*ಈಡೇರಿಸುವ ಸಾಮರ್ಥ್ಯವಿಲ್ಲದಿರೆ ಭರವಸೆಯನ್ನೇ ಕೊಡ ಬಾರದು...*

*ಈಡೇರಿಸುವ ಸಾಮರ್ಥ್ಯವಿಲ್ಲದಿರೆ ಭರವಸೆಯನ್ನೇ ಕೊಡ ಬಾರದು...*

ಭರವಸೆ ಇದು ತುಂಬ ಮಹತ್ವದ ಒಂದು ಅಂಶ. ಭರವಸೆ ಇರುವಲ್ಲಿ ಅಥವಾ ಭರವಸೆಕೊಟ್ಟಲ್ಲಿ  ಅರ್ಧವೇನು ಪೂರ್ಣ ಗೆದ್ದಂತೆಯೇ ಸರಿ. ಗೆಲ್ಲಿಸುವ ವಿಶ್ವಾಸವಿರುವಲ್ಲಿ ಭರವಸೆ ಕೊಡೋಣ. ಗೆಲ್ಲುವ ವಿಶ್ವಾಸವಿರುವಲ್ಲಿ ಭರವಸೆ ಇಡೋಣ. ಇಲ್ಲವಾದಲ್ಲಿ ತುಂಬ ನಿರಾಸೆ ಹತಾಶೆ ಇವುಗಳನ್ನು ಅನುಭವಿಸಬೇಕಾಗತ್ತೆ. 

*ದೇವರಲ್ಲಿ ಭರವಸೆ...*

ದೇವ ತಾ ಎಂದಿಗೂ ಭರವಸೆಯನ್ನು ಕೊಡುವದಿಲ್ಲ. ಕೊಟ್ಟಮೇಲೆ ರಕ್ಷಿಸದೇ ಸಂರಕ್ಷಿಸದೇ  ಇರುವದಿಲ್ಲ. ಇದು ದೇವನ ನಿಯಮ. ದೇವರಲ್ಲಿ ಭರವಸೆ ಇಟ್ಟವರು ಸೋತರು ಎಂದು ಆಗುವದೇ ಇಲ್ಲ. ಕೆಲವೊಮ್ಮೆ ಸೋತಂತೆ ಅನಿಸಿದರೂ, ತಾತ್ಕಾಲಿಕ‌ ಗೆದ್ದ ಶತ್ರುವಿನ ಮುಖಕ್ಕೆ ಆಜೀವನ ಮಸಿ ಹಚ್ಚುವಂತೆ ಮಾಡುವದಕ್ಕಾಗಿ ಗೆಲ್ಲಿಸಿರುತ್ತಾನೆ. ಕೊನೆಗೆ ಸಿಗುವ ಗೆಲುವು ಮಾತ್ರ ಭರವಸೆ ಇಟ್ಟವನಿಗೇ. ಪಾಂಡವರು ಕೌರವರು ಇದಕ್ಕೆ ಪರಿಪೂರ್ಣ ನಿದರ್ಶನ. 

*ಪುಸಿ ಭರವಸೆಯಿಂ  ಆಗುವ ಹಾನಿ.....*

ವ್ಯಕ್ತಿ ಹೇಗೋ ಜೀವನ ಸಾಗಿಸಿರುತ್ತಾನೆ. ಇರುವದರಲ್ಲಿ ತನ್ನ ದೇಹ ಇಂದ್ರಿಯ ಮನಸ್ಸು ಇವುಗಳನ್ನು ಹೊಂದಿಸಿ ಇರುತ್ತಾನೆ. ಕಷ್ಟಗಳನ್ನು ಮೈರೂಢಿಸಿರುತ್ತಾನೆ. ಎಲ್ಲದಕ್ಕೂ ಅಡ್ಜಸ್ಟ್ ಆಗಿರುತ್ತಾನೆ. ತನ್ನ ಜೀವನ ವೈಭವದಿಂದ ಸಾಗಿಸಿರುತ್ತಾನೆ. 

ಈ ಪ್ರಸಂಗದಲ್ಲಿ ಯಾರೋ ಬಂದು ಅನವಶ್ಯಕ ಭರವಸೆಗಳ ಮಹಪೂರವನ್ಬೇ ಕೊಟ್ಟು  ಆಸೆ ಹಚ್ಚಿಸಿ, ಈಡೇರಿಸದೇ ಮಂಗಮಾಯವಾಗಿ ಹೋಗಿಬಿಡುತ್ತಾರೆ. ಆಗ ಪುಸಿ ಭರವಸೆಗೊಳಗಾದವನ ಅವಸ್ಥೆ ಹೇಳತೀರದು.  ಜೀವನದ ಕೊನೆ ಎಂದೇ ಅರ್ಥ. ಅವ ಕೊನೆಯುಸಿರೆಳದರೂ,  ಆತ್ಮ ಹತ್ಯೆ ಮಾಡಿಕೊಂಡರೂ ಆಶ್ಚರ್ಯವೇನಲ್ಲ... 

*ಕಂಡಕಂಡಲ್ಲಿ ಭರವಸೆ ಇಡುವವರನೇಕರು....*

"ದಾರಿದ್ರ್ಯ ಹಾಗೂ ಆಸೆ ಇವುಗಳು ಕೆಲವೊಮ್ಮೆ ಕಂಡಲ್ಲಿ ಭರವಸೆ ಇಡುವಂತೆ ಮಾಡಿಬಿಡುತ್ತದೆ." ಹಣ ವಿಲ್ಲ. ತುಂಬ ಕಷ್ಟ. ದಾರಿದ್ರ್ಯಕ್ಕೆ ಪೂರ್ಣ ಸೆಟ್ ಆಗಿದ್ದ. ತಾನು, ತನ್ನ ಮನೆ, ತನ್ನ ಆಸೆಗಳು, ತನ್ನ ವೈಭವ ಎಲ್ಲವನ್ನೂ ಸರಿಯಾಗಿ ಇಟ್ಟಿದ್ದ. ಶಾಂತಿ ಇಂದ ಸುಖವಾಗಿ ಇದ್ದ.

ಅಷ್ಟರಲ್ಲಿ ಯಾರೋ ಹೇಳುತ್ತಾರೆ ಇಲ್ಲಿ ಹಣ ಹೂಡು. ನಿನಗೆ ದುಪ್ಪಟ್ಟು ಸಿಗತ್ತೆ ಅಂತ. ಒಂದೆಡೆ ದಾರಿದ್ರ್ಯ ಮತ್ತೊಂದೆಡೆ ಆಸೆ ಹಾಗಾಗಿ  ಅವರ ಮೇಲೆ ಪೂರ್ಣ ಭರವಸೆ ಇಟ್ಟ. ಇರುವ ಹಣವೆಲ್ಲ ಹೂಡಿಬಿಡುವ. ಕಡಿಮೆ ಬಿದ್ದಾಗ ಸಾಲವೆತ್ತಿ ಹೂಡಿಬಿಡುವ. 

ಕೊನೆಗೆ ಪುಸಿ ಭರವಸೆಯನ್ನು ಕೊಟ್ಟು ನಂಬಿಸಿದ ಆ ವ್ಯಕ್ತಿಯೂ ಇಲ್ಲ. ಹಣವೂ ಇಲ್ಲ. ಮನೆಯ ರಕ್ಷಣೆಯ ಹೊರೆ. ಲೋನ್ ತಗಿಸಿದ ಹೊರೆ, ಅದರ ಮೇಲೆ ಸಾಲದ ಹೊರೆ. ಈ ಸ್ಥಿತಿಯಲ್ಲಿ  ರೋಡಿಗೇ ಬಂದು‌ ನಿಲ್ಲುವ ಸ್ಥಿತಿ. ಕೊನೆಗೆ ಬರುವ ಅವಸ್ಥೆ ಆತ್ಮಹತ್ಯೆಯ ವರೆಗೂ ತಂದು ನಿಲ್ಲಿಸಬಹುದು. ಇದು ಒಂದು ತರಹದ್ದು ಮಾತ್ರ. ಹೀಗೆ ಪ್ರತಿಯೊಂದರಲ್ಲಿಯೂ ನೋಡಬಹುದು. 

ಹೆಚ್ಚಿನ ಆಸೆ ಕಂಡಲ್ಲಿ ಭರವಸೆ ಮೂಡಿಸುವಂತೆ ಮಾಡಿದರೆ, ದೇವರಲ್ಲಿಯ ಭರವಸೆ ಇರುವದರಲ್ಲಿಯೇ ಶಾಂತಿ ಸಮೃದ್ಧಿಯನ್ನು ಒದಗಿಸುತ್ತದೆ. 

ಮೊನ್ನೆ ಒಂದು ಕಥೆ ಓದಿದೆ... 
ಹಸಿವಿಗೆ ಅಡ್ಜಸ್ಟ ಆದ ಒಬ್ಬ ಭಿಕ್ಷುಕ. ಅವನು ಎಷ್ಟು ದಿನಗಳಿಂದ ಹಸಿವನ್ನು ಮೆಟ್ಟಿನಿಂತಿದ್ದನೋ ಅವನಿಗೇ ಗೊತ್ತಿಲ್ಲ. ಒಂದು ದಿನ ಒಬ್ಬ ಸಿರಿವಂತ "ಊಟಕ್ಕೆ ಹಾಕುವೆ ನಿಲ್ಲು" ಎಂದು ಹೇಳಿ ಅನ್ನದ  ಭರವಸೆ ಕೊಟ್ಟು ಒಳಹೋದ. ಮರತೇ ಹೋದ. ಎಷ್ಟೋ ಹೊತ್ತಾದ ಮೇಲೆ ನೆನಪಾಯ್ತು ಓಡಿಬಂದ. ಅಲ್ಲಿ ಅವನು ಇರಲಿಲ್ಲ. ಅವನ ಹೆಣ ಅಲ್ಲಿ ಇತ್ತು. ಪಕ್ಕದಲ್ಲಿ‌ ಕಾಗದವಿತ್ತು ಓದಿದ.... ಅದರ ಒಕ್ಕಣೆ ಹೀಗಿತ್ತು *ಈಡೇರಿಸುವ ಭರವಸೆ ಅವಷ್ಯವಾಗಿ ಕೊಡು. ಈಡೇರಿಸಲಾಗದ ಭರವಸೆ ಯಾರಿಗೂ ಕೊಡಬೇಕ. ನೀ ಕೊಟ್ಟ ಪುಸಿ ಭರವಸೆ ಇನ್ನೊಬ್ಬರ ಜೀವನಕ್ಕೆ ಮುಳುವಾಗಬಹುದು. "ನಿನ್ನ ಭರವಸೆ ಅವನ ಶಕ್ತಿ ಸಾಮರ್ಥ್ಯಗಳನ್ನೇ ನುಗಿಬಿಡುತ್ತದೆ"* ಎಂದು.... 

ಫಲ ಸಿಗುವಲ್ಲೇ ಭರವಸೆ ಇಡೋಣ. ಫಲ ಕೊಡುವ ವಿಶ್ವಾಸವಿರುವಲ್ಲೇ ಭರವಸೆ ಕೊಡೋಣ..... 

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*