*ಎಂದಿಗೂ ತುಳಿಯುವವರು ಬಲಿಷ್ಟರಾಗಿಲ್ಲ, ಆಗುವದೂ ಇಲ್ಲ. ಆದರೆ......*
*ಎಂದಿಗೂ ತುಳಿಯುವವರು ಬಲಿಷ್ಟರಾಗಿಲ್ಲ, ಆಗುವದೂ ಇಲ್ಲ. ಆದರೆ......*
ಇನ್ನೊಬ್ಬರನ್ನು ತುಳಿಯುವವ ಸಾಮಾನ್ಯವಾಗಿ ದುರ್ಬಲನೇ ಆಗಿರುತ್ತಾನೆ. ತುಳಿತಕ್ಕೆ ಒಳಗಾದವರು ಸಾಮಾನ್ಯವಾಗು ಪ್ರಬಲನೇ. ಆದರೆ.... ಇಂದು ತುಳಿತಕ್ಕೆ ಒಳಗಾದವರೇ ದುರ್ಬಲರಾಗಿದ್ದಾರೆ"
ತುಳಿತಕ್ಕ ಒಳಗಾದವ ಪ್ರಬಲ. ಆದರೆ ಇಂದು ದುರ್ಬಲನಾಗುತ್ತಾದ್ದಾನೆ. ಯಾಕೆ ಅಂದರೆ ತನ್ನಲ್ಲಿರುವ ಬಲವನ್ನು ಕಳೆದುಕೊಳ್ಳುತ್ತಿದ್ದಾನೆ. ಆದ್ದರಿಂದ ದುರ್ಬಲನಾಗುತ್ತಿದ್ದಾನೆ.
*ಈ ಅವಸ್ಥೆ ಬರುಲು ಕಾರಣ....*
ನಮ್ಮಲ್ಲಿ ಎಲ್ಲ ಬಲಗಳಿವೆ. ಧನ ಮನೆ ಐಶ್ವರ್ಯ ಇತ್ಯಾದಿ ನೂರಾರು ಬಲಗಳು ಇವೆ. ಆದರೆ ಈ ಎಲ್ಲ ಬಲಗಳಿಗೆ ಮೂಲವಾದ, ಬಲ ತುಂಬುವ ಬಲ ಮಾತ್ರ ಇಲ್ಲ. ಆ ಬಲವೇ ನಮ್ಮ ಮೂಲ ಬಲ,ಅದುವೇ ಆಧ್ಯಾತ್ಮಿಕ ಬಲ. ಆ ಬಲ ಬರುವದೇ *ಗಾಯತ್ರೀ ಜಪದಿಂದ.* ಗಾಯತ್ರೀ ಸಿದ್ಧಿಯ ಮೂಲಬಲವಿಲ್ಲದೇ ಇರುವದರಿಂದಲೇ ಅತ್ಯಂತ ದುರ್ಬಲರಾಗಿದ್ದೇವೆ. ಎಲ್ಕರೂ ತುಳಿತಾ ಇದ್ದಾರೆ....
*ಧಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜೋ ಬಲಂ ಬಲಮ್*
ಕ್ಷತ್ರಿಯ ರಾಜ ಚಕ್ರವರ್ತು ಬಲಿಷ್ಠ ವಿಶ್ವಾಮಿತ್ರ ವಸಿಷ್ಠರ ಬ್ರಹ್ಮಬಲದ ಮುಂದೆ ತಲೆಬಾಗಿದಾಗ ಹೇಳಿದ ಮಾತು ಇದು. ಯಾವ ಬಲದಿಂದ ಬಲಿಷ್ಠರಾಗಿ ಇದ್ದೆವು. ಜಗತ್ತು ತಲೆಬಾಗುತ್ತಿತ್ತು . ಇಂದು ಆ ಬಲವಿಲ್ಲದೆ ಇರುವದರಿಂದಲೇ ಅದೇ ಜಗತ್ತು ಇಂದು ನಮ್ಮನ್ನು ತುಳಿದು ಹಾಕುತ್ತಿದೆ. "ತುಳಿಯುವವರು ಬಲಿಷ್ಟರಾಗಿಲ್ಲ. ತುಳಿತಕ್ಕೆ ಒಳಗಾದವರು ದುರ್ಬಲರಾಗಿದ್ದಾರೆ" ಇದು ಸತ್ಯ.
*ಗಾಯಂತಂ ತ್ರಾಯತೇ ಯಸ್ಮಾತ್ ಗಾಯತ್ರೀ ತ್ವಂ ತತಸ್ಮೃತಃ*
ಇಪ್ಪತ್ತು ನಾಲಕು ಅಕ್ಷರದ ಗಾಯತ್ರಿ ಜಪವನ್ನು ಯಾರು ನಿತ್ಯ ೧೦೦೮ ಜಪ ಮಾಡುತ್ತಾರೆಯೋ ಅವನು ಮಹಾ ಬಲಿಷ್ಠ. ಜೀವನದಲ್ಲಿ ಇಪ್ಪತ್ತುನಾಲಕು ಲಕ್ಷವಾಗುವದು ಅತ್ಯಂತ ಅನಿವಾರ್ಯ. ಜಪ ರೂಪ ಗಾಯನವನ್ನು ಯಾರು ಮಾಡುತ್ತಾರೆ ಅವರನ್ನು ಎಲ್ಲ ತರಹದಿಂದಲೂ ರಕ್ಷಿಸುವದೇ ಕಾಯಕವಾಗಿಟ್ಟುಕೊಂಡಿದ್ದಾನೆ ಶ್ರೀಹರಿ. ಅಂತೆಯೇ ಆ ಮಹಾಂತನ ಹೆಸರು ಗಾಯತ್ರೀ ..
*ಲಾಭವೇನು....??*
ಗಾಯತ್ರೀ ಸಿದ್ಧಿ ರೂಪ ಬಲವಿರುವಲ್ಲಿ ....
ದಾರಿದ್ರ್ಯವಿರಬಹುದು
ಸೌಖ್ಯಕ್ಕೆ ಕೊರೆತೆ ಇರಲಾರದು.
ಎಲ್ಲ ವಿಧದ ಸಂತ್ತಿನಿಂದಲೂ ದೂರಾಗಿರಬಹುದು, ದೈವೀ ಸಂಪತ್ತಿಗೆ ಕಡಿಮೆ ಇರಲಾರದು.
ಶತ್ರುಗಳು ಅಪಾರವಿರಬಹುದು, ಪರಾಜಯ ಇರಲಾರದು.
ನಮಗಿಂತಲೂ ಬುದ್ಧಿವಂತರು ನೂರಾರು ಜನರಿರಬಹುದು, ಯಶಸ್ಸು ನಮಗೇ.
ಬುದ್ಧಿಶಕ್ತಿ, ಜ್ಙಾನಸಂಪತ್ತು, ಐಶ್ವರ್ಯ, ಸುಲಕ್ಷಣಗಳು, ಶಾಂತಿ ಸಮೃದ್ಧಿಗಳು, ಸಜ್ಜನಿಕೆ, ಧಾರ್ಮಿಕತೆ, ಸುಖ, ಸಂತೃಪ್ತಿ, ಅಪೇಕ್ಷಿತಫಲ, ಇಷ್ಟಾರ್ಥಸಿದ್ಧಿ, ಎಲ್ಲವೂ ಗಾಯತ್ರೀ ಇರುವಲ್ಲಿ ಇದೆ. ಸ್ವಯಂ ದೇವರು ದೇವತೆಗಳು ಎಲ್ಲ ಗುರುಗಳು ಬೆನ್ನಿಗೆ ನಿಲ್ಲವವರು. ತಾನು ಮಹೋನ್ನತ ಮಟ್ಟಕ್ಕೆ ಏರುವವನು.
ಸಕಲ ಪಾಪಕ್ಷಯಕ್ಕೆ ಬೇಕು ಗಾಯತ್ರೀ.
ಅಪಾರ ಪುಣ್ಯಕ್ಕೆ ಬೇಕು ಗಾಯತ್ರೀ.
ಗತ ವೈಭವ ಮರುಕಳಿಸಲು ಬೆಕು ಗಾಯತ್ರೀ.
ದೇವರನ್ನೊಲಿಸಲು ಬೇಕು ಗಾಯತ್ರೀ.
ದೇವರ ದಾಸ ಎಂದಾಗಲು ಬೇಕು ಗಾಯತ್ರೀ.
ಇಂದಿನಿಂದ ಇದನ್ನು ಓದಿದ ಎಲ್ಲ ಪುರುಷರೂ ಸೇರಿ ಗಾಯತ್ರೀ ಜಪವನ್ನು ಮಾಡೋಣ. ಓದಿದ ತಾಯಂದಿರು ಮಕ್ಕಳಿಂದ ಮಾಡಿಸಿ. ಗೆಳತಿಯರು ತಮ್ಮ ಗೆಳಯರಿಂದ ಮಾಡಿಸಿ. ಒಟ್ಟಾರೆ ಈ *ಬ್ರಹ್ಮ ಬಲವೇ ಬಲ*. ಈ ಒಂದು ಬಲವಿದ್ದವರೇ ಬಲಿಷ್ಠ. ಎಷ್ಟು ತುಳಿಯುವವರು ಜಗತ್ತಿನಲ್ಲಿ ಬಂದರೂ ಗೆಲವು ಗಾಯತ್ರೀ ಸಿದ್ಧನಿಗೇ.....
(ಬರುವ ಅಮಾವಾಸ್ಯೆ ಗ್ರಹಣದ ಪ್ರಸಂಗದಲ್ಲಿ ಕನಿಷ್ಠ ಮೂರು ಸಾವಿರ ಜಪ ಮಾಡೋಣ. ಕನಿಷ್ಠ ಸಿದ್ಧರು ಎಂದು ಆಗೋಣ.)
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments