*ಬ್ರಹ್ಮಾತ್ಮ ದಾಸರು .... ೬* "ಧೀರಸಿಂಹ ಗುರುಂ ಭಜೇ..."
*ಬ್ರಹ್ಮಾತ್ಮ ದಾಸರು .... ೬* "ಧೀರಸಿಂಹ ಗುರುಂ ಭಜೇ" ಅನೇಕ ಗುಣಗಳಲ್ಲಿ 'ಧೈರ್ಯ' ಒಂದು ದೊಡ್ಡ ಗುಣ. ಸಣ್ಣ ಸಣ್ಣ ಕಾರಣಕ್ಕೆ ಅಧೀರರು ಆಗುವ ಪ್ರಸಂಗವೇ ಹೆಚ್ಚು. ಯಾರು "ಧೀರ"ರೋ ಅವರಿಗೆ ಒಲಿದು ಬರುವದೂ ಹೆಚ್ಚು. ಕ್ಷುದ್ರ ವಿಷಯಗಳಿಗೂ ಕುಗ್ಗುವ ವ್ಯಕ್ತಿ " ಧೀರ" ಎಂದೆನಿಸಿಕೊಳ್ಳಲಾರ. ಸರಿಯಾದ ಸ್ಪಷ್ಟ ತಿಳುವಳಿಕೆ ಇಲ್ಲದೆ ಮುನ್ಮುಗ್ಗುವ ವ್ಯಕ್ತಿಗೆ "ಭಂಡ ಧೈರ್ಯ"ನು ಇವನು ಎಂದೆನಿಸಿಕೊಳ್ಳಬೇಕಾಗತ್ತೆ. ಧೈರ್ಯ ಅಧೈರ್ಯಗಳು ಇರುವದು ಮನಸ್ಸಿನಲ್ಲಿ. ಮನಸ್ಸಿನ ವಿಕಾರಗಳು. ಅಧೈರ್ಯಕಾಡುವ ವ್ಯಕ್ತಿ ಮಹತ್ತಾದದ್ದನ್ನು ಸಾಧಿಸಲಾರ. ಕೇವಲ ಮಹತ್ತಾದದ್ದು ಅಲ್ಲ, ಏನನ್ನು ಸಾಧಿಸಬೇಕಾದರೂ "ಧೈರ್ಯ" ಅವಶ್ಯವಾಗಿ ಬೇಕು. *ವಿಕಾರ ಹೇತೌ ಸತಿ ವಿಕ್ರಿಯಂತೇ ಏಷಾಂ ನ ಚೇತಾಂಸಿ ತ ಏವ ಧೀರಾಃ* ಮನುಷ್ಯನನ್ನು ವಿಕಾರಗೊಳಿಸುವ ಅಧೀರರನ್ನಾಗಿಸುವ ಮಹತ್ತರವಾದ ನೂರಾರು ಕಾರಣಗಳಿದ್ದರೂ "ವಿಕೃತಗೊಳ್ಳದ ಅಧೀರನಾಗದ" ವ್ಯಕ್ತಿ ಯಾರೋ ಅವರು *ಧೀರ* ಎಂದೆನಿಸಿಕೊಳ್ಳುತ್ತಾನೆ. ಎರಡನೇಯ ಸಂತಾನವನ್ನು ಪಡೆಯಲು ಧೈರ್ಯ ಮಾಡದ ಸಮಾಜ ಇಂದಿರುವಾಗ, ನೂರೈವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿ ನಿರಂತರ ಇಟ್ಟುಕೊಳ್ಳುವದೇನಿದೆ ಇದು "ಧೀರ" ನ ಒಂದು ದೊಡ್ಡ ಲಕ್ಷಣ. ಮಠ ಮಾನ್ಯವಿಲ್ಲ, ಸರಕಾರದ ಸವಲತ್ತುಗಳಿಲ್ಲ, ಜೊತೆಗೆ ಮಹಾ ಶ್ರೀಮಂ...