*ಕಸಗುಡಿಸುವಾಗ ಮುಂದೆ ಮುಂದೆ ಹೋಗು, ಒರೆಸುವಾಗ ಹಿಂದೆ ಹಿಂದೆ ಬಾ...*
*ಕಸಗುಡಿಸುವಾಗ ಮುಂದೆ ಮುಂದೆ ಹೋಗು, ಒರೆಸುವಾಗ ಹಿಂದೆ ಹಿಂದೆ ಬಾ...*
"ಕಸಗುಡಿಸುವಾಗ ಮುಂದೆ ಮುಂದೆ ಹೋಗು, ಒರೆಸುವಾಗ ಹಿಂದೆ ಹಿಂದೆ ಬಾ.." ಇದು ಕನ್ನಡದ ಒಂದು ನಾಣ್ಣುಡಿ. ಕಸಗುಡಿಸುವದರಿಂದ ಮನೆ ಮನ ಸ್ವಚ್ಛವಾಗುವದು ಆಗಿದ್ದರೆ ಮುಂದೆ ಮುಂದೆ ಹೋಗುತ್ತಾ ಕಸಗುಡಿಸು. ಇರುವ ಕಸ ಜಿಡ್ಡಾಗಿ ಕುಳಿತಾಗ ಒರೆಸುವ ಪ್ರಸಂಗ ಬಂದರೆ ಒರೆಸುತ್ತಾ ಹಿಂದೆ ಹಿಂದೆ ಬಾ. ಇದು ಈ ನೀತಿಯ ಒಂದು ವಿಚಾರ.
*ಇಂದಿನ ಸ್ಥಿತಿ...*
ಸನ್ಮಾನ್ಯ ಮೋದಿಜಿ ಅವರು *ಸ್ವಚ್ಛ ಭಾರತ ಅಭಿಯಾನ* ಆರಂಭಿಸಿದಾಗ ಕಸಗೂಡಿಸಿದರು, ಕಸಗೂಡಿಸಲು ಹೇಳಿದರು. ಏಕೆಂದರೆ ಆ ಕಸ ಸಾಮಾನ್ಯ ಕಸವಾಗಿತ್ತು. ಆದರೆ ಇಂದು ನಮ್ಮ ನಮ್ಮ ಊರುಗಳಿಗೇ ಅಪಾಯ ಎದುರಾದಾಗ "ಕರೋನಾ ಮಹಾಮಾರಿ" ಯನ್ನು ಜಿಡ್ಡು ಸಹಿತ ಒರೆಸಬೇಕಾದರೆ ವಿದೇಶದಿಂದ ದೇಶ, ದೇಶದಿಂದ ಊರು, ಊರಿನಿಂದೆ ಏರಿಯಾ, ಏರಿಯಾದಿಂದ ಮನೆ, ಮನೆಯಲ್ಲಿಯೂ ಪರಸ್ಪರ ದೂರ ಹೀಗೆ ಹಿಂದೆ ಹಿಂದೆ ಸರಿಯುತ್ತಾ ಜಿಡ್ಡು ಒರೆಸಬೇಕು ಎಂದಹ ಅದೇ ಮೋದಿಜೀಯವರೇ ವಿಶ್ವಕ್ಕೆ ತಿಳುಹಿಸಿಕೊಟ್ಟರು. ಇದುವೇ "ಕರೋನಾ ಮಹಾಮಾರಿ"ಯನ್ನು ಒರಿಸಿ ಹಾಕಲು ಸೂಕ್ತ ಪರಿಹಾರ. ಆ ನೀತಿಗೇ lock down ಎಂದು ಮತ್ತೊಂದು ಹೆಸರು.
*ಬದುಕಲು ಕಟ್ಟಿಹಾಕಿಕೊಳ್ಳುವದು ಅನಿವಾರ್ಯ...*
ಅಂದು ಇಂದು ಎಂದಾದರೂ ಬದುಕುವ ಬಾಳುವ ಅಪೆಕ್ಷೆ ಇದ್ದರೆ ತನ್ನನ್ನು ತಾನು ಕಟ್ಟಿಹಾಕಿಕೊಳ್ಳಲೇಬೇಕು. ತನ್ನನ್ನು ತಾನು ಎಷ್ಟು ಹರಿಬಿಡುತ್ತಾನೆ ಅಷ್ಟು ತನಗೇ ಅನರ್ಥ. ಇದು ಶಾಸ್ತ್ರದ ಧರ್ಮಶಾಸ್ತ್ರದ ನಮ್ಮ ಸಿದ್ಧಾಂತದ ಮಾತು. ನಮ್ಮ ದೇಶದ ನೀತಿ. ಅಂತೆಯೇ ತನ್ನನ್ನು ತಾನು ಕಟ್ಟಿಹಾಕಿಕೊಳ್ಳುವ ನೂರಾರು ಉಪಾಯಗಳು ಸಂವಿಧಾನಗಳು ಸಂಸ್ಕೃತಿಗಳು ನಮ್ಮಲ್ಲಿ ಹೇರಳವಾಗಿ ಸಿಗುತ್ತವೆ.
*ವಿದೇಶ ಗಮನ ನಿಷೇಧ....*
ನಮ್ಮ ಶಾಸ್ತ್ರ ಸಿದ್ಧಾಂತ ಮೊದಲು ಮಾಡಿದ ಕೆಲಸ ವಿದೇಶಗಮನ ಮಾಡದೇ ನೀನು ನಿನ್ನ ದೇಶದಲ್ಲಿ ಇರು ಎಂದಿತು. ನಮ್ಮ ಇಂದಿನ ಯುವಕರಿಗೆ ನಮ್ಮದೇಶದಲ್ಲಿಯೇ ಎಲ್ಲ ಅನುಕೂಲತೆಯನ್ನು ನಮ್ಮ ಸರ್ಕಾರಗಳು ಒದಗಿಸಿಕೊಟ್ಟಿದ್ದರೆ ನಮ್ಮ ದೇಶ ಮುಂದುವರೆದ ದೇಶ ಎಂದಾಗಿರುತ್ತಿತ್ತು. ಜೊತೆಗೆ ಇಂದಿನ ಈ ಆಪತ್ತು ವಿದೇಶದಿಂದಲೇ ಬಂದಿದ್ದು. ನಮ್ಮ ದೇಶದವರೇ ತಂದಿದ್ದು.
*ಸಂಧ್ಯೆ ಪಾಠ ಪ್ರವಚನ ಜಪತಪವೇ ನಿನ್ನ ಕರ್ತವ್ಯ ಎಂದಿತು...*
ದಿನದ ಬಹುಪಾಲು ಹೊರ ತಿರುಗದೇ ಸಂಧ್ಯಾವಂದನೆ ಪೂಜೆ, ಪಾಠ ಪ್ರವಚನ, ಜಪ ತಪಸ್ಸೇ ನಿನಗೆ ನಿನ್ನ ಉದ್ಧಾರಕ್ಕೆ ಮೂಲ ಎಂದಿತು. ನಿದ್ರೆ ತಡೆದುಕೊಳ್ಳಲು ಅಸಾಧ್ಯ ಎಂದಾದಾಗ ಮಲಗು, ಎದ್ದಾಕ್ಷಣ ಪುಸ್ತಕ ನಿನ್ನ ಕೈಯಲ್ಲಿ ಇರಲಿ ಎಂದಿತು ಶಾಸ್ತ್ರ. ಅದನ್ನು ನಾವು ಬಿಟ್ಟೆವು. ನಮ್ಮ ಮನೆಯಿಂದ ಹೊರಬಿದ್ದೆವು. ಇಂದು ಕೇವಲ ಇಪ್ಪೊಂದು ದಿನ ನಮ್ಮ ಮನೆಯಲ್ಲಿ ಇರಲು ಒದ್ದಾಡುತ್ತಾ ಇದ್ದೇವೆ. ನೀರಿನಿಂದ ಎತ್ತಿ ಹೊರ ಎಸೆದ ಮೀನಿನಂತಾಗಿದೆ ಎನ್ನ ಸ್ಥಿತಿ.
