*ಏಳುವದೇ ಇಲ್ಲ.....ಎದ್ದರೆ ಮುಂದೆ ಹೋಗಬಹುದು*


*ಏಳುವದೇ ಇಲ್ಲ.....ಎದ್ದರೆ ಮುಂದೆ ಹೋಗಬಹುದು*

ನಿಂತ ನೀರಲ್ಲಿ ಹುಳಹತ್ತುವದು. ನಿರಂತರ ಹರಿಯುವ ನೀರು ಹಸವಾಗಿ ಇರುವದು. ನಿಂತ ನೀರು ಪಾಚಿಗಟ್ಟಿದರೆ, ನಿರಂತರ ಹರಿವ ನೀರು ಶುದ್ಧ ಹಾಗೂ ಬಳಿಸಲು ಅತ್ಯಂತ ಯೋಗ್ಯ . ನಿಂತ ನೀರು ಇಂಗಿ ಹೋಗಬಹುದು, ಹರಿಯುವ ನೀರು ಒಣಗಿತು ಎಂದಾಗುವದಿಲ್ಲ. ನೀರಿನ ನಿರಂತರ ಹರಿಯುವಿಕೆಯೇ ನೀರಿನ ಏಳಿಗೆ. ಅದೇರೀತಿ ನಿಂತವರು ನಾವು ಆದರೆ ನಮ್ಮ ಬುದ್ಧಿ ಇಂದ್ರಿಯ ಮನಸ್ಸು ಇವುಗಳಿಗೆ ಗೆದ್ದಲು ಹಿಡಿದಂತೆ ಆಗಿಬಿಡಬಹುದು. ಆಡಿದೇ ಆಡುವ ಮಾತು ಮಾಡಿದ್ದೇ ಮಾಡುವ ವಿಚಾರ ಇದೇ ಜೀವನ ಎಂದಾಗಿಬಿಡಬಹುದು. ನಿಂತಲ್ಲೆ ಇಷ್ಟೇ ಜೀವನ ಎಂದು ಕಮರಿ ಹೋಗಬಹುದು. ಹಾಗಾಗದೇ update ಆಗ್ತಾ ಇರಬೇಕು.  ಹರಿಯುವ ಜೀವನ ಪ್ರಫುಲ್ಲ. ಯಾವುದೇ ಹೇಗೇ  ವಾತಾವರಣವಿದ್ದರೂ  ಶುದ್ಧ. ಉಪಕಾರ ಮಾಡುವ ಮನೋಭಾವವೂ ಬೇಳೆಯುತ್ತದೆ, ಆಗ ನೂರು ಜನರಿಗೆ ಉಪಕೃತನು ಆಗುತ್ತಾನೆ. ಆಗ ಹೊಸ ಹೊಸ ವಿಚಾರಗಳು ಚಿಗುರೊಡೆಯುತ್ತದೆ. ಇದುವೇ ಏಳಿಗೆ ಎಂದಾಗುತ್ತದೆ. Updated versions ಎಂದು ಆಗುತ್ತದೆ. 

ಇದು ನಮ್ಮನ್ನು ನಾವು Update ಮಾಡಿಕೊಳ್ಳುವದು ಸೂಕ್ತ ಸಮಯ. ಇಂದು ನಮ್ಮ ನಿತ್ಯ ಬಳಿಕೆಯ ವಸ್ತುವಾದ ಮೋಬೈಲ್ ತಿಂಗಳಿಗೊಮ್ಮೆ update ಮಾಡುತ್ತಿರುವಾಗ, ನಾವೇಕೆ ಆಗಬಾರದು... ಅಪ್ಡೇಟ್ ಆಗದ ಮೋಬೈಲ್ ಎಷ್ಟು ಅನುಪಯುಕ್ತವೋ ಅಷ್ಟೇ ಅನುಪಯುಕ್ತ ನಾವೂ ಆಗುತ್ತೇವೆ. 

ಉದಾಹರಣೆಗೆ "ಒಂದು ದುಂಬೆ ತನ್ನ ಜೀವಮಾನದಲ್ಲಿ ನಿತ್ಯ ಆರುನೂರು ಮೈಲು ತಿರುಗಾಡುತ್ತಾ, ಇಪ್ಪಲಕ್ಷಕ್ಕೂ ಹೆಚ್ಚು ಹನಿ ಜೇನನ್ನು ಸಂಗ್ರಹಿಸುತ್ತದೆ" ಎಂಬುವದನ್ನು ತಿಳಿದೆ ಇಷ್ಟೇ ಸಾಕು ಇಂದಿನ ಒಂದು ಏಳಿಗೆ. ನಿನ್ನೆಯ ವರೆಗೂ ಈ ವಿಷಯ ನನಗೆ ಗೊತ್ತಿರಲಿಲ್ಲ. ಇಂದು ಈ ವಿಷಯ ನನಗೆ ಪ್ಲಸ್.

*ಪ್ರತೀ ಇಂದಿಗೂ ಒಂದು ಒಂದು ಪ್ಲಸ್ ಇರಲೇಬೇಕು....*

ಅದು ಏನಾದರೂ ಇರಬಹುದು. ಜ್ಙಾನ, ಧರ್ಮ, ಭಕ್ತಿ , ಜಪ, ದೇವರು, ದೇವತೆಗಳು, ಗುರುಗಳು, ತಂದೆ ತಾಯಿಗಳು, ಹಣ, ಯಶಸ್ಸು, ಕೀರ್ತಿ, ಸಂತೋಷ , ಕುತೂಹಲ,  ಹೊಸ ಸಂಬಂಧ,  ಹೊಸರಂಗ ಹೀಗೆ... ಒಂದು ಹೊಸ ಆಯಾಮ ಪ್ಲಸ್ ಆಗಿ ಬರಬೇಕು. 

*ಏಳಿಗೆ ಅಂದರೆ ಏನು.. ? ಹೇಗೆ..?*

ಜಿಪುಣತನವನ್ನು ಹೋಗಲಾಡಿಸಿಕೊಳ್ಳುವದೇನಿದೆ ಅದೇ "ಏಳಿಗೆಯ" ಮುಖ್ಯಲಕ್ಷಣ. ಯೋಗ್ಯರೀತಿಯಲ್ಲಿ ಬಳಿಸಿಕೊಳ್ಳುವದೇನಿದೆ ಮುಂದೇಹೋದವನ ಲಕ್ಷಣ. 

ಜಿಪುಣತನ ಹೋಗಲಾಡಿಸಿಕೊಳ್ಳುವದೂ ಎಂದರೆ ಇರುವ ಹಣವೆಲ್ಲ ಹಂಚಿ, ಧಾನ್ಯವೆಲ್ಲ ದಾನಮಾಡಿ ರೋಡಿಗೆ ಬಂದರೆ ಹೇಗೆ... ?? ಹಣ ಹಂಚದೇ ಇರುವದು ಜಿಪುಣತನವಲ್ಲ. ಸಮೃದ್ಧವಾದದ್ದನ್ನು ಹಂಚದೇ ಇರುವದು ಜಿಪುಣತನ.

ಉಚಿತವಾಗಿ ಸಿಗುವದು ಮಾತು, ಮಾತಾಡಲ್ಲ. ನಕ್ಕರೆ ಗಂಟೇನು ಹೋಗಲ್ಲ ನಗಲಾರ. ಹತ್ತು ಬಿಟ್ಟು ಇಪ್ಪತ್ತು ಜಪ ಮಾಡಲಾರ. ಹತ್ತು ನಿಮಿಷ ಬಿಟ್ಟು ಹದಿನೈದು ನಿಮಿಷ ಓದಲಾರ. . ಏಕಾದಶಿ ಬಿಟ್ಟು ಉಳಿದ ವ್ರತ ಮಾಡಲಾರ. ಸಂಧ್ಯಾವಂದನೆ ಒಂದನ್ನು ಬಿಟ್ಟು ಪೂಜೆ ಮಾಡಲೂ ಜಿಪುಣ. ಹೀಗೆ ಈ ಜಿಪುಣತನವನ್ನು ರೂಢಿಸಿಕೊಂಡಾಗ ಮೇಲೆ ಏಳಲಾರ. ಏಳಿಗೆಯ ಅವಸ್ಥೆಯನ್ನೇ ಕಳೆದುಕೊಂಡವನು ಆದ. ಈ ಜಿಪುಣತನವನ್ನು ಹೊಗಲಾಡಿಸಿಕೊಂಡ ದಿನವೇ ಏಳಿಗೆ ಆರಂಭದ ದಿನ. 

ಏಳಿಗೆ ಒಂದೇ ಮುಖದ್ದು ಆಗಿ, ಕೂಪ ಮಂಡೂಕದಂತಾಗದೆ. ಏಳಿಗೆ ಬಹು ಮುಖದ್ದು ಆಗಿದ್ದರೆ ಎಲ್ಲ ಮಾರ್ಗಗಳಲ್ಲಿಯೂ ಯಶಸ್ವಿಯೇ ಆಗುವ. ಹರಿಯುವ ನೀರು ಗುಡ್ಡ ಕಾಡು ಮೇಡು ಮರಭೂಮಿ ಎಲ್ಲಿ ಹರಿದರೂ ಅದು ನೂರು ಜನರಿಗೆ ಉಪಯುಕ್ತವೇ, ಹಾಗೆ ಏಳುವ update ಆದ ಮನುಷ್ಯನೂ ಸಹ.....

ನಾವು ಮಾಡುವ ವೃತ್ತಿಯಲ್ಲಿ ಪ್ರಮೋಷನ್ ಅಪೇಕ್ಷಿಸುವ ಹಾಗೆ ಧರ್ಮ ಜ್ಙಾನ ದೇವರು ಈ ವಿಷಯದಲ್ಲಿಯೂ ಪ್ರಮೋಟ್ ಆಗುವದೇನಿದೆ ಇದುವೇ ಏಳಿಗೆ ಎಂದೆನಿಸಿಕೊಳ್ಳುತ್ತದೆ. ಈ ಏಳಿಗೆ ನಿರಂತರ ಇರಲಿ ಎಂಬ ಕಾರಣಕ್ಕೇ *ಉತ್ತಿಷ್ಠತ ಜಾಗ್ರತ* ಎಂಬುವದಾಗಿ ಉಪನಿಷತ್ತು ತಿಳಿಸಿತು. ನಮ್ಮ ಗುರುಗಳು ಎದ್ದೇಳಿ ಎಂದರು. ನಾವೂ ಏಳೋಣ....

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*