*ಉಪನಯನ - ಒಂದು ಆಯಾಮ*

 

*ಉಪನಯನ - ಒಂದು ಆಯಾಮ*


ಉಪನಯನ ಸಾದನೆಗೆ ಮೆಟ್ಟಲು. ಸಿದ್ಧಿಗೆ ಅವಕಾಶ. ವೇದ ಅಧ್ಯಯನಕ್ಕೆ ಅಧಿಕಾರ. ಉತ್ತಮ ಸಂಸ್ಕಾರ. ಶಾಸ್ತ್ರಾಧ್ಯಯನಕ್ಕೆ ಮೆಟ್ಟಲು. ಗುರುಸೇವೆಯ ತವಕ.ದೇವತಾರಾಧನೆ. ಧೃಮಜಾಗೃತಿ.  ಅಚ್ಛ ಮಮತೆ ಅಭಿಮಾನಗಳ ತ್ಯಾಗ. ಪರಿಶ್ರಮಕ್ಕೆ ನಾಂದಿ. ಭದ್ರಜೀವನಕ್ಕೆ ಬುನಾದಿ.


*೧. ಸಂಸ್ಕಾರ*


ಸಂಸ್ಕಾರ ಅನಿವಾರ್ಯ. ಯಾವತರಹದ ಸಂಸ್ಕಾರವೋ ಆ ತರಹದ ವ್ಯಕ್ತಿತ್ವ. ಸಂಸ್ಕಾರವಿಲ್ಲವೋ ಪಶುವಿಗೆ ಸಮ. ಪಶುವಿಗೂ ಒಂದು ಸಂಸ್ಕಾರಬೇಕು. ಜಡಕ್ಕೂ ಸಂಸ್ಕಾರ ಬೇಕೆಬೇಕು. ಸಂಸ್ಕಾರವಿದ್ದರೆ ಬೆಲೆ. ಇಲ್ಲವಾದರೆ ಕಾಲ್ಗಸ.


*೨. ಸಾಧನೆಗೆ ಮೆಟ್ಟಲು.*


ಈ ಜೀವನ ಸಾಧನ ಜೀವನ. ಸಾಧನ ಶರೀರ. ಸಾಧಿಸದೇ ಇರಲಾಗದು. ಎಂಬ ತಿಳುವಳಿಕೆ ಉಪನಯನದ ಪ್ರಸಂಗದಲ್ಲೇ ಜಾಗೃತವಾಗುವದು. ಸಾಧನ ಸೋಪಾನದಂತೆ ಆಗುವದು ಉಪನಯನ.


*೩. ಸಿದ್ಧಿಗೆ ಅವಕಾಶ.*


ಸಾಧನೆಯ ಬುದ್ಧಿ ಬಂತು ಎಂತಾದರೆ, ಸಿದ್ಧಿಗಾಗಿ ಹಂಬಲ ಆರಂಭ. ಸಿದ್ಧಿ ಎಲ್ಲದಕ್ಕೂ ಮಿಗಿಲು. ಸಿದ್ಧಿ ಶಸ್ತ್ರಗಳಿಂದ ಇದ್ದರೆ ಎಲ್ಲೆಡೆ ಗೆಲವು. ಸೃವೋತ್ತಮ ಸಿದ್ಧಿ "ಗಾಯತ್ರೀ" ಸಿದ್ಧಿ. ಈ ಸಿದ್ಧಿಯನ್ನು ಪಡೆದವ ಎಲ್ಲವನ್ನೂ ಪಡೆದಂತೆಯೇ. ಗಾಯತ್ರೀ ಮೊದಲು ಮಾಡಿ ಎಲ್ಲ ಮಂತ್ರಗಳು ಸಿದ್ಧಿಗೆ ಇದೊಂದು ಅವಕಾಶ.


*೪. ವೇದಾಧ್ಯಯನಕ್ಕೆ ಅಧಿಕಾರ.*


ಅಪೌರುಷೇಯವಾದುದರಿಂದ ವೇದಗಳು. ಭಗವಂತನನ್ನೇ ಕೊಂಡಾಡುವ ಶಾಸ್ತ್ರ ವೇದ. ಜಗತ್ತಿಗೆ ಬುನಾದಿಯಾಗಿ ನಿಂತದ್ದು ವೇದ. ವೇದ ಎಂಬ ತಂತಿಯಿಂದಲೇ ಅನಂತ ಜೀವರನ್ನು ಸಂಸಾರದಲ್ಲಿ ಕಟ್ಟಿ ಹಾಕಿದ ದೇವರು. ಆ ವೇದ ಸಾಕ್ಷಾತ್ಕಾರದಿಂದಲೇ ಮುಕ್ತನನ್ನಾಗಿಯೂ ಮಾಡುತ್ತಾನೆ. ಜೊತೆಗೆ ವೇದ ನಿರ್ಣಯಿಸುವ ಶಾಸ್ತ್ರದ ಅಧ್ಯಯನಕ್ಕೂ ಆಧಿಕಾರ ಬರುವದು ಉಪನಯನವಾದ ಕ್ಷಣದಲ್ಲಿ.


*೫. ಗುರುಸೇವೆಯ ತವಕ.*


ಗುರುಸೇವೆ ಎಲ್ಲದಕ್ಕೂ ಮೂಲ. ಓದಲದಲು ಶಾಸ್ತ್ರ, ಜಪಿಸಲು  ಮಂತ್ರ, ಒಲಿಸಿಕೊಳ್ಳಲು ದೇವತೆ,  ಗುರುಸೇವೆಯಿಂದಲೇ ಲಭ್ಯ. ಶಾಂತಿ ಸಮೃದ್ಧಿ ಐಶ್ವರ್ಯ ವ್ಯಕ್ತಿತ್ವ ಗುರು ಸೇವೆಯಿಂದ. ತನ್ನ ಬಲದಿಂದ ಪಡೆಯಬಹುದು, ವಿನಿಯೋಗಿಸುವ ಕಲೆ ಮಾತ್ರ ಕೇವಲ ಗುರು ಸೇವೆಯಿಂದ.


*೬. ದೇವತಾರಾಧನೆ.*


ದೇಹ ಇಂದ್ರಿಯ ಮನಸ್ಸು ಮೊದಲು ಮಾಡಿ ಎಲ್ಲದಕ್ಕೂ ನಿಯಾಮಕರು ದೇವತೆಗಳು. ದೇವತೆಗಳ ಕರುಣೆ ಇದ್ದರೆ ಎಲ್ಲವೂ, ಇಲ್ಲದಿದ್ದರೆ ಏನಿದ್ದರೂ ಇಲ್ಲದಂತೆಯೇ ಸರಿ. ನಮ್ಮ ಯೋಗ್ಯತಾಭಿಜ್ಙರು ದೇವತೆಗಳು. ನಾವೇನು ಪಡೆಯಬಹುದು ದೇವತೆಗಳಿಗೆ ತಿಳಿದಿದೆ. ನಾವೇನು ಪಡೆಯುತ್ತೇವೆ ಅದು ದೇವತೆಗಳೇ ಕೊಡುವದು. ಅಂತೆಯೇ ದೇವತೆಗಳ ಆರಾಧನೆ ಅತ್ಯವಶ್ಯಕ.


*೭.ಧರ್ಮದಲ್ಲಿ ಜಾಗೃತಿ.*


"ಧರ್ಮದ ಫಲಬೇಕು, ಧರ್ಮ ಬೇಡ" ಇದು ಇಂದಿನ ಸ್ಥಿತಿ. ಧರ್ಮವಿಲ್ಲ ಎಂದಾದರೆ ಕೋಟಿ ಕೋಟಿ ಹಣವಿದ್ದರೂ ಭೋಗಿಸಲಾರ, ವಿದ್ಯೆ ಪಡೆಯಲಾರ, ಸುಖ ಶಾಂತಿ ದೂರದ ಮಾತೇ. ಆರೋಗ್ಯ ಸರಿಪಡಿಸಿಕೊಳ್ಳಲಾಗುವದೇ ಇಲ್ಲ. ಈ ವಯಸ್ಸಿಗೆ ಧರ್ಮ ಮಾಡದಿದ್ದರೆ ಇನ್ನೆಂದೂ ಧರ್ಮ ಮಾಡಲಾರ. ಧರ್ಮದ ರುಚಿ ಇಂದೇ ಹತ್ತಬೇಕು. ಧರ್ಮಬೀಜ ಇಂದೇ ನೆಡಬೇಕು. ಜಾಗೃತಿ ಮೂಡಲೇಬೇಕು.


*೮. ಅಚ್ಚು ಮಮತೆಗಳ ತ್ಯಾಗ.*


ಹುಡಗರನ್ನು ಕೆಡಿಸುವದು ಅಚ್ಛ ಮಮತೆಗಳೇ. ತಾಯಿಯ ಅಚ್ಛ. ತಂದೆಯ ಮಮತೆ ಇವುಗಳೇ ಮಕ್ಕಳ ದೌರ್ಭಾಗ್ಯ. ಅಚ್ಛ ಹಾಗೂ ಮಮತೆಗಳಿರುವದರಿಂದಲೇ ಕಷ್ಟ ಕೊಡಲಾರರು. ಗುರುಕುಲಕ್ಕೆ ಕಳಿಸಲಾರು. ತಿಂದುಣಿಸಿ, ಬೇಡಿದ್ದು ಬೇಡದ್ದು ಎಲ್ಲವೂ ಸುರಿಸಿ ಮಕ್ಕಳ ಶಾಸ್ತ್ರೀಯ ಉದ್ಧಾರದ ಪ್ರಗತಿಗೆ ಅಡ್ಡಗಾಲಾಗಿ ನಿಲ್ಲುವದು ಈ ಅಚ್ಛ ಹಾಗೂ ಮಮತೆಗಳೇ. ಇವುಗಳನ್ನು ತ್ಯಜಿಸುವ ಸೂಕ್ತ ಕಾಲ ಉಪನಯನ. ಗುರುಗಳ ಮಮತೆ ಪಾತ್ರನಾಗುವದಕ್ಕೂ ಸೂಕ್ತ ಸಮಯ.


*೯. ಪರಿಶ್ರಮಕ್ಕೆ ನಾಂದಿ.*


ಸಣ್ಣ ವಯಸ್ಸು. ಶಕ್ತಿ ತುಂಬ. ಬುದ್ಧಿ ಚುರುಕು. ಇವೆಲ್ಲ ಪರಿಶ್ರಮಕ್ಕೆ ಮೂಲ. ಇವಗಳು ಜಾಗೃತವಾಗುವದೇ ಉಪನಯದ ಪ್ರಸಂಗದಲ್ಲಿ. ಇಂದು ಆರಂಭಿಸಿದ ಪರಿಶ್ರಮ ಅತಿ ಎತ್ತರದ ಮಟ್ಟಕ್ಕೆ ನಿಲ್ಲಿಸುತ್ತದೆ. ಇಂದಿನ ಆಲಸ್ಯ ಪಾತಾಳಕ್ಕೆ ಒಯ್ಯುತ್ತದೆ. ಇಂದಿನದು ಜೀವನದೇ ಅಂಗವಾಗುತ್ತದೆ.


*೧೦. ಭದ್ರಜೀವನಕ್ಕೆ ಬುನಾದಿ.*


ಭದ್ರ ಚಿರವಾದ ಸ್ಥಾನ. ಮಂಗಳ ಸ್ಥಾನ. ಭರವಸೆಯ ಸ್ಥಾನ. ಅದು ಜ್ಙಾನ ದೇವರು ಮತ್ತು ಮೋಕ್ಷ. ಉಪನಯನದ ಪ್ರಸಂಗ ಈ ಮೂರನ್ನೂ ಪಡೆಯಲು ಸೂಕ್ತ ಅವಕಾಶ ಒದಗಿಸುವದು. ದೇವರಲ್ಲಿ ಭರವಸೆ ಮೂಡಿಸುತ್ತದೆ. ಶಾಸ್ತ್ರದಲ್ಲಿ ನಿಷ್ಠೆ ಮುಡಿಸುತ್ತದೆ. ಪಾಪಕಳೆಯುತ್ತದೆ. ಅನಿಷ್ಟದೂರ ಮಾಡುತ್ತದೆ. ಭದ್ರಸ್ಥಾನವನ್ನು ಕಲ್ಪಿಸುತ್ತದೆ. 


ಹೀಗೆ ಹತ್ತು ಹಲವಾರು ಕಾರಣಗಳಿಂದ ಸೂಕ್ತ ಸಮಯದಲ್ಲಿ ಉಪನಯನ. ಗುರೂಪಸತ್ತಿ, ಮಾರ್ಗದರ್ಶನ, ಧರ್ಮದ ಆಸಕ್ತಿ ದೇವರಲ್ಲು ಅಭಿರುಚಿ ಎಲ್ಲವನ್ನೂ ಬೆಳಿಸಿಕೊಳ್ಳಲು ಸಾಧ್ಯ. ಎಲ್ಲದಕ್ಕೂ ನಾಂದಿ ಈ "ಉಪನಯನ ಸಂಸ್ಕಾರ" ಇದು ಕೇವಲ ನಮಗೆ ದೊರೆತಿರುವದು ಎಮ್ಮದೊಂದು ಭಾಗ್ಯ. ವಾಮನ ರೂಪಿ ನಾರಾಯಣನ ಅತಿಶಯದ  ಕಾರುಣ್ಯ ಎಂದು ನೆನೆಸುತ್ತಾ ಲೇಖನಿಯನ್ನು ನಿಲ್ಲಿಸುವೆ.


*✍🏽✍🏽ನ್ಯಾಸ....*

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*