*ಸಮಯವೇ ಇಲ್ಲ.....ಇದುವೇ ನನ್ನ ಸಮಸ್ಯೆ

*ಸಮಯವೇ ಇಲ್ಲ.....ಇದುವೇ ನನ್ನ ಸಮಸ್ಯೆ...*

 "ನನಗೆ ಸಮಯ ಬೇಕಾದಷ್ಟಿದೆ. ಏನೂ ಕೊರತೆ ಇಲ್ಲ ಎಂದು ಹೇಳುವವರು ತುಂಬಾ ವಿರಳ." ನನಗೆ ಮುಂಬಯಿ ಅಲ್ಲಿ ಒಬ್ಬರು ತುಂಬಾ ಹಿಂದೆ ಹೇಳಿದ ಮಾತು "ಮುಂಬಯಿ ಅಲ್ಲಿ ನಮಗೆ ಯಾರಿಗೂ ಸಮಯವಿಲ್ಲ. ಏನು ಮಾಡುತ್ತೇವೆ ಎಂದು ಕೇಳಬೇಡಿ. ನಾವೇನೂ ಮಾಡುತ್ತಿರುವದಿಲ್ಲ. ಆದರೆ ಸಮಯ ಮಾತ್ರ ನಮಗಿಲ್ಲ" ಎಂದು. ಇಂದು ಇತರ ರಾಜ್ಯದ ಊರಿನವರ ಸ್ಥಿತಿಯೂ ಹಿಗೇ ಆಗಿದೆ. 

*ನಾಯಿಗೆ ಕೂರಲು ಪುರುಸೊತ್ತು ಇಲ್ಲ. ಆದರೆ ಮಾಡಲು ಕೆಲಸವೂ ಇಲ್ಲ* (ತೆಲಗಿನ ನಾಣ್ಣುಡಿ.)

ಯಾರಿಗೇ ಕೇಳಿದರೂ ನಾನು ತುಂಬ ಬ್ಯುಸಿ. ಯಾವುದನ್ನು ಪೂರ್ಣಗೊಳಿಸಿದ್ದೀಯಾ ಎಂದರೆ ಉತ್ತರವಿಲ್ಲ. ನಾವು ಏನೂ ಮಾಡುವದೇ ಇಲ್ಲ ಎಂದೇನಿಲ್ಲ. ಏನೆನೋ ಮಾಡುತ್ತಾ ಇರುತ್ತೇವೆ. ಅವುಗಳಲ್ಲಿ ಉಪಯುಕ್ತ ಅನುಪಯುಕ್ತಗಳನ್ನು ವಿಭಾಗಿಸಿದರೆ ಸ್ವಲ್ಪ ಸಮಯ ಸಿಗಬಹುದು. ಆದರೆ.........
*ಸಮಸ್ಯೆ ಅಡಗಿರುವದು ಇದು ಉಪಯುಕ್ತ , ಇದು ಅನುಪಯುಕ್ತ ಎಂದು ನಿರ್ಧರಿಸುವದರಲ್ಲಿ....*

*ಕೆಲ ಕೆಲಸಗಳು ಆಪ್ಯಾಯಮಾನವೆಂದೆನಿಸುತ್ತವೆ...*

ಆಪ್ಯಾಯಮಾನ ಎಂದೆನಿಸಿದ ಕೆಲಸಗಳಲ್ಲಿ ತೊಡುಗುತ್ತೇವೆ. ನಮ್ಮ ಆಂತರ್ಯ ಎಚ್ಚರಿಸುತ್ತಾ ಇರುತ್ತದೆ, ಈ ಕೆಲಸದಿಂದ ನಿನಗೆ ತೊಡಕು ಇದೆ ಎಂದು. ಆದರೆ ಅದನ್ನು ಝಬರಿಸಿ ಬಾಯಿಮುಚ್ಚಿಸಿ ಆ ಕೆಲಸದಲ್ಲಿ ಪ್ರವೃತ್ತರಾಗುತ್ತಿರುತ್ತೇವೆ. ಯಾಕೆಂದರೆ ಯಾವ ಕೆಲಸ ಮಾಡಬೇಕು ತಿಳಿದಿಲ್ಲ. 

*ಮಾಡಲೇ ಬೇಕು ಎಂದು ಗೊತ್ತು, ಆದರೆ.....*

ಕೆಲ ಕೆಲಸಗಳು (ಸಂಧ್ಯಾವಂದನೆ, ಪೂಜೆ, ಪಾರಾಯಣ, ಜಪ, ಅಧ್ಯಯನ) ಅವಷ್ಯವಾಗಿ ಮಾಡಬೇಕು, ಇದರಿಂದಲೇ ನನ್ನ ಯಶಸ್ಸು ಎಂದು ಗೊತ್ತು. ಆದರೆ ಮುಂದೂಡುತ್ತಾ ಹೋಗುತ್ತೇವೆ. ಯಾಕೆಂದರೆ ನನಗೆ ಸಮಯವಿಲ್ಲ. 

*ಕೆಲವರಿಗೆ ನಮ್ಮ ಸಮಯ ತುಂಬ ಪ್ರೀತಿ*

ನಮ್ಮ ಸಮಯ ಕದಿಯಲು ತುಂಬ ಹಾ ತೊರೆಯುತ್ತಾರೆ. ನಮ್ಮ ಸಮಯ ಇರುವದೇ ಅವರಿಗೋಸ್ಕರ ಎಂದು ಭಾವಿಸಿದಂತೆ ಇರುತ್ತಾರೆ. ತಮ್ಮ ಕೆಲಸವಾಗುವವರೆಗೆ ನಮ್ಮ ಸಮಯ ಬಳಿಕೆಗೆ ತೆಗೆದುಕೊಳ್ಳುತ್ತಾ ಇರುತ್ತಾರೆ. 

ಶಾಸ್ತ್ರ ಹೇಳತ್ತೆ ಸಮಯವನ್ನು ಸದ್ಬಳಿಕೆ ಮಾಡಿಕೊ. ಈ ಸಮಯ ಮತ್ತೆ ದೊರೆಯದು ಎಂದು. ಈ ದೊರೆತ ಸಮಯದಲ್ಲಿಯೇ ದೇವರೇ ಒಲಿದು ಬಂದಾನು ಎಂದು.  ನಾಸ್ತಿಕತೆಯ ಈ ಜಗ ನುಡಿಯತ್ತೇ ಇಂದೇ ನಿನಗೇನನಿಸತ್ತೆ ಅದನ್ನು ಮಾಡು ಮುಂದಿನದೇನಿದೆ ನಿನಗೆ ಗೊತ್ತಿಲ್ಲ ಎಂದು. ಇವೆರಡರ ನಡುವೆ ತೊಳಲಾಟ ನಮ್ಮದು. 

ಏನೂ ಕೆಲಸವಿಲ್ಕದೇ, ಮಾತೂ ಆಡದೆ ಕೇವಲ ಮೋಬೈಲಲ್ಲಿ  ಮೇಲೆ ಕೇಳಗೆ ಮಾಡುತ್ತಾ  ಸಮಯವೇ ಇಲ್ಲ ಎಂದು ಹೇಳುವವರು ನಾವಾಗಿದ್ದೇವೆ. ಅದನ್ನು ಬಿಟ್ಟರೂ ನೂರೆಂಟು ಗಾಯತ್ರೀ ಜಪಕ್ಕೆ ಬೇಕಾದ ಸಮಯ ಸಿಕ್ಕೇ ಸಿಗುತ್ತದೆ. ಅಂತರ್ಜಾಲ ಬಂದು ಮಾಡಿ ಆಗಾಗ ಆನ್ ಮಾಡುವದನ್ನು ರೂಢಿಸಿಕೊಂಡರೂ ಪಾರಾಯಣಕ್ಕೆ ಬೇಕಾದ ಸಮಯ ಅವಷ್ಯವಾಗಿ ಸಿಗುತ್ತದೆ........ 

*ಗುರಿ - ಗುರು*

 ವ್ಯರ್ಥ ಕೆಲಸಗಳನ್ನು ಬಿಟ್ಟರೆ ಸಮಯ ತುಂಬಾ ಸಿಗತ್ತೆ. ಸಮಯ ಸಾರ್ಥಕ ಮಾಡಿಕೊಳ್ಳುವ ಗುರಿ ಇರಬೇಕು. ನಿರಂತರ ಪ್ರೇರಿಸುವ ಗುರು ಇರಬೇಕು. ಗುರು ಹಾಗೂ ಗುರು ಇದ್ದವನು  ಜ್ಙಾನ ಭಕ್ತಿ ಧರ್ಮ ಪುಣ್ಯ ವಿಷ್ಣುಪ್ರೀತಿ ಸಾಧನೆ  ಇವಗಳಲ್ಲಿ *ಗುರು* ಭಾರ ಅಂದರೆ ತುಂಬಿಕೊಂಡವ ಎಂದು ಆಗುವ.... 

*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*