*ಅಜಾಮಿಳ ಮತ್ತು ಗಜೇಂದ್ರ*
*ಅಜಾಮಿಳ ಮತ್ತು ಗಜೇಂದ್ರ*
ಕರುಣಾಳು ದೇವ. ಎಲ್ಲತರಹದ ಜನರನ್ನೂ ರಕ್ಷಿಸುವ ಹೆದ್ದೊರೆ. ಋಷಿ ಮಕ್ಕಳು ಎಂದು ಮೋಕ್ಷ ಕೊಡುವದಿಲ್ಲ. ದೈತ್ಯರ ಮಗ ಎಂದು ತಮಸ್ಸೂ ಕೊಡುವದಿಲ್ಲ. ಅವರ ವ್ಯಕ್ತಿತ್ವ ಗುಣವಂತಿಕೆ ಇವುಗಕಳನ್ನು ಗಮನಿಸಿಯೇ ಫಲಕೊಡುವ ದೊರೆ ನಮ್ಮ ದೊರೆ.
ದ್ರೌಪದಿ, ಪಲ್ಹಾದ, ಬಲಿ, ಧೃವ, ಗಜೇಂದ್ರ, ಅಜಮಾಮಿಳ ಈ ಎಲ್ಲ ಮಹಾಮಹಿರ ಜೀವನ ಚರಿತ್ರೆಯಲ್ಲಿ ಸರ್ವರಕ್ಷಕನಾದ ದೇವರು ಕರುಣೆ ಹಾಗೂ ರಕ್ಷಣೆ ಅತ್ಯದ್ಭುತವೇ ಸರಿ. ಈ ಕಥೆಗಳು ಭಾಗವತ ಭಾರತದಲ್ಲಿ ಹೇಳಿರುವಂತಹದ್ದು.
"ಭರವಸೆಯ ತಳಹದಿಯಮೇಲೆ ಭಕ್ತಿ ಹಾಸುಹೊಕ್ಕಿದ್ದರೆ ಸಾಧನೆ ಸುಸೂತ್ರ ಹಾಗೂ ಪೂರ್ಣಫಲಕಾರಿ" ಎಂಬುವದನ್ನು ಸಾರುವದಕ್ಕಾಗಿಯೇ, ಈ ಎಲ್ಲ ಕಥೆಗಳ ಮುಖಾಂತರ ದೇವ ತಾನು *ಕರುಣಾಮಯ ಹಾಗೂ ಸರ್ವರಕ್ಷಕ* ಎಂಬುವದನ್ನು ದೃಢಪಡಿಸುತ್ತಾನೆ.
ಗಜೇಂದ್ರ ಹಾಗೂ ಅಜಾಮಿಳರಿಗೆ ದೆವರೇ ರಕ್ಷಣೆ ಮಾಡಿದ್ದಾನೆ. ಆದರೆ ಇವರೀರ್ವರಲ್ಲಿ ಬಹಳ ಕರುಣೆ ಮಾಡಿದ್ದು ಯಾರಿಗೆ... ??? ಎಂದು ಯೋಚನೆ ಬಂದಿದೆ ಎಂದಾರೆ ಉತ್ತರ ಹೀಗೆ ಹೇಳಬಹುದು, ರಕ್ಷಣೆ ಸಮಾನವಾಗಿದ್ದರೂ ಅಜಾಮಿಳನಮೇಲೆ ಕರುಣೆ ಅತೀ ಉನ್ನತಮಟ್ಟದಲ್ಲಿ ಇದೆ ಎಂದು ಹೇಳಬಹುದು.
*ಗಜೇಂದ್ರ...*
ಗಜೇಂದ್ರ ಒಂದು ಪ್ರಾಣಿ. ಬುದ್ಧಿ ಇಲ್ಲ. ವಿಧಿನಿಷೇಧಗಳೂ ಇಲ್ಲ. ಶಾಸ್ತ್ರ ಧರ್ಮ ಜ್ಙಾನ ಇವುಗಳನ್ನು ತಿಳಿದೂ ಇಲ್ಲ. ಆದರೆ *ದೇವರ ಮಹಾನ್ ಭಕ್ತ.* ಅನನ್ಯಗತಿಕನಾಗಿ ಶರಣು ಹೋಗಿದ್ದಾನೆ. ದೇವರು ಕರುಣೆ ಮಾಡಿ ರಕ್ಷಿಸಿದ.
*ಅಜಾಮಿಳ....*
ಅಜಾಮಿಳನ ವಿಷಯದಲ್ಲಿ ಹಾಗಾಗುವದಿಲ್ಲ. ಸ್ವಯಂ ಬುದ್ಧಿ ಇದೆ. ಅಜಾಮಿಳ ಬ್ರಾಹ್ಮಣ. ಎಲ್ಲ ಧರ್ಮ ಕರ್ಮಗಳಿಗೆ ಅಧಿಕಾರಿ. ವಿಧಿನಿಷೇಧಗಳಿಗೆ ಜವಾಬ್ದಾರಿ. ವೇದ ಶಾಸ್ತ್ರ ಅಧ್ಯಯನ ಮಾಡಿದವ. ಧರ್ಮಶಾಸ್ತ್ರ ತಿಳಿದವ. ಇಷ್ಟಿದ್ದೂ ಎಲ್ಲತರಹದ ಪಾಪಗಳನ್ನೂ ಮಾಡಿದವ ಅಜಾಮಿಳ.
ಧರ್ಮಶಾಸ್ತ್ರದಲ್ಲಿ ಬಂದ ಎಲ್ಲ ವ್ರತನಿಯಮಗಳಲ್ಲಿ ಕಾಲ ಕಳೆಯುವದು ಕೆಲವರ ಸ್ವಭಾವ. ಮತ್ತೆ ಕೆಲವರದ್ದು ಇರುವ ಎಲ್ಲ ಕ್ಷೇತ್ರಗಳನ್ನೂ google ಹುಡುಕಿಯಾದರೂ ಪರ್ವಾಗಿಲ್ಲ ಹೋಗಿ, ತಿರುಗಾಡುವದು. ಹಾಗೆಯೇ ಅಜಾಮಿಳ ಧರ್ಮಶಾಸ್ತ್ರದಲ್ಲಿ "ಇಂತಿಂತಹ ಕರ್ಮಗಳಿಗೆ ಇಂತಹ ಪಾಪ. ಆದ್ದರಿಂದ ಈ ಕರ್ಮ ಮಾಡಬೇಡ" ಎಂದು ಹೇಳಿದ್ದಾರೆ ಅದನ್ನು ಉದ್ದೇಶ್ಯಪೂರ್ವಕವಾಗಿ ಮಾಡಿ ಪಾಪ ಘಳಿಸಿಕೊಂಡವ. ಅಂತೆಯೇ ಅಜಾಮಿಳ ಮಹಾ ಪಾಪಿಷ್ಠ.
*ದೇವರ ಪರಮ ಕಾರುಣ್ಯ*
ಪಾಪಿಷ್ಠನಾದ ಅಜಾಮಿಳನಿಗೆ, ಕೊನೆಗಾಲ ಸಮೀಸಿದಾಗ, *ನಾರಾಯಣ !!!!* ಎಂಬುವದಾಗಿ ಮಗನನ್ನು ಕೂಗಿದ್ದನೇ ನಿಮಿತ್ತಮಾಡಿ ಎಲ್ಲ ಪಾಪವನ್ನೂ ಪರಿಹರಿಸಿ, ಬಂದ ಯಮದೂತರನ್ನು ತಿರುಗಿ ಕಳುಹಿಸ ಬೇಕು ಎಂದಾದರೆ ದೇವರ ಕಾರುಣ್ಯ ಊಹೆಗೆ ನಿಲುಕದು.
ಈ ಎಲ್ಲ ಕಾರಣಗಳನ್ನು ನೋಡಿಯೇ ಗಜೇಂದ್ರ, ಪ್ರಲ್ಹಾದ, ಧೃವ ಬಲಿ ಇವರುಗಳಮೇಲೆ ಮಾಡಿದ ಕರುಣೆಗಿಂತಲೂ *ಅಜಾಮಿಳನ ಮೇಲಿನ ಕರುಣೆ* ತುಂಬ ಉತ್ತಮ ಎಂದೆನಿಸುತ್ತದೆ.
ಈ ಕಥೆಗಳನ್ನು ಗಮನಿಸಿದಾಗ ನಮಗಂತೂ ಭರವಸೆ ಮೂಡುತ್ತದೆ. ಅಜಾಮಿಳ ಮಾಧವರಷ್ಟು ಪಾಪವಂತೂ ಮಾಡಲಾರೆವು. ಮಾಡಿದ ಪಾಪಗಳನ್ನು *ನಾರಾಯಣ ಕೃಷ್ಣ ನರಹರೇ* ಇತ್ಯಾದಿ ನಾಮಸ್ಮರಣೆಯನ್ನು ಅಖಂಡವಾಗಿ ಮಾಡಿದರೆ ಪಾಪ ಪರಿಹಾರವಾಗುತ್ತದೆ. ದೇವರ ಕರುಣಾಪಾತ್ರನೂ ಅಗುವೆ. ದೇವರು ರಕ್ಷಕನಾಗಿ ನನ್ನ ಬೆನ್ನಿಗೆ ನಿಲ್ಲುವ ಎಂದು.
ಗಜೇಂದ್ರ, ಪ್ರಲ್ಹಾದರಂತೆ ಭಕ್ತಿಯನ್ನೂ ಮಾಡಿದ್ದರೆ, ಜನ್ಮ ಉದ್ಧಾರವಾಗಿ ಮೋಕ್ಷವೇ ದೋರಕೀತು ಇದರಲ್ಲಿ ಯಾವ ಸಂಶಯವೂ ಇಲ್ಲ.
ಮುಕ್ತಿ ಪಥಕ್ಕೆ ಮೂಲ ತಳಹದಿ ಭರವಸೆ. ಭರವಸೆಯ ಅಡಿಪಾಯದಮೆಲೇಯೇ ಭಕ್ತಿ ಜ್ಙಾನ ಧರ್ಮ ವಿರಕ್ತಿ ಎಲ್ಲವೂ ನಿಂತಿವೆ. ಈ ಎಲ್ಲ ಕಥೆಗಳನ್ನೂ ನಿತ್ಯ ಸಮಯಸಿಕ್ಕಾಲೆಲ್ಲ ಮೆಲಕುಹಾಕಿ ದೇವರಲ್ಲಿ *ರಕ್ಷಸೀತ್ಯೇವ ವಿಶ್ವಾಸಃ* ಎಂದು ಹೇಲಿದಂತೆ ಭರವಸೆಯನ್ನು ಬೆಳಿಸಿಕೊಳ್ಳೋಣ...
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments