ಜಲ ಜಲ ಜಲ...
ನೀರಿಲ್ಲದೆ ಜೀವನವಿಲ್ಲ. ನೀರು ಅಮೃತಕ್ಕೆ ಸಮಾನ. ನೀರಿದ್ದರೆ ದೇವತೆಗಳು ಇದ್ದ ಹಾಗೆಯೇ ಅಮರರಾಗಿ ಜೀವಿಸಬಹುದು.
ಅಭಿವೃದ್ಧಿಯ ಜೀವನಕ್ಕಾಗಿ ಮಾಡಿಕೊಂಡ ಉಪಾಯಗಳಿಂದಲೇ ಇಂದು ಅನುಭವಿಸುವ ಜಲಜ್ಷಾಮ.
೧) dam ಗಳನ್ನು ಕಟ್ಟಿ ಎಲ್ಲೆಡೆ ನೀರಿನ ಸಮೃದ್ಧಿಯನ್ನು ನಿಲ್ಲಿಸಿದರು. ೨) ನದಿ ಹರಿಯುವ ಎಲ್ಲೆಡೆ ಅಂತರ್ಜಲ ಕ್ಷೀಣಿಸಲು ಇದುವೂ ಒಂದು ಕಾರಣವಾಯಿತು. ೩) ನದಿ ದಡದ ಎಲ್ಲ ವೃಕ್ಷಗಳು ಒಣಗಿದ ಹೋದವು. ಆ ಒಂದೊಂದು ವೃಕ್ಷಗಳೂ ಮೇಘಗಳನ್ನು ಹಿಡಿದಿಡುವಷ್ಟು ಸಮರ್ಥವಾದವುಗಳು ಎನ್ನುವದನ್ನು ಮರೆಯುವದು ಬೇಡ. ೪) ಎಂದೆಂದೂ ಒಣಗದ ಅನೇಕ ನದಿಗಳು ದಿನ ದಿನಕಳೆದರೆ ಸಾಕು ಒಣಗಲು ಪ್ರಾರಂಭಿಸಿದವು. ೫) ಒಣಗಿದರೂ ನೀರನ್ನು ಹಿಡಿದುಡುವ ಸಾಮರ್ಥ್ಯವಿರುವ ಮರಳನ್ನು (ಉಸುಕು) ಒಣ ನದಿಗಳಲ್ಲಿ ಲೂಟಿ ಮಾಡಿದರು. ಚಿಲುಮಿಗಳಲ್ಲಿ ಸಿಗುವ ಅಲ್ಪ ಸ್ವಲ್ಪ ನೀರೂ ಹೋಯಿತು.
೬) Correntಇಲ್ಲದ ಜೀವನ ಘೋರವೇನಾಗಿರಲಿಲ್ಲ. (ನಾವೆಲ್ಲರೂ ಆ ಸ್ಥಿತಿಯನ್ನು ಅನುಭವಿಸಿದ್ದೇವೆ) ಜೀವನಕ್ಕೆ ಅತ್ಯುಪಯುಕ್ತವಾಗದ corrent ಉತ್ಪಾದನೆಗೆ ಅತಿ ಮಹತ್ವ ಕೊಟ್ಟು ನದಿಗಳ ಅರ್ಧದಷ್ಟು ನೀರನ್ನು ಪೋಲು ಮಾಡಿದೆವು.
ಈ ವಿದ್ಯುತ್ತಿನ ಸರಿಯಾಗಿ ಬಳೆಸಲು fridge, air condition ಮುಂತಾದ ಅನೇಕ ಪದಾರ್ಥಗಳನ್ನು ಬಳಿಸಿ ಜಗತ್ತಿನ ತಾಪಮಾನವನ್ನು ನಾವೇ ಬೆಳಿಸಿದೆವು . ಹೊರಗಿನ ತಂಪು ನಾಶವಾಗಿಯೇ ಹೋಯಿತು.
