*ಬ್ರಹ್ಮಾತ್ಮ ದಾಸರು.....೫* *"ಉತ್ಸಾಹ"ದ ಸಾಕಾರ ಮೂರ್ತಿ ನಮ್ಮ ಗುರುಗಳು*
*ಬ್ರಹ್ಮಾತ್ಮ ದಾಸರು.....೫*
*"ಉತ್ಸಾಹ"ದ ಸಾಕಾರ ಮೂರ್ತಿ ನಮ್ಮ ಗುರುಗಳು*
ನಿರಂತರ ಉತ್ಸಾಹದ ಚಿಲುಮೆ ನಮ್ಮ ಗುರುಗಳು. ನಾನು ನೋಡಿದಂತೆ ಈ ಇಪ್ಪತ್ತುವರ್ಷಗಳಲ್ಲಿ "ಬೇಸರ ವಾಗಿದೆ" ಎಂಬ ಮಾತೇ ಅವರಿಂದ ಕೇಳಿಲ್ಲ.
ಸದಾಕಾಲ ಉತ್ಸಾಹ, ನಿರಂತರ ಹುಮ್ಮಸ್ಸು. ಯಾವ ಕೆಲಸಕ್ಕೂ ಉದಾಸೀನತೆ ಇಲ್ಲ. "ಆಮೇಲೆ ಮಾಡ್ತೇವೆ" ಎಂಬ ಮಾತೇ ಅವರಿಗೆ ಆಗುತ್ತಿರಲಿಲ್ಲ. ಪಾಠವಿರಬಹುದು, ಪೂಜೆ ಇರಬಹುದು, ವಿದ್ಯಾರ್ಥಿಗಳ ಪಾಲನೆ ಇರಬಹುದು, ವಿದ್ಯಾಪೀಠದ ಕೆಲಸಕಾರದಯಗಳು ಇರಬಹುದು, ಮನೆಕೆಲಸಗಳೂ ಇರಬಹುದು ಯಾವದೇ ಕೆಲಸವಿದ್ದರೂ ಉದಾಸೀನವಾಗಿರುವದು ಯಾರೂ ನೋಡಿಯೇ ಇಲ್ಲ.
*ಉತ್ಥಾನೇನ ಜಯೇತ್ ತಂದ್ರೀ...*(ಉತ್ತುಂಗ)
ನಿತ್ಯ ಏಳುವದು ಅರುಣೋದಯಕ್ಕೆ. ಎದ್ದಾಕ್ಷಣಕ್ಕೆ "ಉದಾಸೀನತೆಯನ್ನು ಮೆಟ್ಟಿನಿಲ್ಲುವದು" ಪೂ ಆಚಾರ್ಯರ ಕರಗತವಾದ ಅನೇಕ ಗುಣಗಳಲ್ಲಿ ಇದೂ ಒಂದು ಅದ್ಭುತ ಗುಣ.
ಏಳುವದು ಅರುಣೋದಯಕ್ಕೆ. ಏಳುತ್ತಾ ದೇವರ ಗುರುಗಳ ಧ್ಯಾನ. ಪ್ರಾತಃಸಂಕಲ್ಪಗದ್ಯ ಪಠಣ. ಸರಿಯಾಗಿ ಐದು ಗಂಟೆಗೆ ಪಾಠ ಆರಂಭ. ಶ್ರೀಮನ್ಯಾಯ ಸುಧಾ ತತ್ವಪ್ರಕಾಶಿಕಾ ನ್ಯಾಮೃತ ಮೊದಲು ಮಾಡಿ ಉದ್ಗ್ರಂಥಗಳಿಂದಾರಂಭಿಸಿ ಎಲ್ಲ ಪಾಠಗಳನ್ನೂ ತೆಗೆದುಕೊಳ್ಳುವದೇ. ಪ್ರತೀವರ್ಗಗಳಿಗೂ ಪೂಜ್ಯ ಆಚಾರ್ಯರ ಪಾಠ ಒಂದಿರಲೇಬೇಕು. ಇಂದಿಗೂ ಇದೆ.
ಐದು ಗಂಟೆಗೆ ಆರಂಭವಾದ ಪಾಠಗಳು ಮುಗಿಯುವದು ಹನ್ನೊಂದು ಗಂಟೆಗೇ. ಪಾಠಹೇಳುವದೂ ಕೂಡ ಜೋರಾಗಿ ಅನಿಸಿ ಹೇಳಿಸಿ ತಾವು ಉತ್ಸಾಹದಿಂದ ಹೇಳಿ, ನಮಗೂ ಉತ್ಸಾಹ ತರಿಸಿ ಪಾಠಮಾಡುವ ಕ್ರಮವೇ ಸುಂದರ. ನಮಗೆ ಒಂದು ಗಂಟೆಯ ನಂತರ ವಿಶ್ರಾಂತಿಯಾದರೆ ಪೂಜ್ಯ ಆಚಾರ್ಯರ ಪಾಠ ಹನ್ನೊಂದು ಗಂಟೆಯ ವರೆಗೂ ಸಾಗಬೇಕು.
*ನಂತರ ದೇವರಾರಾಧನೆ*
ಪಾಠ ಹೇಳುವದರಲ್ಲೇ ಉತ್ಸಾಹ ಕುಂದಿಹೋಗಿರತ್ತೆ. ಆದರೆ ಪೂಜ್ಯ ಆಚಾರ್ಯರು ಹಾಗಲ್ಲ ಸರಿಯಾಗಿ ಹನ್ನೊಂದು ಹೈದಿನೈದಕ್ಕೆ ಪೂಜೆಗೆ ಆಗಮಿಸಬೇಕು. ತಂತ್ರಸಾರೋಕ್ತ ಶುದ್ಧಕ್ರಮದಲ್ಲಿ ಪೂಜೆ ಹನ್ನೆರಡು ವರೆವರೆಗೆ ಸಾಗಬೇಕು. ಪೂಜೆಯಾದಕೂಡಲೇ *ಉಫ್ಫಪ್ಪ* ಎಂಬ ಭಾವ ಬಂದು ಗಬ ಗಬ ಉಣ್ಣುವದು ನನ್ನದು ಆದರೆ, ಪೂಜ್ಯ ಆಚಾರ್ಯರು ಎಲೆಯ ಮುಂದೇ ಕುಳಿತು ವಿದ್ಯಾರ್ಥಿಗಳ ಊಟವಾಗುವವರೆಗೂ, ವಿದ್ಯಾರ್ಥಿಗಳಿಂದ ಪರೀಕ್ಷೆ ಅನುವಾದ ಕೇಳುತ್ತಾ ಜಪಮಾಡಬೇಕು. ಈ ಮಧ್ಯದಲ್ಲಿ ನೂರೈವತ್ತೂ ಜನರಿಗೂ ತೀರ್ಥಕೊಟ್ಟು, ಮತ್ತೆ ಕೈಗೆ ತೀರ್ಥ ಹಾಕಿ ಕೃಷ್ಣಾರ್ಪಣವೆನಬೇಕು.
*ಸರಿಯಾಗಿ ಎರಡು ವರೆಗೇ ಚಿಂತನ ಆರಂಭ*
ಸ್ವಲ್ಪ ವಿಶ್ರಾಂತಿಯನ್ನು ಮಾಡಿ, ಸರಿಯಾಗಿ ಎರಡು ವರೆಗೆ ಚಿಂತನೆಗೆ ಬರಬೇಕು. ಎಲ್ಲ ವಿದ್ಯಾರ್ಥಿಗಳೂ ಕೂಡಬೇಕು. ಬೆಳಿಗ್ಗೆ ಆದ ಎಲ್ಲ ಪಾಠಗಳ ಚಿಂತನೆ ಆಗಬೇಕು. ನಾಲಕು ಗಂಟೆಗೆ ಆರಂಭಿಸಿ ಐದು ಗಂಟೆಯೊಳಗೆ ಎಲ್ಲ ವರ್ಗದವರ ಪರೀಕ್ಷೆಯೂ ಆಗಬೇಕು.
*ವಾಯುವಿಹಾರ*
ಸಾಯಂಕಾಲ ಸರಿಯಾಗಿ ಐದು ಗಂಟೆಗೆ ಸ್ವಲ್ಪ ಹೊತ್ತು ವಾಯುವಿಹಾರ (walking) ಹೋಗಿ ಬಂದು ಆರು ಗಂಟೆಗೆ ಮತ್ತೆ ಕೆಲವು ಪಾಠ ಹಾಗೂ ನಿತ್ಯ ಉಪನ್ಯಾಸ. ಮಧ್ಯೆ ಜನರ ಸುಖದಃಖಗಳ ಸ್ಪಂದನೆ. ಅವರೆಲ್ಕರಿಗೆ ಉಪಕಾರ. ವಿದ್ಯಾರ್ಥಿಗಳ ಪ್ರಶ್ನೋತ್ತರ. ವಿದ್ಯಾಪೀಠದ ಎಲ್ಲ ಆಗು ಹೋಗುಗಳ ಕಡೆ ಗಮನ. ಇಷ್ಟಾಗುವದರಲ್ಲೇ ಒಂಭತ್ತು ಆಗಿಬಿಡುವದು. ಸ್ವಲ್ಪ ಊಟಮಾಡಿ ಮುಗಿಸಬೇಕು.
ನಂತರ ನಿದ್ರೆ ಬರುವವರೆಗೂ ಪುನಃ ಅಧ್ಯಯನ. ಅದು ಹನ್ನೊಂದು ಆಗಬಹುದು. ಹನ್ನೆರಡೂ ಆಗಬಹುದು. ಕೆಲವು ದಿನ ಇನ್ನೂ ಮೀರಿದ ದಿನಗಳನ್ಮೂ ನೊಡಿದ್ದು ಇದೆ. ಇದರಲ್ಲಿ ಯಾವುದೂ ತಪ್ಪುವ ಹಾಗಿಲ್ಲ.
ಶನಿವಾರ ಮೊದಲಾದ ವಿಶೇಷ ದಿನಗಳು ಬಂದರೆ ರಾತ್ರಿ ಎಲ್ಲಾ ಗುರುಸ್ಮರಣೆ ಆಗಬೇಕು.
ರಾತ್ರಿ ಹನ್ನೆರಡಾಗಿದ್ದರೂ ವಿದ್ಯಾರ್ಥಿಗಳೋ ಗ್ರಹಸ್ಥರೋ ಪ್ರಶ್ನೆ ಮಾಡಿದರೆ ಅವರಿಗೆ ಸೂಕ್ತ ಉತ್ತರವನ್ನು ಹಸನ್ಮುಖಿಯಾಗಿಯೇ ಕೊಡಬೇಕು. ಮುಖದಲ್ಲಿಯೂ ಬೇಸರ ಇಂದಿಗೂ ಕಾಣಿಸುವದಿಲ್ಲ.
*ಜ್ಙಾನ ಸತ್ರಗಳು*
ಪೂಜ್ಯ ಆಚಾರ್ಯರ ಜ್ಙಾಸತ್ರ ಎಂದರೆ ಐದು ದಿಗಳಲ್ಲಿ ಕನಿಷ್ಠ ನಾಲವತ್ತು ಐವತ್ತು ಗಂಟೆಯ ಪುನ್ಯಾಸಗಳನ್ನು ಪಾಠವನ್ನೇ ಮಾಡಬೇಕು. ಇಂತಹ ಜ್ಙಾನಸತ್ರಗಳು ವರ್ಷಕ್ಕೇ ಮೂರು ನಾಲ್ಕು ಜ್ಙಾನಸತ್ರಗಳು ಆಗಬೇಕು.
*ಎರಡು ಏಕಾದಶಿಗಳು...*
ಊಟವಾದ ದಿನವೇ ಉತ್ಸಾಹದಿಂದ ಇರಬೇಕು ಎಂಬ ತಾವ ನಿಯಮವೂ ಆಚಾರ್ಯರಿಗೆ ಅನ್ವಯಿಸುತ್ತಿದ್ದಿಲ್ಲ. ಏಕಾದಶಿ ಎರಡು ಏಕಾದಶಿಗಳು ಬಂದರೆ ಆಚಾರ್ಯರ ಉತ್ಸಾಹ ನೂರ್ಮಡಿ ಹೆಚ್ಚಾಗುವದು. ಅಂದಿನ ಪಾಠ ನಾಲ್ಕು ಗಂಟೆ ಹೆಚ್ಚಾಗಿ ಆಗುವದೇ. ರಾತ್ರಿ ಜಾಗರಣೆಗೆ ಬರುವದೇ.
*ಅತಿಥಿ ಅಭ್ಯಾಗತರು*
ವಿದ್ಯಾಪೀಠ ಎಂದಾದಮೇಲೆ ಅತಿಥಿಗಳು ಅಭ್ಯಾಗತರು ಯಾವಕಾಲಕ್ಕೂ ಬರಬಹುದು. ಅಂದವರ ಉಪಚಾರಕ್ಕೆ ಎಂದಿಗೂ ಬೇಸರ ಮಾಡಿಕೊಂಡಿದ್ದು ನೋಡಿಲ್ಲ. ಅವರಿಗೆ ಏನೆಲ್ಲ ಅನುಕೂಲಗಳು ಬೇಕೋ ಸ್ವಯಂ ಆಚಾರ್ಯರು ಮುತುವರ್ಜಿ ವಹಿಸಿಕೊಂಡು ನೋಡಿಕೊಳ್ಳುತ್ತಿದ್ದರು. ಯಾವ ಸಮಯಕ್ಕೆ ಊಟವಾಗಬೇಕೋ ಆ ಸಮಯಕ್ಕೇ ಬಿಸಿಯೂಟ ಮಾಡಿಸಿಯೇ ಕಳಿಸಬೇಕು.
ಹೀಗೆ ಉತ್ಸಾಹದ ಚಿಲುಮೆ ನಮ್ಮ ಪೂಜ್ಯ ಆಚಾರ್ಯರು. ಆರವತ್ತರ ಈ ಇಳಿ ವಯಸ್ಸಿನಲ್ಲಿಯೂ ಅದೇ ಉತ್ಸಾಹ ಕಾಣುತ್ತೇವೆ. ಅದು ಇನ್ನೂ ಹೆಚ್ಚುಹೆಚ್ಚಾಗಿದೆ ಎಂದರೂ ತಪ್ಪಗದು. ಅಂತಹ ಉತ್ಸಾಹದ ಗಣಿ ನಮ್ಮ ಆಚಾರ್ಯರು. ಅವರೇ ನಮ್ಮ ಆದರ್ಶರು. ಆ ಉತ್ಸಾಹ ತುಣುಕು ಆದರೂ ನಮ್ಮ ಪಾಲಾಗಲಿ.
*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments