ಸೂರ್ಯ ಗ್ರಹಣ

*ಸೂರ್ಯ ಗ್ರಹಣ*

"ಸೂರ್ಯ ಗ್ರಹಣ" ಇದೊಂದು ಸಾಧಕರಿಗೆ ಯೋಗ್ಯವಾದ ದಿನ. ಇಂದು ಮಾಡಿದ ಪ್ರತೀ ಸಾಧನೆಗೂ ಕೋಟಿಪಟ್ಟು ಹೆಚ್ಚಿನ ಫಲ. ಅಂತೆಯೇ ಸಾಧಕರು ಇಂದಿನ ದಿನ ಹೆಚ್ಚೆಚ್ಚು ಸಾಧನೆಗೆ ಇಳಿಯುವವರು. 

*ಕೃಷ್ಣ ಪರಮಾತ್ಮ....*

ಸ್ವಯಂ ಶ್ರೀಕೃಷ್ಣ ಪರಮಾತ್ಮ "ಸೂರ್ಯಗ್ರಹಣ" ಬಂದಾಗ ಸಂಪೂರ್ಣ ದ್ವಾರಕಾ ಜನರನ್ನೆಲ್ಲ *ಕುರುಕ್ಷೇತ್ರ* ಕರೆದೊಯ್ದು, ಅಲ್ಲಿಯೇ ವೈಭವದ ಸೂರ್ಯಗ್ರಹಣ ಆಚರಿಸಿದ ಕಥೆಯನ್ನು ತಾತ್ಪರ್ಯನಿರ್ಣಯದಲ್ಲಿ ಕೇಳುತ್ತೇವೆ. 

*ಆರು ಗ್ರಹಗಳಿಂದ ಯುಕ್ತವಾದ ಗ್ರಹಣ...*

ನಾಳೆಯದಿನ ಬರುವ ಸೂರ್ಯಗ್ರಹಣದ ಆಮಾವಾಸ್ಯೆಯ ಈ ದಿನ ಆರು ಗ್ರಹಗಳಿಂದ ಯುಕ್ತವಾಗಿದೆ. ಸೂರ್ಯ, ಮಂಗಳ, ಬುಧ ಚಂದ್ರ,  ಶನಿ, ಕೇತು, ಹೀಗೆ ಆರು ಗ್ರಹಗಳಿಂದ ಯುಗ್ತವಾದ ಈ ಸಮಯ ಬಹಳ ಘೋರ ಮತ್ತು ಅಮಂಗಲ ದಿನ. ಈ ಪ್ರಸಂಗದಲ್ಲಿ‌ ನಾನಾವಿಧ ಉತ್ಪಾತಗಳು ಆಗಬಹುದು ಎಂದು ನಮ್ಮ ಗುರುಗಳು ಹಾಗೂ ಉಳಿದ ಅನೇಕ ಜ್ಯೋತಿಷಿಗಳು ತಿಳಿಸಿದ್ದಾರೆ. ಆದ್ದರಿಂದ ಉತ್ಕೃಷ್ಟವಾಗಿ  ಜಪ‌ ಪಾರಾಯಣ ಮಾಡುವದು ಅನಿವಾರ್ಯ. 

*ಏನೇನು ಮಾಡಬಹುದು...*

ಸೂರ್ಯಗ್ರಹಣದ ಈ ಪ್ರಸಂಗದಲ್ಲಿ ಅತೀ ಮುಖ್ಯವಾಗಿ  ಗ್ರಹಣದ ಆರಂಭದಲ್ಲಿ ಹಾಗೂ ಮುಗಿದ ನಂತರ ಎರಡೂ ಬಾರಿಯೂ ಸ್ನಾನ ಮಾಡುವದು.  ಪುರುಷರು  ಸಾವಿರದೆಂಟು ಸಕ ಗಾಯತ್ರೀಜಪ , ವಿಷ್ಣು ಸಹಸ್ರನಾಮ, ಏಕದಾಸಾಧ್ಯಾಯ ಗೀತೆ, ನಾರಾಯಣ ವರ್ಮ, ಇತ್ಯಾದಿಗಳನ್ನು ಅನಿವಾರ್ಯ ಮಾಡಲೇಬೇಕು. ಟೀಕಾಕೃತ್ಪಾದರ ಹಾಗೂ ರಾಯರ ಸ್ತೋತ್ರಪಾರಾಯಣಕ್ಕೆ ವಿಶೆಷ ಫಲವನ್ನೂ ಹೇಳುತ್ತಾರೆ.

*ದಾನಕ್ಕೆ ಮಹಾಫಲ*

ವಿಶೇಷ ರಿತಿಯಲ್ಲಿ ಭಂಗಾರ, ಬೆಳ್ಳಿ, ಧನ, ದ್ರವಿಣ , ತಿಲ, ಕೂಷ್ಮಾಂಡ ಈ ಮೊದಲಾದ ಖಂಡಿತ ಮಾಡಬೇಕು.  ಪ್ರತೀ ದಾನಗಳಿಗೂ ಕೋಟಿಪಟ್ಟು ಹೆಚ್ಚಿನ ಫಲವಿದೆ. 

 ಶ್ರೀಮಟ್ಟೀಕಾಕೃತ್ಪಾದರು ಸುಧೆಯಲ್ಲಿ ಒಂದು ಮಾತನ್ನು ತಿಳಿಸುತ್ತಾರೆ, "ಮುಂದೆ ಬರುವ  ಸೂರ್ಯಗ್ರಹಣದ ಪ್ರಸಂಗದಲ್ಲಿ, ಕುರುಕ್ಷೇತ್ರಕ್ಕೆ ಹೋಗಿ *ಗೋದಾನ* ಮಾಡುವೆ" ಎಂದು ಸಂಕಲ್ಪ ಮಾಡಿದರೆ ಮಹಾ ಪುಣ್ಯ ಎಂದು ತಿಳಿಸುತ್ತಾರೆ. ಹಾಗಾಗಿ ಗರ್ಹಣದ ಈ ಪ್ರಸಂಗದಲ್ಲಿ ವಿಶೇಷವಾಗಿ ದಾನ ಮಾಡಲೇಬೇಕು. 

(ಇಂದು ಅನೇಕರು ಕುರುಕ್ಷೇತ್ರದಲ್ಲಿ ಇದ್ದಾರೆ. ಯಾರಿಗೆ ಸಾಧ್ಯವಿದೆ *ಗೋದಾನ* ದ ಸಂಕಲ್ಪ ಮಾಡಿ ಮುಂದೊಂದು ದಿನ ಗೋದಾನ‌ಮಾಡಬಹುದು.)

ತಂದೆ ಇಲ್ಲದವರು ಪಿತೃಪ್ರೀತ್ಯರ್ಥಕ ತರ್ಪಣ ಅವಶ್ಯ ಕೊಡಬೇಕು. 

*ಪ್ರದಕ್ಷಿಣೆ ನಮಸ್ಕಾರ*

ಒಂದು ಪ್ರದಕ್ಷಿಣೆಗೆ ಅನಂತಫಲ.‌ ನಮ್ಸ್ಕಾರಕ್ಕೆ ಎಷ್ಟು ಫಲವೋ ಊಹಿಸಬೇಕು. ಹಾಗಾಗಿ ಮೂರುಗಂಟೆಯ ಪೂರ್ಣ ಸಮಯ ಇರುವದರಿಂದ ಬೇಕಾದಷ್ಟು ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಬಹುದು.

*ಸಾಧನೆಯ ಉದ್ಯೇಶ್ಯ*

ಧರ್ಮವಾಗಬೇಕು. ಧಾರ್ಮಿಕತೆ ಬೆಳೆಯಬೇಕು. ಜ್ಙಾನ ಹರಿಯಬೇಕು. ಭಕ್ತಿ ದೃಢವಾಗಬೇಕು. ಗುರುಗಳ ಅನುಗ್ರಹದ ನೆರಳಲ್ಲೇ ಬಾಳಬೇಕು. ಜಪ ಮಂತ್ರಗಳ ಸಿದ್ಧಿಯಾಗಬೇಕು. ವಿಷ್ಣುಪ್ರಿಯನಾಗಿ ಬಾಳಬೇಕು ಹೀಗೆ ಅನೇಕ‌ ಉದ್ಯೇಶಗಯಗಳಿಂದ ಈ ಸಾಧನೆ ಧರ್ಮ ಪಾರಾಯಣ ಇವೆಲ್ಲ ಮಾಡುವದಕ್ಕೆ ನಾಳೆ ಮಾಡಲು ಉದ್ಯುಕ್ತರಾಗೋಣ.....

*✍🏽✍🏽ನ್ಯಾಸ...*
ಗೋಪಾಲದಾಸ. 
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*