*ಬಂದದ್ದರಲ್ಲಿ ಬಾಳಿಕೋ - ಗೋವಿಂದ ನಿನ್ನವನೆಂದು ಹೇಳೀಕೋ*
*ಬಂದದ್ದರಲ್ಲಿ ಬಾಳಿಕೋ - ಗೋವಿಂದ ನಿನ್ನವನೆಂದು ಹೇಳೀಕೋ*
"ಬಂದದ್ದರಲ್ಲಿ ಬಾಳೀಕೋ" ಇದು ಒಂದು ದಾಸರ ಸುಂದರ ಮಾತು. ಅನುಭವದ ಮಾತು. ಶಾಸ್ತ್ರ ಸಮ್ಮತವೂ ಹೌದು. ಶ್ರೇಯಸ್ಸಿಗೆ ಅನುಕೂಲ. ಶಾಂತಿ ಸ್ಥಾಪನೆಗೆ ಮುಹೂರ್ತ. ಅಶಾಂತಿ ಹತಾಶೆ ಇವುಗಳಿಗೆ ಪ್ರತಿಕೂಲ. ಈ ಭಾವ ಬರಲೇಬೇಕು ಇದು ತಯ.
ಬಯಕೆ ಇದು ಒಂದು ಚಟ. ಒದಗಿಸಿದಷ್ಟೂ ಬೇಡುವ. ವಿಚಿತ್ರ ಬೇಡಿದಷ್ಟೂ ಪಡೆಯಲಾರ. ಬೇಡಿದ್ದೊಂದೇ ನಿಜ. ಪಡೆಯುವದು ಸುಳ್ಳು. ಪಡೆಯದೇ ಇರುವಾಗ ಹತಾಶೆ hurt ನಿಶ್ಚಿತ. ಅಂತೆಯೇ ದಾಸರೆಂದರು "ಬಂದದ್ದರಲ್ಲಿ ಬಾಳಿಕೋ" ಎಂದು.
ಸಾಮಾನ್ಯವಾಗಿ ಬಯಸುವದು ತನ್ನವರಿಂದ. ತಾನು ಯಾರಿಗೆ ಕೊಟ್ಟಿದ್ದಾನೆ ಅವರಿಂದ. ಗುರುಗಳಿಂದ. ದೇವತೆಗಳಿಂದ ಹಾಗೂ ದೇವರಿಂದ ಬಯಸ್ತಾನೆ ಬೇಡುತ್ತಾನೆ, ಬೆನ್ನು ಬೀಳಿತ್ತಾನೆ.
೧) ತನ್ನವರು ಪಡೆಯುತ್ತಾರೆ ಕೊಡಲಾರರು.
೨) ತಾನು ಯಾರಿಗೆ ಕೊಟ್ಟಿದ್ದಾನೆ ಅವರು ಕೈ ಕೊಡುವವರು.
೩) ಗುರುಗಳು ಕೊಟ್ಟಿದ್ದು ಪಡೆಯಲಾರ...
೪) ದೇವತೆಗಳನ್ನು ಅರ್ಚಿಸಲಾರ, ದೆವತೆಗಳು ಕೊಟ್ಟಿರೋದನ್ನು ಒಪ್ಪಿಕೊಳ್ಳಲಾರ.
೫) ದೇವರನ್ನು ಸ್ತುತಿಸಲಾರ, ದೇವರ ಪ್ರೀತಿಯ ಧರ್ಮ ಕರ್ಮಗಳನ್ನು ಮಾಡಲಾರ, ಹಾಗಾಗಿ ಪಡೆಯುವದೂ ತುಂಬ ಕಷ್ಟ.
ಏನು ಬೇಡಿದ್ದಾನೆ ಅದೂ ತನ್ನ ಯೋಗ್ಯತೆ ಮೀರಿ ಬೇಡಿದ್ದಾನೆ ಹಾಗಾಗಿ ಬೇಡಿದ್ದೊಂದೇ ನಿಜ. ಪಡೆದದ್ದು ಸುಳ್ಳೇ. ಅಯೋಗ್ಯವದಾದದ್ದು ಎಂದಿಗೂ ಸಿಗಲಾರದ್ದು. ಅಂತೂ ಕೊನೆಯ ಫಲ " ನಾ ಬೇಡಿದೆ, ಬಯಸಿದೆ, ಅಂಗಲಾಚಿದೆ ಏನೂ ಸಿಗಲಿಲ್ಲ" ಎಂಬ ಹತಾಶೆಯೊಂದೆ.
ಈ ಹತಾಶೆ ಅಶಾಂತಿ ಕಾಡಬಾರದೆಂದೆ "ಬಂದದ್ದರಲ್ಲಿ ಬಾಳಿಕೋ" ಎಂದರು. ಆ ಮಾತನ್ನೇ "ಯದೃಚ್ಛಾಲಾಭ ಸಂತುಷ್ಟಃ" ಏನಿದೆ ಅದರಲ್ಲಿ ಸಂತೋಷವನ್ನು ಹುಡುಕು. ಸಂತುಷ್ಟನಾಗಿಯೇ ಬಾಳು ಎಂದು ಉದ್ಗರಿಸಿತು ಭಾಗವತ.
"ಬೇಡಿ ಬಯಸಿ ಬೇಡಾದವರು ಎಂದಾಗುವದಕ್ಕಿಂತ , ಪಡೆಯದಿದ್ದರೂ, ಬೇಡದೆ ಸಮಾಧಾನದಿಂದಿರುವದು ಲೇಸು."
ಬೇಡದಿರುವದು ಕಾಡದಿರುವದು ಬಯಸದಿರುವದು ಇದು ಒಂದು ಧರ್ಮ ಎಂದಾಗುತ್ತದೆ. *ಬೇಡನೆಂದರೆ ನೀಡುವ ದೊರೆ* ಶ್ರೀಹರಿ. ಬೇಡದಿರುವದರಿಂದ ಸ್ವಯಂ ದೇವರು, ದೇವತೆಗಳು, ಗುರುಗಳು, ಸ್ವಜನರು, ಆತ್ಮೀಯ ಬಂಧುಗಳು, ಸಮಾಜ ಹೀಗೆ ಎಲ್ಲರಿಗೂ ಪ್ರಿಯನಾಗುವ. *ಪ್ರಿಯನಿಗೆ ಪ್ರೀತ್ಯಾಸ್ಪದನಿಗೆ ಕಡಿಮೆ ಎಂದಿಗೂ ಯಾರೂ ಮಾಡಲಾರರು .*
ಬಂದದ್ದು ನನ್ನ ಕರ್ಮಾನುಸಾರ. ಬರುವದು ಕರ್ಮಕನ್ನುಗುಣವೇ ಹೋರತು, ಬೇಡಿಕೆಯಂತೆ ಸರ್ವಥಾ ಅಲ್ಲವೇ ಅಲ್ಲ. "ಮಾಡಿದ್ದು ಉಣ್ಣುವದರಲ್ಲಿಯ ಸಂತೋಷ, ಇಲ್ಲದರ ಚಿಂತೆಯಲ್ಲಿ ಸರ್ವಥಾ ಇಲ್ಲ."
ಬೇಡದೇ, ಬಂದದ್ದರಲ್ಲಿ ಸುಖಕಾಣುವದೇನಿದೆ ಅತ್ಯುತ್ತಮ ಮಾರ್ಗ. ಬೇಡದವನಿಗೆ ಎಲ್ಲವಿದೆ. ಎಲ್ಲವನ್ನೂ ಪಡೆದವನೇ ಸುಖಿ. ಇದು ದಾಸರ ಭಾಗವತದ ಹಿತ ನುಡಿ.
ಹಿಂದೇ ಮಾಡಿದ್ದನ್ನೇ ಕೊಡುವವ ದೇವರು, ಇಂದು ಮಡಿದ್ದನ್ಬೇ ಮುಂದೆ ಉಣಿಸುವವನೂ ದೇವರೆ. ಆ ದೇವರಂತೂ ನಮ್ಮ ಶತ್ರು ಅಲ್ಲವೆ ಅಲ್ಲ. ಆ ಗೋವಿಂದ ಅಂದಿಗೂ ಇಂದಿಗೂ ಎಂದೆಂದಿಗೂ ನಮ್ಮವನೇ.....
ದೇವರಂತೂ ನಮ್ಮವ ನಮಗಂತೂ ಕೇಡು ಮಾಡಲಾರ. ಕೇಡು ಮಾಡುವವ, ಕೇಡನ್ನು ಬಯಸುವವ ಎಂದಿಗೂ ನಮ್ಮವನಾಗಲಾರ. ಕೇಡು ಮಾಡದ, ನಮ್ಮವನಾದ ದೇವರ ಸಂಬಂಧಿಗಳು ನಾವು ಆದರೆ, ನಮಗೆ ಬೇಡಿದ್ದು ಸಿಕ್ಕಿಲ್ಲ ಎಂದಾಗುವದೇ ಇಲ್ಲ. ಏನು ಸಿಗುವದಿದೆಯೋ ಅದನ್ನೇ ಬೇಡಿಸಿಯಾದರೂ ಸಂತುಷ್ಟನನ್ನಾಗಿ ಇರಿಸುತ್ತಾನೆ.....
*✍🏽✍🏽✍🏽ನ್ಯಾಸ.....*
ಗೋಪಾಲದಾಸ.
9449644808
ವಿಜಯಾಶ್ರಮ. ಸಿರವಾರ.
Comments