ಇರುವೆ + ಮರ = ಯುವಕ*
*ಇರುವೆ + ಮರ = ಯುವಕ*
ಶ್ರೀಮದ್ಭಾಗವತ ಏಕಾದಶ ಸ್ಕಂಧ ತಿಳಿಸಿದಂತೆ ಹಿತಮಾರ್ಗವನ್ನು ತಮ್ಮ ಜೀವನಶೈಲಿಯ ಮುಖಾಂತರ ತಿಳಿಸುವವರನ್ನು ಗುರುಗಳನ್ನಾಗಿ ರೋಲ್ ಮಾಡೆಲ್ ಗಳನ್ನಾಗಿ ಸ್ವೀಕರಿಸಬಹುದು. ಅಂತೆಯೇ ಇತಿಹಾಸ ಪುರಾಣ ಅಲ್ಲಿ ಬರುವ ರಾಜರು ನಮಗೆ ಆದರ್ಶರು ಆಗುತ್ತಾರೆ. ಇಂದಿನ ಈ ಲೇಖದಲ್ಲಿ ಇರುವೆ ಮರಗಳಿಂದ ಏನು ತಿಳಿಯಬಹುದು ಎಂದು ಯೋಚಿಸೋಣ.
*ಇರುವೆ...*
ನಿತ್ಯ ಕಾಣುತ್ತೇವೆ ಇರುವೆಗಳನ್ನು. ಸಿಹಿ ಇದ್ದಲ್ಲಿ ಇರುತ್ತವೆ. ಖಾರವಿರುವಲ್ಲಿ ಇರುವದಿಲ್ಲ. ಇದೆ ಮೊದಲಪಾಠ. ಸಕಾರಾತ್ಮಕ ಯೋಚಿಸುವ ಜನರಬಳಿ ನೀನಿರು. ನಕಾರಾತ್ಮಕವಾಗಿ ಯೋಚಿಸುವ ಜನರಿಂದ ದೂರ ಇರುವದು ಅಲ್ಲ. ಅವರಬಳಿ ತೆರಳಲೇ ಬೇಡ ಎಂದು.
ಇರುವೆಗಳು ತುಂಬ ನಾಜೂಕು. ಆದರೆ ತುಂಬ ಪರಿಶ್ರಮಿ, ಅದನ್ನು ಸಂಹಾರ ಮಾಡಲು ಹೋಂಚು ಹಾಕಿದವರು ನೂರುಜನ, ಉಪಾಯಗಳು ನೂರಾರು. ಇಷ್ಟಿದ್ದರೂ ಸೋಲಲ್ಲ. ಎದೆಗೆಡುವದಿಲ್ಲ. ತನ್ನ ಪರಿಶ್ರಮಕ್ಕೆ ಕುಂದು ತಂದುಕೋಳ್ಳುವದಿಲ್ಲ. ಒಂದೋ ತಾನು ತನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತದೆ ಇಲ್ಲವಾದಲ್ಲಿ ತನ್ನ ಪ್ರಾಣವನ್ನೇ ಕಳೇದುಕೋಳ್ಳುತ್ತದೆ. ಏನಿದ್ದರೂ ಒಬ್ಬನೇ ಓಡಾಡುವೆ ಎಂದು ಯೋಚಿಸುದಿಲ್ಲ. ಅದು ಏನಿದ್ದರೂ ಸಂಘಕ್ಕೆ ಒಗ್ಗಟ್ಟಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತವೆ. ಸಣ್ಣ ಆಹಾರವಿದ್ದರೂ ಎಲ್ಲರೂ ಸೇರಿಯೇ ತಂದು ತಿನ್ನುತ್ತವೆ. ಹೀಗೆ ಒಂದು ಇರುವೆಗಳಲ್ಲಿ ನೂರಾರು ಗುಣಗಳು ಇವೆ.
*ಮರ....*
ಮರ ತುಂಬ ದೃಢ. ಬಹಳ ಬಿರಿಸು. ಘಾಳಿ ಮಳಿ ಏನೇಬಂದರೂ ಚಂಚಲವಾಗುವದಿಲ್ಲ. ಬಾಗಿಸುವವರು ಬಹಳೇ, ಬಾಗುವದಿಲ್ಲ. ಸಾಯಿಸುವವರು ತುಂಬ, ಆದರೆ ಬೇಗನೆ ಸಾಯುವದಿಲ್ಲ. ಬಿಸಲು ಮಳೆ ಛಳಿ ಏನೇ ಇದ್ದರೂ ಅದರ ಗುಣಕ್ಕೆ ಹೋಂದಿಕೋಂಡು ಆ ವ್ಯತಿರಿಕ್ತ ಪರಿಣಾಮಗಳನ್ನು ತನ್ನ ಬೆಳವಣೆಗೆಗೇ ಬಳಿಸಿಕೋಳ್ಳುತ್ತವೆ ಮರಗಳು. ನೂರಾರು ಜನಕ್ಕೆ ಆಶ್ರಯ. ತನ್ನ ಎಲೆ ಟೊಂಗೆ, ಹಣ್ಣು ಹೂ, ನೆರಳು, ಕಾಂಡ ಎಲ್ಲವೂ ಇನ್ನೊಬ್ಬರಿಗೇ. ತನ್ನ ಕಡಿಯುವವರಿಗೂ ನೆರಳು ಕೊಡತ್ತೆ ಇದು ಮರದ ಔದಾರ್ಯ. ಹೀಗೆ ಮರದಲ್ಲಿಯೂ ನೂರಾರುಗುಣಗಳು ಇವೆ.
ಈ ಇರುವೇ ಹಾಗೂ ಮರಗಳ ನೂರಾರು ಗುಣಗಳನ್ನು ಇಂದಿನ ಯುವಕರಾದ ನಾವೆಲ್ಲರೂ ರೂಢಿಸಿಕೋಂಡರೇ ನಮ್ಮ ಜೀವನದಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗುತ್ತೇವೆ. ಸಫಲಿಗಳು ಆಗುತ್ತೇವೆ.
ಕರಿ ಇರುವೆ ಕಚ್ಚುವದಿಲ್ಲ. ಏಕಾಕಿ ಇರುವದಿಲ್ಲ. ಕಂಡ ಆಹಾರವನ್ನು ತಿನ್ನುದಿಲ್ಲ. ತನಗೆ ಏನುಬೇಕೋ ಅದನ್ನು ಅರಿಸಿ ಹೋಗುತ್ತದೆ. ಆ ಇರುವೆ ತುಂಬ ನಾಜೂಕು. ಹಾಗೆ ಯುವಕ ಇನ್ನೋಬ್ಬರಿಗೆ ಪೀಡಿಸದೆ, ಪರರನ್ನು ತನ್ನೊಳಗೆ ಸೇರಿಸದೆ, ತನ್ನವರದೇ ಗುಂಪುಕಟ್ಟಿ. ತನ್ನವರು ನಡೆದ ದಾರಿಯಲ್ಲೇ ಆಚೆ ಈಚೇ ಹೋಗದೇ ಸಾಗಿ. ಕಂಡ ಆಹಾರವನ್ನು ತಿನ್ನದೇ ತನಗೆ ಯಾವದು ಸೂಕ್ತ, ಯಾವ ಆಹಾರ ಹಿತ, ಎದು ತಿಳಿದು, ತನ್ನವರು ಸೇವಿಸುವ ಆಹಾರವನ್ನೇ ಸ್ವೀಕರಿಸಲು ನಿರಂತರ ಶ್ರಮಿಸಿ. ತನ್ನ ಕಾರ್ಯದಲ್ಲಿ ಯಶಸ್ವಿಯಾದರೆ ಯುವಕ ತಾ ಪರಿಪೂರ್ಣ ಯಶಸ್ವೀ.
ಮರದಂತೆ ಬಿರುಸುತನವೂ ಬೇಕು. ಅಧಾರ್ಮಿಕತೆಯ ಹಾವಳಿ ತುಂಬ. ಛಳಿ ಘಾಳಿ ಬಿಸಿಲನ್ನು ಮರ ತಾ ಎದುರಿಸಿ ನಿಂತು, ಆ ವ್ಯತಿರಿಕ್ತ ಅವಸ್ಥೆಗಳನ್ನೂ ತನಗೆ ಅನುಕೂಲ ಮಾಡಿಕೋಂಡು ತಾನು ಬೆಳೆಯುತ್ತದೆ. ದೃಢವಾಗಿ ನಿಲ್ಲುತ್ತದೆ. ಹೆಮ್ಮರವಾಗಿ ಬೆಳೆದ ಮರದ ನೆರಳು, ಚಿಗುರು, ಎಲೆ, ಹಣ್ಣು ಕಟ್ಟಿಗೆ ಎಲ್ಲವನ್ನೂ ಜನರು ತಾ ಅರಿಸಿ ಓಡಿಬರುತ್ತಾರೆ. ಬಂದ ಜನರೆಲ್ಲರಿಗೂ ಅನುಕೂಲಮಾಡಿಕೋಟ್ಟು ತಾ ಮಹಾನ್ ಆಗಿ ಇರುತ್ತದೆ. ಹಾಗೆ ಅಧಾರ್ಮಿಕತೆಯ ಹಾವಳಿ ಎಷ್ಟು ಬೀಸಿದರೂ, ಅದಕ್ಕೆ ಬಾಗದೆ. ಈ ವ್ಯತಿರಿಕ್ತ ಅವಸ್ಥೆಗಳನ್ನು ನನಗೆ, ನನ್ನ ಧರ್ಮಕ್ಕೆ, ನನ್ನ ಏಳಿಗೆಗೆ ಅನುಕೂಲವನ್ನಾಗಿ ಮಾಡಿಕೋಂಡು, ಬೆಳೆದು ದೃಢವಾಗಿ ನಿಂತರೆ ಆಗ ನನ್ನನ್ನು 100 ಜನ ಆಶ್ರಯಿಸುತ್ತಾರೆ. 1000 ಜನ ಸ್ಮರಿಸುತ್ತಾರೆ. ಅಂದು ನಾ ಪರಿಪೂರ್ಣ ಯಶಸ್ವೀ.
ಇರುವೆಯ ಕೆಲಗುಣಗಳನ್ನು, ಮರದ ಕೆಲಗುಣಗಳನ್ನು ಇಂದಿನ ಯುವಕರಾದ ನಾವು ರೂಢಿಸಿಕೋಂಡರೆ ಮುಂದೇ ನಾವೇ ಮಹಾನ್ ವ್ಯಕ್ತಿಗಳಾಗಿ ರಾರಾಜಮಾನರಾಗುತ್ತೇವೇ ಇದರಲ್ಲಿ ಸಂಶಯವೇ ಇಲ್ಲ.
*✍🏽✍🏽ನ್ಯಾಸ.......*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments