*ತಪ್ಪುಗಳಿಂದಲೇ ತಿಳುವಳಿಕೆ ಹೆಚ್ಚುವದು.....*
*ತಪ್ಪುಗಳಿಂದಲೇ ತಿಳುವಳಿಕೆ ಹೆಚ್ಚುವದು.....*
ನಾವು ಮಾಡಿದ ಕೆಲಸ ತಪ್ಪಾದಾಗ, ತಪ್ಪು ಕೆಲಸವನ್ನೇ ಮಾಡಿದಾಗ ಭಯ ಆವರಿಸುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆಯೇ ಸಂಶಯ ಮೂಡುತ್ತದೆ. ನಮ್ಮಿಂದ ಉತ್ತಮಕೆಲಸಗಳು ಅಸಾಧ್ಯವೇನೋ ಎಂಬ guilty ಕಾಡಲು ಆರಂಭಿಸುತ್ತದೆ. ಆ ಪರಿಸ್ಥಿತಿ ಬಹಳ ಬದಲುಮಾಡುವ ಸ್ಥಿತಿ.
*ತಪ್ಪುಗಳೇ ದೊಡ್ಡ ಗುರು*
ತಪ್ಪುಗಳು ಒಂದು ಗುರು ಇದ್ದ ಹಾಗೆ. ಏನನ್ನು ಪುನಹ ಮಾಡಬಾರದು ಎಂದು ತಿಳಿಸುವ ಹಿತೈಶಿಯೂ ಹೌದು. ಈ ತಿಳುವಳಿಕೆ ತಪ್ಪಾದಗಲೊಮ್ಮೆ ಹೆಚ್ಚುತ್ತಿದ್ದರೆ, ನಾವು ಸರಿಮಾರ್ಗಕ್ಕೆ ಸನಿಹ ಇದ್ದೇವೆ ಎಂದೇ ಅರ್ಥ. ಸರಿ ಮಾರ್ಗದಲ್ಲಿ ಬಂದರೆ ಪುನಹ ತಪ್ಪುಗಳು ಘಟಿಸುವದು ಕಡಿಮೆ. ಘಟಿಸಿದ ತಪ್ಪುಗಳ ಅರಿವಿಂದ ಮೇಲೆದ್ದಬಂದವರನ್ನು ಇತಿಹಾಸದಲ್ಲಿ ತುಂಬ ಕಾಣುತ್ತೇವೆ
ಅಜ್ಙಾನದಿಂದ, ಪ್ರಾರಬ್ಧದಿಂದ ಗುರುತರವಾದ ತಪ್ಪನ್ನು ಎಸಗಿದ್ದರೂ, ನಂತರ ಆ ತಪ್ಪನ್ನು ವಿಶ್ಲೇಸಿಸಿ ಸರಿ ಮಾಡಿಕೊಳ್ಳುವ ಬಗೆಯನ್ನು ತಿಳಿಸುವದೇ ಈ ಗುರುವಿನ ಕೆಲಸ.
*ವಿಫಲತೆಗಳಲ್ಲಿಯೇ ತಪ್ಪುಗಳು ಆಗುವದು ಹೆಚ್ಚು*
ಹಣ ಘಳಿಸಲು ವಿಫಲನಾದ ವ್ಯಕ್ತಿ ಕದಿಯಲು ಆರಂಭಿಸುವ. ಹೀಗೆ ಯಾವದರಲ್ಲಿ ವಿಫಲನಾಗುತ್ತಾನೋ, ಅದನ್ನು ಪಡೆಯಲು ತಪ್ಪು ಮಾಡುವ. ಆದರೆ ಆ ತಪ್ಪು ತಿಳಿಸುತ್ತದೆ, "ಈ ತಪ್ಪು ಪುನಹ ಮಾಡಬೇಡ" ಎಂದು. ಆ ಗುರುವಿನ ಮಾತು ಕೇಳದೇ ಪುನಹ ಮತ್ತೆ ಮತ್ತೆ ತಪ್ಪು ಮಾಡಿದರೆ ಆ ತಪ್ಪೇ ಸರಿ ಎಂದು ಕಾಣಿಸುತ್ತದೆ.
*"ವಿಫಲತೆ" ಉದಯಿಸುವದು ಪ್ರಾರಂಭಿಕ ಹಂತದ ಸೋಲುಗಳಿಂದ....*
ಪ್ರಾರಂಭಿಕ ಹಂತಗಳಲ್ಲಿ ಸೋತಾಗ ಹತಾಶ ಭಾವ ಮೂಡುತ್ತದೆ. ಆ ಹತಾಶೆಯೇ ವಿಫಲತೆಯನ್ನು ಬಲವಾಗಿಸುತ್ತದೆ. "ಸೋಲು ಎದುರಾದಾಗ ಹತಾಶನಾಗದೇ ಹಠಮಾರಿಯಾಗಿ ಬೆಳೆದರೆ ಗೆಲುವು ನಿಶ್ಚಿತ". ಗೆದ್ದವ ಸಫಲಿ.
ಹಠ ಮಾರಿ ಪ್ರಯತ್ನವಾದಿ. ಪ್ರಯತ್ನ ಶೀಲ ಮನುಷ್ಯ ಏಳುಬೀಳುಗಳಿಂದ, ಸೋಲಿನ ಸರಪಳಿಂದ ಹೊರಬರುವ. ಪರಿಶ್ರಮದಿಂದ ಫಲ ಪಡೆಯುವ. ಪರಿಶ್ರಮ ಪೂರ್ವಕ ಫಲ ಪಡೆಯುವ ವ್ಯಕ್ತಿ ಸಾಮಾನ್ಯವಾಗಿ ತಪ್ಪು ಮಾಡಲಾರ. ಅನಿವಾರ್ಯವಾಗಿ ತಪ್ಪು ಮಾಡಿದ್ದರೆ. ಆ ತಪ್ಪು ಪುನಹ ಮತ್ತೊಂತು ಘಟಿಸದಂತೆ ಮಾಡಿ, ಮೇಲೇರುವಂತೆ ಮಾಡುತ್ತದೆ. ಆದ್ದರಿಂದ ವಿಫಲತೆಯಿಂದ ದೂರಾಗಲು ತಪ್ಪೇ ಮೊದಲ ದಾರಿದೀಪ.
*ತಪ್ಪುಗಳಿಂದಾದ ಅನುಭವವೇ ದಾರಿದೀಪ*
ತಪ್ಪು ಘಟಿಸಿದಾಗ ಕುಗ್ಗಿಬಿಡುವ, ಪ್ರಫುಲ್ಲತೇ ಕಳೆದುಕೊಳ್ಳುವ, ಮನಸ್ಸು ವ್ಯಗ್ರವಾಗುದು, ಭಯ ಆವರುಸುವದು, ಶಾಂತಿ ಕದಡುವದು ಹೀಗೆ ನಾನಾ ವ್ಯಾಧಿಗಳಿಗೆ ಬಲಿಯಾಗುವ ಮನುಷ್ಯ.
ಈ ಕುಗ್ಗುವಿಕೆ, ವ್ಯಗ್ರತೆ, ಅಸಮಾಧಾನ, ಅಶಾಂತಿ, ಭಯ ಇತ್ಯಾದಿಗಳು ಬಾರದಿರಲು ಇನ್ನೊಮ್ಮೆ ಈ ತಪ್ಪು ಮಾಡಬಾರದು ಎಂಬ ಅರಿವು ಮೂಡಿಸುವದೇ ತಪ್ಪಿನ ದೊಡ್ಡ ಕೆಲಸ. ಇದುವೇ ತಪ್ಪಿನಿಂದ ಹೆಚ್ಚುವರಿಯಾಗಿ ಬರುವ ತಿಳುವಳಿಕೆ.
ಸಂಧ್ಯಾವಂದನೆ ಪೂಜೆ ನಿತ್ಯ ಮಾಡುವ ವ್ಯಕ್ತಿ ಒಂದಿನ ತಪ್ಪಿಸಿದರೆ ಅದು ದೊಡ್ಡ ತಪ್ಪು ಎಂದು ವಿಲಿ ವಿಕಿ ಒದ್ಯಾಡುವ. ಅಂದು ಆದ ಅನೇಕ ಕಹಿ ಘಟನೆಗಳಿಂದ ಇನ್ನೆಂದೂ " ಪೂಜೆ ಸಂಧ್ಯಾವಂದನೆ ತಪ್ಪಿಸಬಾರದು" ಎಂದು ನಿರ್ಧರಿಸಿ ಆ ಮಾರ್ಗದಲ್ಲಿ ಮುಂದೇ ಸಾಗುವ. ಹೀಗೆ ಪ್ರತಿಯೊಂದರಲ್ಲಿಯೂ ತಿಳಿಯಬಹುದು...
(ಸಂಧ್ಯಾವಂದನೆ ಪೂಜೆ ಬಿಡುವ ತಪ್ಪು ಉಪನಯನ ಆದಾಗಿನಿಂದ ಮಾಡಿದ್ದಕ್ಕೆ "ಇಂದು ಸಂಧ್ಯಾವಂದನೆ - ಪೂಜೆ ಮಾಡುವದೇ ತಪ್ಪು" ಎಂಬ ಸ್ಥಿತಿಗೆ ಬಂದಾಗಿದೆ. ಆ ಸ್ಥಿತಿಗತಿಯವರ ವಿಚಾರ ಈಗಲ್ಲ...) ಅಕಸ್ಮಾತ್ ತಪ್ಪು ಆಗಿದ್ದರೆ ಅದರಿಂದ ಹತಾಶನಾಗದೇ ಮೇಲೇಳುವ ವಿಚಾರ ಈಗಿನದು ಅಷ್ಟೆ....
ಕಮಲ ತಾನು ಬಾಡುತ್ತದೆ. ಬಾಡುವದೇ ತಪ್ಪು ಎಂದು ಭಾವಿಸಿ, ಈ ಬಾಡುವ ತಪ್ಪು ಪುನಹ ಆಗಬಾರದು ಎಂದು ಬೆಳಿಗ್ಗೆ ಆಗುವದರಲ್ಲಿಯೇ ಅರಳಿ ನಿಲ್ಲುತ್ತದೆ. ಹಾಗೆಯೇ ತಪ್ಪೇ ಮಾಡದಿರಲು ವಾಯುವೂ ಅಲ್ಲ. ಒಂದೆರಡೇ ಬಾರಿ ತಪ್ಪು ಮಾಡಲು ದೇವತೆಗಳೂ ಅಲ್ಲ. ನಾವು ಮನುಷ್ಯರು ಪುನಹ ಪುನಹ ತಪ್ಪು ಮಾಡುವವರೇ. ತಪ್ಪು ಘಟಿಸಿದಾಗ ಹತಾಶನಾಗದೇ, ಆ ತಪ್ಪಿನಿಂದ ಆದ ಅನುಭವದಿಂದ ಪಾಠ ಕಲೆತು ಮುಂದೆ ಹೋಗುವದೇ ನಮ್ಮ *ಯಶಸ್ಸಿನ ರಹಸ್ಯ* ಎಂದು ಭಾವಿಸೋಣ......
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments