Posts

*ಹನುಮಜ್ಜಯಂತೀ ಮಹೋತ್ಸವ*

Image
 *ಹನುಮಜ್ಜಯಂತೀ ಮಹೋತ್ಸವ* ಚೈತ್ರ ಶುಕ್ಲ ಪೂರ್ಣಿಮೆಯ ದಿನದಂದು ಪರಿಪೂರ್ಣ ಜ್ಙಾನ ಭಕ್ತಿ ವಿರಕ್ತಿ ಧರ್ಮ ಧೈರ್ಯ ಸ್ಥೈರ್ಯ ಪರಮೈಶ್ವರ್ಯ ಇತ್ಯಾದಿ ಅನಂತ ಗುಣಗಳ ಗಣಿಯಾದ ಹನುಮಂತದೇವರ ಅವತಾರದ ಮಹಾ  ಸುದಿನ. ಈ ಗುಣವಂತ ಜ್ಙಾನವಂತ ಭಕ್ತಿವಂತನಾದ ಹನುಮಂತ ನಮ್ಮಲ್ಲಿ ಹಾಗೂ ನಮ್ಮೆಲ್ಲರ ಮನದಲ್ಲಿ ಜನಿಸಲೇಬೇಕು.  *ಜನನ* ಸಂತಾನ ಸಹಜ. ಅತ್ಯಂತ ಯೋಗ್ಯ ಸಂತನಕ್ಕೆ ತಪಸ್ಸೇ ಮೂಲ. ಅಂತೆಯೇ ಸಾವಿರಾರು ವರ್ಷಗಳ ತಪಸ್ಸಿನ ಪ್ರಭಾವದಿಂದ ಕೇಸರಿ ಮತ್ತು ಅಂಜನಾದೆವಿಯಲ್ಲಿ ಜನಿಸಿದ ಧೀರ ಹನುಮಂತ. ಅಂಜನೆಯಂತೆ ತಪಸ್ಸು ಮಾಡೋಣ. ಆಂಜನೇಯನನ್ನೇ ಪಡೆಯೋಣ. *ಜ್ಙಾನಿ* ಹುಟ್ಟಿದ ವ್ಯಕ್ತಿಗೆ ಜ್ಙಾನ ಮೂಲ. ಜ್ಙಾನವಿದ್ದರೆ ಅವನು ಅವನಾಗಿ ಉಳಿಯುವ. ಜ್ಙಾನವಿಲ್ಲ ಎಂದಾದರೆ ಅವ ಜಡಕ್ಕೆ ಸಮ. ಹಾಗಾಗಿ ಹುಟ್ಟಿದ ವ್ಯಕ್ತಿಯ ಹಪಹಪಿ ಜ್ಙಾನಕ್ಕಾಗಿಯೇ ಇರಬೇಕು. ಇನ್ಯಾವದಕ್ಕೂ ಇರುವದು ತರವಲ್ಲ. ಜ್ಙಾನದ ನಂತರವೇ ಉಳಿದದ್ದೆಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಹನುಮಂತ. ಹುಟ್ಟಿದೊಡನೆಯೇ ಸೂರ್ಯನ ಸನಿಹಕ್ಕೇ ನೆಗೆದು, ಸೂರ್ಯಾಂತರ್ಯಾಮಿ ನಾರಾಯಣನಿಂದ ಸಮಗ್ರ ವ್ಯಾಕರಣವನ್ನು ಅಧ್ಯಯನ ಮಾಡಿದ ಮಹಾಜ್ಙಾನಿ ಹನೂಮಾನ್. ತನ್ನ ಹೆಸರಲ್ಲೇ "ಪೂರ್ಣಜ್ಙಾನೀ" ಎಂದು ಪ್ರಸಿದ್ಧಿ ಪಡೆದ ಹನೂಮಾನ್. *ಸೇವೆ* ನಾನು ಎಂದಿಗೂ ಸ್ವಾಮಿಯಲ್ಲ. ನಾ ಏನಿದ್ದರೂ ದಾಸನೇ. ದಾಸನ ಸೌಭಾಗ್ಯ ಸ್ವಾಮಿಯ ಸೇವೆಯೇ. ನಿರಂತರ ಸೇವೆಯೇ ನನ್ನ ಉಸಿರು ಎಂದೇ ಭಾವಿಸಿ ನಿರಂತರ ಸೇವಾಧುರಂಧರ...

ಜಲ ಜಲ ಜಲ...

Image
 ಜಲ ಜಲ ಜಲ ... ನೀರಿಲ್ಲದೆ ಜೀವನವಿಲ್ಲ. ನೀರು ಅಮೃತಕ್ಕೆ ಸಮಾನ. ನೀರಿದ್ದರೆ ದೇವತೆಗಳು ಇದ್ದ ಹಾಗೆಯೇ ಅಮರರಾಗಿ ಜೀವಿಸಬಹುದು. ಅಭಿವೃದ್ಧಿಯ ಜೀವನಕ್ಕಾಗಿ ಮಾಡಿಕೊಂಡ ಉಪಾಯಗಳಿಂದಲೇ ಇಂದು ಅನುಭವಿಸುವ ಜಲಜ್ಷಾಮ. ೧) dam ಗಳನ್ನು ಕಟ್ಟಿ ಎಲ್ಲೆಡೆ ನೀರಿನ ಸಮೃದ್ಧಿಯನ್ನು ನಿಲ್ಲಿಸಿದರು. ೨) ನದಿ ಹರಿಯುವ ಎಲ್ಲೆಡೆ ಅಂತರ್ಜಲ ಕ್ಷೀಣಿಸಲು ಇದುವೂ ಒಂದು ಕಾರಣವಾಯಿತು. ೩) ನದಿ ದಡದ ಎಲ್ಲ ವೃಕ್ಷಗಳು ಒಣಗಿದ ಹೋದವು. ಆ ಒಂದೊಂದು ವೃಕ್ಷಗಳೂ ಮೇಘಗಳನ್ನು ಹಿಡಿದಿಡುವಷ್ಟು ಸಮರ್ಥವಾದವುಗಳು ಎನ್ನುವದನ್ನು ಮರೆಯುವದು ಬೇಡ. ೪) ಎಂದೆಂದೂ ಒಣಗದ ಅನೇಕ ನದಿಗಳು ದಿನ ದಿನಕಳೆದರೆ ಸಾಕು ಒಣಗಲು ಪ್ರಾರಂಭಿಸಿದವು. ೫)  ಒಣಗಿದರೂ ನೀರನ್ನು ಹಿಡಿದುಡುವ ಸಾಮರ್ಥ್ಯವಿರುವ ಮರಳನ್ನು (ಉಸುಕು) ಒಣ ನದಿಗಳಲ್ಲಿ ಲೂಟಿ ಮಾಡಿದರು. ಚಿಲುಮಿಗಳಲ್ಲಿ ಸಿಗುವ ಅಲ್ಪ ಸ್ವಲ್ಪ ನೀರೂ ಹೋಯಿತು.  ೬) Correntಇಲ್ಲದ ಜೀವನ ಘೋರವೇನಾಗಿರಲಿಲ್ಲ. (ನಾವೆಲ್ಲರೂ ಆ ಸ್ಥಿತಿಯನ್ನು ಅನುಭವಿಸಿದ್ದೇವೆ) ಜೀವನಕ್ಕೆ ಅತ್ಯುಪಯುಕ್ತವಾಗದ corrent ಉತ್ಪಾದನೆಗೆ ಅತಿ ಮಹತ್ವ ಕೊಟ್ಟು ನದಿಗಳ ಅರ್ಧದಷ್ಟು ನೀರನ್ನು ಪೋಲು ಮಾಡಿದೆವು.  ಈ ವಿದ್ಯುತ್ತಿನ ಸರಿಯಾಗಿ ಬಳೆಸಲು fridge,  air condition ಮುಂತಾದ ಅನೇಕ ಪದಾರ್ಥಗಳನ್ನು ಬಳಿಸಿ ಜಗತ್ತಿನ ತಾಪಮಾನವನ್ನು ನಾವೇ  ಬೆಳಿಸಿದೆವು . ಹೊರಗಿನ ತಂಪು ನಾಶವಾಗಿಯೇ ಹೋಯಿತು. ಸಾವಿರಾರು ಜನರಿಗೆ ಅತ್ಯುಪ...

*ಇಂದು ಮೂರ್ಖರ ದಿನಾಚರಣೆ*

Image
 * ಇಂದು ಮೂರ್ಖರ ದಿನಾಚರಣೆ * ಏನಿದೆಯೋ ಅದನ್ನು ಬಿಟ್ಟು ಇನ್ನೇನೋ ತಿಳಿದುಕೊಳ್ಳುವವ ಮೂರ್ಖ. ಮೂರ್ಖರು ಯಾರು... ???  ಯಾರಿದ್ದಾರೆಯೋ ಇಲ್ಲೋ ತಿಳಿಯದು, ನಾನಂತೂ ಮಹಾ ಮೂರ್ಖನೆ ಸರಿ.  ನಾನು ಯಾಕೆ ಮೂರ್ಖ.... ??  ೧) ಎಲ್ಲವೂ ನಾನು ಎಂದು ಹೆಳಿಕೊಳ್ಳುತ್ತೇನೆ ಅದುವೇ ಮೂರ್ಖರ ಲಕ್ಷಣ, ೨) ಏನೆಲ್ಲ ಮಾಡಿದ್ದೇನೆ ಅದೆಲ್ಲವೂ ನಾನೆ ಮಾಡಿದ್ದೇನೆ ಎಂದೇ ಬೊಗುಳುತ್ತೇನೆ ಆದ್ದರಿಂದಲೇ ನಾನು ಶತ ಮೂರ್ಖ.  ವಿವೇಕಭರಿತ  ಕಾರ್ಯವನ್ನು ಬಿಟ್ಟು, ಯೋಚನಾಪೂರ್ಣ ವಿಚಾರ ಹವ್ಯಾಸಗಳನ್ನು ಜರಿದು, ಕ್ಷುಲ್ಲಕ ಕ್ಷುದ್ರ ವಿಚಾರಗಳನ್ನು ಕಾರ್ಯಗಳನ್ನು ಅಪ್ಪಿಕೊಳ್ಳುವ ನನಗೆ ಮೂರ್ಖ ಅನ್ನದೆ ಇನ್ನೇನು ಅನ್ನಬೇಕು..  ನಾನು ಮೂರ್ಖನಲ್ಲ ಎಂದೇ ಗುರುತಿಸಬೇಕಾದರೆ ಏನು ಮಾಡುವದು.... ???? ನಾನು ಎನ್ನುವದನ್ನು ಕಳೆದುಕೊಂಡಾಗ ಅಥವಾ ಬಿಟ್ಟಾಗ ನಾನು ಬುದ್ಧಿವಂತನು ಎಂದಾಗುವೆ. ಅಂತೆಯೇ "ನಾನು ಹೋದರೆ ಹೋದೇನು" ಎಂದು ಉದ್ಗಾರ ತೆಗೆದರು ಕನಕದಾಸರು. ಯೋಚನಾಭರಿತ ಉಚ್ಚವಿಚಾರಗಳನ್ನು ಸುದೀರ್ಘಕಾಲದಲ್ಲಿಯೂ ಹಿತವೇ ಆಗುವ ಕಾರ್ಯವನ್ನು ಅರಿಸುವವ ಬುದ್ಧಿವಂತ.  ನಾನು ನಾನೇ ಆಗಿದ್ದೇನೆಯೇ ಹೊರತು ನಾನು ಮತ್ತೇನೂ ಆಗಿಲ್ಲ. ಮತ್ತೇನೂ ಆಗದ ನಾನು, ಎಲ್ಲವೂ ನಾನೇ ಎಂದು ಹೇಳಿಕೊಂಡರೆ ಮೂರ್ಖನೇ ತಾನೆ.....  ನಾನು ಏನು ಮಾಡಿದ್ದೇನೆ ಎಲ್ಲವೂ ಎನ್ನಲಿ ನಿಂತ ದೇವರೇ ಮಾಡಿಸಿದ್ದಾನೆ. ಎಲ್ಲವನ್ನೂ ಮಾಡಿಸಿರುವದು ದೇವರು. ನಾನ...

*ಹಠ....*

Image
 *ಹಠ....* ಹಠ ಸಾಧಿಸಬೇಕೋ ?? ಅಥವಾ ಹಠವನ್ನು ಬಿಡಬೇಕೋ... ??  ಎಂಬೆರೆಡು ಪ್ರಶ್ನೆಗೆ ಹಠಸಾಧಿಸಲೇಬೇಕು, ಹಠವನ್ನು ಬಿಡಲೇಬೇಕು. ಎಂಬೀರಿತಿಯಾಗಿಯೇ ಉತ್ತರ ಪಡೆಯಬಹುದು.  ಹಠ ಜೀವನದ ಯಶಸ್ಸು ಅಯಶಸ್ಸುಗಳೆರಡಕ್ಕೂ ಬೇಕು.  ಹಠದಲ್ಲಿ ಎರಡು ವಿಧ. ಯೋಗ್ಯವಾದ ಹಠ ಮತ್ತು ಅಯೋಗ್ಯವಾದ ಹಠ. ಯೋಗ್ಯ ಹಠ ಅವಶ್ಯವಾಗಿ ಬೇಕು. ಅಯೋಗ್ಯ ಹಠ ಅವಷ್ಯಬಿಡಲೇಬೇಕು. ಈ ಎರೆಡೂ ತರಹದ  ಚಿತ್ರಣವನ್ನು ರಾಮಾಯಣ ಸುಂದರವಾಗಿ ಚಿತ್ರಿಸುತ್ತದೆ. ೧) ವಿಶ್ವಾಮಿತ್ರ. ೨) ತ್ರಿಶಂಕು.  ವಿಶ್ವಾಮಿತ್ರರು ಒಂದುಕಡೆ ಅಯೋಗ್ಯಹಠವನ್ನು ಮಾಡಿ ಸೋತು ಹತಾಶರಾಗಿ, ಪ್ರಾಯಶ್ಚಿತ್ತಮಾಡಿಕೊಂಡು ಆ ಹಠವನ್ನು ಉಳಿಸಿಕೊಂಡೇ ಮಾರ್ಗವನ್ನು ಯೋಗ್ಯರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಾರೆ. ಯಶಸ್ವಿಯೂ ಆಗುತ್ತಾರೆ.  ವಸಿಷ್ಠರಿಂದ ಆಗದ ಕಾರ್ಯ ನಾನು ಮಾಡುವೇ ಎಂದೇ ಹಠದಲ್ಲಿ ಬಿದ್ದು ಕಾರ್ಯ ಮಾಡುತ್ತಾರೆ "ಸಶರೀರವಾಗಿಯೇ ಸ್ವರ್ಗಕ್ಕೆ ಕಳುಹಿಸುತ್ತಾರೆ" ಸಾಧ್ಯವಾಗದಿರುವಾಗ, ತಮ್ಮ ಪುಣ್ಯವನ್ನೇ ಧಾರೆಯೆರೆದು ಕೊಡಲೂ ಸಿದ್ಧರಾಗುತ್ತಾರೆ. ಮತ್ತೊಂದು ಸ್ವರ್ಗವನ್ಬೇ ನಿರ್ಮಿಸಿ ಯಶಸ್ವಿಯೂ ಆಗುತ್ತಾರೆ. ತಮ್ಮ ಸಾವಿರ ವರ್ಷದ ತಪಸ್ಸನ್ನೇ ಹಾಳುಮಾಡಿಕೊಂಡು ಬಿಡುತ್ತಾರೆ. ಇದು ವಿಶ್ವಾಮಿತ್ರರ ಒಂದುತರಹದ ಅವಸ್ಥೆಯಾದರೆ.  ೨) ತ್ರಿಶಂಕುವಿನ ಅವಸ್ಥೇಯೇ ಬೇರೆಯಾಗುತ್ತದೆ. *ತೀರ ಅಯೋಗ್ಯವಾದದ್ದು ಈ ಮಾನವ ದೇಹದಿಂದ ಸ್ವರ್ಗಸುಖವನ್ನು ಅನುಭವಿಸುವದು.* ಇಂತ...

*ಶಿವನೇ ನಾ ನಿನ್ನ‌ ಸೇವಕನಯ್ಯ....*

Image
 *ಶಿವನೇ ನಾ ನಿನ್ನ‌ ಸೇವಕನಯ್ಯ.... * ಇಂದು ಮಹಾ ಶಿವರಾತ್ರಿ, ಮನೋಭಿಮಾನಿ ರುದ್ರದೇವರ ಆರಾಧನೆ, ಚಿಂತನೆ, ಸ್ಮರಣೆ,  ಅನಿವಾರ್ಯ. ಸಂಸಾರ ಕೊಟ್ಟವರು ರುದ್ರದೇವರು, ಸಂಸಾರದಿಂದ ಹೊರಹಾಕುವ ಮನಸ್ಸು ಕೊಡುವವರೂ ರುದ್ರದೇವರೇ.  *ಭವ ಮೋಚಕ....* "ಭವ" ರುದ್ರದೇವರ ನಾಮ. "ಭವ" ಎಂದರೆ ಸಂಸಾರ. ಈ ಸಂಸಾರ ಸಾಗರದಿಂದ ಪಾರು ಮಾಡಿಕೊಳ್ಳಲು ಉತ್ಕೃಷ್ಟ ಮನಸ್ಸು ಬೇಕು. ಆ ಮನಸ್ಸಿಗೇ ನಿಯಾಮಕರು ಅನಂತ ಜೀವರಾಶಿಗಳ ಮನೋಭಿಮಾನಿಗಳು ರುದ್ರದೇವರು.  ಅಹಂಕಾರ ತತ್ವಕ್ಕೆ ಅಭಿಮಾನಿಗಳು ರುದ್ರದೇವರು. ಅಹಂಕಾರ ತತ್ವದಿಂದಲೇ *ಅಹಂ, ಮಮತಾ* ನಾನು ನನ್ನದು ಹುಟ್ಟಿಕೊಳ್ಳುವವು. ಈ ಭಾವ ಇರುವದೇ ಸಂಸಾರ. ಎಂದು ಭಾವದಿಂದ ಅಭಿಮಾನಗಳಿಂದ ಹೊರಬರುತ್ತೆವೆಯೋ ಅಂದೆ ಮೋಕ್ಷ.  *ಅಹಂ ಮಮತಾ* ಅಭಿಮಾನಿಗಳನ್ನು ಕಳೆದು *ಹರಿರೇವ ಜಗತ್ಕರ್ತಾ, ಹರ್ಯಧೀನಮಿದಂ ಜಗತ್* ಸರ್ವಪ್ರೇರಕ ಶ್ರೀಹರಿ, ಅವನೇ ಎಲ್ಲವನ್ನೂ ಮಾಡುವವ, ಶ್ರೀಹರ್ಯಧೀನವಾಗಿದೆ ಈ ಜಗತ್ತು ಎಂಬ ಭಾವನೇ ಬರುವದೇ *ಅಹಂಕಾರ ತತ್ವಾಭಿಮಾನಿ ರುದ್ರದೇವರಿಂದ. ಆದ್ದರಿಂದ ರುದ್ರದೇವರ ಆರಾಧನೆ ಅನಿವಾರ್ಯ.  *ಭಗವತ ಶಾಸ್ತ್ರವ ಅವನೀಶನಿಗೆ ಪೇಳ್ದವ....* ಪರೊಕ್ಷಿತ್ ಮಹಾರಾಜರಿಗೆ, ಭಾಗವತ ಉಪದೇಶ ಮಾಡಿದ ಮಹಾತ್ಮ ಶುಕಾಚಾರ್ಯರು.  ಆ ಶುಕಾಚಾರ್ಯರ ಮೂಲಸ್ವರೂಪವೇ ಶಿವ ರುದ್ರದೇವರು. ನಮ್ಮ ನಮ್ಮ ಜೀವನದಲ್ಲಿ ನಾವೂ ಪರೀಕ್ಷಿತರೇ. ಆದರೆ ಶುಕರು ಮಾತ್ರ ನೀವಾಗಿ ಬರಲೇಬೇಕು. *ನನಗೆ ಎ...

*ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ*

Image
 *ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ* ವಿಷ್ಣು ಸಹಸ್ರನಾಮ ದಲ್ಲಿ ಬರುವ ಒಂದು ನಾಮ *ಪ್ರೀತಿ ವರ್ಧನಃ* ಎಂದು. ಪ್ರೀತಿಯನ್ನು ನಿರಂತರ ಬೆಳಿಸುವ, ಉಳಿಸುವ ಭಗವಂತನ ಒಂದು ನಾಮ.  ದೇವರು ಕೊಟ್ಟ ಅಮೂಲ್ಯವಸ್ತುಗಳಲ್ಲಿ ಪ್ರೀತಿಯೂ ಒಂದು. ಮರೆಯುವಂತಹದ್ದು ಅಲ್ಲವೇ ಅಲ್ಲ. ಪ್ರೀತಿ ಯೊಂದು ಇರಲಿಲ್ಲ ಎಂದಾಗಿದ್ದರೆ ಜಗತ್ತೇ ಇರುತ್ತಿರಲಿಲ್ಲ. ಎಂದೋ ನಾಶವಾಗಿ ಹೋಗುತ್ತಿತ್ತು. ಜಗತ್ತಿನ ನಾಶವಾಗಿಲ್ಲ, ನಾನುಬದುಕಿ ಇದ್ದೇನೆ ಎಂದರೆ ಅದಕ್ಕೆ ಮೂಲ *ಪ್ರೀತಿ.* *ಪ್ರೀತಿ ಎಂಬ ವಸ್ತುವನ್ನೇ ದೇವರು ಸೃಷ್ಟಿಸಿರಲಿಲ್ಲ ಎಂದಿದ್ದರೆ ಏನಾಗ್ತಿತ್ತು.....???* ಇವತ್ತು ಭಾನುವಾರ ಅಲ್ವೇ ಮಾರ್ಕೇಟಿಗೋ ಮಾಲ್ ಗಳಿಗೋ ಹೋಗ್ತೆವೆ. ಸಾವಿರ ಸಾವಿ ವಸ್ತುಗಳನ್ನು ಕಾಣುತ್ತೇವೆ ಕೆಲವೇ ವಸ್ತಗಳನ್ನು ಖರೀದಿ ಮಾಡುತ್ತೇವೆ ಸರಿ ನಾ. ಹೀಗಿರುವಾಗ ಎಲ್ಲ ವಸ್ತುಗಳನ್ನು ನಾನೇಕೆ ತೆಗೆದು ಕೊಳ್ಳಲಿಲ್ಲ.. ?? ಎಂದರೆ ಆ ಎಲ್ಲ ವಸ್ತುಗಳ ಮೇಲೆ ನನಗೆ ಪ್ರೀತಿ ಹುಟ್ಟಲಿಲ್ಲ. ಯಾವ ವಸ್ತುವಿನ ಮೇಲೆ ಪ್ರೀತಿ ಹುಟ್ಟಿತೋ ಆ ವಸ್ತುವನ್ನು ನಾನು ಖರೀದಿಸಿದೆ. ಎಲ್ಲ ವಸ್ತುಗಳ ಮೇಲೆಯೂ ಪ್ರೀತಿ ಹುಟ್ಟಿದ್ದರೆ.... ಅಥವಾ ನೋಡಿದ ಯಾವೆಲ್ಲ ವಸ್ತುಗಳಿವೆ ಅದೆಲ್ಲದರ ಮೇಲೆ "ದ್ವೇಶವೇ" ಹುಟ್ಟಿದ್ದರೆ ಏನಾಗ್ತಿತ್ತೋ...... ನಾವೇ ಏಕಾಂತದಲ್ಲಿರುವಾಗ ವಿಚಾರಿಸಬೇಕು. ಉಡುವ ಬಟ್ಟೆ, ಉಣ್ಣುವ ಆಹಾರ, ಸಂಬಂಧ ಬೆಳಿಸಿಕೊಳ್ಳವ ಜನರು, ಘಳಿಸುವ ಹಣ, ಇರುವ ಮನೆ, ಗುರುಗಳು,  ಈ...

*ಉಪನಯನ - ಒಂದು ಆಯಾಮ*

Image
  * ಉಪನಯನ - ಒಂದು ಆಯಾಮ* ಉಪನಯನ ಸಾದನೆಗೆ ಮೆಟ್ಟಲು. ಸಿದ್ಧಿಗೆ ಅವಕಾಶ. ವೇದ ಅಧ್ಯಯನಕ್ಕೆ ಅಧಿಕಾರ. ಉತ್ತಮ ಸಂಸ್ಕಾರ. ಶಾಸ್ತ್ರಾಧ್ಯಯನಕ್ಕೆ ಮೆಟ್ಟಲು. ಗುರುಸೇವೆಯ ತವಕ.ದೇವತಾರಾಧನೆ. ಧೃಮಜಾಗೃತಿ.  ಅಚ್ಛ ಮಮತೆ ಅಭಿಮಾನಗಳ ತ್ಯಾಗ. ಪರಿಶ್ರಮಕ್ಕೆ ನಾಂದಿ. ಭದ್ರಜೀವನಕ್ಕೆ ಬುನಾದಿ. *೧. ಸಂಸ್ಕಾರ* ಸಂಸ್ಕಾರ ಅನಿವಾರ್ಯ. ಯಾವತರಹದ ಸಂಸ್ಕಾರವೋ ಆ ತರಹದ ವ್ಯಕ್ತಿತ್ವ. ಸಂಸ್ಕಾರವಿಲ್ಲವೋ ಪಶುವಿಗೆ ಸಮ. ಪಶುವಿಗೂ ಒಂದು ಸಂಸ್ಕಾರಬೇಕು. ಜಡಕ್ಕೂ ಸಂಸ್ಕಾರ ಬೇಕೆಬೇಕು. ಸಂಸ್ಕಾರವಿದ್ದರೆ ಬೆಲೆ. ಇಲ್ಲವಾದರೆ ಕಾಲ್ಗಸ. *೨. ಸಾಧನೆಗೆ ಮೆಟ್ಟಲು.* ಈ ಜೀವನ ಸಾಧನ ಜೀವನ. ಸಾಧನ ಶರೀರ. ಸಾಧಿಸದೇ ಇರಲಾಗದು. ಎಂಬ ತಿಳುವಳಿಕೆ ಉಪನಯನದ ಪ್ರಸಂಗದಲ್ಲೇ ಜಾಗೃತವಾಗುವದು. ಸಾಧನ ಸೋಪಾನದಂತೆ ಆಗುವದು ಉಪನಯನ. *೩. ಸಿದ್ಧಿಗೆ ಅವಕಾಶ.* ಸಾಧನೆಯ ಬುದ್ಧಿ ಬಂತು ಎಂತಾದರೆ, ಸಿದ್ಧಿಗಾಗಿ ಹಂಬಲ ಆರಂಭ. ಸಿದ್ಧಿ ಎಲ್ಲದಕ್ಕೂ ಮಿಗಿಲು. ಸಿದ್ಧಿ ಶಸ್ತ್ರಗಳಿಂದ ಇದ್ದರೆ ಎಲ್ಲೆಡೆ ಗೆಲವು. ಸೃವೋತ್ತಮ ಸಿದ್ಧಿ "ಗಾಯತ್ರೀ" ಸಿದ್ಧಿ. ಈ ಸಿದ್ಧಿಯನ್ನು ಪಡೆದವ ಎಲ್ಲವನ್ನೂ ಪಡೆದಂತೆಯೇ. ಗಾಯತ್ರೀ ಮೊದಲು ಮಾಡಿ ಎಲ್ಲ ಮಂತ್ರಗಳು ಸಿದ್ಧಿಗೆ ಇದೊಂದು ಅವಕಾಶ. *೪. ವೇದಾಧ್ಯಯನಕ್ಕೆ ಅಧಿಕಾರ.* ಅಪೌರುಷೇಯವಾದುದರಿಂದ ವೇದಗಳು. ಭಗವಂತನನ್ನೇ ಕೊಂಡಾಡುವ ಶಾಸ್ತ್ರ ವೇದ. ಜಗತ್ತಿಗೆ ಬುನಾದಿಯಾಗಿ ನಿಂತದ್ದು ವೇದ. ವೇದ ಎಂಬ ತಂತಿಯಿಂದಲೇ ಅನಂತ ಜೀವರನ್ನು ಸಂಸಾರದಲ್ಲ...