*"ಸರ್ವಮೂಲ ವಿಚಕ್ಷಣ" - ನಮ್ಮ ಜಯತೀರ್ಥಾಚಾರ್ಯರು*

*"ಸರ್ವಮೂಲ ವಿಚಕ್ಷಣ" - ನಮ್ಮ ಜಯತೀರ್ಥಾಚಾರ್ಯರು*

ಬಾಲ್ಯದಲ್ಲಿಯೇ ಸತ್ಯಧ್ಯಾನ ವಿದ್ಯಾಪೀಠ  ಕುಲಪತಿಗಳಾದ ಪರಮಪೂಜ್ಯ ಮಾಹುಲೀ ಆಚಾರ್ಯರ ಉಡಿಸೇರಿದ ಪುಣ್ಯಾತ್ಮರು ನಮ್ಮ ಜಯತೀರ್ಥಾಚಾರ್ಯರು.

*"ಸರ್ವಮೂಲ ವಿಚಕ್ಷಣ"ರು*

ಪೂಜ್ಯ ಆಚಾರ್ಯರ ನೆರಳಾಗಿ ಇಂದಿಗೂ ಅನುಸರಿಸುತ್ತಿರುವ ಜಯತೀರ್ಥಾಚಾರ್ಯರು, ಪೂ ಆಚಾರ್ಯರ ಆದರ್ಶದಲ್ಲಿ  ಸರ್ವಮೂಲ, ಶ್ರೀಮನ್ಯಾಯಸುಧಾ, ಮಹಾಭಾರತ,  ಟೀಕಾಗ್ರಂಥಗಳಲ್ಲಿ ಅಸದೃಶ ಪಾಂಡಿತ್ಯವನ್ನು ಪಡೆದ ಧೀರ. ಸರ್ವಮೂಲದ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳಕಡೆಯೂ ಗಮನ ಇಂದಿಗೂ ಇದ್ದೇ ಇದೆ. ಆ ವಿಶಿಷ್ಟಕಲೆಯನ್ನು ಗಮನಿಸಿಯೇ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ಪರಮಾನುಗ್ರಹ ಪೂರ್ವಕವಾಗಿ‌ *ಸರ್ವಮೂಲ ವಿಚಕ್ಷಣ* ಎಂದು ಬಿರಿದು ಕೊಟ್ಟು ಗೌರವಿಸುವ ಮುಖಾಂತರ ಮಹಾ ಅನುಗ್ರಹವನ್ನು ಮಾಡಿದ್ದಾರೆ. 

*ವಿಲಕ್ಷಣವಾದ ವಿಚಕ್ಷಣ*

ಚತುಃಶಾಸ್ತ್ರದಲ್ಲಿ ವಿಚಕ್ಷಣರು ಪಂ.ಜಯತೀರ್ಥಾಚಾರ್ಯರು. ಪೂಜ್ಯ ಆಚಾರ್ಯರ ಆಶಯದಂತೆ, ಪಂ ಶ್ರೀನಿವಾಸತೀರ್ಥಾಚಾರ್ಯರಿಂದ ಕೂಡಿಕೊಂಡು  *ಶ್ರೀಮನ್ಮಹಾಭಾರತ ತಾತ್ಪರ್ಯನಿರ್ಣಯ* ಗ್ರಂಥದ ಸಂಶೋಧನೆಯಲ್ಲಿ ಸಂಪೂರ್ಣ ಜೀವನವನ್ನೇ ಸವಿಸಿದರು. ಇಪ್ಪತ್ತೊಂದು ಟಿಪ್ಪಣಿಗಳನ್ನು ಸಂಗ್ರಹಿಸಿ, ಹಸ್ತಪ್ರತಿಗಳ ಕಡೆ ಗಮನಹರಿಸಿ, ಮಹಾಭಾರತದ ನೂರಾರು ಕಥೆ ವಿಷಯಗಳು ಇನ್ನ್ಯಾವ ಪುರಾಣಗಳಲ್ಲಿ ಬಂದಿದೆ ಎಂದು ಹುಡುಕಿ, ಸಾವಿರಾರು ವಿಷಯಗಳನ್ನು ಸಂಗ್ರಿಸಿ, ಈಗಾಗಲೇ ನಾಲ್ಕು ಭಾಗಗಳನ್ನು ಜಗತ್ತಿಗೆ ಒದಗಿಸಿ, ಇನ್ನುಳಿದ ಭಾಗಗಳ ವಿಷಯಗಳನ್ನು ಇಂದಿಗೂ ಸಂಗ್ರಹಿಸಿ ಕೊಡುತ್ತಿರುವ ವಿಲಕ್ಷಣವಾದ ಪ್ರತಿಭೆ ವಿದ್ವತ್ತು ನಮ್ಮ ಗುರುಗಳೂ ಆದ ಜಯತೀರ್ಥಾಚಾರ್ಯರದ್ದು. 

*ವಿದ್ಯಾರ್ಥಿಗಳ ಅನುಕೂಲಕ್ಕೆ ಅಪರೂಪ "ಸೂತ್ರಭಾಷ್ಯ" ಪುಸ್ತಕ ಸಂಪಾದನೆ*

ಬ್ಹಹ್ಮ ಸೂತ್ರ - *ಭಾಷ್ಯ -  *ತತ್ವಪ್ರಕಾಶಿಕಾ* ಭಾವಭೋಧ - ಭಾವದೀಪ - ತಂತ್ರದೀಪಿಕಾ - ನ್ಯಾಯವಿವರಣ - ಶೃತ್ಯರ್ಥ - ನ್ಯಾಯಮುಕ್ತಾವಲಿ ಈ ಎಲ್ಲ ಗ್ರಂಥಗಳನ್ನೊಳಗೊಂಡ ಅಪರೂಪದ ಮಹಾ ಗ್ರಂಥದ ಸಂಶೋಧನೆ ಜಯತೀರ್ಥಾಚಾರ್ಯರದ್ದು. 

*ಹನುಂತನಂತೆ ಗುರುಗಳ ಆಜ್ಙಾಧಾರಕ*

ಪೂ ಆಚಾರ್ಯರು ಎಂದೇ ಏನೇ ಹೇಳಿದರೂ ಆ ಕೆಲಸ ಅಂದೇ ಸಿದ್ಧ. ಅಷ್ಟು  ವಿಚಿತ್ರವಾದ ಗುರು ಭಕ್ತಿ. ಗುರು ದಕ್ಷಿಣಾ ರೂಪವಾಗಿಯೇ "ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ" ರಿಸರ್ಚ್ ನಲ್ಲಿ ತೊಡಗಿಸಿಕೊಂಡು ಇದೊಂದು ತಪಸ್ಸು ಎಂದೇ ಭಾವಿಸಿ ಮಾಡುತ್ತಿರುವದು. ನನಗಂತೂ ಪ್ರತಿನಿತ್ಯವೂ ಗುರುಗಳಬಗ್ಗೆ ಹೇಳುವದೇ. ಇಂದೂ ಒಂದು ಅದ್ಭುತ ಉಪದೇಶ *"ಗುರುಗಳಲ್ಲಿ ದೇವರಲ್ಲಿ" ಸ್ವಲ್ಪವೂ ನಂಬಿಕೆ ವಿಶ್ವಾಸ ಭಕ್ತಿ ಕಡಿಮೆ ಆಗುವಹಾಗಿಲ್ಲ. ಸಾಧ್ಯವಿದ್ದರೆ ಬೆಳಿಸಿಕೊ* ಎಂದೇ ಹೇಳಿ ಕಳಿಸಿದರು. 

*ಅಕ್ಷಯಪಾತ್ರೆಯನ್ನೇ ಒಲಿಸಿಕೊಂಡ ಧರ್ಮ*

ಪಂ ಜಯತೀರ್ಥಾಚಾರ್ಯರ ಮನೆಯಲ್ಲಿ  ಬ್ರಾಹ್ಮಣ ಅತಿಥಿಗಳ ಭೋಜನವಾಗದ ದಿನವೇ ಇಲ್ಲ ಎಂದರೆ ತಪ್ಪಾಗದು. ಅತಿಥಿ ಸತ್ಕಾರ ಬ್ರಾಹ್ಮಣಭೋಜ ತಂದೆ, ತಾಯಿ, ಮನೆಯವರು, ಮಕ್ಕಳು, ಎಲ್ಲರೂ ಸೇರಿ ಅತ್ಯಂತ ಉತ್ಸಾಹ ಭಕ್ತಿ ಇವುಗಳಿಂದ ಸಾಧ್ಯವಿದ್ದಷ್ಟು ಮಾಡುವದೇ. ನಾನಂತೂ ತಿಂಗಳು ತಿಂಗಳು ಇವರ ಮನೆಯಲ್ಲಿ ಮನೆಯವನಾಗಿಯೇ ಇದ್ದೇನೆ. 

ಇಂದಿನ ಈ‌ಲಾಕ್ಡೌನ್ ಪರಿಸ್ಥಿತಿಯಲ್ಲಿ ಸಿಕ್ಕು ಹಾಕೊಂಡು ಮನೆಗೆ ಹೋಗಲು ಆಗದಿದ್ದಾಗ, ಫೋನು ಮಾಡಿ ಯಾಕೆ ಬರ್ತಾ ಇಲ್ಲ.... ಎಂದು ಪ್ರೀತಿಯಿಂದ ಬಯ್ದಿದ್ದಾರೆ. ಅಷ್ಟು ಪ್ರೀತಿ ವಿಶ್ಚಾಸ. "ಬ್ರಾಹಣರಿಗೆ ಅನ್ನ ಹಾಕುವದರಿಂದ ನಮಗೆ ಅನ್ನ ಕೊಡ್ತಾನೆ ದೇವರು" ಎಂಬ ಮಾತು ಎಷ್ಟು ಬಾರಿ ಅವರಿಂದ ಕೇಳಿದ್ದೇನೆಯೊಕ ನೆನಪಿಲ್ಲ. ಇಂದೂ ಮತ್ತೆ ಹೇಳಿದರು "ನಾಳೆ  ಊಟಕ್ಕೆ ಬಾ" ಎಂದು.

*ದೇವರ ಪೂಜೆ ಜಪ ಅಧ್ಯಯನ ಇವುಗಳೇ ಉಸಿರು* 

ಅತ್ಯಂತ ವೈಭವದಿಂದ ದೇವರ ಪೂಜೆ ಆಗಲೇಬೇಕು. ಪೂರ್ಣ ಎರಡು ಗಂಟೆಗಿಂತಲೂ ಕಡಿಮೆ ಜಪ ಮಾಡಿದ್ದು ನೋಡಿಯೇ ಇಲ್ಲ. ಅಧ್ಯಯನದ ಹುಳ. ರಿಸರ್ಚ ಮಾಡಿ ಸಂಗ್ರಹಿಸಿದ ವಿಷಯಗಳು ನೂರಾರು. ಇಂತಹ‌ *ಸರ್ವಮೂಲ ವಿಕ್ಷಣ* ರು ಆದ ನಮ್ಮ ಗುರುಗಳು *ಪಂ. ಜಯತೀರ್ಥಾಚಾರ್ಯರು* ಇವರಿಗೆ ದೀರ್ಘ ಆಯು ಉತ್ತಮ  ಆರೋಗ್ಯ ಕೊಟ್ಟು ನಿರಂತರ ನಮಗೆ ಮಾರ್ಗದರ್ಶನ ಮಾಡುವಂತಾಗಲಿ ಎಂದು ಆ ದೇವನಲ್ಲಿ‌ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ ಪ್ರಾರ್ಥಿಸುತ್ತೇನೆ. 

*ನಾ ಎಂದಿಗೂ ಮರೆಯೆ ನೀ ಮಾಡಿದುಪಕಾರ....🙏🏽🙏🏽🙏🏽🙏🏽🙏🏽🙏🏽🙏🏽🙏🏽*

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*