*ಪ್ರಾಣೋಪಸಾಕಾಃ ವಿಗತಪ್ರಾಣಾಃ - ವಿಶ್ವೇಶಾರ್ಯೇ ದಿವಂಗತೇ*
*ಪ್ರಾಣೋಪಸಾಕಾಃ ವಿಗತಪ್ರಾಣಾಃ - ವಿಶ್ವೇಶಾರ್ಯೇ ದಿವಂಗತೇ*
ಹತ್ತೊಂಭತ್ತು ಹಾಗೂ ಇಪ್ಪತ್ತನೆಯ ಶತತಮಾನದ *ಯುಗಪುರುಷರು ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವೇಶತೀರ್ಥರು.*
*ಕೃಷ್ಣ ವಿಠ್ಠಲ - ಪ್ರಾಣರ ದಾಸಾನುದಾಸರು.*
ಎಂಟನೇಯ ವರ್ಷಕ್ಕೆ ಆಶ್ರಮವನ್ನು ಸ್ವೀಕರಿಸಿದ ಪುಣ್ಯಾತ್ಮ. ಅಂದಿನಿಂದ ಇಂದಿನ ವರೆಗೂ ಶ್ರೀಮದಾಚಾರ್ಯರಿಂದ ಪ್ರತಿಷ್ಠಾಪಿತ, ತಮ್ಮ ಉಪಾಸ್ಯಮೂರ್ತಿ *ಉಡಪಿಯ ಶ್ರೀಕೃಷ್ಣ* ಹಾಗೂ ಶ್ರೀಮದಾಚಾರ್ಯರಿಂದ ದತ್ತವಾದ ಪೂಜಿತವಾದ *ವಿಠ್ಠಲ ದೇವರ* ನಿರಂತರ ಆರಾಧಕರು. ವಾಯುಸ್ತುತಿಯ ಪುರಶ್ಚರಣದ ಮುಖಾಂತರ *ಪ್ರಾಣದೇವರ* ಮಹಾ ಪೂಜಕರು ಆರಾಧಕರು. ಈ ಮಹಾದೇವರುಗಳು ಅಧಿಷ್ಠರು, ಇರುವ ಕೋಟಿ ಗುಣಗಳೆಲ್ಲವೂ ಈ ಮೂರ್ವರ ಗುಣಗಳ ಪ್ರತಿಬಿಂಬಗುಣಗಳೇ ಎಂದು ಭಾವಿಸಿದವರು, ಚಿಂತಿಸಿದವರು ಇವರು. ಇಂದಿನ ಸಕಲವೈಭವಗಳೂ ಈವರೆಲ್ಲರ ದತ್ತವಾದವುಗಳು. ಇವುರುಗಳ ಸೇವೆಗೆ ಮುಡುಪಾಗಿರಲಿ ಎಂದು ತಮ್ಮನ್ನು ತಾವು ಸಮರಗಪಿಸಿಕೊಂಡವರು ಇವರು.
*ಶ್ರೀಮಧ್ವಸಿದ್ಧಾಂತ ದೀಕ್ಷಾಬದ್ಧರು.*
*ಅಂತೇ ಸಿದ್ಧಸ್ತು ಸಿದ್ಧಾಂತಃ ಮಧ್ವಸ್ಯಾಗಮ ಏವ ಹಿ" ಶ್ರೀಮದಾಚಾರ್ಯರ ಸಿದ್ಧಾಂತವೇ ಸಿದ್ಧಾಂತ. ಅದುವೇ ಮುಕ್ತಿ ಸಿದ್ಧಾಂತ. ಅಂತೆಯೇ *ಶ್ರೀಮನ್ಯಾಸುಧಾ ಪಾಠ* ಒಂದಿನವೂ ಬಿಟ್ಟವರಲ್ಲ. ಸಂಕೋಚಮಾಡಿದವರೂ ಅಲ್ಲ. ಅಂತೆಯೇ ಇಂದಿಗೆ ಮುವತ್ತೈದಕ್ಕೂ ಮಿಗಿಲಾಗಿ ಶ್ರೀಮನ್ಯಾಸುಧಾ ಮಂಗಳ ಮಹೋತ್ಸವಗಳಗಳನ್ನು ಆಚರಿಸಿದ್ದಾರೆ. ಪ್ರತೀ ಎರಡು ವರ್ಷದ ಮಧ್ವನವಮಿಯ ಸುಮಾರಿಗೆ ಒಂದು ಮಂಗಳವು ಆಗಲೇ ಬೇಕು. ಮುಂದಿನ ತಿಂಗಳಿನಲ್ಲಿಯೇ ಮತ್ತೊಂದು ಮಂಗಳವಿತ್ತು. ಎಷ್ಟೇ ಸಂಚಾರ ಏನೇ ಸಾಮಾಜಿಕ ಕಾರ್ಯಗಳು ಇದ್ದರೂ ಪಾಠ- ಪ್ರವಚನ ಬಿಟ್ಟಿಲ್ಲ.
ನಮ್ಮ ವಿದ್ಯಾಪೀಠದಲ್ಲಿ ಜರುಗುವ, ನಮ್ಮ ಗುರುಗಳು ( ಮಾಹುಲೀ ಆಚಾರ್ಯರು) ಆಚರಿಸುವ ಪ್ರತೀ ಮಂಗಳ ಮಹೋತ್ಸವಗಳಲ್ಲಿ ಭಾಗಿಯಾಗದೇ ಬಿಟ್ಟಿಲ್ಲ. ಎಷ್ಟೇ ಒತ್ತಡವಿದ್ದರೂ ದಿನ ಹೊಂದಾಣಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಳಿ, ಪ್ರೋತ್ಸಾಹಿಸಿ ಶಹಬ್ಬಾಸ್ ಎಂದು ಹೇಳಿ ಅನುಗ್ರಹಿಸದೇ ಹೋಗಿಲ್ಲ. ಕೈ ತುಂಬ ಸಂಭಾವನೆ ಕೊಡದೇ ಮುಗಿಸಿಲ್ಲ. ಸಿದ್ಧಾಂತಾಧ್ಯಾಯಿಗಳಾದ ಎಲ್ಲ ವಿದ್ಯಾರ್ಥಿಗಳಿಗೂ ಈ ಸೌಲಭ್ಯ.
*ಅಗಾಧ ಪಾಂಡಿತ್ಯ. ವಾಕ್ಯಾರ್ಥ ಕೌಶಲ್ಯ.*
ತೊಂಭತ್ತರ ಇಳೆಯಲ್ಲಿಯೂ ಕುಂದದ ವಿದ್ವತ್ತು. ಎಳೆಯರ ಉತ್ಸಾಹ. ವಾಕ್ಯಾರ್ಥ ವಿದ್ವದ್ಗೋಷ್ಠಿಗಳಲ್ಲಿ ವಾಕ್ಯಾರ್ಥ ಮಾಡದೇ ಸುಮ್ಮನೇ ಕುಳಿತ ದಿನವನ್ನೇ ನೋಡುವದಿಲ್ಲ. ವಾದಿ ಯಾರೇ ಇರಲಿ ಮನನೋಯಿಸದೇ, ಸಿದ್ಧಾಂತ ಸ್ಥಾಪನೆಯ ಚಾತುರ್ಯ ಇವರದು. ನಮ್ಮ ಸಿದ್ಧಾಂತ. ಸರ್ವಮೂಲ - ಶ್ರೀಮನ್ಯಾಯಸುಧಾ. ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ ಮಿಗಿಲಾದ ಗ್ರಂಥಗಳಾಗಲಿ. ವ್ಯಾಕರಣ ಮೀಮಾಂಸಾ ಅದ್ವೈತ ವಿಶಿಷ್ಟಾದ್ವೈತ ಮೊದಲಾದ ಉಳಿದ ಸಿದ್ಧಾಂತಗಳ ಗ್ರಂಥಗಳಾಗಲಿ ಇಂದಿಗೂ ಮುಖೋದ್ಗತ. ಕರತಲಾಮಲಕ.
*ಸಾಮಾಜಿಕ ಸೂರ್ಯ.*
ಮಾಧ್ವರ ವಿಷ್ಣು ಭಕ್ತರ ಹಿಂದುಗಳ ಉಳಿವಿಗಾಗಿ ಕ್ಷಣ ಬಿಡದೇ ಓಡಾಡಿದ ಕಳಕಳಿ. ಎಲ್ಲರ ಎಲ್ಲವಿಧ ಅಂಧಕಾರ ಕಳೆಯಲಿ ಎಂದು ತೊಂಭತ್ತರ ಇಳಿವಯಸ್ಸಿನಲ್ಲಿಯೂ ಓಡಾಡಿದ ಸೂರ್ಯ. ಹಿಂದುತ್ವದ ವಿಷಯದಲ್ಲಿ ಹೋರಾಡಿದ ಯುಗುಪುರುಷ. ಅಯೋಧ್ಯೆಯ ರಾಮನ ಮಂದಿರ ವಿಷಯದಲ್ಲಿ ಶ್ರಮವಹಿಸಿದ, ಜೈಲಿಗೂ ಸೇರಿದ ಶ್ರೀರಾಮಭಕ್ತ. ಪ್ರಾಣೋಪಾಸಕ........
.....ಇತ್ಯಾದಿ ಇತ್ಯಾದಿ ನೂರಾರು ಸಾವಿರಾರು ಗುಣ ಸಂಪದ್ಭರಿತರಾದ *ಪರಮ ಪೂಜ್ಯ "ಶ್ರೀಶ್ರೀ ಶ್ರೀವಿಶ್ವೇಶ ತೀರ್ಥರೆಂಬ ಪ್ರಾಣ"* ನಮ್ಮನ್ನಗಲಿ ಶ್ರೀಕೃಷ್ಣ ಪ್ರಾಣರ ಮನೆಗೆ ತೆರಳಿದ್ದು, ಪ್ರಾಣಭಕ್ತರಾದ, ಪ್ರಾಣನಿಂದ ಉಪಕೃತರಾದ ನಮ್ಮೆಲ್ಲರನ್ನೂ ವಿಗತ ಪ್ರಾಣರನ್ನಾಗಿ ಮಾಡಿದ್ದಾರೆ. ಅನಾಥರನ್ನಾಗಿಸಿದ್ದಾರೆ. ಆದರೆ ಒಂದು ಪ್ರಾರ್ಥನೆ..... *ಆ ಮಹಾಗುರುಗಳು ನಮ್ಮ ಮನಂದಿರದಲ್ಲೇ ಇರುವ "ಕೃಷ್ಣ - ಪ್ರಾಣರ" ಮನೆಯಲ್ಲಿಯೇ ವಾಸ ಮಾಡಲಿ* ಎಂದು ಅನಂತ ಪ್ರಣಾಮಪೂರ್ವಕ ಪ್ರಾರ್ಥಿಸುವೆ....
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments