Posts

Showing posts from January, 2019

*ಅಜಾಮಿಳ ಮತ್ತು ಗಜೇಂದ್ರ*

Image
*ಅಜಾಮಿಳ ಮತ್ತು ಗಜೇಂದ್ರ* ಕರುಣಾಳು ದೇವ. ಎಲ್ಲತರಹದ ಜನರನ್ನೂ ರಕ್ಷಿಸುವ ಹೆದ್ದೊರೆ. ಋಷಿ ಮಕ್ಕಳು ಎಂದು ಮೋಕ್ಷ ಕೊಡುವದಿಲ್ಲ. ದೈತ್ಯರ ಮಗ ಎಂದು ತಮಸ್ಸೂ ಕೊಡುವದಿಲ್ಲ. ಅವರ ವ್ಯಕ್ತಿತ್ವ ಗುಣವಂತಿಕೆ ಇವುಗಕಳನ್ನು  ಗಮನಿಸಿಯೇ ಫಲಕೊಡುವ ದೊರೆ ನಮ್ಮ ದೊರೆ.  ದ್ರೌಪದಿ, ಪಲ್ಹಾದ, ಬಲಿ, ಧೃವ,  ಗಜೇಂದ್ರ, ಅಜಮಾಮಿಳ ಈ ಎಲ್ಲ ಮಹಾಮಹಿರ ಜೀವನ ಚರಿತ್ರೆಯಲ್ಲಿ ಸರ್ವರಕ್ಷಕನಾದ ದೇವರು  ಕರುಣೆ ಹಾಗೂ ರಕ್ಷಣೆ ಅತ್ಯದ್ಭುತವೇ ಸರಿ.  ಈ  ಕಥೆಗಳು ಭಾಗವತ ಭಾರತದಲ್ಲಿ ಹೇಳಿರುವಂತಹದ್ದು.  "ಭರವಸೆಯ ತಳಹದಿಯಮೇಲೆ ಭಕ್ತಿ ಹಾಸುಹೊಕ್ಕಿದ್ದರೆ ಸಾಧನೆ ಸುಸೂತ್ರ ಹಾಗೂ ಪೂರ್ಣಫಲಕಾರಿ" ಎಂಬುವದನ್ನು ಸಾರುವದಕ್ಕಾಗಿಯೇ,  ಈ ಎಲ್ಲ ಕಥೆಗಳ ಮುಖಾಂತರ ದೇವ ತಾನು *ಕರುಣಾಮಯ ಹಾಗೂ ಸರ್ವರಕ್ಷಕ* ಎಂಬುವದನ್ನು ದೃಢಪಡಿಸುತ್ತಾನೆ.  ಗಜೇಂದ್ರ ಹಾಗೂ ಅಜಾಮಿಳರಿಗೆ ದೆವರೇ ರಕ್ಷಣೆ ಮಾಡಿದ್ದಾನೆ. ಆದರೆ ಇವರೀರ್ವರಲ್ಲಿ ಬಹಳ ಕರುಣೆ ಮಾಡಿದ್ದು ಯಾರಿಗೆ... ??? ಎಂದು ಯೋಚನೆ ಬಂದಿದೆ ಎಂದಾರೆ ಉತ್ತರ ಹೀಗೆ ಹೇಳಬಹುದು, ರಕ್ಷಣೆ ಸಮಾನವಾಗಿದ್ದರೂ  ಅಜಾಮಿಳನಮೇಲೆ ಕರುಣೆ ಅತೀ ಉನ್ನತಮಟ್ಟದಲ್ಲಿ ಇದೆ ಎಂದು ಹೇಳಬಹುದು. *ಗಜೇಂದ್ರ...* ಗಜೇಂದ್ರ ಒಂದು ಪ್ರಾಣಿ. ಬುದ್ಧಿ ಇಲ್ಲ. ವಿಧಿನಿಷೇಧಗಳೂ ಇಲ್ಲ. ಶಾಸ್ತ್ರ ಧರ್ಮ ಜ್ಙಾನ ಇವುಗಳನ್ನು ತಿಳಿದೂ ಇಲ್ಲ. ಆದರೆ *ದೇವರ ಮಹಾನ್ ...

ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ

Image
*ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ* ದಾಶಶ್ರೇಷ್ಠರಾದ, ಜ್ಙಾನಿಗಳೂ ಆದ, ಪರಮಭಕ್ತರಾದ, ವಿರಕ್ತಶಿಖಾಮಣಿಗಳಾದ ಕನಕದಾಸರು, ಜಗದ್ರಕ್ಷಕ ದೇವರ ಸ್ತುತಿ ರೂಪ ವಾಗಿ *ಹರಿಭಕ್ತಿ ಸಾರ* ಎಂಬ ಸುಂದರ ಗ್ರಂಥವನ್ನು ರಚನೆ ಮಾಡಿ ಕೊಟ್ಟಿದ್ದಾರೆ. *ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ* ಹರಿಭಕ್ತಿಸಾರದಲ್ಲಿ ಕನಕದಾಸರು ಹೇಳುವಾಗ ಅನೇಕ ಅತ್ಯುತ್ತಮ ಗುಣಗಳನ್ನು ತಿಳುಹಿಸಿಕೊಡುತ್ತಾರೆ, ಆ ಎಲ್ಲ ಭಗವದ್ಗುಣಗಳೂ, ದುಷ್ಟರ ದಮನದ ಮುಖಾಂತರ ಅಥವಾ  ಶಿಷ್ಟರ ರಕ್ಷಣೆಯ ಮುಖಾಂತರ ಒಟ್ಟಾರೆಯಾಗಿ  ಸಜ್ಜನರ ಭಕ್ತರ ರಕ್ಷಣೆಗೆ ಸಂಬಂಧಪಟ್ಟದ್ದೇ ಆಗಿರುತ್ತದೆ. ಹರಿಭಕ್ತಿ ಸಾರದಲ್ಲಿ ಬಂದ ನೂರಾರು ಗುಣಗಳಲ್ಲಿ "ಅಕ್ಷಯಾಶ್ರಿತ - ಸುಜನಜನ ಸಂರಕ್ಷಕ"  ಎಂಬ ಎರಡು ಗುಣಗಳನ್ನು ಇಂದು ಆರಿಸಿಕೊಂಡೀನಿ. *ಅಕ್ಷಯಾಶ್ರಿತ*  ಸಾಮಾನ್ಯವಾಗಿ ನಾವು ಒಬ್ಬರಿಲ್ಲ ಒಬ್ಬರನ್ನು, ಒಂದಿಲ್ಲ ಮತ್ತೊಂದನ್ನು ಆಶ್ರಯಿಸೇ ಇರುತ್ತೇವೆ. ಆಶ್ರಯದಾತರು ಮಾತ್ರ ತಮ್ಮ ಸ್ವಾರ್ಥಕ್ಕೆ ಕುಂದು ಬರುವವರೆಗೆ ಆಶ್ರಯವನ್ನು ಕೊಟ್ಟಿರುತ್ತಾರೆ, ಆಶ್ರಿತನು ಬದುಕಿರುವಾಗಲೇ ಅವರ ಉಸಿರು ಕೊನೆಗೊಂಡಿರುತ್ತದೆ ಆದರೆ ಈ ದೇವರು ಹಾಗಲ್ಲ "ಆಶ್ರಿತ ಜನರಿಗೆ ಅಕ್ಷಯನಾಗಿದ್ದಾನೆ" ಅನಾದಿಯಿಂದ ಅನಂತದ ವರೆಗೆ ಕ್ಷಣಬಿಡದೆ ಸಂರಕ್ಷಿಸುತ್ತಾನೆ. ಆಶ್ರಯಕೊಟ್ಟ ದೇವರೇ ಇಲ್ಲ ಎಂದಾಗುವದೇ ಇಲ್ಲ. ಆ ಕಾರಣದಿಂದ *ಅಕ್ಷಯಾಶ್ರಿತ* ಎಂದರು ದಾಸರು. ಅಕ್ಷಯರಾದ ಎಂದೆಂದಿ...

ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ*

Image
ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ* ಮನುಷ್ಯನಿಗೇ ರೋಗಗಳು ಅನೇಕ. ಪ್ರಾಣಿ ಪಶು ಪಕ್ಷಿಗಳಕ್ಕಿಂತಲೂ ಅಧಿಕ ಮಟ್ಟದಲ್ಲಿ ರೋಗಿಷ್ಠ ಮನುಷ್ಯ. ದೈಹಿಕ ರೋಗಗಳು ಒಂದಾದರೆ ಮನಸ್ಸಿನ ರೋಗಳೂ ತುಂಬ,  ಇವುಗಳ ಮಧ್ಯದಲ್ಲಿ  *ಇನ್ನೊಬ್ಬರ ಅನುಕರಣೆಯಿಂದ* ಬರುವ ರೋಗಗಳೂ ಅತಿ ಭಯಂಕರ ವಾದವುಗಳು.   ಪುರುಷರೋ/ಸ್ತ್ರೀಯರೋ ಗೋಪಿಚಂದನ್ನು  ಅಥವಾ ಕುಂಕುಮವನ್ನು ಧರಿಸುವದು ಬಿಟ್ಟಿರುತ್ತಾರೆ. ಬಿಡುವದಕ್ಕೆ ಮೂಲವೇನು... ?? ಗೋಪಿಚಂದನ, ಕುಂಕುಮ, ಅಂಗಾರ ಅಕ್ಷತೆ, ಬಳೆ ಇವುಗಳ ಮೇಲೆ ದ್ವೇಶ ಇಲ್ಲ. ಕೇವಲ ಪರರ ಅನುಕರುಣೆಯೇ ಹೊರತು ಇನ್ನೇನು ಬೇರೆ ಕಾರಣವೇ  ಇರುವದಿಲ್ಲ. ಕೇವಲ ಇದು ಒಂದು ಉದಾಹರಣೆ ಮಾತ್ರ. ಧರ್ಮ ಬಿಡಲು ಮನುಷ್ಯನಿ ಧೈರ್ಯವಿಲ್ಲ. ಅದರೂ ಧರ್ಮವನ್ನು ಬಿಡುತ್ತಾನೆ. ಧರ್ಮ ಮಾಡಲು ತುಂಬ ಮನಸ್ಸಿದೆ ಆದರೂ ಮಾಡುವ ದಿಲ್ಲ.  ಧರ್ಮದ ದ್ವೇಶ ಸರ್ವಥಾ ಇಲ್ಲ, ಆದರೂ ಬಿಡುತ್ತಾನೆ. ಧರ್ಮದ ಮೇಲೆ ವಿಶ್ವಾಸವೂ ತುಂಬಾ ಇದೆ ಆದರೂ ಧರ್ಮ ಬಿಡುತ್ತಾನೆ. ಧರ್ಮದಿಂದಲೇ ಎನಗೆ ಹಿತ ಎಂದು ಸ್ಪಷ್ಟವಾಗಿ ಗೊತ್ತಿದೆ ಆದರೂ ಧರ್ಮಬಿಡುತ್ತಾನೆ ಅದಕ್ಕೆ ಒಂದೇ ಕಾರಣ *ಪರರ ಅನುಕರಣೆ.*   ಧರ್ಮ ಮಾಡದ ಅವನು ಚೆನ್ಬಾಗಿ ಇದ್ದಾನೆ, ಹಾಗಿರುವಾಗ ನಾನೇಕೆ ಧರ್ಮವನ್ನು ಮಾಡಬೇಕು..? ಎಂದು ಯೋಚಿಸಿಯೇ ಬಿಟ್ಟಿರುತ್ತಾನೆ. ಹೀಗಾಗುವದು ಏಕೆ..?? ಸ್ವಂತ ವಿಚಾರವಿಲ್ಲದ, ಸ್ವಂತಿಕೆಯೇ ...

