*ಪ್ರಾಣೋಪಸಾಕಾಃ ವಿಗತಪ್ರಾಣಾಃ - ವಿಶ್ವೇಶಾರ್ಯೇ ದಿವಂಗತೇ*
*ಪ್ರಾಣೋಪಸಾಕಾಃ ವಿಗತಪ್ರಾಣಾಃ - ವಿಶ್ವೇಶಾರ್ಯೇ ದಿವಂಗತೇ* ಹತ್ತೊಂಭತ್ತು ಹಾಗೂ ಇಪ್ಪತ್ತನೆಯ ಶತತಮಾನದ *ಯುಗಪುರುಷರು ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವೇಶತೀರ್ಥರು.* *ಕೃಷ್ಣ ವಿಠ್ಠಲ - ಪ್ರಾಣರ ದಾಸಾನುದಾಸರು.* ಎಂಟನೇಯ ವರ್ಷಕ್ಕೆ ಆಶ್ರಮವನ್ನು ಸ್ವೀಕರಿಸಿದ ಪುಣ್ಯಾತ್ಮ. ಅಂದಿನಿಂದ ಇಂದಿನ ವರೆಗೂ ಶ್ರೀಮದಾಚಾರ್ಯರಿಂದ ಪ್ರತಿಷ್ಠಾಪಿತ, ತಮ್ಮ ಉಪಾಸ್ಯಮೂರ್ತಿ *ಉಡಪಿಯ ಶ್ರೀಕೃಷ್ಣ* ಹಾಗೂ ಶ್ರೀಮದಾಚಾರ್ಯರಿಂದ ದತ್ತವಾದ ಪೂಜಿತವಾದ *ವಿಠ್ಠಲ ದೇವರ* ನಿರಂತರ ಆರಾಧಕರು. ವಾಯುಸ್ತುತಿಯ ಪುರಶ್ಚರಣದ ಮುಖಾಂತರ *ಪ್ರಾಣದೇವರ* ಮಹಾ ಪೂಜಕರು ಆರಾಧಕರು. ಈ ಮಹಾದೇವರುಗಳು ಅಧಿಷ್ಠರು, ಇರುವ ಕೋಟಿ ಗುಣಗಳೆಲ್ಲವೂ ಈ ಮೂರ್ವರ ಗುಣಗಳ ಪ್ರತಿಬಿಂಬಗುಣಗಳೇ ಎಂದು ಭಾವಿಸಿದವರು, ಚಿಂತಿಸಿದವರು ಇವರು. ಇಂದಿನ ಸಕಲವೈಭವಗಳೂ ಈವರೆಲ್ಲರ ದತ್ತವಾದವುಗಳು. ಇವುರುಗಳ ಸೇವೆಗೆ ಮುಡುಪಾಗಿರಲಿ ಎಂದು ತಮ್ಮನ್ನು ತಾವು ಸಮರಗಪಿಸಿಕೊಂಡವರು ಇವರು. *ಶ್ರೀಮಧ್ವಸಿದ್ಧಾಂತ ದೀಕ್ಷಾಬದ್ಧರು.* *ಅಂತೇ ಸಿದ್ಧಸ್ತು ಸಿದ್ಧಾಂತಃ ಮಧ್ವಸ್ಯಾಗಮ ಏವ ಹಿ" ಶ್ರೀಮದಾಚಾರ್ಯರ ಸಿದ್ಧಾಂತವೇ ಸಿದ್ಧಾಂತ. ಅದುವೇ ಮುಕ್ತಿ ಸಿದ್ಧಾಂತ. ಅಂತೆಯೇ *ಶ್ರೀಮನ್ಯಾಸುಧಾ ಪಾಠ* ಒಂದಿನವೂ ಬಿಟ್ಟವರಲ್ಲ. ಸಂಕೋಚಮಾಡಿದವರೂ ಅಲ್ಲ. ಅಂತೆಯೇ ಇಂದಿಗೆ ಮುವತ್ತೈದಕ್ಕೂ ಮಿಗಿಲಾಗಿ ಶ್ರೀಮನ್ಯಾಸುಧಾ ಮಂಗಳ ಮಹೋತ್ಸವ...