ಮಕರ ಸಕ್ರಾಂತಿ ಹಬ್ಬದ ಶುಭಾಷಯಗಳು
*ಭೋಗೀ ಹಾಗೂ ಸಕ್ರಾಂತಿ ಹಬ್ಬದ ಶುಭಾಷಯಗಳು*
ದೇವರ ರಕ್ಷಣೆಯ ಬಲವೇ ಎಮ್ಮ ಬಲ. ದೇವರು ಆಗಾಗ ರಕ್ಷಿಸುವ ಉಪಾಯ ತಿಳಿಯಲೇ ಹಬ್ಬ ಹರಿದಿನಗಳು ಇರುವವು.
*ಈ ದಿನ ಹಂಚುವ ದಿನ*
ಎಳ್ಳು ಬೆಲ್ಲ ಇವುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಹಂಚಿಕೊಳ್ಳುವ ದಿನ. ಬ್ರಾಹ್ಮಣರಿಗೆ ಅನ್ನ ದ್ರವಿಣ ಮೊದಲಾದ ಅನೇಕ ದಾನಮಾಡಿ ಆ ಎಲ್ಲ ಬ್ರಾಹ್ಮಣರಿಗೂ ವಿಶೇಷವಾಗಿ ಸಂತೃಪ್ತಿಯನ್ನು ಹಂಚುವ ದಿನ. ದೇವತೆಗಳಿಗೆ ತಿಲ ಹೋಮದಿಂದ, ಜಪ ತಪಸ್ಸು ಪೂಜೆ ಇವುಗಳಿಂದ ದೇವರಿಗೂ ವಿಶೇಷವಾಗಿ ಸತ್ಕರಿಸುವ ದಿನ ಈ ದಿನ.
*ಹಂಚುವದರ ಹಿಂದಿನ ವಿಶೇಷತೆ*
ದೇವರಿಗೂ ನಮಗೂ, ದೇವತೆಗಳಿಗೂ ನಮಗೂ, ಗುರುಗಳಿಗೂ ನಮಗೂ, ಬಾಂಧವರಿಗೂ ನಮಗೂ, ಊರಿನ ನಾಡಿನ ಜನರಿಗೂ ನಮಗೂ, ಬಾಂಧವ್ಯ, ಪ್ರೀತಿ, ಅಭಿಮಾನ, ಅಂತಃಕರಣಗಳು, ವಿಶ್ವಾಸ, ಪರಸ್ಪರವಾಗಿ ಇರಬೇಕು. ಶಾಶ್ವತವಾಗಿಯೂ ಇರಬೇಕು. ದೃಢವಾಗಿ ಇರಬೇಕು. ಜೊತೆಗೆ "ಹಿರಿಯರ ಅನುಗ್ರಹ, ಸಮರ ಹಾರೈಕೆ, ಕಿರಿಯರ ಅಭಿನಂದನೆ ಇವುಗಳಿಂದಲೇ ಉನ್ನತಿ" ಈ ಭಾವದಲ್ಲಿಯೂ ಪರಸ್ಪರ ಮಾತು ಮನಸ್ಸುಗಳ ಜೊತೆಗೆ ಎಳ್ಳು ಬೆಲ್ಲ ಹಂಚುವ ಪರಿ ನಮ್ಮಲ್ಲಿ ಬಂದಿದೆ...
*ಎಳ್ಳು ಬೆಲ್ಲವನ್ನೇ ಹಂಚುವದರಿಂದ ಲಾಭವೇನು.. ??*
ಏಳೇಳು ಜನುಮಗಳಲ್ಲಿ ಮಾಡಿದ ಏನೆಲ್ಲ ಪಾಪಗಳಿವೆ, ಬ್ರಹ್ಮಹತ್ಯೆ ಸುರಾಪಾನ ಬ್ರೂಣಹತ್ಯೆ ಮೊದಲಾದ ಏನೆಲ್ಲ ಪಾಪವಿದೆ ಆ ಎಲ್ಲ ಪಾಪಗಳ ಪರಿಹಾರ ಮಾಡುವ ಅಸಾಧಾರಣ ಶಕ್ತಿ *ತಿಲದಾನ* ದಲ್ಲಿ ದೇವರು ಇರಿಸಿದ್ದಾನೆ. ಮತ್ತು ಸರ್ವವಿಧ ಮಂಗಳವೂ ತಿಲದಾನದಿಂದ ಇದೆ. ಈ ಮಾತನ್ನು ವೇದ ಪುರುಷ ಸಾರುತ್ತಾನೆ. ಮಹಾಭಾರತ ಸಾರು ಸಾರಿ ಬೇಸರಿಲ್ಲದೆ ಹೇಳತ್ತೆ. ಕೃಷ್ಣ ಹುಟ್ಟಿದ ದಿನ ಏಳೇಳು ಬೆಟ್ಟದಷ್ಟು ತಿಲದಾನ ನಂದ ವಸುದೇವರು ಮಾಡಿದರು ಎಂದು ತಿಳಿಸುತ್ತದೆ. ಹಾಗಾಗಿ ತಿಲದಾನ ಅತ್ಯುತ್ತಮ ದಾನ. ಆದ್ದರಿಂದ ಎಳ್ಳು ಹಂಚುವ ಪದ್ಧತಿ. ಇದು ದಾನವೆಂದೇ ಭಾವಿಸಿ ಕೊಡಬೇಕು.
ತಿಲ ಎಳ್ಳು ಏನಿದೆ ಎಣ್ಣೆ ಪದಾರ್ಥ ಸ್ನಿಗ್ಧ ಪಾದಾರ್ಥ. ಎಲ್ಲರಲ್ಲಿಯೂ ಒಂದು ಉತ್ಕೃಷ್ಟ ಸ್ನೇಹ ಬೇಳೆಸಿಕೊಳ್ಳುವ ಸಂಕೇತ ಎಳ್ಳು. ಮತ್ತು ಎಳ್ಳಿನ ಮೇಲೆ ಪರಿಯಂತೆ ಆವರಿಸಿದ ತೊಗಟೆ ಹೇಗಿದೆಯೋ ಹಾಗೆ ನಮ್ಮಲ್ಲಿ ಕರಿಯ ತೊಗಟೆಯಂತೆ ಆವರಿಸಿರುವ ಕಾಮ ಕ್ರೋಧ ಹಗೆತನ ಅಸೂಯೆ ಅಜ್ಙಾನ ಸಂಶಯ ಇವೆಲ್ಲವೂ ಕಳಚಿ ಎಲ್ಲರಲ್ಲಿಯೂ ಸ್ನೇಹ ಬೆಳಿಯಲಿ, ಆ ಸ್ನೇಹ ಸಿಹಿಯಾಗಿ ಇರಲಿ ಎಂಬ ಸಂಕೇತದಂತೆಯೂ ಎಳ್ಳು ಬೆಲ್ಲ ಹಂಚುವದು ಕ್ರಮ.
ಎಳ್ಳು ಆರೋಗ್ಯ ಸುಧಾರಿಸಿಕೊಳ್ಳಲೂ, ರೋಗ ನಿವಾರಿಸಿಕೊಳ್ಳಲೂ ಉತ್ತಮ ಹಾಗಾಗಿಯೂ ಎಳ್ಳು ಬೆಲ್ಲ ಕೊಡುವ ಕ್ರಮ.. *ಎಳ್ಳಿನ ಸ್ನೇಹ ಮನದಲ್ಲಿ, ಬೆಲ್ಲದ ಸಿಹಿ ಮಾತು ಬಾಯಲ್ಲಿ* ನಿರಂತರ ಇರಲಿ ಎನ್ನುವದನ್ನು ಸೂಚಿಸಲೂ ಇದೊಂದು ಕ್ರಮ...
*ಎಳ್ಳನ್ನು ಇಂದು ನಾಳೆ ಮಾತ್ರ ಕೊಡಬೇಕೆ...??*
ಗ್ರಹಣ, ಹನ್ನೆರಡು ಸಂಕ್ರಾಂತಿ, ಪುತ್ರೋತ್ಪತ್ತಿಯ ಶುಭಕಾಲ, ಆಕಳು ಕರುಹಾಕುವ ಸಮಯ, ಗುರುಗಳು ಜ್ಙಾನಿಗಳು ದೊರೆತಾಗ, ತೀರ್ಥಕ್ಷೇತ್ರಗಳಿಗೆ ಹೋದ ಪ್ರಸಂಗ ಇವೆಲ್ಲವೂ ಒಂದು ಉತ್ತಮೋತ್ತಮ ಪರ್ವಕಾಲಗಳು. ಎಲ್ಲ ಪರ್ವಕಾಲಗಳಲ್ಲಿಯೂ ಅವಷ್ಯವಾಗಿ *ತಿಲದಾನ* ಮಾಡಲೇಬೇಕು. ಇಂದು ವಿಶೇಷವಾಗಿ ಆಚರಣೆಯಲ್ಲಿ ಬಂದಿದೆ ಆದ್ದರಿಂದ ವಿಶೇಷವಾಗಿ ಕೊಡೋಣ.
ಸಂಕ್ರಮಣದ ರ್ಪಕಾಲದಲ್ಲಿ ಮಾಡುವ ಎಲ್ಲ ಜ್ಙಾನ ಜಪ ಪಾರಾಯಣ ದಾನ ನಮಸ್ಕಾರ ಉಪವಾಸ, ತರ್ಪಣ ಎಲ್ಲವೂ ಮಹಾಫಲಕಾರಿ, ಅನರ್ಥವಿನಾಶಕ, ಇಷ್ಟಾರ್ಥಸಿದ್ಧಿಪ್ರದ. ಸಾಧ್ಯವಿದ್ದಷ್ಟು ಆಚರಿಸಿ ಗುರು ದೇವತಾ ದೇವರುಗಳ ಅನುಗ್ರಹಕ್ಕೆ ಪಾತ್ರರಾಗೋಣ.
भास्करस्य यथा तेजो मकरस्थस्य वर्धते।
तथैव भवतां तेजो वर्धतामिति कामये।।
ಮಕರರಾಶಿಗೆ ಪ್ರವೇಶಿಸಿದ ಸೂರ್ಯನ ಪ್ರಕಾಶ ನಿತ್ಯ ಬೆಳಿತಾ ಸಾಗತ್ತೆ, ನಮ್ಮ ನಿಮ್ಮೆಲ್ಲರ ಸಾತ್ವಿಕ ಪ್ರಕಾಶ ನಿತ್ಯದಲ್ಲಿಯೂ ಅಭಿವೃದ್ಧವಾಗಲಿ 💐
*ನನ್ನ ಆತ್ಮೀಯರೆಲ್ಲರಿಗೂ ಪ್ರೀತಿಯ ಶುಭಾಷಯಗಳು*
*✍🏽✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
Comments