*ಬಂದದ್ದರಲ್ಲಿ ಬಾಳಿಕೋ - ಗೋವಿಂದ ನಿನ್ನವನೆಂದು ಹೇಳೀಕೋ*

Image
*ಬಂದದ್ದರಲ್ಲಿ ಬಾಳಿಕೋ - ಗೋವಿಂದ ನಿನ್ನವನೆಂದು ಹೇಳೀಕೋ* "ಬಂದದ್ದರಲ್ಲಿ ಬಾಳೀಕೋ" ಇದು ಒಂದು ದಾಸರ ಸುಂದರ ಮಾತು. ಅನುಭವದ ಮಾತು. ಶಾಸ್ತ್ರ ಸಮ್ಮತವೂ ಹೌದು. ಶ್ರೇಯಸ್ಸಿಗೆ ಅನುಕೂಲ. ಶಾಂತಿ ಸ್ಥಾಪನೆಗೆ ಮುಹೂರ್ತ. ಅಶಾಂತಿ ಹತಾಶೆ ಇವುಗಳಿಗೆ ಪ್ರತಿಕೂಲ. ಈ ಭಾವ ಬರಲೇಬೇಕು ಇದು ತಯ.  ಬಯಕೆ ಇದು ಒಂದು ಚಟ. ಒದಗಿಸಿದಷ್ಟೂ ಬೇಡುವ. ವಿಚಿತ್ರ ಬೇಡಿದಷ್ಟೂ ಪಡೆಯಲಾರ. ಬೇಡಿದ್ದೊಂದೇ ನಿಜ. ಪಡೆಯುವದು ಸುಳ್ಳು. ಪಡೆಯದೇ ಇರುವಾಗ ಹತಾಶೆ hurt ನಿಶ್ಚಿತ. ಅಂತೆಯೇ ದಾಸರೆಂದರು "ಬಂದದ್ದರಲ್ಲಿ ಬಾಳಿಕೋ" ಎಂದು. ಸಾಮಾನ್ಯವಾಗಿ ಬಯಸುವದು ತನ್ನವರಿಂದ. ತಾನು ಯಾರಿಗೆ ಕೊಟ್ಟಿದ್ದಾನೆ ಅವರಿಂದ. ಗುರುಗಳಿಂದ. ದೇವತೆಗಳಿಂದ ಹಾಗೂ ದೇವರಿಂದ ಬಯಸ್ತಾನೆ ಬೇಡುತ್ತಾನೆ, ಬೆನ್ನು ಬೀಳಿತ್ತಾನೆ.  ೧) ತನ್ನವರು ಪಡೆಯುತ್ತಾರೆ ಕೊಡಲಾರರು.  ೨) ತಾನು ಯಾರಿಗೆ ಕೊಟ್ಟಿದ್ದಾನೆ ಅವರು ಕೈ ಕೊಡುವವರು.  ೩) ಗುರುಗಳು ಕೊಟ್ಟಿದ್ದು ಪಡೆಯಲಾರ...  ೪) ದೇವತೆಗಳನ್ನು ಅರ್ಚಿಸಲಾರ, ದೆವತೆಗಳು ಕೊಟ್ಟಿರೋದನ್ನು ಒಪ್ಪಿಕೊಳ್ಳಲಾರ.  ೫) ದೇವರನ್ನು ಸ್ತುತಿಸಲಾರ, ದೇವರ ಪ್ರೀತಿಯ ಧರ್ಮ ಕರ್ಮಗಳನ್ನು ಮಾಡಲಾರ, ಹಾಗಾಗಿ ಪಡೆಯುವದೂ ತುಂಬ ಕಷ್ಟ.  ಏನು ಬೇಡಿದ್ದಾನೆ ಅದೂ ತನ್ನ ಯೋಗ್ಯತೆ ಮೀರಿ ಬೇಡಿದ್ದಾನೆ ಹಾಗಾಗಿ ಬೇಡಿದ್ದೊಂದೇ ನಿಜ. ಪಡೆದದ್ದು ಸುಳ್ಳೇ. ಅಯೋಗ್ಯವದಾದದ್ದು ಎಂದಿಗೂ ಸಿಗ...

ಗೋ ರೂಪೀ- ಸರಸ್ವತಿ

*ಗೋ ರೂಪೀ-  ಸರಸ್ವತಿ* ಶುದ್ಧ ಜ್ಙಾನಾಭಿಮಾನೀ ಹಾಗೂ ಜ್ಙಾನಪ್ರದಳು ಸರಸ್ವತೀ ದೇವಿ. ಇಂದು ಪರಿಶುದ್ಧ ಜ್ಙಾನವೇ ಇಲ್ಲದೆ ಪರದಾಡುತ್ತಿರುವವರು ನಾವು. ಜ್ಙಾನ knowledge ಇದು ಅತ್ಯಂತ ಅಮೂಲ್ಯ. ಒಂದು ಹೆಜ್ಜೆ ಮುಂದಿಡಲೂ ಜ್ಙಾನ ಬೇಕು. ಒಂದು ಸಣ್ಣ ಕಾರ್ಯ ಮಾಡಲೂ ಜ್ಙಾನ ಬೇಕು. ಊಟ ನಿದ್ರೆಗೂ ಜ್ಙಾನ ಆವಶ್ಯಕ. ಒಂದರ್ಥದಲ್ಲಿ ಜ್ಙಾನವಿಲ್ಲದೇ ಏನಿಲ್ಲ, ಏನೂ ಆಗದು, ಏನೂ ಮಾಡಲಾಗದು. ಹೊಟ್ಟೆ ತುಂಬತ್ತೆ, ನಾನು ಮುಂದೇ ಹೋಗುವೆ, ಹಣಘಳಿಸ ಬಹುದು ಇತ್ಯಾದಿ ಇತ್ಯಾದಿ ಜ್ಙಾನ ವಿಲ್ಲದಿದ್ದರೆ, ಊಟ ಮಾಡುತ್ತಿರಲಿಲ್ಲ, ಮುಂದೆ ಹೆಜ್ಜೆ ಇಡುತ್ತಿರಲಿಲ್ಲ, ಕೆಲಸಕ್ಕೆ ಹೋಗುತ್ತಿರಲಿಲ್ಲ.... ನಮ್ಮಲ್ಲಿ ಅಪಾರಾದ ಜ್ಙಾನ ಇದೆ, ನಾವು ಜ್ಙಾನವಂತೆರೆ ಇದರಲ್ಲಿ ಸಂಶಯವಿಲ್ಲ. ಆದರೆ ಆ ಜ್ಙಾನ ಅನಂತ ಫಲಕ್ಕೆ ಕಾರಣವಾಗದೆ, ಕ್ಷುದ್ರಫಲಕ್ಕೆ ಕಾರಣವಾಗಿದೆ ಇದೇ ಬೇಸರದ ಸಂಗತಿ. ಹಾಗಾದರೆ ಅನಂತ ಫಲಕ್ಕೆ ಕಾರಣವಾದ ಜ್ಙಾನವೂ ಇದೆಯಾ.. ?? ಇದ್ದರೆ ಆ ಜ್ಙಾನವನ್ನು ಪಡೆಯುವ ಬಗೆ ಹೇಗೆ ?? ಉತ್ತರವನ್ನು ಬೃಹದಾರಣ್ಯಕ ಉಪನಿಷತ್ತು ತುಂಬಾ ಸೊಗಸಾಗಿ ಕೊಡುತ್ತದೆ. *ವಾಗಭಿಮಾನಿ ಸರಸ್ವತಿಯನ್ನು "ಗೋ" ಎಂದು ತಿಳಿ*  ಅನಂತ ಆನಂದದ ಫಲಕ್ಕೆ ಕಾರಣವಾದ, ವಿದ್ಯೆಯ ಸಿದ್ಧಿಗೆ ಆವಶ್ಯಕವಾದ ಚಿಂತನೆಯನ್ನು ಈ ಪ್ರಕರಣದಲ್ಲಿ ತಿಳುಹಿಸಿಕೊಡುತ್ತಾರೆ ಎಂದು ಇಂದಿನ ಆರಾಧ್ಯ ಗುರುಗಳಾದ ಶ್ರೀ ರಘೂತ್ತೀರ್ಥರು ತಿಳುಹಿಸಿಕೊಡುತ್ತಾರೆ.  ಸರ್ವಿದ್...

ಮಕರ ಸಕ್ರಾಂತಿ ಹಬ್ಬದ ಶುಭಾಷಯಗಳು

Image
*ಭೋಗೀ ಹಾಗೂ ಸಕ್ರಾಂತಿ ಹಬ್ಬದ ಶುಭಾಷಯಗಳು* ದೇವರ ರಕ್ಷಣೆಯ ಬಲವೇ ಎಮ್ಮ ಬಲ. ದೇವರು ಆಗಾಗ ರಕ್ಷಿಸುವ ಉಪಾಯ ತಿಳಿಯಲೇ ಹಬ್ಬ ಹರಿದಿನಗಳು ಇರುವವು.  *ಈ ದಿನ ಹಂಚುವ ದಿನ* ಎಳ್ಳು ಬೆಲ್ಲ ಇವುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಹಂಚಿಕೊಳ್ಳುವ ದಿನ. ಬ್ರಾಹ್ಮಣರಿಗೆ ಅನ್ನ ದ್ರವಿಣ ಮೊದಲಾದ ಅನೇಕ  ದಾನಮಾಡಿ ಆ ಎಲ್ಲ ಬ್ರಾಹ್ಮಣರಿಗೂ ವಿಶೇಷವಾಗಿ  ಸಂತೃಪ್ತಿಯನ್ನು ಹಂಚುವ ದಿನ.  ದೇವತೆಗಳಿಗೆ ತಿಲ ಹೋಮದಿಂದ, ಜಪ ತಪಸ್ಸು ಪೂಜೆ ಇವುಗಳಿಂದ ದೇವರಿಗೂ ವಿಶೇಷವಾಗಿ ಸತ್ಕರಿಸುವ ದಿನ ಈ ದಿನ.  *ಹಂಚುವದರ ಹಿಂದಿನ ವಿಶೇಷತೆ* ದೇವರಿಗೂ ನಮಗೂ, ದೇವತೆಗಳಿಗೂ ನಮಗೂ, ಗುರುಗಳಿಗೂ ನಮಗೂ, ಬಾಂಧವರಿಗೂ ನಮಗೂ, ಊರಿನ ನಾಡಿನ ಜನರಿಗೂ ನಮಗೂ, ಬಾಂಧವ್ಯ, ಪ್ರೀತಿ, ಅಭಿಮಾನ, ಅಂತಃಕರಣಗಳು, ವಿಶ್ವಾಸ,  ಪರಸ್ಪರವಾಗಿ ಇರಬೇಕು. ಶಾಶ್ವತವಾಗಿಯೂ ಇರಬೇಕು. ದೃಢವಾಗಿ ಇರಬೇಕು. ಜೊತೆಗೆ  "ಹಿರಿಯರ ಅನುಗ್ರಹ, ಸಮರ ಹಾರೈಕೆ, ಕಿರಿಯರ ಅಭಿನಂದನೆ ಇವುಗಳಿಂದಲೇ ಉನ್ನತಿ" ಈ ಭಾವದಲ್ಲಿಯೂ ಪರಸ್ಪರ ಮಾತು ಮನಸ್ಸುಗಳ ಜೊತೆಗೆ  ಎಳ್ಳು ಬೆಲ್ಲ ಹಂಚುವ ಪರಿ ನಮ್ಮಲ್ಲಿ ಬಂದಿದೆ...  *ಎಳ್ಳು ಬೆಲ್ಲವನ್ನೇ ಹಂಚುವದರಿಂದ ಲಾಭವೇನು.. ??* ಏಳೇಳು ಜನುಮಗಳಲ್ಲಿ ಮಾಡಿದ ಏನೆಲ್ಲ ಪಾಪಗಳಿವೆ, ಬ್ರಹ್ಮಹತ್ಯೆ ಸುರಾಪಾನ ಬ್ರೂಣಹತ್ಯೆ ಮೊದಲಾದ ಏನೆಲ್ಲ ಪಾಪವಿದೆ ಆ ಎಲ್ಲ ಪಾಪಗಳ ಪರಿಹಾರ...

ರಕ್ಷಿಸೋ ನಮ್ಮ ಅನವರತ ರಕ್ಷಿಸೋ....

Image
*ರಕ್ಷಿಸೋ ನಮ್ಮ ಅನವರತ ರಕ್ಷಿಸೋ....* ಭಕ್ತಿ ಜ್ಙಾನ ವಿರಕ್ತಿ ಇವುಗಳ ಗಣಿಗಳು ಎಲ್ಲ ಮಹನೀಯರುಗಳು. ಆ ಮಹನೀಯರುಗಳಲ್ಲಿ ಒಬ್ಬರು *ಕನಕದಾಸರು.* ಭಕ್ತಿ ಭರವಸೆಗಳಿಂದಲೇ ಉಡುಪಿಯ ಶ್ರೀಕೃಷ್ಣನನ್ನೇ ಒಲಿಸಿಕೊಂಡವರು.  ಕನಕದಾಸರು ಶ್ರೀವ್ಯಾಸರಾಜರಿಂದ ವೈಷ್ಣವ ದೀಕ್ಷೆಯನ್ನು ಪಡೆದು ಅನೇಕ ಗದ್ಯ ಪದ್ಯ ಹಾಡು ಉಗಾಭೋಗ ಸುಳಾದಿ ಮತ್ತು ಹರಿಭಕ್ತಿ ಸಾರ  ಮುಂತಾದ ಅನೇಕ ಕೃತಿಗಳನ್ನು ರಚಿಸಿದರು.  ಕನಕದಾಸರ ಕೃತಿಗಳಲ್ಲಿ ಪದಗಳ ಲಾಲಿತ್ಯ, ಕಠಿಣತೆ, ಸರಳ ಕಥೆ, ನೀತಿ, ಭಕ್ತಿ, ಬೋಧೆ, ಭರವಸೆ, ತಾದಾತ್ಮ್ಯ, ದಾಸ್ಯ, ವೈರಾಗ್ಯ ಈ ತರಹದ ಬಗೆಬಗೆಯ ವೈವಿಧ್ಯವನ್ನು ಕಾಣುತ್ತೇವೆ. ಅಂತೆಯೇ *ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ* ಎಂಬ ನಾಣ್ಣುಡಿ ಕನಕರು ಬದುಕಿರುವಾಗಲೇ ಪ್ರಸಿದ್ಧಿಗೆ ಬಂತು.  *ಹರಿ ಭಕ್ತಿ ಸಾರ* ನೂರೆಂಟು ಶ್ಲೊಕಗಳನ್ನೊಳಗೊಂಡ,ಮಹಾಭಾರತ ಕಥೆಗಳನ್ನು ಆಧರಿಸಿ,  ಭಗವದ್ಭಕ್ತಿ ಮಹಿಮಾವಬೋಧಕ ಪರಮ ಸುಂದರ ಕೃತಿ *ಹರಿಭಕ್ತಿ ಸಾರ.* *ರಕ್ಷಿಸೋ ನಮ್ಮ ಅನವರತ ರಕ್ಷಿಸೋ* ಹರಿಭಕ್ತಿ ಸಾರದಲ್ಲಿ ಬರುವ ನೂರೆಂಟು ಶ್ಲೋಕಗಳಲ್ಲಿಯೂ ಕೊನೆಗೆ *ರಕ್ಷಿಸೋ ನಮ್ಮ ಅನವರತ* ಎಂಬುದಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.  ರಕ್ಷಣೆ ಭರವಸೆಇರುವಲ್ಲಿ ಇರುತ್ತದೆ, ರಕ್ಷಣೆ ದಾಸ್ಯಭಾವ ಇರುವಲ್ಲಿ ಇರುತ್ತದೆ. *ನೀನು ಮಹಾನ್ , ನಾನು ನಿನ್ನ ಕುನ್ನಿದಾಸ* ಅಂತೆಯೇ ಅನವರತ ಎನ್ನನು ರಕ್ಷಿಸು...

ನೋವು ಬೇಕಾ..?? ಬೇಕು ಬೇಡ.

*ನೋವು ಬೇಕಾ..?? ಬೇಕು ಬೇಡ* ನೋವು ಇದೊಂದು ವಿಚಿತ್ರ ಪದಾರ್ಥ. ಯಾರನ್ನೂ ಬಿಟ್ಟಿಲ್ಲ. ಯಾರು ನೋವನ್ನು ಮೆಟ್ಟಿದ್ದಾರೆ ಅವರಂತೂ ಜಗತ್ತನ್ನು ಗೆದ್ದಿದ್ದಾರೆ.  ಆಯುಷ್ಯವನ್ಬೆಲ್ಲ ನೋವನಲ್ಲೇ ಕಳೆಯುವಂತಹ ಅನೇಕ ಜನರನ್ನು  ನಾವು ಕಾಣುತ್ತೇವೆ.  ಕಾಣುವ ಸಕಲದರಲ್ಲಿಯೂ ನೋವನ್ನೇ ಅನುಭವಿಸುತ್ತಾರೆ. ಛಳಿ ಇದ್ದರೆ ಏನ ಚಳಿ ಮಾರಾಯ್ರೇ ಸಾಕಾಯ್ತಪಾ ಅಂತಾರೆ, ಬಿಸಿಲು ನೋಡಿನೂ ಉರಿಬಿಸಿಲು ಅಂತಾರೆ, ಮಳೆಬಂದರೂ ನೋವು ಅನುಭವಿಸುತ್ತಾರೆ, ಮಳೆ ಬಿಸಿಲು ಛಳಿ ಇರದೆ ಇನ್ನೇನು ಇರಬೇಕು... ?? ಅದು ನೋವು ಉಣ್ಣುವ ಅವರ ಪರಿಪಾಕವಷ್ಟೇ.  ಪ್ರತಿಯೊಬ್ಬ ಜೀವನೂ *ಅನಿರ್ವಚನೀಯ ವೈಭವದ ಸಂಪತ್ಕುಮಾರರು* ಆಗಿದ್ದಾರೆ.  ಚಿನ್ಬದ ಗಣಿಯಲ್ಲಿ ಚಿನ್ನ ಹುದುಗಿದಂತೆ, ಎಲ್ಲ ವೈಭವಗಳೂ ಪ್ರತಿಯೊಬ್ಬರಲ್ಲಿಯೂ ಹುದುಗಿ ಕುಳಿತಿದೆ. ಅರಿವು ಇಲ್ಲವಷ್ಟೆ.  ವಿಚಿತ್ರವೆಂದರೆ ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಂಡು ಶಪಿಸಿವದು ದೇವರನ್ನು. ಇನ್ನೊಬ್ವರಿಗೆ ಬಯ್ಯುವದು ಆಡುವದರಿಂದ ಕ್ಷುದ್ರ ಆನಂದವನ್ನು ಅನುಭವುಸುವದು ಇವರ ಗಾಳವಾಗಿದೆ. ಪರಮಶುದ್ಧ ಆನಂದದ ಗಣುಯಾದ ದೇವರೇ ತಮ್ಮ ಮನೆಯಲ್ಕಿ ಬಂದು ಕುಳಿತಿದ್ದರೂ, ಆ ದೇವರನ್ನು ನಿಂದಿಸುತ್ತಾ ಮನೆಯ ಮುರುಕ ರಾವಣನ ತೋಳ್ ತೆಕ್ಜೆಗೆ ಧಾವಿಸುತ್ತಾರೆ. ಅಂತಹವರಿಗೆ ನೋವೇ ಕೊನೆಯ ಗತಿ. ಏನೆಲ್ಲವಿದ್ದರೂ ಅದರಲ್ಲು ನೋವೇ ಕಾಣುವ ಗತಿ ಅವರದಾಗಿಬಿಡುತ್ತದೆ.  ಈ ತರಹದ ವಿನಾರಣ...

*ಇಂದು....*

Image
*ಇಂದು.....* ಶತ್ರು - ಮಿತ್ರರುಗಳು ಇರುವ ದಿನಗಳು ಇಂದಿಗೂ ಇವೆ. ಹಿಂದೆಯೂ ಇತ್ತು. ಮುಂದೂ ಇರುವವು.  ಶತ್ರು - ಮಿತ್ರರು ಇಂದೂ ಇದ್ದಾರೆ. ಹಿಂದೂ ಇದ್ದರು. ಮುಂದೂ ಇರುವವರೇ. ಆದರೆ ಇಂದಿನ ದುಃಸ್ಥಿತಿ ಅಂತೂ ತುಂಬ ಘೋರ.  ಶತ್ರು ವಿನಾಶನಾಗಬೇಕು ಇದು ಎಲ್ಲರ ಬಯಕೆ. ಮಿತ್ರರ ಪಡೆ ಬೆಳೆಯಬೇಕು ಇದು ಒಂದು ಶ್ರೇಷ್ಠ ವಿಚಾರ. ಆದರೆ *ಇಂದು ಶತ್ರುಗಳು ಯಾರು.. ??  ಮಿತ್ರರು ಯಾರು ..?? ಎಂದು ತಿಳಿಯುವದರಲ್ಲೇ ಅನುತ್ತೀರ್ಣರಾಗುತ್ತಿರುವ ಮಾನವರಿಗೆ ಯಾರ ವಿನಾಶ ಬಯಸಬೇಕು... ಯಾರ ಮಿತ್ರತೆಯನ್ನು ಸಂಪಾದಿಸಿಕೊಳ್ಳಬೇಕು ಎನ್ನುವದೇ ತಿಳಿಯದಾಗಿದೆ.  *ವಿಷಾದ ಸ್ಥಿತಿ* "ನಮಗೆ ಶತ್ರುಗಳ ವಿನಾಶ ಆಗಬೇಕು ಎನ್ನುವ ಬಗ್ಗೆ ಇರುವ ಆಸೆ ಆಕಾಂಕ್ಷೆ, ನಮ್ಮ ಸ್ನೇಹಿತರ ಅಭ್ಯುದಯ ಆಗಬೇಕು ಎನ್ನುವ ಬಗೆಗೆ ಇಲ್ಲವೇ ಇಲ್ಲ" ಇದು ಅತ್ಯಂತ ವಿಷಾದನೀಯ ಸ್ಥಿತಿ ಇಂದು ಒದಗಿದೆ.  ದ್ವೇಶಮಾಡಲೇ ಬೇಕಾದ ಶತ್ರುಗಳ ಮೇಲಿನ ದ್ವೇಶಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಮಿತ್ರರನ್ನು ದ್ವೇಶಿಸುತ್ತಾನೆ ಇದು ಅಂತೂ ತುಂಬ ಘೋರ. ಆ ಮಿತ್ರರನ್ನು ದ್ವೇಶಿಸಲೇ ತನ್ನ ಬುದ್ಧಿ, ಸಂಪತ್ತು, ಶಕ್ತಿಗಳನ್ನು ಉಪಯೋಗಿಸುತ್ತಾನೆ.  ಶತ್ರುಗಳ ಮಾತುಗಳನ್ನು ನಂಬುತ್ತಾನೆಯೊ ಇಲ್ಲವೋ, ಕದಾಚಿತ್ ನಂಬಲೂ ಬಹುದು. ಆದರೆ ಮಿತ್ರರ ಮಾತನ್ನು ಎಂದಿಗೂ ನಂಬಲಾರ. ಮಿತ್ರರ ಉನ್ನತಿಯನ್ನು ಸಹಿಸಲಾರ. *ಮಿತ್ರರನ್ನು ತುಳಿದು, ಶತ್ರುವನ್ನು ಬ...

*ಯೋಗ - ಕ್ಷೇಮಂ ವಹಾಮ್ಯಹಮ್....

Image
*ಯೋಗ - ಕ್ಷೇಮಂ ವಹಾಮ್ಯಹಮ್* ಶ್ರೀಕೃಷ್ಣಪರಮಾತ್ಮನ ಒಂದು ನಿಶ್ಚಿತ ತತ್ವ "ನನ್ನ ಭಜಕರ ನನ್ನ ಆರಾಧಕರ ನನ್ನ ಭಕ್ತರ *ಯೋಗ - ಕ್ಷೇಮ* ಗಳ ಹೊರುವ ಜವಬ್ದಾರಿ ಎನ್ನದು" ಎಂದು.  *ಯೋಗ - ಕ್ಷೇಮ* ಗಳು ಎಂದರೆ ಏನು ???  "ನಾವು ಯೋಗಕ್ಷೆಮದಿಂದ ಇದ್ದೇವೆ, ನಿಮ್ಮ ಯೋಗಕ್ಷೇಮಗಳ ಸಮಾಚಾರ ತಿಳಿಸಬೇಕು" ಹೀಗೆ ರೂಢಿಯಲ್ಲಿ ಸಾಮಾನ್ಯ ಪ್ರಯೋಗವಿದೆ...  ಯೋಗ ಎಂದರೆ *ಹಿತವಾದ ಯೋಗ್ಯವಾದ ಪಡೆಯಲು ಸಾಧ್ಯವಾದ  ವಸ್ತುವನ್ನು ಪಡೆಯುವದು*  ಎಂದರ್ಥ. ಕ್ಷೇಮ ಎಂದರೆ *ಹಿತವಾದದ್ದು ಏನೆಲ್ಲವನ್ನು ಪಡೆದಿದ್ದೆನೆ ಅದನ್ನು ಉಳಿಸಿಕೊಳ್ಳುವದು* ಎಂದರ್ಥ. ಇವೆರಡೂ ದೇವರ ಅಧೀನ. ನಮ್ಮ ಕರ್ಮಾನುಸಾರ, ಭಕ್ತಿಗನುಗುಣ ತಾನೇ ಖುದ್ದಾಗಿ ಕೊಡುತ್ತಾನೆ. ದುಃಖ, ಚಿಂತೆ, ಸಂತಾಪ, ಅನಾರೋಗ್ಯ, ದಾರಿದ್ರ್ಯ,  ಇವುಗಳ ಸುಳಿಯಲ್ಲಿ ಸಿಕ್ಕಾಗ ಧನ ಕನಕ ಅರೋಗ್ಯ ಇತ್ಯಾದಿಗಳು ದೊರೆಯುವದು ಏನಿದೆ ಅದು *ಯೋಗ* ಎಂದು ಕರೆಸಿಕೊಳ್ಳುತ್ತದೆ. ಪಡೆದ ಸುಖಸಾಧನೆಗಳನ್ನು ಹಾಳು ಮಾಡಿಕೊಳ್ಳದೇ ಉಳಿಸಿಕೊಳ್ಳುವದು *ಕ್ಷೇಮ.*   *ನಿನಗೆ ನಿನ್ನ ಸುಖಕ್ಕೆ ಬೇಕಾದ ಎಲ್ಲ ಸಾಧನೆಯಗಳನ್ನು ಗುರುಹಿರಿಯರಿಂದ ಪಡೆದಿದ್ದೀಯಾ.. ?? ಎಂದು ಅಂದಿನ ಹಿರಿಯರು ಕೇಳಿದರೆ, ಖಂಡಿತವಾಗಿಯೂ ಪಡೆದಿದ್ದೇನೆ ಎಂದು ಅಂದಿನ ಕಿರಿಯ ಉತ್ತರಿಸುತ್ತಿದ್ದ. ಆದರೆ ಇಂದು ಮಾತ್ರ hi hello ಇದರಲ್ಲೆ ಕೊನೆಗೊಂಡಿದೆ .... ಈಗಾಗಲೇ ಯೋಗ...

ಕೇಳುವಿಕೆಯಲ್ಲಿ ತಾಳ್ಮೆಯ ಆವಶ್ಯಕತೆ ......*

Image
*ಕೇಳುವಿಕೆಯಲ್ಲಿ ತಾಳ್ಮೆಯ ಆವಶ್ಯಕತೆ ......* ನೋಡುವ ಶಕ್ತಿಗಿಂತಲೂ ನೂರುಪಟ್ಟು ಹೆಚ್ಚು ಕೇಳುವಶಕ್ತಿಗೆ ಇದೆ. ಇದು ಎಲ್ಲರ ಅನುಭವಸಿದ್ಧ.  ನೋಡುವದಕ್ಕೂ ಕೇಳುವದಕ್ಕೂ ತಾಳ್ಮೆ ಇಲ್ಲ. ಇದುವೂ ಅಷ್ಟೇ ನಿಜ.  ನೋಡುವದರಿಂದ ತಿಳುವಳಿಕೆ ಬರದು, ತಿಳುವಳಿಕೆ ಕೇಳುವದರಿಂದಲೇ ಬರುವದು. ಜೀವ ತಿಳಿದವನು ಎಂದಾಗುವದು ಕೇಳುವದರಿಂದಲೇ. ಆ ಕಾರಣದಿಂದಲೋ ಏನೋ ಕೇಳುವದಕ್ಕೆ ತುಂಬ ಪ್ರಾಶಸ್ತ್ಯವಿದೆ. ಕೇಳುವದರಲ್ಲಿ ತಾಳ್ಮೆ ಅತ್ಯವಶ್ಯಕ.  ಜೀವನದ ಸಾಗಣಿಕೆಯಲ್ಲಿ ಎಡವದು ಸಹಜ. ಎಡುವ ಸ್ಥಳಗಳು ನೂರಾರು. ಎಡುವಿ ಬಿದ್ದಾಗ ಕ್ಷಣದಲ್ಲಿ ಸುಧಾರಿಸಿಕೊಳ್ಳುವವು ನೂರಾದರೆ, ಕೊನೆಯುಸಿರು ಇರುವವರೆಗೂ ಸುಧಾರಿಸಿಕೊಳ್ಳಲಾಗದ್ದು ಮತ್ತೆ ಕೆಲವು. ಜನ್ಮ ಜನ್ಮಗಳುರುಳಿದರೂ ಸುಧಾರಿಸಿಕೊಳ್ಳಲಾಗದ್ದು ಮತ್ತೆ ಅನೇಕ. ಅಂತೂ ಎಡುವದರ ಭಯ ಇದ್ದದ್ದೇ. ಭಯದ ಅರಿವು ಇದ್ದ ವ್ಯಕ್ತಿ ಎಚ್ಚರಿಕೆಯಿಂದ ನಡೆಯುವ, ಎಡುವಲಾರ. ಭಯದ ಅರಿವು ಮೂಡುವದು ಕೇಳುವದರಿಂದಲೇ.  ಸುದೀರ್ಘವಾದ ಜೀವನ. ಅದರಲ್ಲಿ ಯಶಸ್ಸಿನ ಉತ್ತುಂಗ ತೋರಿಸುವ ದೀಪಾವಳಿಗಳು ಅಲ್ಲಲ್ಲಿ ಇರುತ್ತವೆ. ಯಶಸ್ಸಿನ ದಾರಿ ತೋರಿಸುವ ದೀಪಗಳು ಮಿಣಕು ದೀಪಗಳು. ಸುಲಭದಲ್ಲಿ ಕಣ್ಣಿಗೆ ಕಾಣವು. ಅಯಶಸ್ಸು ಅಪಕೀರ್ತಿಗೊಳಪಡಿಸುವ ದೀಪಗಳಂತೆ ಆರ್ಭಟ ಇರುವದಿಲ್ಲ. ಆ ಮಿಣುಕು ದೀಪಗಳ ಮಾರ್ಗದಲ್ಲಿ ಇಳಿದು ಮಹಾನ್ ಯಶಸ್ಸು ಕೀರ್ತಿ ಪಡೆಯಬೇಕಾದರೆ ಗುರು ಹಿರಿಯರುಗಳಿಂದ ಕೇಳುವದು ಅನಿವಾರ...