*ಹಠ....*


 *ಹಠ....*


ಹಠ ಸಾಧಿಸಬೇಕೋ ?? ಅಥವಾ ಹಠವನ್ನು ಬಿಡಬೇಕೋ... ??  ಎಂಬೆರೆಡು ಪ್ರಶ್ನೆಗೆ ಹಠಸಾಧಿಸಲೇಬೇಕು, ಹಠವನ್ನು ಬಿಡಲೇಬೇಕು. ಎಂಬೀರಿತಿಯಾಗಿಯೇ ಉತ್ತರ ಪಡೆಯಬಹುದು. 


ಹಠ ಜೀವನದ ಯಶಸ್ಸು ಅಯಶಸ್ಸುಗಳೆರಡಕ್ಕೂ ಬೇಕು. 


ಹಠದಲ್ಲಿ ಎರಡು ವಿಧ. ಯೋಗ್ಯವಾದ ಹಠ ಮತ್ತು ಅಯೋಗ್ಯವಾದ ಹಠ. ಯೋಗ್ಯ ಹಠ ಅವಶ್ಯವಾಗಿ ಬೇಕು. ಅಯೋಗ್ಯ ಹಠ ಅವಷ್ಯಬಿಡಲೇಬೇಕು. ಈ ಎರೆಡೂ ತರಹದ  ಚಿತ್ರಣವನ್ನು ರಾಮಾಯಣ ಸುಂದರವಾಗಿ ಚಿತ್ರಿಸುತ್ತದೆ. ೧) ವಿಶ್ವಾಮಿತ್ರ. ೨) ತ್ರಿಶಂಕು. 


ವಿಶ್ವಾಮಿತ್ರರು ಒಂದುಕಡೆ ಅಯೋಗ್ಯಹಠವನ್ನು ಮಾಡಿ ಸೋತು ಹತಾಶರಾಗಿ, ಪ್ರಾಯಶ್ಚಿತ್ತಮಾಡಿಕೊಂಡು ಆ ಹಠವನ್ನು ಉಳಿಸಿಕೊಂಡೇ ಮಾರ್ಗವನ್ನು ಯೋಗ್ಯರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಾರೆ. ಯಶಸ್ವಿಯೂ ಆಗುತ್ತಾರೆ. 


ವಸಿಷ್ಠರಿಂದ ಆಗದ ಕಾರ್ಯ ನಾನು ಮಾಡುವೇ ಎಂದೇ ಹಠದಲ್ಲಿ ಬಿದ್ದು ಕಾರ್ಯ ಮಾಡುತ್ತಾರೆ "ಸಶರೀರವಾಗಿಯೇ ಸ್ವರ್ಗಕ್ಕೆ ಕಳುಹಿಸುತ್ತಾರೆ" ಸಾಧ್ಯವಾಗದಿರುವಾಗ, ತಮ್ಮ ಪುಣ್ಯವನ್ನೇ ಧಾರೆಯೆರೆದು ಕೊಡಲೂ ಸಿದ್ಧರಾಗುತ್ತಾರೆ. ಮತ್ತೊಂದು ಸ್ವರ್ಗವನ್ಬೇ ನಿರ್ಮಿಸಿ ಯಶಸ್ವಿಯೂ ಆಗುತ್ತಾರೆ. ತಮ್ಮ ಸಾವಿರ ವರ್ಷದ ತಪಸ್ಸನ್ನೇ ಹಾಳುಮಾಡಿಕೊಂಡು ಬಿಡುತ್ತಾರೆ. ಇದು ವಿಶ್ವಾಮಿತ್ರರ ಒಂದುತರಹದ ಅವಸ್ಥೆಯಾದರೆ. 


೨) ತ್ರಿಶಂಕುವಿನ ಅವಸ್ಥೇಯೇ ಬೇರೆಯಾಗುತ್ತದೆ. *ತೀರ ಅಯೋಗ್ಯವಾದದ್ದು ಈ ಮಾನವ ದೇಹದಿಂದ ಸ್ವರ್ಗಸುಖವನ್ನು ಅನುಭವಿಸುವದು.* ಇಂತಹ ಇಚ್ಛೆಯನ್ನು ಮಾಡುವಾಗಲೇ ಅತ್ಯಂತ ಅಯೋಗ್ಯರೀತಿಯಲ್ಕಿ ಮಾಡುತ್ತಾನೆ ತ್ರಿಶಂಕು. ಅದನ್ನು ಪಡೆಯುವದಕ್ಕಾಗಿ ತುಂಬ ಹಠ ಮಾಡುತ್ತಾರೆ, ವಸಿಷ್ಠರು ಮಾಡಿಸುವದಿಲ್ಲ ಎಂದಾಗ ಮಕ್ಕಳ ಹತ್ತಿರ ಹೋಗುತ್ತಾನೆ. ಅವರೂ ನಿರಾಕರಿಸಿದಾಗ ಗುರುಗುಪುತ್ರರನ್ನು ನಿಂದಿಸಿ ಶಾಪಗ್ರಸ್ತನಾಗುತ್ತಾನೆ. ಹಠ ಮಾತ್ರ ಬಿಡುವದಿಲ್ಲ. ಶಾಪಪ್ರಭಾವದಿಂದ ಚಾಂಡಾಲನಾದ ಹಠಬಿಡಲಿಲ್ಲ. ವಿಶ್ವಾಮಿತ್ರರ ಬಳಿಬಂದ ಹಠಮಾಡಿದ, ಇತೋಭ್ರಷ್ಟ ತತೋಭ್ರಷ್ಟ ನಾಗಿ ರಾಜ್ಯಸುಖವೂ ಇಲ್ಲದೇ ಸ್ವರ್ಗಸುಖವೂ ಕಾಣದೆ ತಲೆಕೆಳಗೆ ಮಾಡಿಕೊಂಡು ಡಮ್ಮಿ ಸ್ವರ್ಗಸುಖವನ್ನು ಅನುಭವಿಸುವ ಘೋರ ಅವಸ್ಥೆಯನ್ನು ತಂದುಕೊಳ್ಳುತ್ತಾನೆ. 


ಹಠ ಒಂದೆಡೆ ಇದ್ದ ಪುಣ್ಯವನ್ನು ಕಸೆದುಕೊಂಡರೆ, ಮತ್ತೊಂದೆಡೆ ಗುರುಶಾಪಗ್ರಸ್ತನಾಗುವ ದೌರ್ಭಾಗ್ಯವನ್ನು ಕೊಟ್ಟು ಇರುವ ಸುಖವನ್ನೂ ಕಸೆದುಕೊಂಡಿತು ಆದ್ದರಿಂದ ಅಯೋಗ್ಯವಾದ ಹಠ ಬಿಡಲೇಬೇಕು. 


ಯೋಗ್ಯವಾದ ಹಠ ಅವಷ್ಯವಾಗಿ ಬೆಕು. ಅದಕ್ಕೂ ಈ ವಿಶ್ವಾಮಿತ್ರರೇ ಉದಾಹರಣೆಯಾಗಿ ನಿಲ್ಲುತ್ತಾರೆ. 


ಬ್ರಹರ್ಷಿಯಾಗುವ ಯೋಗ್ಯತೆ ಇತ್ತು . ಅತ್ಯಂತ ಯೋಗ್ಯವಾದ ಹಠವನ್ನೇ ಮಾಡಿದರು. ಅನೇಕ ವಿಘ್ನಗಳಿಗೆ ಬಲಿಯಾದರು. ಹಠಬಿಡಲಿಲ್ಲ. ತಕ್ಕ ಹಾಗೆ ತಾವು ಬದಲಾದರು. ಬ್ರಹ್ಮರ್ಷಿಯಾಗಿಯೇ ತೀರಿದರು.  ಯಶಸ್ವಿಯೂ ಆದರು. 


ಹಠಮಾಡಲೂ ಕಲೆತಿರಬೇಕು, ಹಠಬಿಡಲೂ ಗೊತ್ತಿರಬೇಕು. ಆಗ ಯಶಸ್ಸು ಅವನ ಕೈಯಲ್ಲೇ ಇರುತ್ತದೆ. ಇದನ್ನು ವಿಶ್ವಾಮಿತ್ರರಿಂದ ಕಲಿಯಬಹುದು. 


ವಿಶ್ವಾಮಿತ್ರರ ಅಂದಿನ ಹಠ ಇಂದಿನ ನಾವೂ ಕ್ಷಣ ಕ್ಷಣಕ್ಜೆ ಅನುಭವಿಸುತ್ತೇವೆ. ನಾವು ಬ್ರಾಹ್ಮಣರಾಗಿ ಉಳಿದುದ್ದೇವೆ ಎಂದರೆ *ವಿಶ್ವಾಮಿತ್ರರ ದಿವ್ಯದೃಷ್ಟಿಗೆ ಗೋಚರವಾದ ಗಾಯತ್ರೀ ಮಂತ್ರದ ಜಪದಿಂದ.*  ನಮ್ಮ ಹಠ ಯೋಗ್ಯವೂ ಆಗಿರಬೇಕು. ನಾಲಕು ಜನರಿಗೆ ಅತ್ಯುಪಯುಕ್ತವೂ ಆಗಿರಲೇಬೆಕು. ಅಂತಹ ಹಠ ಅತ್ಯಂತ ಯೋಗ್ಯ. 


ಹಠ ಹಿಡಿಯುವ ಪ್ರಸಂಗ ನೂರಾರು ಬರುತ್ತವೆ. ಅಯೋಗ್ಯವಾದದ್ದು ಯಾವದು , ಯಾವದು ಯೋಗ್ಯ ಎಂದು ಗೊತ್ತೇ ಆಗುವದಿಲ್ಲ. ಕದಾಚಿತ್  ಯೋಗ್ಯ ಎಂದು ಗೊತ್ತಾದಾಗ,  ಕೆಲ ವಿಘ್ನಗಳು ಬಂದವೂ ಎಂದಾದರೆ ಪಲಾಯನಮಾಡಿ ಬಿಡುತ್ತೇವೆ. ಯಶಸ್ವಿ ಎಂದು ಎಂದೂ ಆಗದೇ ಉಳಿದುಬಿಡುತ್ತೇವೆ. ಅಯೋಗ್ಯವಾದ ಹಠವನ್ನೇ ಮಾಡಿದರೆ ಉಳಿಗಾಲವೇ ಇಲ್ಲದಂತೆ ಮಾಡಿಬಿಡುತ್ತದೆ.. 


*ಇಂತಹದ್ದು ಹಠ...... ಹಠ ಮಾಡುವಾಗ ಸ್ವಲ್ಪ ವ್ಯವಧಾನ ಇರಿಸಿಕೊಂಡು ಗುರುಹಿರಿಯರ ಮಾರ್ಗದರ್ಶನದಲ್ಲಿ ಹಠಮಾಡಿ ಯಶಸ್ವಿಯಾಗೋಣ* ಎಂದು ವಾಲ್ಮೀಕಿ ಋಷಿಗಳು ತಿಳುಹಿಸುತ್ತಾರೆ. ಎದುರಿನವನ ಮೇಲೆ ಹಠಬೇಡ, ನಮ್ಮ ದವರ್ಬಲ್ಯಗಳನ್ನು ಮಟ್ಟಲು ಅವಶ್ಯ ಹಠ.....


*✍✍✍ನ್ಯಾಸ.

(ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ)

Comments

Anonymous said…
Very nice ji.Nice explanation.tq...Hare Karparesha

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*