ಸಾವಿರಾರು ಜನರಿಗೆ ಅತ್ಯುಪಯುಕ್ತವಾಗಿದ್ದವು ಹಿಂದಿನ ಕೆರೆ ಭಾವಿಗಳು. ಕೇವಲ ಸ್ವಾರ್ಥ ದೃಷ್ಟಿಯಿಂದ Borwel ಕೊರೆಸಿಕೊಂಡೆವು, ಕೆರೆ ಭಾವಿಗಳನ್ನು ಒಣಗಿಸಿ ಬಿಟ್ಟೆವು. Borwel ನಲ್ಲಿಯೂ ನೀರು ಕಳೆದುಕೊಂಡೆವು.
ಮಣ್ಣಿನ ಮಾರ್ಗ, ಮಣ್ಣಿನ ಮನಿಗಳು ಅತಿಯೋಗ್ಯವಾಗಿದ್ದವು. ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವದಕ್ಕಾಗಿ concrete rod, RCC ಮನೆಗಳನಿರ್ಮಾಣ. ಅದಕ್ಕಾಗಿ ಮರಳು ನಾಶ. ವೃಕ್ಷನಾಶ. ಅದರಿಂದ ಧಗೆ ಧಗೆ.
ಮಣ್ಣಿನ ಮಾರ್ಗ, ಭಾವಿ, ಕೆರೆಗಳಲ್ಲಿ ಸುರಿದ ಮಳೆ ಮಳೆ ಅಲ್ಲಿಯೇ ಇರುವ ವೃಕ್ಷಗಳು ತಡೆದು ನಿಲ್ಲಿತ್ತಿದ್ದವು. ಇದರಿಂದ ಅಂತರ್ಜಲ ಅಭಿವೃದ್ಧಿಸುತ್ತಿತ್ತು. ಅಭಿವೃದ್ಧಿಗಾಗಿ ಗಿಡಗಳನ್ನು ಕಡೆದ ಒಂದೇ ಕಾರಣದಿಂದ. ಸುರಿದ ಅಲ್ಪ ಸ್ವಲ್ಪ ಮಳೆಯೂ ಪೋಲು ಆಗುತ್ತಿದೆ.
ನದಿ ಕೆರೆ ಭಾವಿಗಳಲ್ಲಿ ಮಾಡಿದ ಸ್ನಾನದ ನೀರು ನದಿ ಕೆರೆ ಭಾವಿಗಳಲ್ಲೇ ಉಳಿಯುತ್ತಿತ್ತು. ಇಂದು ಪ್ರತಿಯೊಬ್ಬರೂ ೪೦ ೫೦ltr ನೀರನ್ನು ಚರಂಡಿಯ ಮುಖಾಂತರ ಪೋಲು ಮಾಡುತ್ತಿದ್ದೇವೆ.
ಹೀಗೆ ಅಭಿವೃದ್ಧಿಯ ನೆಪವೇ ಮಹಾಜಲಕ್ಷಾಮಕ್ಕೆ ಕಾರಣವಾಗಿದೆ. ಹೀಗೆ ಇನ್ನೂ ಅಭಿವೃದ್ಧಿಯ ಮಾರ್ಗದಲ್ಲಿ ಮುಂದೊರೆದರೆ ಇನ್ನೆಂಥ ಘೋರ ಅವಸ್ಥೆ ಕಾದಿದೆಯೋ ಆ ದೇವರೇ ಬಲ್ಲ.
ಇದರೊಟ್ಟಿಗೆ ಮಳೆ ಬೆಳೆಗೆ ಮೂಲಭೂತ ಧರ್ಮ, ಆ ಧರ್ಮವಿಲ್ಲವೇ ಇಲ್ಲ. ಇದ್ದರೂ ತುಂಬ ಕಡಿಮೆಯೇ. ಹೀಗಿರುವಾಗ ಕ್ಷಾಮ ಇನ್ನೂ ಘೋರವಾಗುವದರಲ್ಲಿ ಸಂಶಯವೇಯಿಲ್ಲ.
ನ್ಯಾಸ...
Comments