಗದಲ್ಲಿಯೇ ಅಭಾವವನ್ನೂ ಯೋಚಿಸುವ. ಇವನಲ್ಲಿ ಯಾವು ದೋಷಗಳೂ ಇಲ್ಲ ಅಲ್ವೇ... ಇವನು ಸ್ವಾರ್ಥಿ ಅಲ್ಲ... ಈ ಕ್ರಮದಲ್ಲಿ.  ಹೀಗಿರುವಾಗ ಒಂದೆಡೆ ಗುಣವಂತಿಕೆಯ ಭಾವ, ಮತ್ತೊಂದೆಡೆ ದೋಷಗಳ ಅಭಾವ ಇವೆರಡರಿಂದ ಭಕ್ತನು  ಪ್ರಭಾವಿತನಾದಾಗ "ಸ್ವಾಮಿ ಭೃತ್ಯಭಾವ" ಸಂಬಂಧ ಬಾವನಾ ಲೋಕಮೀರಿದ ಒಂದು ವಿಚಿತ್ರ ಸಂಬಂಧವಾಗಿ ಅಭಿವೃದ್ಧಿಸುತ...

ಇರುವೆ + ಮರ = ಯುವಕ*

Image
* ಇರುವೆ + ಮರ = ಯುವಕ* ಶ್ರೀಮದ್ಭಾಗವತ ಏಕಾದಶ ಸ್ಕಂಧ ತಿಳಿಸಿದಂತೆ ಹಿತಮಾರ್ಗವನ್ನು ತಮ್ಮ ಜೀವನಶೈಲಿಯ ಮುಖಾಂತರ ತಿಳಿಸುವವರನ್ನು ಗುರುಗಳನ್ನಾಗಿ ರೋಲ್ ಮಾಡೆಲ್ ಗಳನ್ನಾಗಿ ಸ್ವೀಕರಿಸಬಹುದು. ಅಂತೆಯೇ ಇತಿಹಾಸ ಪುರಾಣ ಅಲ್ಲಿ ಬರುವ ರಾಜರು ನಮಗೆ ಆದರ್ಶರು ಆಗುತ್ತಾರೆ. ಇಂದಿನ ಈ ಲೇಖದಲ್ಲಿ ಇರುವೆ ಮರಗಳಿಂದ ಏನು ತಿಳಿಯಬಹುದು ಎಂದು ಯೋಚಿಸೋಣ. *ಇರುವೆ...* ನಿತ್ಯ ಕಾಣುತ್ತೇವೆ ಇರುವೆಗಳನ್ನು. ಸಿಹಿ ಇದ್ದಲ್ಲಿ ಇರುತ್ತವೆ. ಖಾರವಿರುವಲ್ಲಿ ಇರುವದಿಲ್ಲ. ಇದೆ ಮೊದಲ‌ಪಾಠ. ಸಕಾರಾತ್ಮಕ ಯೋಚಿಸುವ ಜನರಬಳಿ ನೀನಿರು. ನಕಾರಾತ್ಮಕವಾಗಿ ಯೋಚಿಸುವ ಜನರಿಂದ ದೂರ ಇರುವದು ಅಲ್ಲ. ಅವರಬಳಿ ತೆರಳಲೇ ಬೇಡ ಎಂದು.   ಇರುವೆಗಳು ತುಂಬ ನಾಜೂಕು. ಆದರೆ ತುಂಬ ಪರಿಶ್ರಮಿ, ಅದನ್ನು ಸಂಹಾರ ಮಾಡಲು ಹೋಂಚು ಹಾಕಿದವರು ನೂರುಜನ, ಉಪಾಯಗಳು ನೂರಾರು. ಇಷ್ಟಿದ್ದರೂ ಸೋಲಲ್ಲ. ಎದೆಗೆಡುವದಿಲ್ಲ. ತನ್ನ ಪರಿಶ್ರಮಕ್ಕೆ ಕುಂದು ತಂದುಕೋಳ್ಳುವದಿಲ್ಲ.  ಒಂದೋ ತಾನು ತನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತದೆ ಇಲ್ಲವಾದಲ್ಲಿ ತನ್ನ ಪ್ರಾಣವನ್ನೇ ಕಳೇದುಕೋಳ್ಳುತ್ತದೆ. ಏನಿದ್ದರೂ ಒಬ್ಬನೇ ಓಡಾಡುವೆ ಎಂದು ಯೋಚಿಸುದಿಲ್ಲ. ಅದು ಏನಿದ್ದರೂ ಸಂಘಕ್ಕೆ ಒಗ್ಗಟ್ಟಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತವೆ. ಸಣ್ಣ ಆಹಾರವಿದ್ದರೂ ಎಲ್ಲರೂ ಸೇರಿಯೇ ತಂದು ತಿನ್ನುತ್ತವೆ. ಹೀಗೆ ಒಂದು ಇರುವೆಗಳಲ್ಲಿ ನೂರಾರು ಗುಣಗಳು ಇವೆ.  *ಮರ....* ...

*ಇದು ಏನಾಶ್ಚರ್ಯವೋ ..... ?*

Image
*ಇದು ಏನಾಶ್ಚರ್ಯವೋ ..... ?* ಇಂದು ಅವತರಿಸಿದ ನಮ್ಮ ನಿಮ್ಮಲ್ಲರ ಹೆದ್ದೊರೆಯಾದ ಶ್ರೀಹನುಮಂತದೇವರು. ಮಾಡಿದ ಒಂದೊಂದು ಕೆಲಸವೂ ಅತ್ಯಾಶ್ಚರ್ಯತಮವಾದದ್ದೆ. ಒಂದೊಂದು ಕಥೆಯೂ *ಸ್ಮೃತಿಕೀರ್ತನಪ್ರಣತಿಭಿರ್ವಿಮುಕ್ತಯೇ* ಎಂದು ಹೇಳಿದಂತೆ ಪ್ರತೀ ಮಹಿಮೆಯೂ ಮುಕ್ತಿದಾಯಕವಾದದ್ದೇ. *ಸೂರ್ಯನ ಸನಿಹ ನೆಗದ ಹನುಮ* ಅವತಾರ ಮಾಡಿದ ಹನುಮನಿಗೆ ಆಗ ತಾನೆ ಉದಯಿಸುವ ಸೂರ್ಯ ಕಂಡ. ಸೂರ್ಯ ಕಾಣಿಸಿದ ಕ್ಷಣಕ್ಕೇನೆ ಹನುಮಂತ ಕಾಣಿಸುತ್ತಿಲ್ಲ. ಯಾಕೆ ಎಂದು ಸುತ್ತಮುತ್ತ ನೋಡಿದರೆ ಹನುಂಮತ ಸೂರ್ಯಾಂತರ್ಯಾಮಿ ನಾರಾಯಣನಿಂದ *ಮಹಾವ್ಯಾಕರಣ* ಪಾಠಕ್ಕಾಗಿ ಓಡಿಹೋಗಿದ್ದ. ಇದೊಂದು ಆಶ್ಚರ್ಯ.  ಸಮುದ್ರೋಲ್ಲಂಘನ  ಮಾಡಿದ. ಇಂದಿಗೂ ಯಾರಿಂದಲೂ  ಅಸಾಧ್ಯವಾದ ಕೆಲಸ. ಆದರೆ ಹನುಂತದೇವರ ವಿಷಯದಲ್ಲಿ ಆಶ್ಚರ್ಯಪಡುವಂತಹದ್ದೇನಲ್ಲ. ನೋಡುಗರ ನಮ್ಮ ಕಣ್ಣಿಗೆ ಮಹದಾಶ್ಚರ್ಯ ಇದರಲ್ಲಿ ಸಂಶಯವೂ ಇಲ್ಲ.  *ಉದಧಿಯ ದಾಟಿದ ಹನುಮಂತ ....* ವಾಯುದೇವರ ಅವತಾರಿಗಳಾದ ಹನುಂಮತದೇವರು  ಪಂಪಾಕ್ಷೇತ್ರದಿಂದ ದಕ್ಷಿಣದ ಲಂಕೆಗೆ ಸೀತೆಯನ್ನು ಹುಡುಕ್ಕುತ್ತಾ ಹೊರಟರು. ರಾಮೇಶ್ವರದಿಂದ   ಶತಯೋಜನ ದೂರದ ಲಂಕೆಗೆ ಒಂದೇ ನೆಗತದಲ್ಲಿ‌ಹಾರಿದರು.  ಮಾರ್ಗ ಮಧ್ಯದಿ ಬಂದ ಅನೇಕ ವಿಘ್ನಗಳನ್ನೂ ಎದರಿಸಿದರು, ಗೆದ್ದರು.  ಅಶೋಕವನದಲ್ಲಿ  ಸೀತೆಯನ್ನು ಕಂಡು, ಸೀತೆಗೆ ಉಂಗುರ ಕೊಟ್ಟು, ಸೀತೆ ಕೊಟ್ಟ ಚೂಡಾಮಣಿಯನ...

*ಕಸಗುಡಿಸುವಾಗ ಮುಂದೆ ಮುಂದೆ ಹೋಗು, ಒರೆಸುವಾಗ ಹಿಂದೆ ಹಿಂದೆ ಬಾ...*

Image
*ಕಸಗುಡಿಸುವಾಗ ಮುಂದೆ ಮುಂದೆ ಹೋಗು, ಒರೆಸುವಾಗ ಹಿಂದೆ ಹಿಂದೆ ಬಾ...* "ಕಸಗುಡಿಸುವಾಗ ಮುಂದೆ ಮುಂದೆ ಹೋಗು, ಒರೆಸುವಾಗ ಹಿಂದೆ ಹಿಂದೆ ಬಾ.." ಇದು ಕನ್ನಡದ ಒಂದು ನಾಣ್ಣುಡಿ. ಕಸಗುಡಿಸುವದರಿಂದ  ಮನೆ ಮನ ಸ್ವಚ್ಛವಾಗುವದು ಆಗಿದ್ದರೆ  ಮುಂದೆ ಮುಂದೆ ಹೋಗುತ್ತಾ ಕಸಗುಡಿಸು. ಇರುವ ಕಸ ಜಿಡ್ಡಾಗಿ ಕುಳಿತಾಗ ಒರೆಸುವ ಪ್ರಸಂಗ ಬಂದರೆ ಒರೆಸುತ್ತಾ  ಹಿಂದೆ ಹಿಂದೆ ಬಾ. ಇದು ಈ ನೀತಿಯ ಒಂದು ವಿಚಾರ.  *ಇಂದಿನ ಸ್ಥಿತಿ...* ಸನ್ಮಾನ್ಯ ಮೋದಿಜಿ ಅವರು  *ಸ್ವಚ್ಛ ಭಾರತ ಅಭಿಯಾನ* ಆರಂಭಿಸಿದಾಗ ಕಸಗೂಡಿಸಿದರು, ಕಸಗೂಡಿಸಲು ಹೇಳಿದರು. ಏಕೆಂದರೆ ಆ ಕಸ ಸಾಮಾನ್ಯ ಕಸವಾಗಿತ್ತು. ಆದರೆ ಇಂದು ನಮ್ಮ ನಮ್ಮ ಊರುಗಳಿಗೇ ಅಪಾಯ ಎದುರಾದಾಗ "ಕರೋನಾ ಮಹಾಮಾರಿ" ಯನ್ನು  ಜಿಡ್ಡು ಸಹಿತ ಒರೆಸಬೇಕಾದರೆ ವಿದೇಶದಿಂದ ದೇಶ, ದೇಶದಿಂದ ಊರು, ಊರಿನಿಂದೆ ಏರಿಯಾ, ಏರಿಯಾದಿಂದ ಮನೆ, ಮನೆಯಲ್ಲಿಯೂ ಪರಸ್ಪರ ದೂರ ಹೀಗೆ ಹಿಂದೆ ಹಿಂದೆ ಸರಿಯುತ್ತಾ ಜಿಡ್ಡು ಒರೆಸಬೇಕು ಎಂದಹ ಅದೇ ಮೋದಿಜೀಯವರೇ ವಿಶ್ವಕ್ಕೆ ತಿಳುಹಿಸಿಕೊಟ್ಟರು. ಇದುವೇ "ಕರೋನಾ ಮಹಾಮಾರಿ"ಯನ್ನು ಒರಿಸಿ ಹಾಕಲು ಸೂಕ್ತ ಪರಿಹಾರ. ಆ ನೀತಿಗೇ lock down ಎಂದು ಮತ್ತೊಂದು ಹೆಸರು.  *ಬದುಕಲು ಕಟ್ಟಿಹಾಕಿಕೊಳ್ಳುವದು ಅನಿವಾರ್ಯ...* ಅಂದು ಇಂದು ಎಂದಾದರೂ ಬದುಕುವ ಬಾಳುವ ಅಪೆಕ್ಷೆ ಇದ್ದರೆ ತನ್ನನ್ನು ತಾನು ಕಟ್ಟಿಹಾಕಿಕೊಳ್ಳಲೇಬೇಕು. ತನ್ನನ್ನು ತ...

*ಸರ್ವರೋಗ ಭಯಾದಿ ವಿನಾಶಾರ್ಥಂ ದೀಪಜ್ಯೋತಿರ್ನಮೋಸ್ತು ತೇ*

Image
*ಸರ್ವರೋಗ ಭಯಾದಿ ವಿನಾಶಾರ್ಥಂ ದೀಪಜ್ಯೋತಿರ್ನಮೋಸ್ತು ತೇ* ಪ್ರಾತಃಕಾಲ, ಸಾಯಂಕಾಲ, ರಾತ್ರಿ ಈ ಮೂರೂ ಕಾಲದಲ್ಲಿಯೂ ದೇವರೆದುರಿಗೆ  ದೀಪ ಹಚ್ಚುವದು ಅನೂಚಾನ‌ ಪದ್ಧತಿ.  ಕತ್ತಲು ಮತ್ತು  ಅಜ್ಙಾನ ಇವುಗಳನಾಶನಕ್ಕಾಗಿ ದೀಪ. ಅನೇಕತರಹದ ಬಾಧೆಗಳ ರೋಗಗಳ ಉಪಶಮನಕ್ಕಾಗಿಯೂ ದೀಪ ಹಚ್ಚುವದನ್ನು ಶಾಸ್ತ್ರದಲ್ಲಿ ನಾವು ಕಾಣುತ್ತೇವೆ. ಅಂತೆಯೇ ಸಾಯಂಕಾಲ ದೀಪ ಹಚ್ಚಿದೊಡನೆ  ಹಿರಿಯರು *ಪೀಡೆಗಳು ಉಪಶಮನ ಆಗುತ್ತದೆ* ಎಂದು ಆಗಾಗ  ಮಾತಾಡಿದ್ದನ್ನು ಸ್ವಯಂ ನಾನು ಕೇಳಿದ್ದೇನೆ.  *ಕೊರೋನಾ -  ದೀಪ - ರಾತ್ರಿ* ರಾತ್ರಿ ಹೊತ್ತಿನಲ್ಲಿ ನಮ್ಮನ್ನು ಕಾಪಾಡುವ ರಕ್ಷಿಸುವ ಸೂರ್ಯ ಚಂದ್ರ ಮೊದಲಾದ ನವಗ್ರಹ ಮತ್ತು ನಕ್ಷತ್ರ ಇತ್ಯಾದಿ ದೇವತೆಗಳ ಆರಾಧನೆಗೋಸ್ಕರ ದೀಪ ಹಚ್ಚುವದು. "ನಿಮ್ಮ ಆರಾಧನೆಯಿಂದ ಆಕಾಶ ಗಾಳಿ ಇವಗಳಿಂದಾಗುವ ಯಾವ ಪೀಡೆಯೂ ನಮಗಾಗದಿರಲಿ" ಎಂದೇ ಶಾಸ್ತ್ರದ ಉದ್ಯೇಶ್ಯ. ಇಂದು *ಕೊರೋನಾ* ಎಂಬ ಪಿಡಗು ಗಾಳಿ ಆಕಾಶ ( ಸ್ಪೇಸ್) ಸಂಪರ್ಕ ಇವಗಳಿಂದ ಹರುಡಿತ್ತಿದೆ. ಈ ಮಹಾಮಾರಿಯನ್ನು ತಡೆಗಟ್ಟುವದಕ್ಕಾಗಿ, ತಡೆಗಟ್ಟುವ ಶಕ್ತಿಯನ್ನು ಪ್ರಚೋದಿಸುವದಕ್ಕಾಗಿ, ತಡೆಗಟ್ಟುವ ಕೌಶಲ ಅಭಿವೃದ್ಧಿಗೋಸ್ಕರ  *ದೀಪ ಬೆಳಗಿಸುವ* ಮುಖಾಂತರ ದೇವತೆಗಳಿಗೆ ಪ್ರಾರ್ಥಿಸುವದು.  *ದೀಪ - ಮೋದೀಜಿ* "ಸಂಘೇ ಶಕ್ತಿಃ ಕಲೌಯುಗೇ" ಕಲಿಯುಗದಲ್ಲಿ ಸಂಘದಲ್ಲಿಯೇ ಶಕ್ತಿ ಇದೆ ಇದು ಆರ್ಯರ ವಿಚಾರ. ...

