*ಸಹವಾಸ - ಅತ್ಯಂತ ಯೋಗ್ಯವೇ ಆಗಿರಬೇಕು...*
*ಸಹವಾಸ - ಅತ್ಯಂತ ಯೋಗ್ಯವೇ ಆಗಿರಬೇಕು...*
"ಸಜ್ಜನರ ಸಂಗವ ಮಾಡದಿದ್ದರೆ ಎನಗೇ ಆಣೆ ರಂಗ, ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ರಂಗ..." ಸಜ್ಜನರ ಹಿತೈಷಿಗಳ, ನಮ್ಮ ಪರವಾಗಿ ನಮಗೇ ಗೊತ್ತರದ ಹಾನೆ ನಿರಂತರ ಬೇಡಿಕೊಳ್ಳುವ ಮಹಾತ್ಮರ ಸಹವಾಸ ಮಾಡದಿದ್ದರೆ ಎನಗೆ ಆಣೆ, ದುಷ್ಟರ ಸಹವಾಸ ಬಿಡಿಸದಿದ್ದರೆ ನಿನಗೆ ಆಣೆ ಎಂದು ದಾಸರಾಯರು ಆಣಿ ಹಾಕಿಕೊಳ್ಳುತ್ತಾರೆ. ದೇವರಿಗೂ ಆಣೆ ಹಾಕುತ್ತಾರೆ.
*ಸಹವಾಸದ ಶಕ್ತಿ ಮಹಾನ್ ಆಗಿದೆ*
ನಮ್ಮನ್ನ ಬದಲಾಯಿಸುವ ಶಕ್ತಿ ಇರುವದು ಸಹವಾಸದಲ್ಲಿ. ಯಾವ ವ್ಯಕ್ತಿಯ ಎಂಥ ವ್ಯಕ್ತಿಯ ಸಹವಾಸ ಆಗುತ್ತದೆಯೋ ಆ ತರಹ, ಅಂಥ ವ್ಯಕ್ತಿ ತಾನಾಗುತ್ತಾನೆ. ನಮ್ಮನ್ನು ಪೂರ್ಣವಾಗಿ ಬದಲಾಯಿಸಿಬಿಡುತ್ತದೆ ಸಹವಾಸಗಳು.
*ರಾಮಯಾಣದ ಸುಂದರ ಕಥೆ...*
ವನದಲ್ಲಿ ಇರುವಾಗ ಸೀತೆ ರಾಮನಿಗೆ ಒಂದು ಕಥೆ ಹೇಳುತ್ತಾಳೆ....
ಒಬ್ಬ ಶ್ರೇಷ್ಠ ಋಷಿಗಳು ೧೦೦೦೦ ವರುಷದ ಸುದೀರ್ಘ ತಪಸ್ಸಿಗೆ ಆಸೀನರಾಗಿರುತ್ತಾರೆ. ಆಗ ಇಂದ್ರದೇವ ಒಬ್ಬ ಸೈನಿಕನ ವೇಶದಲ್ಲಿ ಬಂದು ಒಂದು ಮೊನುಚಾದ ಖಡ್ಗವನ್ನು ಕೊಟ್ಟು ಹೇಳುತ್ತಾರೆ, ನಾ ತಿರುಗಿ ಬರುವವರೆಗೆ ಈ ಖಡ್ಗ ನಿಮ್ಮ ಸನಿಹದಲ್ಲಿರಲಿ. ಸಂರಕ್ಷಣೆ ಮಾಡಿರಿ. ಪುನಃ ಬಂದು ಒಯ್ಯುತ್ತೇನೆ ಎಂದು. ಆ ಮಾತನ್ನು ಒಪ್ಪಿಕೊಂಡ ಮಹಾತಾಪಸಿ, ಅ ಖಡ್ಗವನ್ನು ತನ್ನ ಸನಿಹ ಇಟ್ಟುಕೊಳ್ಳುವ.
ಪ್ರತಿನಿತ್ಯ ಮಲಗುವಾಗ ಏಳುವಾಗ ಆ ಖಡ್ಗವಿದೆಯೋ ಇಲ್ಲವೋ ಎಂದು ನೋಡುತ್ತಿದ್ದ. ಯಾರಾದರೂ ಕದ್ದೊಯ್ಯಬಾರದು ಎಂದು ತನ್ನ ಜೊತೆ ಸ್ನಾನಕ್ಕೆ ಒಯ್ದ.ಪೂಜೆ ಮಾಡುವಾಗ ಜೊತೆಗೆ ಖಡ್ಗ, ತಪಸದಸಿಗೆ ಕುಳಿತಾಗ ಖಡ್ಗ, ಹೀಗೆ ಖಡ್ಗದ ಸಹವಾಸ ಕ್ರಮವಾಗಿ ಹೆಚ್ಚಾಗ್ತಾ ಹೋಯಿತು. (ಇಂದು ನಮ್ಮ ಸಹವಾಸ ಮೋಬೈಲಿನ ಜೊತೆಗೆ ಇದ್ದಂತೆ.) ಕೆಲದಿನಗಳ ತರುವಾಯ, ಆ ಖಡ್ಗ ಮಂಡಾಗಿರಬಹುದು ಎಂದು ಚೂಪು ಮಾಡಿದ. ಚೂಪಾಗಿದೆಯೋ ಇಲ್ಲವೋ ಎಂದು ಗಿಡಗಳಮೇಲೆ ಪರೀಕ್ಷಿಸಿದ. ನಂತರ ಸಣ್ಣ ಪುಟ್ಟ ಪ್ರಾಣಿಮೇಲೆ ಪರೀಕ್ಷಿಸಿದ. ಕ್ರಮೇಣ ದೊಡ್ಡ ಕೊಲೆಗಾರನೇ ಆದ. ಹತ್ತು ಸಾವಿರ ವರ್ಷದ ತಪಸ್ವಿ ದೊಡ್ಡ ಕೊಲೆಗಾರನು ಆದ. ಏಕೆ ಸಹವಾಸ ಮಾಡಿದ್ದು ಖಡ್ಗದ ಜೊತೆಗೆ.
(ಇದನ್ನು ದೂರದಿಂದ ಗಮನಿಸಿತ್ತಿರುವ ಇಂದ್ರದೇವ ತುಂಬ ಖುಶಿಪಟ್ಟ. ಋಷಿ ಅ ಮಹಾ ತಪಸ್ಸಿಗೆ ಅಯೋಗ್ಯರಾಗಿದ್ದರು. ಹಾಗಾಗಿ ಪರೀಕ್ಷಿದ. ಅವನ ತಪೋ ಭಂಗ ಮಾಡಿದ.) ಆದ್ದರಿಂದ ರಾಮ ಈ ಧನುಸ್ಸನ್ನು ನೀ ಇಟ್ಟುಕೊಳ್ಳಬೇಡ. ಕೆಟ್ಟ ಪದಾರ್ಥ ನಮ್ಮಲ್ಲಿ ಇರುವದು ಬೇಡ. ಅದರಿಂದ ನಮ್ಮ ಮನಸ್ಸು ಕೆಡಬಹುದು. ಆದಕಾರಣ ಶ್ರೀರಾಮ ತನ್ನ ಬಿಲ್ಲಿಗೆ ಹೆದೆ ಏರಿಸದೆ ಸಂಚರಿಸಿದ. ದುಷ್ಟರು ಬಂದಾಗ ರಕ್ಷೆಣೆಗೆ ಬಿಲ್ಲು ಇರಲಿ. ಆಪತ್ತಿಗೆ ಮಾತ್ರ ಹೆದೆ ಏರಿಸುವೆ ಎಂದು ಜ್ಯಾ ಬಿಚ್ಚಿಟ್ಟೇ ಚಲಿಸಿದ. ಹೀಗೆ ಕಥೆ ನಾವು ರಾಮಾಯಣದಲ್ಲಿ ಕೇಳುತ್ತೇವೆ.
ದುಷ್ಟಪದಾರ್ಥಗಳಿಂದಾಗುವ ವ್ಯತಿರಿಕ್ತ ಪರಿಣಾಮ ಸರ್ವ ಸಮರ್ಥರಾದ, ಸರ್ವೋತ್ತಮರಾದ, ಸರ್ವಜ್ಙರಾದ, ಸೀತೆ ರಾಮರಿಗೆ ಆಗುವದಿಲ್ಲ ಇದರಲ್ಲಿ ಸಂಶಯವಿಲ್ಲ. ಆದರೆ ಅತ್ಯಂತ ದುರ್ಬಲತಮರಾದ , ಪುಕ್ಕರಾದ , ಹೋರಾಡುವ ಎದರಿಸುವ ಸಾಮರ್ಥ್ಯವಿಲ್ಲದ ನಮಗೆ ಆ ಪದಾರ್ಥಗಳ ಪರಿಣಾಮ ಆಗಿಯೇ ತೀರುತ್ತದೆ. ಇದರಲ್ಲಿ ಸ್ವಲ್ಪವೂ ಸಂಶಯಬೇಡ.
ನಿಂತಲ್ಲಿ ಕೂತಲ್ಲಿ ಹೋದಲ್ಲಿ ಒಂದೋ ದುಷ್ಟರು ಸಿಗುತ್ತಾರೆ, ಇಲ್ಲವೋ ದುಷ್ಟಪದಾರ್ಥಗಳು ಅರೇ ಸಿಗುತ್ತವೆ. ಅಂತೂ ದುಷ್ಟರ ಸ್ವಾರ್ಥಿಗಳ ಸಹವಾಸ ಆಗಿಯೇ ಆಗುತ್ತದೆ. ಹೀಗಿರುವಾಗ ನಮ್ಮ ಸ್ಥಿತಿ ಏನಾಗಬಹುದು ಎಂದು ಒಂದೇ ಕ್ಷಣ ಯೋಚಿಸಿದರೆ ನಡುಗೇ ಹುಟ್ಟುತ್ತದೆ. ಅದಕ್ಕಾಗಿಯೇ ದಾಸರು ಹೇಳಿದರು "ದುಷ್ಟರಸಂಗ ಬಿಡಿಸದಿದ್ದರೆ ನಿನಗೆ ಆಣೆ" ಎಂದು.... ಎಚ್ಚರಿಕೆ ನಮ್ಮದು. ಎಡವಿದರೆ ಫಲ ಸಿಗುವದು ನಿಶ್ಚಿತ......
ಅವನ ಕೆಲಸ ದುಷ್ಟರ ಸಹವಾಸದಿಂದ ದೂರು ಮಾಡುವದು. ನಮ್ಮ ಕೆಲಸ..??
ಶಿಷ್ಟರ ಸಹವಾಸದಲ್ಲೇ ಇರುವದು. ಶಿಷ್ಟರು ಸನ್ಮಾರ್ಗ ತಿಳಿಸುತ್ತಾರೆ. ಮುದ ನೀಡುತ್ತಾರೆ. ಆಪತ್ತಿಗೆ ಒದಗುತ್ತಾರೆ. ಕಷ್ಟದಲ್ಲಿ ಕೈ ಹಿಡಿಯುತ್ತಾರೆ. ಜ್ಙಾನಾರ್ಜನೆಗೆ, ಪುಣ್ಯ ಸಂಪಾದನೆಗೆ ಅನುವಾಗ್ತಾರೆ. ನಮಗೆ ತಿಳಿಯದ ಹಾಗೆ ನಮ್ಮ ಬೇಡಿಕೆಗಳ ಈಡೇರಿಕೆಗೋಸ್ಕರ ಪರಿತಪಿಸುತ್ತಾರೆ, ದೇವರಲ್ಲಿ ಮೊರೆ ಇಡುತ್ತಾರೆ. ಈ ತರಹದ ಶಿಷ್ಟರ ಸಹವಾಸ ಮಾಡದಿದ್ದರೆ ನನಗೆ ಆಣೆ ಎಂದು ದಾಸರು ಆಣೆ ಹಾಕಿಕೊಳ್ಳುವ ಮುಖಾಂತರ ನಮಗೆ ಸನ್ಮಾರ್ಗ ಬೋಧಿಸುತ್ತಾರೆ......
ಯಾಕೆ ಶಿಷ್ಟರ ಸಹವಾಸ ಬೇಕು...???
ಶಿಷ್ಟರ ಸಹವಾಸ ನಮ್ಮನ್ನೂ ಶಿಷ್ಟರನ್ನಾಗಿಸುತ್ತದೆ. ಒಂದು ಪುಟ್ಟ ಅಳಿಲು. ಅಪ್ರಸಿದ್ದ ಪ್ರಾಣಿ. ಜಗತ್ತಿನಲ್ಲಿ ಯಾರಿಗೂ ಅಷ್ಟಾಗಿ ಪರಿಚಯ ಇರದ ಒಂದು ಜೀವಿ. ಆದರೆ ಸಹವಾಸ ಮಾಡಿದ್ದು ಹನುಮಂತ ಮೊದಲಾದ ಕಪಿಗಳ ಜೊತೆಗೆ. ಹಾಗಾಗಿ ಆ ಅಳಿಲೂ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ ಅಂದು ಶ್ರೀರಾರಮನಿಗೆ ಅತ್ಯಂತ ಪ್ರಿಯವಾಗಿ ಜೀವಿಸಿತು. ಇಂದೂ ಯಾರೇ ರಾಮನ ಸೇವೆ ಎಷ್ಟೇ ಮಾಡಿದ್ದರೂ *ನಮ್ಮದು ಅಳಿಲು ಸೇವೆ" ಎಂದೇ ಹೇಳುತ್ತಾರೆ. ಅಂದು ತಾ ಮಾಡಿದ ಸಹವಾಸದ ಫಲ ಇಂದಿನ ವರೆಗೂ ಸಮಗ್ರ ಅಳಿಲಿನ ಜಾತಿಗೇ ಒದಗಿ ಬಂತು. ಇದುವೇ ಶಿಷ್ಟರ ಸಹಚಾಸದ ಫಲ. ತನಗೆ ಮಾತ್ರವಲ್ಲ. ಸಮಗ್ರ ತನ್ನ ಕುಟುಂಬಕ್ಕೇ , ಸಾವಿರ ಸಾವಿರ ತಲೆಮಾರಿನವರೆಗೆ ಉಡುಗೊರೆಯಾಗಿ ಬರುತ್ತದೆ.
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
Dhanyavadagalu
ನಿಮ್ಮ ಅಭಿಮಾನವಷ್ಟೆ... :)