*ಭಾವ - ಅಭಾವ - ಪ್ರಭಾವ*

*ಭಾವ - ಅಭಾವ - ಪ್ರಭಾವ*

ಭಾವ ಇರುವದು, ಅಭಾವ ಇಲ್ಲದಿರುವದು, ಪ್ರಭಾವ ಪ್ರಭಾವಿತನಾಗಿರುವದು ಈ ಮೂರು ಕಾರಣಗಳಿಂದಲೇ ಒಬ್ಬ ಇನ್ನೊಬ್ಬರಿಗೆ ಸನಿಹನಾಗುವ. ದೂರನೂ ಆಗುವ. 

ಭಾವ ಸರಾತ್ಮಕತೆಯ ವಿಚಾರವನ್ನು ಬೋಧಿಸಿದರೆ, ಅಭಾವ ನಕಾರಾತ್ಮಕತೆಯನ್ನೇ ಬೊಧಿಸುವದು. ಭಾವ ಪ್ರೇಮ ಪ್ರೀತಿಯಭಾವವನ್ನು ಬೆಳಿಸಿದರೆ, ಅಭಾವ ದ್ವೇಶ ಮಾತ್ಸರ್ಯ ಅಸಹನೆ ಇವುಗಳನ್ನು ಇಲ್ಲವೆಂದು ಸಾರುತ್ತದೆ.  ಈ ಎರಡು ತಾಹದ ಭಾವ - ಅಭಾವಗಳೇ ಎದುರಿನ ವ್ಯಕ್ತಿಯಲ್ಲಿ ಪ್ರಭಾವ ಬೀರುತ್ತದೆ. ಆಗ ಇವರೀರ್ವರ ಸಂಬಂಧ ಭಾವನೆಗೂ ನಿಲಕದ ಸಂಬಧವಾಗಿ ಇರುತ್ತದೆ. 

*ಭಕ್ತ - ಸ್ವಾಮಿ*

ಭಕ್ತ ತಾನು ಸ್ವಾಮಿಯಲ್ಲಿ ಕಾಣುವದೇ, ಸ್ವಾಮಿಯಿಂದ  ಬಯಸುವದೇ ಈ ಕ್ರಮದಲ್ಲಿ. ಸ್ವಾಮಿಯಾಗುವವನಲ್ಲಿ ಮೊದಲು ಕಾಣುವದು ಭಾವವನ್ನು. ಇವನು ನನಗೆಷ್ಟು ಪ್ರೀತಿಯನ್ನು ಒದಗಿಸಿದ.. ನನಗಾಗಿ ಎಷ್ಟು ತ್ಯಜಿಸಿದ...   ಹಾಗಾದರೆ ಇವನಲ್ಲಿ ಎಷ್ಟೆಷ್ಟು ಗುಣಗಳು ಇವೆ ಹೀಗೇ ಯೋಚಿಸುತ್ತಾ ಇರುವ. 

ಇದೇ ಪ್ರಸಂಗದಲ್ಲಿಯೇ ಅಭಾವವನ್ನೂ ಯೋಚಿಸುವ. ಇವನಲ್ಲಿ ಯಾವು ದೋಷಗಳೂ ಇಲ್ಲ ಅಲ್ವೇ... ಇವನು ಸ್ವಾರ್ಥಿ ಅಲ್ಲ... ಈ ಕ್ರಮದಲ್ಲಿ.  ಹೀಗಿರುವಾಗ ಒಂದೆಡೆ ಗುಣವಂತಿಕೆಯ ಭಾವ, ಮತ್ತೊಂದೆಡೆ ದೋಷಗಳ ಅಭಾವ ಇವೆರಡರಿಂದ ಭಕ್ತನು  ಪ್ರಭಾವಿತನಾದಾಗ "ಸ್ವಾಮಿ ಭೃತ್ಯಭಾವ" ಸಂಬಂಧ ಬಾವನಾ ಲೋಕಮೀರಿದ ಒಂದು ವಿಚಿತ್ರ ಸಂಬಂಧವಾಗಿ ಅಭಿವೃದ್ಧಿಸುತ್ತದೆ. ಈ ಸಂಬಂಧ ಕೆಡಿಸಲು ಯಾರಿಂದಲೂ ಆಗದು. 

*ಈ ವಿಚಾರವೇ ಸ್ವಲ್ಪ ತಿರುವು ಆದರೆ ....*

"ಈ ವಿಚಾರವೇ ಸ್ವಲ್ಪ ತಿರುವು ಆದರೆ ...". ಯಾರಪ್ಪ ಬಂದರೂ ಸಂಬಂಧ ಎಷ್ಟೇ ದೃಢವಾಗಿದ್ದರೂ ಉಳಿಸಲಾಗುವದಿಲ್ಲ. 

ದೋಷಗಳ "ಭಾವ". ನಿರಂತರ ದೋಷಗಳನ್ನೇ ಹುಡಕಲು ಆರಂಭಿಸಿದಾಗ, "ಗುಣಗಳ ಅಭಾವ" ಯಾವಗುಣಗಳೂ ಇಲ್ಲ  ಎಂಬ ವಿಚಾರ ತಲೆ ತೂಗಿದಾಗ, ಇವೆರಡರ ಪ್ರಭಾವ ಊಹೆಗೂ ನಿಲುಕದ ಹಾನಿಯನ್ನೇ ಒದಗಿಸಿಬಿಟ್ಟಿರುತ್ತದೆ. 

*ಪ್ರಭಾವಗಳಿಗೆ ಒಳಗಾಗುವವರು ನಾವು...*

ನಮ್ಮ ಸಹಜ ಸ್ವಭಾವ ಪ್ರಭಾವಿತರು ಆಗುವದು. ಪ್ರಭಾವಕ್ಕೇ ಒಳಗಾಗುವವರು. ಆದರೆ ರಾಮನ ನಿಂದೆಯನ್ನು ಕೇಳುವದರಲ್ಲಿಯ ಪ್ರಭಾವ ಇನ್ನೂ ನೂರು ಜನರ ನಿಂದೆಯನ್ನೂ   ಕೇಳಿಸುವಂತೆ ಮಾಡುತ್ತದೆ. ರಾಮನ ಗುಣಗಳ ತಿಯುವದರ, ರಾಮನಲ್ಲಿ ದೋಷಗಳನ್ನೇ ಕಾಣದ ವಿಚಾರಗಳಿಂದ ರಾಮನ ಪ್ರಭಾವವಾದರೆ, ಕಣ್ಣಿಗೆ ಕಾಣಿಸುವ ಯಾವ ವ್ಯಕ್ತಿಯಲ್ಲಿಯೂ ಗುಣಗಳೇ ಕಾಣಿಸುತ್ತವೆ, ದೋಷಗಳು ಒಟ್ಟಾರೆಯಾಗಿ ಕಾಣಿಸುವದೇ ಇಲ್ಲ.  "ಭಾವ ಅಭಾವಗಳಿಂದ ಪ್ರಭಾವಿತರಾಗಬೇಕೋ ಅಥವಾ ಅಭಾವ - ಭಾವಗಳಿಂದ ಪ್ರಭಾವಿತರಾಗಬೇಕೋ" ಇಂದು ವಿಚಾರಿಸುವ ಸಮಯವಂತೂ ಬಂದಿದೆ. 

"ಗುಣಗಳ ಅಭಾವ - ದೋಷಗಳ ಭಾವ" ಇವುಗಳಿಂದೇ ಹೆಚ್ಚು ಪ್ರಭಾವಿತರು ನಾವು ಆದ್ದರಿಂದ ದೇವರೊಟ್ಟಿಗಿನ ಸಂಬಂಧವೂ ಅಷ್ಟಯ ದೃಢವಾಗಿ ಉಳಿದಿಲ್ಲ. ದೇವರೊಟ್ಟಿಗೇ ಇಲ್ಲದಿರುವಾಗ ಬೇರೆಯವರೊಟ್ಟಿಗೆ ಸಂಬಂಧವೂ ಇರಲ್ಲ ಎಂದು ಹೇಳವದು‌ಮತ್ತೆ ಉಚಿತವೆನಿಸದು. 

ಈ ತರಹದ ಪ್ರಭಾವಗಳೇ ಎನಗೆ ಆದದ್ದರಿಂದ *ನನಗೆ ನನ್ನಲ್ಲಿಯ ಗುಣಗಳ ಜ್ಙಾನವನ್ನು‌ಮಾಡಿಕೊಳ್ಳುವ, ದೋಷಗಳನ್ನು ಕಾಣದ ಗೋಜಿಗೇ ಹೋಗಿಲ್ಲ.* ನನಗೆ ನನ್ನ ಜೊತೆಗೇ ಸರಿಯಾದ ಸಂಬಂಧವೇ ಇಲ್ಲದಂತೆ ನಾನಿಗಿದ್ದೇನೆ...... 

*ಸಕಾರಾತ್ಮಕವಾಗಿಯೇ ಯೋಚಿಸೋಣ.... ದೋಷಗಳನ್ನು ಕಣ್ಣೆತ್ತಿಯೂ ನೋಡುವದು ಬೇಡ.*  ಎಲ್ಲರ ಜೊತೆಗೂ ದೃಢವಾದ ಸಂಬಂಧದ ಅಭಿವೃದ್ಧಿ ತಾನಾಗಿಯೇ ಆಗುತ್ತದೆ.... 

*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*