*ಇದು ಏನಾಶ್ಚರ್ಯವೋ ..... ?*

*ಇದು ಏನಾಶ್ಚರ್ಯವೋ ..... ?*

ಇಂದು ಅವತರಿಸಿದ ನಮ್ಮ ನಿಮ್ಮಲ್ಲರ ಹೆದ್ದೊರೆಯಾದ ಶ್ರೀಹನುಮಂತದೇವರು. ಮಾಡಿದ ಒಂದೊಂದು ಕೆಲಸವೂ ಅತ್ಯಾಶ್ಚರ್ಯತಮವಾದದ್ದೆ. ಒಂದೊಂದು ಕಥೆಯೂ *ಸ್ಮೃತಿಕೀರ್ತನಪ್ರಣತಿಭಿರ್ವಿಮುಕ್ತಯೇ* ಎಂದು ಹೇಳಿದಂತೆ ಪ್ರತೀ ಮಹಿಮೆಯೂ ಮುಕ್ತಿದಾಯಕವಾದದ್ದೇ.

*ಸೂರ್ಯನ ಸನಿಹ ನೆಗದ ಹನುಮ*

ಅವತಾರ ಮಾಡಿದ ಹನುಮನಿಗೆ ಆಗ ತಾನೆ ಉದಯಿಸುವ ಸೂರ್ಯ ಕಂಡ. ಸೂರ್ಯ ಕಾಣಿಸಿದ ಕ್ಷಣಕ್ಕೇನೆ ಹನುಮಂತ ಕಾಣಿಸುತ್ತಿಲ್ಲ. ಯಾಕೆ ಎಂದು ಸುತ್ತಮುತ್ತ ನೋಡಿದರೆ ಹನುಂಮತ ಸೂರ್ಯಾಂತರ್ಯಾಮಿ ನಾರಾಯಣನಿಂದ *ಮಹಾವ್ಯಾಕರಣ* ಪಾಠಕ್ಕಾಗಿ ಓಡಿಹೋಗಿದ್ದ. ಇದೊಂದು ಆಶ್ಚರ್ಯ. 


ಸಮುದ್ರೋಲ್ಲಂಘನ  ಮಾಡಿದ. ಇಂದಿಗೂ ಯಾರಿಂದಲೂ  ಅಸಾಧ್ಯವಾದ ಕೆಲಸ. ಆದರೆ ಹನುಂತದೇವರ ವಿಷಯದಲ್ಲಿ ಆಶ್ಚರ್ಯಪಡುವಂತಹದ್ದೇನಲ್ಲ. ನೋಡುಗರ ನಮ್ಮ ಕಣ್ಣಿಗೆ ಮಹದಾಶ್ಚರ್ಯ ಇದರಲ್ಲಿ ಸಂಶಯವೂ ಇಲ್ಲ. 

*ಉದಧಿಯ ದಾಟಿದ ಹನುಮಂತ ....*

ವಾಯುದೇವರ ಅವತಾರಿಗಳಾದ ಹನುಂಮತದೇವರು  ಪಂಪಾಕ್ಷೇತ್ರದಿಂದ ದಕ್ಷಿಣದ ಲಂಕೆಗೆ ಸೀತೆಯನ್ನು ಹುಡುಕ್ಕುತ್ತಾ ಹೊರಟರು. ರಾಮೇಶ್ವರದಿಂದ   ಶತಯೋಜನ ದೂರದ ಲಂಕೆಗೆ ಒಂದೇ ನೆಗತದಲ್ಲಿ‌ಹಾರಿದರು.  ಮಾರ್ಗ ಮಧ್ಯದಿ ಬಂದ ಅನೇಕ ವಿಘ್ನಗಳನ್ನೂ ಎದರಿಸಿದರು, ಗೆದ್ದರು. 

ಅಶೋಕವನದಲ್ಲಿ  ಸೀತೆಯನ್ನು ಕಂಡು, ಸೀತೆಗೆ ಉಂಗುರ ಕೊಟ್ಟು, ಸೀತೆ ಕೊಟ್ಟ ಚೂಡಾಮಣಿಯನ್ನು ಸ್ವೀಕರಿಸಿದರು.  80 ಕೋಟಿ  × ೮ = (       )  ಸೈನಿಕ ಸಂಹರಿಸಿದ ಹನುಮಂತದೆವರು. ಇದು ಅತ್ಯಾಶ್ಚರ್ಯವಲ್ಲವೇ..  ರಾವಣನಿಗೆ ಸಮನಾದ  ಅಕ್ಷಕುಮಾರನ್ನು ಸಂಹರಿಸಿ, ಲಂಕೆಯನ್ನು ಸುಟ್ಟು, ಶ್ರೀರಾಮನಿಗೆ ಚೂಡಾಮಣಿಯನ್ನು ಸಮರ್ಪಿಸಿರುವದು ನಮಗೆ ಮಹಾನ್ ಆಷ್ಚರ್ಯ. 

ಮುಖ್ಯಪ್ರಾಣದೇವರ ಅವತಾರಿಯಾದ ಹನುಂಮಂತ ವಿಷಯದಲ್ಲಿ ಏನೂ ಆಶ್ಚರ್ಯ ಎಂದೆನಿಸುವದಿಲ್ಲ. ಏಕೆಂದರೆ ಅನಂತಜೀವರಾಶಿಗಳ ಅನಾದಿಂಯಿಂದ ಇರುವ ಘೋರಾತಿಘೋಗವಾದ ಸಂಸಾರ ಸಾಗರವನ್ನು ದಾಟಿಸುವ ವಾಯುದೇವರ ಅವತಾರಿಗಳಾದ ಹನುಂತದೇವರಿಗೆ ಈ ಜಡವಾದ ಹುಟ್ಟಿದ ಸಮುದ್ರ ದಾಟಿಬರವದು ಮಹಾನ್ ಕೆಸಲ ಎಂದೇ ಆಗುವದಿಲ್ಲ. 

ಅನಾದಿಯಿಂದ ತಾವು ಸ್ವತಃ ಸಂಸಾಗದಲ್ಲಿ ಇದ್ದರೂ ಸಂಸಾರ ದಾಟಿದವರಂತೆ, ಸಂಸಾರದ ಯಾವ ಸ್ಪರ್ಶವೂ ಇಲ್ಲದೆ ಘಾಳಿಯೂ ತಾಕದೆ ಇರುವ ವಾಯುದೇವರ ನಿಸ್ಸೀಮಬಲ ಅತ್ಯದ್ಭುತ  ಪರಾಕ್ರಮ ಪರಿಶುದ್ಧ ಜ್ಞಾನ ಇರುವಂತಹ ವಾಯುದೇವರಿಗೆ  ಈ ಸಮುದ್ರ ದಾಟಿ ಬಂದಿದ್ದು ಅವರ ವಿಷಯದಲ್ಲಿ ಮಹಾ ಆಶ್ಚರ್ಯವೇನಲ್ಲ. ಈ ಸಮುದ್ರೋಲ್ಲಂಘನೆಯ ಕೋಟಿಪಟ್ಟು ಹೆಚ್ಚಾದ ಬಲ ನಮ್ಮ ವಾಯುದೇವರಿಗೆ ಹಮನುಂತ ದೇವರಿಗೆ ಇದೆ. 

*ಆರೋಗ್ಯಪ್ರದ ಹನುಮಂತ...*

ಹನಯಮಂತ ದೇವರ ಭಕ್ತರು ನಾವು ಎಂದಾದರೆ ನಮ್ಮ ಆಪತ್ತುಗಳನ್ನು ಪರಿಹರಿಸುವ ಜವಾಬ್ದಾರಿ ಅವರದು ಎಂದಾಗುತ್ತದೆ. ಇವತ್ತು ಬಂದ ಅತೀ ದೊಡ್ಡ ಆಪತ್ತಿಗೆ ಔಷಧಿ ರೂಪ, ಔಷಧಿ ಪ್ರದ, ಔಷಧಿ ನಿಯಾಮಕ ಹನುಂಮತದೇವರೇ. 

ಶ್ರೀರಾಮದೇವರ ಆಜ್ಙೆಯಂತೆ ಎರೆಡೆರಡು‌ಬಾರಿ ಗಂಧಮಾದನ ಪರ್ವತಕ್ಕೆ ತೆರಳಿ‌ ಸಂಜೀವನಿ ಪರ್ವತ ತಂದು ಕೋಟಿ ಕೋಟಿ ಕಪಿಗಳನ್ನು, ಲಕ್ಷ್ಮಣನನ್ನೂ ಬದುಕಿಸಿ ಈ ಹನುಮಂತ ದೇವರ ಮಹಿಮೆ ಆಶ್ಚರ್ವೆನಿಸುವದಿಲ್ಲವೇ... ಇಂತಹ ಹನುಮಂತದೇವರಿಗೆ  ಈ *ಕೋರೋನಾ* ಸವಾಲಿನ ವಿಷಯವೇ ಅಲ್ಲ. ಮೊರೆಹೋಗಬೇಕು. ಭಕ್ತಿ ಮಾಡಬೇಕು ಅಷ್ಟೆ.

ಹನೂಮಾನ್ ಅನಂತ ಜ್ಙಾನಪೂರ್ಣರು. ಅನಂತ ಬಲಪೂರ್ಣರು. ಅನಂತ ಉಪಾಯವಂತರು. ಇರುವ ಭಕ್ತಿ ಅನಂತ. ಕ್ಷಣ ಕ್ಷಣಕ್ಕೆ ಬೆಳೆಯುವ ಜ್ಙಾನ ಭಕ್ತಿಗಳೂ ಅನಂತ. ಇರುವ ಗುಣಗಳೂ ಅನಂತ. ತಿಳಿದ ಭಗವದ್ಗುಣಗಳು ಅನಂತಾನಂತ. ನಿಯಮನ ಮಾಡುವ ಶಕ್ತಿ ಅನಂತ. ನಿಯಮ್ಯರಾದ ಜೀವರೂ ಅನಂತ. ದೇವರ ಸೇವೆ ಅನಂತ. ದೇವರಿಗೆ ಬೇಡುವದು ಇಲ್ಲವೇ ಇಲ್ಲ. ಬೇಡಿದರೆ ಜ್ಙಾನ ಭಕ್ತಿಗಳನ್ನು ಮಾತ್ರ. ಈ ಒಂದೊಂದು ಗುಣಗಳೂ ಅತ್ಯಾಶ್ಚರ್ಯತಮವಾದವುಗಳು. 

*ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮರೋಗತಾ | ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ಸ್ಮರಣಾತ್ ಭವೇತ್ ||*

"ಅತಿಸೂಕ್ಷ್ಮ ನಿರ್ಣಾಯಾತ್ಮಕ ಬುದ್ಧಿ. ಎಂತಹದೇ ಆಪತ್ತು ಬಂದರೂ ಎದುರಿಸುವ ಹಾಗೂ ಗೆದ್ದು ಬರುವ ಬಲ. ನಿರ್ಮಲ ಯಶಸ್ಸು. ಅಧರ್ಮವನ್ನು ಎದುರಿಸುವ ಧೈರ್ಯ. ಧರ್ಮಮಾಡುವಾಗ ಸತ್ಕಾರ್ಯ ಮಾಡುವಾಗ ನಿರ್ಭಯತೆ. ಸಂಪೂರ್ಣ ಆರೋಗ್ಯ. ಸತ್ಕಾರ್ಯಗಳಲ್ಲಿ ಆಲಸ್ಯವಿಲ್ಲದೇ ನಿರಂತರ ಕ್ರಿಯಾಶೀಲತೆ. ದೇವರನ್ನು ಕೊಂಡಾಡುವ ವಾಕ್ಚಾತುರ್ಯ" ಈ  ಎಂಟೂ ಗುಣಗಳೂ ಹನುಂತ ದೇವರ ಸ್ಮರಣೆಯಿಂದ ಒದಗಿ ಬರುವಂಹದ್ದೇ. ಆದ್ದರಿಂದ ಇಂದು ವಿಶೇಷವಾಗಿ ಸ್ಮರಿಸೋಣ. ಈ ಶ್ಲೋಕವನ್ನು ನಿತ್ಯವೂ ಪಠಿಸೋಣ...


*✍🏽✍🏽ನ್ಯಾಸ......*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

ಗೆಳೆತನ ತುಂಬ ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ.

* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*