*ಮೇಲೆ ಹೋದಷ್ಟು ಸ್ವಚ್ಛ - ಹಗುರ*
*ಮೇಲೆ ಹೋದಷ್ಟು ಸ್ವಚ್ಛ - ಹಗುರ*
ಉಚ್ಚ ವಿಚಾರ ಸ್ವಚ್ಛ ನಡವಳಿಕೆಗೆ ಮೂಲಭೂತ. ಸಾಮಾನ್ಯ ವಿಚಾರಗಳನ್ನು ರೂಢಿಸಿಕೊಂಡಷ್ಟು ಕ್ಷುಲ್ಲಕ ವ್ಯಕ್ತಿಯೇ ಎಂದಾಗುವ. ಉನ್ನತ ಮಟ್ಟದ ವಿಚಾರಗಳು ನಡೆದಾಗ ಮನುಷ್ಯ ತಾನೂ ಉನ್ನತ ಮಟ್ಟಕ್ಕೆ ಏರುವ.
*ಕೆಳಗಿರುವವವನು ಕೆಸರಲ್ಲೇ...*
ಕೆಳಗಿರುವ ವ್ಯಕ್ತಿ ಎಷ್ಟೇ ದೊಡ್ಡ ಕೆಲಸ ಮಾಡಿದರೂ ಅವನಕೈಗೆ ಕೆಸರೇ. ಮೇಲಿರುವ ವ್ಯಕ್ತಿ ಅತೀ ಸಣ್ಣ ಕೆಲಸ ಮಾಡಿದರೂ ಅಥವಾ ಮಾಡದಿದ್ದರೂ ಆ ಕೆಲಸ ವಜ್ರವನ್ನೇ ತಂದೊದಗಿಸುತ್ತದೆ. ಗ್ರೌಂಡ್ ಫ್ಲೋರ್ ಅಲ್ಲಿ ಇರುವ ವ್ಯಕ್ತಿ ಹುಳ ಧೂಳು ಡ್ರೈನೇಜ್ ಇವುಗಳ ಮಧ್ಯದಿ ಹೊರಳಾಡುವದೆ. ಮೇಲೆ ಮೇಲೆ ಹೋದವ್ಯಕ್ತಿ ಡ್ರೈನೇಜ್ ಅವ್ಯವಸ್ಥೆ ದೂರ. ನಂತರ ಹುಳಗಳು ದೂರ. ಇನ್ನೂ ಮೇಲೆ ಹೋದವನಿಗೆ ಶುದ್ಧ ಘಾಳಿ. ಮತ್ತೂ ಮೇಲೆ ಹೋದವರಿಗೆ ಶುದ್ಧ ನೀಲ ಆಕಾಶ.
*ಉನ್ನತ ವಿಚಾರಗಳು*
ಸಣ್ಣ ಸಣ್ಣ ವಿಚಾರಗಳಿಗೆ ತಲಿಲೆ ಕೆಡಿಸಿಕೊಳ್ಳುವದರಲ್ಲೇ ದಿನ ಮುಗದಿರುತ್ತದೆ. ಒಂದೇ ವಿಚಾರ ದಿನಪೂರ್ತಿ ಮತ್ತೆ ಮತ್ತೆ ರಿಪೀಟ್ ಆಗಿರುತ್ತದೆ. ಕ್ಷುದ್ರ ವಿಚಾರಗಳನ್ನು ಬದಿಗೊದಗಿಸಿದರೆ ಉನ್ನತ ವಿಚಾರಗಳಿಗೆ ಸಮಯವಿದೆ. ಉನ್ನತ ವಿಚಾರಗಳೇ ರಿಪೀಟ್ ಆದರೆ ಬಹಳೆ ಮೇಲೆ ಹೋಗಿಬಿಡುತ್ತಾನೆ. ಮೇಲೆ ಹೋದವ ಒಂದು ದೊಡ್ಡವ ಇನ್ನೊಂದು ಹಗುರ. ಮತ್ತೆ ಶುದ್ಧ.......
ಬಿದ್ದಲ್ಲೆ ಬಿದ್ದಿರುವ ಭಂಡೆಗಲ್ಲು ಗುರುತ್ವಾಕರ್ಷಣೆ ಮೀರಿ ಮೇಲೆ ಹೋದರೆ ಆಕಾಶದಲ್ಲಿ ತೇಲಾಡುತ್ತದೆ. ಸಣ್ಣ ಪುಟ್ಟ ವಿಷಯಗಳನ್ನೇ ಚಿಂತಿಸಿ ಮೆಲಕುಹಾಕಿ ಕೆಸರಲ್ಲೇ ಮುಳಗಿದ ವ್ಯಕ್ತಿ ಉಚ್ಚ ವಿಚಾರಗಳನ್ನು ರೂಢಿಸಿಕೊಂಡರೆ ಶುದ್ಧವ್ಯಕ್ತಿ ಆಗಿ ಆಕಾಶದ ನಕ್ಷತ್ರನಾಗಿ ಮೆರೆಯುವ.
*ಇಂದಿನ ಜಗತ್ತು....*
ಕ್ಷುದ್ರ ವಿಚಾರ, ಕ್ಷುದ್ರ ಅಭಿವೃದ್ಧಿಗಳಿಂದಲೇ ಜಗತ್ತು ಸರ್ವನಾಶದ ಅಂಚಿಗೆ ಬಂದಿದೆ. ಅಭಿವೃದ್ಧವಾದವುಗಳು ಇಂದಿನ ದೊಡ್ಡ ಊರುಗಳು. ವಿಚಿತ್ರ ಶುದ್ಧ ಘಾಳಿ ಇಲ್ಲ. ಚಂದ್ರನ ಬೆಳದಿಂಗಳನ್ನು ಮಕ್ಕಳು ಕಂಡೇ ಇರುವದಿಲ್ಲ. ಶುದ್ಧವಾದ ಮಣ್ಣು ಕಾಣುವದೇ ಇಲ್ಲ. ಅಂದು ಮಕ್ಕಳು ಮಣ್ಣು ತಿನ್ನುತ್ತಿದ್ದರು ಅಷ್ಟು ರುಚಿ ಇರುತ್ತಿತ್ತು. ಇಂದು ಅನ್ನ ತಿಂದರೂ, ನೀರು ಕುಡಿದರೂ ಫುಡ್ ಪಾಯ್ಸನ್ ನಿಶ್ಚಿತ.
*ಅಂದು - ಇಂದು*
ಅಂದು ತಮ್ಮ ಪರಿಶ್ರಮ ಜ್ಙಾನಕ್ಕಾಗಿ, ತಪಸ್ಸಿಗಾಗಿ, ದೇವರುಗಾಗಿ ಇರುತ್ತಿತ್ತು. ಅಂತೆಯೆ ದುಃಖ ಚಿಂತೆ ಸಂತಾಪಗಳ ಭಾರ ಹೊರದೆ ಜ್ಙಾನ ಭಕ್ತಿ ಸುಖ ಸಮೃದ್ಧಿ ಆನಂದ ಇವುಗಳಲ್ಲಿ ತೇಲಾಡುತ್ತಿದ್ದರು.
ಇಂದು ಉಚಿತವಾದ ಸಿಗುವ, ಉಚಿತವಾಗಿ ಪಡೆಯುವ ಹಕ್ಕಿರುವ ವಸ್ತುಗಳನ್ನು ಪಡೆಯಲೇ ನಮ್ಮೆಲ್ಲ ಪರಿಶ್ರಮ. ಉಚಿತವಾಗಿ ಮಾತು ಹೋಗಿದೆ. ಮಾತಾಡಲು ಹಣ ಕೊಡಬೇಕು. ಭೂಮಿ ತೆಗೆದುಕೊಳ್ಳಲು ಹಣ. ಉಚಿತವಾಗಿ ನೀರು ಇಲ್ಲ. ಹಣ ತೆತ್ತರೆ ನೀರು. ಮುನ್ನೂರು ರೂಪಾಯಿಗಳಿಗೆ ಹದಿನೈದು ನಿಮಿಷ ಶುದ್ಧಘಾಳಿ. ಆಕಾಶದ, ನಕ್ಷತ್ರಗಳ ದರ್ಶನ ಇಂದಿನ ಇಂದಿನ ಮಕ್ಕಳಿಗೆ ಇಲ್ಲವೇ ಇಲ್ಲ.
ಅನ್ನ ವಸತಿ ಕೊಟ್ಟು ಹನ್ಬೆರಡು ವರ್ಷ ಇಟ್ಟುಕೊಂಡು ಕೊಡುವ ಜ್ಙಾನ ಸಂಪಾದನೆ ಅಂದು, ಕೋಟಿ ಕೋಟಿ ಸುರಿದು ಪಡೆಯುವ ಜ್ಙಾನ ಇಂದು. ಉಚಿತವಾಗಿಯೇ ಪಡೆದ ಜ್ಙಾನದಿಂದ ಸಮೃದ್ಧ ಹಣ ಅಂದು.
ಪಡೆದ ಜ್ಙಾನದಿಂದ ಭಕ್ತಿ ದೇವರು ಸುಖ ಸಮೃದ್ಧಿ ಇವುಗಳು ಅಂದು, ಇಂದು ಹಣ ಸುರಿದು ಜ್ಙಾನ ಸಂಪಾದನೆ, ಜ್ಙಾನದಿಂದ, ಅಂದು ತೆತ್ತ ಹಣದ ಪುನಹ ಸಂಪಾದನೆ.
*ಉಚ್ಚ ವಿಚಾರ - ಸ್ವಚ್ಛ ಜೀವನ*
ಉತ್ಕೃಷ್ಟ ವಿಚಾರಗಳಲ್ಲೇ ಮುಣುಗಿದವರು ಸ್ವಚ್ಛ ಹಾಗೂ ಹಗುರಾಗಿ ಮೇಲೆ ವಿಹಾರ ಮಾಡಿದರು. ಕ್ಷುದ್ರ ವಿಚಾರಗಳ ಭಾರ ಹೊತ್ತದ್ದಕ್ಕೆ ಕೆಳಗೇ ಇದ್ಧೇವೆ. ಮೇಲೆ ಹೋಗಲೂ ಆಗುತ್ತಿಲ್ಲ. ಭಾರ ಹೊರಲೂ ಆಗುತ್ತಿಲ್ಲ. ಕೆಸರಲ್ಲಿ ಕುಸಿಯುತ್ತಾ ಇದ್ದೇವೆ.
ಕ್ಷುದ್ರವಿಚಾರಗಳನ್ನು ತ್ಯಜಿಸಿ. ಉತ್ತಮೋತ್ತಮ ವಿಚಾರಗಳನ್ನು ಅಳವಡಿಸಿಕೊಂಡೆವು ಎಂದಾದರೆ, ಶಾಸ್ತ್ರೋಕ್ತ ಉತ್ಕೃಷ್ಟ ಕೆಲಸಗಳಲ್ಲಿ ತೊಡಗಿಕೊಂಡೆವು ಎಂದಾದರೆ ಶುದ್ಧವಾದದ್ದನ್ನೇ ಆಸ್ವಾದಿಸುತ್ತಾ, ಕೊಳಚೆಗಳನ್ನೆಲ್ಲ ಬಿಸಾಡಿ, ಹಗುರಾಗಿ ಎತ್ತರದಮಟ್ಟದಲ್ಲಿ ವಿಹರಿಸಬಹುದು....
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments