*ಬ್ರಹ್ಮಾತ್ಮ ದಾಸರು....೬* *ಆಚಾರ್ಯರ ಆರವತ್ತರ ಅವಭೃತ*

*ಬ್ರಹ್ಮಾತ್ಮ ದಾಸರು....೬*

*ಆಚಾರ್ಯರ ಆರವತ್ತರ ಅವಭೃತ*

ನಮ್ಮ ಸ್ವರೂಪೋದ್ಧಾರಕ ಗುರುಗಳ "ಆರವತ್ತರ ವೈಭವದ ಉತ್ಸವ" ಅವರ್ಣನೀಯವಾಗಿ ವೈಭವೋಪೇತವಾಗಿ ಐದು ದಿನಗಳವರೆಗೆ ಸಾಗಿ ನಿನ್ನೆ ಸಂಪನ್ನಗೊಂಡಿತು. 

ಉತ್ಸವದಲ್ಲಿ ದೇವತಾರಾಧನೆ, ಹೋಮ ಹವನ, ಅನ್ನದಾನ, ದ್ರವಿಣದಾನ, ಅವಭೃಥಸ್ನಾನ, ಸಾಮಾಜಿಕ ಕಾರ್ಯಕ್ರಮಗಳು, ಪಾರಾಯಣ ಜಪ ತಪಗಳು, ಅತಿಥಿ ಅಭ್ಯಾಗತರ ಸೇವೆ, ಸಮರ್ಪಣೆ ಹೀಗೆ ಒಂದೊಂದೂ ಭವ್ಯ ಅದ್ಭುತ. 

*ದೇವತಾರಾಧನೆ*

ಇಂದಿನ ಯಾವದೇ ಕಾರ್ಯಕ್ರಮಗಳನ್ನು ಗಮನಿಸಿದರೂ, ಆ ಕಾರ್ಯಕ್ರಮದಲ್ಲಿ ದೇವತಾರಾಧನೆ ಉಳಿದು ಎಲ್ಲ ವೈಭವಗಳೂ ಇರುತ್ತವೆ. Tip top ಮೊದಲಾದ 5* ಹಾಲಿನಲ್ಲಿ ನಮ್ಮ ಕಾರ್ಯಕ್ರಮವನ್ನು ನಾವು ಮಾಡಿಕೊಂಡಾಗ ಅಲ್ಲಿ ದೇವತಾರಾಧನೆ ತುಂಬ ಕಠಿಣ. ನಮ್ಮ ಆಚಾರ್ಯರ ಕಾರ್ಯಕ್ರಮ ಹಾಗಾಗಲಿಲ್ಲ. ಪ್ರತೀ ಹಂತದಲ್ಲಿಯೂ ದೇವತಾರಾಧನೆಯಾಗುವಂತೆ ಸ್ವಯಂ ಪೂ ಆಚಾರ್ಯರು ಮತುವರ್ಜಿ ವಹಿಸಿದ್ದರು. ಅಂತೆಯೇ ವೈಭವ. ಶ್ರೀನಿವಾಸನ‌ನಿತ್ಯ ಪೂಜೆ.‌ಮುಖ್ಯಪ್ರಾಣರಿಗೆ ಪವಮಾನದ ಅಭಿಷೇಕ, ನವವೃಂದಾವನ ಗುರುಗಳ ಅಷ್ಟೋತ್ತರ ಪಾರಾಯಣ ಹೀಗೆ ಒಂದೊಂದೂ ಸುಂದರ. ಎಲ್ಲದರ ಮೇಲೆ ರಾಮದೇವರ ಪೂಜ ವೈಭವ.

*ಹೋಮ ಹವನ*

ಷಷ್ಠಬ್ಧ ಶಾಂತಿಯ ಅಂಗಭೂತವಾಗಿ ನವಗ್ರಹ ಹೋಮ. ಒಂದೊಂದ ಸಾವಿರ ನವಗ್ರಹ ಆಹುತಿ. ನೂರೆಂಟು ಸಲಾಗುವಂತೆ ಪವಮಾನದ ಆಹುತಿ. ನರಸಿಂಹ ವೆದವ್ಯಾಸ ಧನ್ವಂತ್ರಿ ಮಂತ್ರಗಳ ಹೋಮ. ಷಷ್ಠಿಪೂರ್ತಿಯ ಶಾಂತಿ. ಈ ಎಲ್ಲ ಹೋಮ ಹವನಗಳ ಪರಿಶುದ್ಧ ಕ್ರಮ. ಅಲ್ಲಿ ತಿಳಿಸುವ ಅರ್ಥಾನುಸಂಧಾನ. ನವಗ್ರಹ ಮಂತ್ರಗಳ ಅರ್ಥ ಚಿಂತನ. ಇತ್ಯಾದಿ ಇತ್ಯಾದಿ ಕಣ್ಣು ತುಂಬವಂತಹದ್ದೇ....

*ಅನ್ನದಾನ - ದ್ರವಿಣದಾನ*

ಈ ಕಾರ್ಯಕ್ರಮದಲ್ಲಿ ಸೇರಿದ ವಿದ್ವಾಂಸುರುಗಳ ಸಂಖ್ಯೆ ಐದುನೂರಕ್ಕೂ ಹೆಚ್ಚು ಇತ್ತು. ಈ ಎಲ್ಲ ಬ್ರಾಹ್ಮಣೋತ್ತಮರಲ್ಲಿಯೂ ಭಗವದ್ರೂಪದ ಚಿಂತನೆ ಆವಾಹನೆ. ಪಾದಪೂಜೆ. ಬ್ರಾಹ್ಮಣ ಪೂಜೆ. ಕೈ ತುಂಬ ದಕ್ಷಿಣೆ. ರಜತ ಕಲಶ, ರಜತ ಪೀಠ ಇವುಗಳ ದಾನ. 

ಈಗಿನ‌ ಕಾರ್ಯಕ್ರಮಗಳಲ್ಕಿ ಮಡಿವಂತರಿಗೆ ಊಟ ಸಿಗುವದೇ ಕಷ್ಟ. ಅಂತಹದ್ದರಲ್ಲಿ ಸುಧಾ ವಿದ್ವಾಂಸರುಗಳೇ ಶುದ್ಧ ಮಡಿಯಿಂದ ಬಡಿಸುವದು ಎಂದರೆ ಆ ವೈಭವ ಮತ್ತೆ ಸಿಗದು. ನಿತ್ಯವೂ ರುಚಿ ರುಚಿ ಪದಾರ್ಥದ ನೈವೇದ್ಯ. ಒಂದರ್ಥದಲ್ಲಿ ಇಚ್ಛಾ ಭೊಜನವೇ ಆಗಿತ್ತು. 

*ತುಲಾಭಾರ...*

ಅತ್ಯಂತ ಹೊಸ consept ಅಲ್ಲಿ ತುಲಾಭಾರ ಜರುಗಿತು. ತುಲಾಭಾರ ಇದು ವೈಭವದ ಸಂಕೇತ ಎಂದು ನಾವೆಲ್ಲ ಭಾವಿಸಿದ್ದೇವು. ಪೂಜ್ಯ ಆಚಾರ್ಯರು ಹೇಳಿದರು ಇದು ಪ್ರಾಯಶ್ಚಿತ್ತರೂಪ ವಾದದ್ದು. ಮಾಡಿದ ಆದ ಪಾಪಗಳು ಕಳೆದುಕೊಳ್ಳಲು ತುಲಾಭಾರ ಯೋಗ್ಯ ಎಂದೇ ಭಾವಿಸಬೇಕು ಎಂದು. ದೇಹಕ್ಕೆ ತುಲಾಭಾರ ಮಾಡಬಹುದೇ ಹೊರತು ಗುಣ ಜ್ಙಾನ ಇವುಗಳಿಗೆ ತುಲಾಭಾರ ಅಸಾಧ್ಯ. ಹೀಗೆ ನಾನಾ ಮಾತುಗಳನ್ನು ತಿಳಿಸಿ ತುಲಾಭಾರದ ಹೊಸ ಮೆರಗನ್ನರೆ ಆಚಾರ್ಯರು ತೋರಿಸಿಕೊಟ್ಟರು. 

*ವೈಭವದ ಅವಬೃತಸ್ನಾನ...*

ಸ್ವಯಂ‌ ನಾರಾಯಣನಿಂದ, ಶ್ರೀಮದಾಚಾರ್ಯರಿಗೆ ಕೊಡಲ್ಪಟ್ಡ ವ್ಯಾಸಮುಷ್ಠಿಗಳಿಗೆ ಅಭಿಷೇಕಿಸಿದ ತೀರ್ಥ. ದೇವರ ಒಅದ ಸೋಕಿದ ಗಂಗೆಯ ತೀರ್ಥ. ಯಮುನಾದಿ ಕಾಗಿನಾ ಪಿನಾಕಿ ಪರ್ಯಂತ ಎಲ್ಲ ನದಿಗಳ ತೀರ್ಥ. ಬ್ರಹ್ಮಪುತ್ರ ಮೊದಲಾದ ನದಗಳ ತೀರ್ಥ. ಸಾಗರ ಸಂಗಮಗಳ ತೀರ್ಥ. ಸ್ವಸಮಿಪುಷ್ಕರಣಿ ಆರಂಭಿಸಿ ಅನೇಕ ತೀರ್ಥಗಳ ತೀರ್ಥ. ಆ ಎಲ್ಲ ಇನ್ನೂರಕ್ಕೂ ಮಿಗಿಲಾದ ತೀರ್ಥಗಳಿಂದ ವೈಭವದ ಅವಭೃತ. 

*ಸಮರ್ಪಣೆ...*

ತಂದೆ ಏನೆಲ್ಲ ಕೊಟ್ಟಾನು ಆದರೆ ಜ್ಙಾನ ಕೊಡ. ಜ್ಙಾನವನ್ನೂ ಕೊಟ್ಟಾನು ಮುಕ್ತಿ ಮಾರ್ಗ ಕೊಡ. ಆದರೆ ನಮ್ಮ ತಂದೆ ಮಾತ್ರ ನಿರಂತರ ಪಾಠಪ್ರವಚನ ಮಾಡುವ ವಿದ್ಯಾಪೀಠವನ್ನೇ ಕೊಟ್ಟಿದಾರೆ ಎಂದರೆ ಇದೇ ನನ್ನ ಸೌಭಾಗ್ಯ. ನನ್ನಲ್ಲಿರುವ ಸಕಲವೂ ಅವರದೇ. ತಂದೆ ತಂದಾಯಗಬಹುದು. ಗುರು ಆಗಲಾರ. ಗುರುವೂ ಆಗಿ ತಂದೆಯೂ ಆಗಿ ಉಳಿಯುವದು ದುರ್ಲಭ. ಆ ಸೌಭಾಗ್ಯ ನನಗೆ ಸಿಕ್ಕಿರುವದಕ್ಕೆ ಈ ಸರ್ವಸ್ವವೂ ಆ ಮಹಾ ಗುರುಗಳಿಗೇ ಅರ್ಪಿತವಾಗಬೇಕು *ಅನೇನ ಭಾವಿ ಯತ್ಪುಣ್ಯಂ ಅವಾಪ್ನೋತು ಗುರುರ್ಮಮ* ಎಂದು ಗುರುಗಳ ಅಡೆದಾವರೆಗಳಲ್ಲಿ  ಸಮರ್ಪಿಸಿದರು.

ಹೀಗೆ ಐದು ದಿನಗಳ ವೈಭವದ ಕಾರ್ಯ ಜಗತ್ತಿಗೆ ಒಂದು ಆದರ್ಶ ರೂಪದಲ್ಲಿ ಜರುಗಿತು. ಕಣ್ತುಂಬಿಕೊಂಡ ನೂರಾರು ವಿದ್ವಾಂಸರು, ಸಾವಿರಾರು ಜನರೇ ಸಾಕ್ಷಿ...... 

*ಸ್ವರೂಪೋದ್ಧಾರಕ ಗುರುಗಳಿಗೆ ಕೃತಿ ನಮನ*

" *ವಿ* ಎಂದು ನುಡಿಯಲು ವಿದ್ಯಾಪ್ರದಾಯಕ.
*ದ್ಯಾ* ಎನಲು ಅವಿದ್ಯಾ ವಿನಾಶಕ. 
*ಸಿಂ* ಎನಲು ಸಿರಿಸಂತ್ಪ್ರದಾಯಕ.
*ಹ* ಎನಲು ಹರಿಯನೇ ತೋರುವ.."  ಇಂತಹ ಗುರುಗಳ‌ ಸಾನ್ನಿಧ್ಯ ದೊರೆತದ್ದೇ ನನ್ನ ಸೌಭಾಗ್ಯ. *ಜನುಮ‌ಜನುಮಕೆ ಮರೆಯ ಬೇಡವೋ ನಮ್ಮೆಲ್ಲರ ಹೃದ್ವಾಸ...*

*✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*