*ಶ್ರೀರಾಮನವಮಿಯ ಶ್ರೀರಾಮಚಂದ್ರ.*

Image
*ಶ್ರೀರಾಮನವಮಿಯ ಶ್ರೀರಾಮಚಂದ್ರ.* ಶ್ರೀರಾಮಚಂದ್ರ ಅನಂತಗುಣಪೂರ್ಣ. ಆ ಅನಂತಗುಣಗಳಲ್ಲಿ ಮಾನವು ಯಾವ ಗುಣಗಳನ್ನು ರೂಢಿಸಿಕೊಳ್ಳಬಹುದೋ ಅಂತಹ ಅನೇಕ ಗುಣಗಳನ್ನು  ರಾಮಯಣ ತಿಳಿಸುತ್ತದೆ.  ಶ್ರೀರಾಮಚಂದ್ರನ  ಅನೇಕ ಗುಣಗಳು ಮಾನವ ಸಂಕುಲದ ಉನ್ನತಿಗೂ ಕಾರಣಾವಾಗಿವೆ. *ನಾಲ್ಕು ಜನ ನಮ್ಮನ್ನು ಹೇಗೆ ಗುರುತಿಸಬೇಕು*  ಎಂಬ ನಮ್ಮ ನಿರ್ಧಾರಕ್ಕೆ ಅನುಗುಣವಾಗಿ ನಮ್ಮ ಗುಣವಂತಿಕೆಯನ್ನು ನಾವು ಅಭಿವ್ಯಕ್ತಿಗೊಳಿಸುತ್ತೇವೆ. ನಮ್ಮಲ್ಲಿ ಇರುವ ಆ ಎಲ್ಲ ಗುಣಗಳೂ ಶ್ರೀ ರಾಮನ ಗುಣಗಳ ಪ್ರತಿಬಂಬ ಗುಣಗಳೇ. ನಮ್ಮಲ್ಲಿರುವ ಗುಣಗಳಿಗೆ ಬಿಂಬವಾಗಿವೆ ಶ್ರೀರಾಮನ ಗುಣಗಳು. ಅವುಗಳಲ್ಲಿ ಒಂದೆರಡು ಗುಣಗಳನ್ನು ಮೆಲಕು ಹಾಕುವ ಪುಟ್ಟ ಪ್ರಯತ್ನ. ಗುಣವಂತರಿಗೆ ಗುಣಗಳು ತುಂಬ ಇಷ್ಟವಾಗುತ್ತವೆ.  *ಪ್ರಶಾಂತಾತ್ಮಾ*  ಶ್ರೀರಾಮನ ಮನಸ್ಸು ತುಂಬ ಶಾಂತವಾಗಿತ್ತು. ಮನಸ್ಸು ಒಂದು ಸಾಗರ. ಶ್ರೀರಾಮನ ಮನಸ್ಸಿನಲ್ಲಿ ಕ್ಷುಬ್ಧತೆ ಇಲ್ಲ. "ನಿನಗೆ ನಾಳೇ ಪಟ್ಟ ಎಂದರೂ ಸಮಾಧಾನದಿಂದ ಇದ್ದರಾಮ ಇವತ್ತೇ ವನಕ್ಕೆ ತೆರಳಬೇಕು ಎಂದಾಗಲೂ ಅಷ್ಟೇ ಪ್ರಶಾಂತ." ಇದು ನಮಗೆ ತುಂಬ ಆದರ್ಶಗುಣ.  ಶಾಂತತೆ ನಮಗೆ ಬೇಕು ನಮ್ಮ ಅಪೇಕ್ಷೆಯೂ ಇದೆ. ಶಾಂತತೆ ಎಲ್ಲಿ ಸಿಗತ್ತೆ ತಿಳದಿಲ್ಲ. ನಾವು ಭಾವಿಸಿರುವದು ಶಾಂತತೆ ನಮ್ಮಿಂದ ಹೊರಗೆ ಸಿಗುತ್ತದೆ ಎಂದು. ಅಂತೆಯೇ ಹೊರಗಿನ ನೂರಾರು ಜನರನ್ನು ಪದಾರ್ಥಗಳನ್ನು ಹಂಬಲಿಸುತ್ತೇವೆ.  "ರ...

*ಇಂದು ಮೂರ್ಖರ ದಿನಾಚರಣೆ*

Image
*ಇಂದು ಮೂರ್ಖರ ದಿನಾಚರಣೆ* ಏನಿದೆಯೋ ಅದನ್ನು ಬಿಟ್ಟು ಇನ್ನೇನೋ ತಿಳಿದುಕೊಳ್ಳುವದು  ಮೂರ್ಖರ ಮೊದಲ ಲಕ್ಷಣ.. ಮೂರ್ಖರು ಯಾರು... ???  ಯಾರಿದ್ದಾರೆಯೋ ಇಲ್ಲೋ ತಿಳಿಯದು, ನಾನಂತೂ ಮಹಾ ಮೂರ್ಖನೆ ಸರಿ.  ಇದರಲ್ಲಿ ನನಗಂತೂ ಸಂಶಯವೇ ಇಲ್ಲ. ನಾನು ಯಾಕೆ ಮೂರ್ಖ.... ?? ೧)ಮಾಡಿದ್ದು ದೇವರು. ಆದರೂ  ನಾನು ಮಾಡಿದೆ ಎಂದು ಹೆಳಿಕೊಳ್ಳುತ್ತೇನೆ.  ಹೀಗೆ ಹೇಳುವದೇ ಮೂರ್ಖರ ಎರಡನೇ ಲಕ್ಷಣ, ೨) ಏನೆಲ್ಲ ಆಗಿದೆ ಅದೆಲ್ಲವೂ ದೇವರೇ ಮಾಡಿ ಮಾಡಿಸಿದ್ದಾನೆ, ಹಾಗಿದ್ದರೂ ನಾನೇ ಮಾಡಿದ್ದೇನೆ  ಎಂದೇ ಬೊಗುಳುತ್ತೇನೆ ಆದ್ದರಿಂದಲೇ ನಾನು ಶತ ಮೂರ್ಖ.  "ವಿವೇಕಭರಿತ  ಕಾರ್ಯಗಳನ್ನು ಬಿಟ್ಟು, ಯೋಚನಾಪೂರ್ಣ ವಿಚಾರ ಹವ್ಯಾಸಗಳನ್ನು ಜರಿದು, ಕ್ಷುಲ್ಲಕ ಕ್ಷುದ್ರ ವಿಚಾರಗಳನ್ನು ಕಾರ್ಯಗಳನ್ನು ಅಪ್ಪಿಕೊಳ್ಳುವ ನನಗೆ ಈ ಸಮಾಜ ಮೂರ್ಖ ಅನ್ನದೆ ಇನ್ನೇನು ಅನ್ನಬೇಕು....." *ನಾನು ಮೂರ್ಖನಲ್ಲ ಎಂದೇ ಗುರುತಿಸಬೇಕಾದರೆ ಏನು ಮಾಡುವದು.... ????* ನಾನು ಎನ್ನುವದನ್ನು ಕಳೆದುಕೊಂಡಾಗ ಅಥವಾ ಬಿಟ್ಟಾಗ ನಾನು ಬುದ್ಧಿವಂತನು ಎಂದಾಗುವೆ. ಅಂತೆಯೇ "ನಾನು ಹೋದರೆ ಹೋದೇನು" ಎಂದು ಉದ್ಗಾರ ತೆಗೆದರು ಕನಕದಾಸರು. ಯೋಚನಾಭರಿತ ಉಚ್ಚವಿಚಾರಗಳನ್ನು ಸುದೀರ್ಘಕಾಲದಲ್ಲಿಯೂ ಹಿತವೇ. ಈಗ ಕಷ್ಟ ಅನಿಸಬಹುದು ಮುಂದೆ ಒಳಿತೇ  ಆಗುವ ಕಾರ್ಯಗಳನ್ನು ಅರಿಸುವವ ಬುದ್ಧಿವಂತ.  ನಾನು ನಾ...