*ಸೋಶಿಯಲ್ ಅಂತರವನ್ನೇ ಶಾಸ್ತ್ರ ತಿಳಿಸಿತು....*
ಒಂದುಬಾರಿ ಸ್ನಾನವಾದ ಮೇಲೆ ದೇವರನ್ನು ಬಿಟ್ಟು ನಿನ್ನವರನ್ನೂ ಮುಟ್ಟಬೇಡ. ಇನ್ನೊಬ್ಬರು ನಿಂತಿರುವ ಬಂಡೆಯನ್ನೂ ನೀನು ಮುಟ್ಟಬೇಡ. ಏನನ್ನು ತೆಗೆದುಕೊಂಡರೂ ದೂರದಿಂದಲೇ ತೆಗೆದುಕೊ. ಯಾವ ಪದಾರ್ಥವನ್ನು ಸ್ವೀಕರಿಸಿದರೂ ನಿನ್ನಲ್ಲಿ ಇರುವ ನೀರು ಹಾಕಿ ತೊಳೆದು ಸ್ವೀಕರಿಸು. ಇತ್ಯಾದಿ ಸಾವಿರಾರು ತರಹದ ನಿಯಮಗಳನ್ನು ಧರ್ಮಶಾಸ್ತ್ರ ಹಾಕಿತು. ಈ ಸೋಶಿಯಲ್ ಅಂತರವನ್ನು ಮರೆತದ್ದಕ್ಕೇ ಇಂದು ನಾವೇ ಒದ್ದಾಡುವ ಪ್ರಸಂಗ ಎದುರಾಗಿದೆ. ಈ ಸೋಶಿಯಲ್ ಅಂತರವನ್ನು ಹೀಯಾಳಿಸಿದವರಿಗೂ ಇಂದು ಪಾಲಿಸಲೇಬೇಕಾದ ಅನಿವಾರ್ಯತೆ ಬಂದಿದೆ.
*ಕಂಡದ್ದು ತಿನ್ನಬೇಡ....*
ತಿನ್ನುವ ಚಪಲ ನಾಲಿಗೆಗೆ ಇದೆ. ಕಂಡದ್ದು ತಿನ್ನುವದು ನಿನ್ನ ಮನಸ್ಸು ದೇಹ ಎರಡಕ್ಕೂ ಹಿತವಲ್ಲ. ಅಂತಯೇ ಕಂಡದ್ದು ತಿನ್ನುವ ಚಪಲತೆಯನ್ನು ಪೋಶಿಸಬೇಡ, ಎಂದಿತು ಶಾಸ್ತ್ರ. ಅದಕ್ಕೆ ನೂರಾರು ನಿಯಮಗಳನ್ನು ಹಾಕಿತು. ನಿಯಮಗಳಿಗೆ ನಾವು ಬದ್ಧರಾಗಲ್ಲ ಎಂಬ ಧೋರಣೆ ಹೊತ್ತ ನಾವು ಆ ಎಲ್ಲ ನಿಯಮಗಳನ್ನೂ ದಾರಿಗೆ ತೂರಿದೆವು. ಆದರೆ ಇಂದು ಅನಿಸುತ್ತಿದೆ, *ಮನೆಯ ಅನ್ನವೇ ಹಿತ ಹಾಗೂ ಸುರಕ್ಷಿತ* ಎಂದು.
*ಮನೆಯ ಅನ್ನ ಮನೆಯಲ್ಲಿಯೇ ಇಲ್ಲದಾದ ಸ್ಥಿತಿ ಎದುರಾಗಿದೆ.......*
ನಾನು ನನ್ನ ಅನ್ನವನ್ನು ಮನೆಬಿಟ್ಟು ಹೊರೆಗೆ ಹುಡಕಲು ಎಂದು ಸಿದ್ಧನಾದೆನೋ ಅಂದೇ ನಮ್ಮ ಮನೆಯ ಅನ್ನ ನಮ್ಮಲ್ಲಿ ಇಲ್ಲದಾಯ್ತು. ಹೊರಗಿನ ಅನ್ನ ದೇವರಿಗೆ ನಿವೇದಿಸಲ್ಲ. ಕೊಡುವ ದೇವ ಹೊರಗೇ ಕೊಟ್ಟ.
ಮೊದಲು ಹೊಲ ಗದ್ದೆಗಳನ್ನು ಕಳೆದುಕೊಂಡದ್ದು ನಮ್ಮ ದೊಡ್ಡ ತಪ್ಪು. ನಮ್ಮನ್ನು ಯಾಮಾರಿಸಿ ದೇಶ ನಮ್ಮ ಹೊಲ ಗದ್ದೆಗಳನ್ನು ತೆಗೆದುಕೊಂಡದ್ದು ದೇಶದ ತಪ್ಪು. ಅಂತೆಯೇ ಇಬ್ಬರೂ ಇಂದು ಅನುಭವಿಸುತ್ತಿದ್ದೆವೆ.
ಹೊಲ ಗದ್ದೆಗಳಿಂದ ಬೇಸಾಯ ಮಾಡುತ್ತಾ ತಮ್ಮ ಅನ್ನವನ್ನೇ ತಾನು ಬೆಳೆಯುವವರಿಂದ ಏನೇನೋ ನಿಯಮಗಳನ್ನು ತಂದು ಕಸೆದುಕೊಂಡರು. ತಾವುಗಳು ಊಳಿದರಾ ಅದುವೂ ಇಲ್ಲ. ಹಣಕ್ಕಾಗಿ ಫ್ಲ್ಯಾಟುಗಳನ್ನು ಮಾಡಿ ಮಾರಿದರು. ಆ ಫ್ಲ್ಯಾಟುಗಳ ಜಾಗದ ಅನ್ನದ ಉತ್ಪಾದನೆ ಕಡಿಮೆಯಾದದ್ದಕ್ಕೆ, ಅನ್ನದ ಜಾಗಕ್ಕೆ ಆಕಳಿನಿಂದಾರಂಭಿಸಿ ಹಂದಿಯವರೆಗೆ ಎಲ್ಲವೂ ತಿನಿಸಾಗಿ ಸ್ವೀಕರಿಸಿದರು. ಅದರ ಪರಿಣಾಮವೇ ನಾನಾ ರೋಗ ರುಜಿನಗಳು. ಇಂದಿನ ಈ ದುರವಸ್ಥೆಯೂ ಸಹ. ಇಂತಹ ನೂರಾರು ವಿಷಯಗಳು ಹೇಳಲು ಇವೆ.
*ಈಗಲಾದರೂ ಕೆಲವಿಷಯಕ್ಕೆ ಎಚ್ಚತ್ತುಕೊಳ್ಳೋಣ...*
ಈ ಲೇಖನದ ಉದ್ಯೇಶ್ಯ ಇಷ್ಟೆ. ಶಾಸ್ತ್ರ ಧರ್ಮಶಾಸ್ತ್ರ ಹೇಳಿದ್ದೆಲ್ಲವನ್ನೂ ಮಾಡಲು ಆಗಲ್ಲ. ಮನಸ್ಸೂ ಇಲ್ಲ. ಬಿಟ್ಟು ಬಿಡೋಣ. ಆದರೆ ಇಪ್ಪತ್ತು ಪರ್ಸೆಂಟಿನಷ್ಟಾದರೂ ಮಾಡಲು ಆರಂಭಿಸೋಣ.
ನಮ್ಮನಿಯ ಅನ್ನವನ್ನೇ ಊಟಮಾಡೋಣ. ಸೋಶಿಯಲ್ ಅಂತರವನ್ನು ಎಂದಿಗೂ ಕಾಯ್ದುಕೊಳ್ಳೋಣ. ಸಾಧ್ಯವಿರುವಷ್ಟು ಜಪ ತಪಗಳನ್ನು ಮಾಡೋಣ. ಪೂಜೆ ಪುನಸ್ಕಾರ, ಅತಿಥಿ ಸತ್ಕಾರದಲ್ಲಿ ತೊಡಗಿಸಿಕೊಳ್ಳೋಣ. ನಮ್ಮ ಬುದ್ಧಿವಂತಿಕೆ, ನಮ್ಮ ಹಣ, ಎಲ್ಲವೂ ನಮ್ಮ ದೇಶಕ್ಕೇ ಬಳಿಕೆಯಾಗುವಂತೆ ನೋಡಿಕೊಳ್ಳೋಣ.....
*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments