*ಇಂದು ಮೂರ್ಖರ ದಿನಾಚರಣೆ*


 *ಇಂದು ಮೂರ್ಖರ ದಿನಾಚರಣೆ*


ಏನಿದೆಯೋ ಅದನ್ನು ಬಿಟ್ಟು ಇನ್ನೇನೋ ತಿಳಿದುಕೊಳ್ಳುವವ ಮೂರ್ಖ.

ಮೂರ್ಖರು ಯಾರು... ??? 

ಯಾರಿದ್ದಾರೆಯೋ ಇಲ್ಲೋ ತಿಳಿಯದು, ನಾನಂತೂ ಮಹಾ ಮೂರ್ಖನೆ ಸರಿ. 

ನಾನು ಯಾಕೆ ಮೂರ್ಖ.... ?? 

೧) ಎಲ್ಲವೂ ನಾನು ಎಂದು ಹೆಳಿಕೊಳ್ಳುತ್ತೇನೆ ಅದುವೇ ಮೂರ್ಖರ ಲಕ್ಷಣ, ೨) ಏನೆಲ್ಲ ಮಾಡಿದ್ದೇನೆ ಅದೆಲ್ಲವೂ ನಾನೆ ಮಾಡಿದ್ದೇನೆ ಎಂದೇ ಬೊಗುಳುತ್ತೇನೆ ಆದ್ದರಿಂದಲೇ ನಾನು ಶತ ಮೂರ್ಖ. 

ವಿವೇಕಭರಿತ  ಕಾರ್ಯವನ್ನು ಬಿಟ್ಟು, ಯೋಚನಾಪೂರ್ಣ ವಿಚಾರ ಹವ್ಯಾಸಗಳನ್ನು ಜರಿದು, ಕ್ಷುಲ್ಲಕ ಕ್ಷುದ್ರ ವಿಚಾರಗಳನ್ನು ಕಾರ್ಯಗಳನ್ನು ಅಪ್ಪಿಕೊಳ್ಳುವ ನನಗೆ ಮೂರ್ಖ ಅನ್ನದೆ ಇನ್ನೇನು ಅನ್ನಬೇಕು.. 

ನಾನು ಮೂರ್ಖನಲ್ಲ ಎಂದೇ ಗುರುತಿಸಬೇಕಾದರೆ ಏನು ಮಾಡುವದು.... ???? ನಾನು ಎನ್ನುವದನ್ನು ಕಳೆದುಕೊಂಡಾಗ ಅಥವಾ ಬಿಟ್ಟಾಗ ನಾನು ಬುದ್ಧಿವಂತನು ಎಂದಾಗುವೆ. ಅಂತೆಯೇ "ನಾನು ಹೋದರೆ ಹೋದೇನು" ಎಂದು ಉದ್ಗಾರ ತೆಗೆದರು ಕನಕದಾಸರು. ಯೋಚನಾಭರಿತ ಉಚ್ಚವಿಚಾರಗಳನ್ನು ಸುದೀರ್ಘಕಾಲದಲ್ಲಿಯೂ ಹಿತವೇ ಆಗುವ ಕಾರ್ಯವನ್ನು ಅರಿಸುವವ ಬುದ್ಧಿವಂತ. 

ನಾನು ನಾನೇ ಆಗಿದ್ದೇನೆಯೇ ಹೊರತು ನಾನು ಮತ್ತೇನೂ ಆಗಿಲ್ಲ. ಮತ್ತೇನೂ ಆಗದ ನಾನು, ಎಲ್ಲವೂ ನಾನೇ ಎಂದು ಹೇಳಿಕೊಂಡರೆ ಮೂರ್ಖನೇ ತಾನೆ.....  ನಾನು ಏನು ಮಾಡಿದ್ದೇನೆ ಎಲ್ಲವೂ ಎನ್ನಲಿ ನಿಂತ ದೇವರೇ ಮಾಡಿಸಿದ್ದಾನೆ. ಎಲ್ಲವನ್ನೂ ಮಾಡಿಸಿರುವದು ದೇವರು. ನಾನು ತಿಳಿದು ಕೊಂಡಿದ್ದು "ನಾನು ಮಾಡಿದೆ" ಎಂದು ಇದುವೇ ತಾನೇ ಮೂರ್ಖತನ....

ನನ್ನ ಸುಖ ಎನ್ನಲ್ಲಿಯೆ ಅಡಗಿದೆ. ಎನ್ನ ಸ್ವಾಮಿ ಎಂದೂ ಬತ್ತದ  ಆನಂದದ ಸಮುದ್ರವನ್ನೇ  ಎನ್ನಲ್ಲಿ ಅಡಗಿಸಿಟ್ಟಿದ್ದಾನೆ,

ಆ ಸುಖವನ್ನು ಎನ್ನಲ್ಲಿ  ಹುಡುಕಿಕೊಳ್ಳದೇ ಹೊರಗಿನ ಬೇರೆಯದೇ ಕ್ಷುದ್ರ ವಸ್ತುಗಳಿಂದ ಸಿಗುತ್ತದೆ ಎಂದು ಹಂಬಲಿಸುತ್ತೇನೆ, ಪರಿಶ್ರಮಿಸುತ್ತೇನೆ, ಹತಾಶನಾಗುತ್ತೇನೆ ಸಿಗದಾದಾಗ  ಕೊರಗುತ್ತೆನೆ ಎದುವೇ ತಾನೇ ಮೂರ್ಖರ ಲಕ್ಷಣ..... 

ಸುಖದ ಹಾಗೆಯೇ "ಜ್ಙಾನ, ಬಲ, ಶಕ್ತಿ, ಆರೋಗ್ಯ, ಆಯುಷ್ಯ, ಸೌಭಾಗ್ಯ, ಶಾಂತಿ, ಸಮೃದ್ಧಿ, ತೃಪ್ತಿ, ಐಶ್ವರ್ಯ ಹೀಗೆ ಪ್ರತಿಯೊಂದೂ ಎನ್ನಲ್ಕೇ ಇವೆ. ಆದರೆ ನಾ ಅಪೆಕ್ಷೆಪಡುವದು ಮಾತ್ರ ಹೊರಗಿಂದ. *ಇರುವದು ಒಳಗೆ, ಅಪೇಕ್ಷಿಸಿ ಪಡೆದದ್ದು ಹೊರಗಿನಿಂದ. ಸಿಕ್ಕೀತು ಆದರೂ ಹೇಗೆ...??* ಇದುವೇ ಅಲ್ಲವೇ ಮೂರ್ಖತನ...

ನಮ್ಮ ಮೂರ್ಖತನವನ್ನು ಹೋಗಲಾಡಿಸಲೇ " ವೇದವ್ಯಾಸದೇವರು, ಶ್ರೀಮದಾಚಾರ್ಯರು, ಟೀಕಾಕೃತ್ಪಾದರು, ರಘೂತ್ತಮರು, ರಾಯರು, ಯಾದವಾರ್ಯರು ಇವರೇ ಮೊದಲಾದ ಜ್ಙಾನಿಗಳು ಭುವಿಗಿಳಿದು ಶಾಸ್ತ್ರರಚಿಸಿ ಅನುಗ್ರಹಿಸಿದ್ದಾರೆ, ಅದನ್ನು ಅನಾಯಾಸೇನೆ ತ್ಯಜಿಸಿದ ನಾನೇ ಮೂರ್ಖನಲ್ಲವೇ... 

ಏಕಾದಶಿ ಉಪವಾಸ ಮಾಡುವದು ಎಂದರೆ ಕೃತಯುಗದಲ್ಲಿ ಹತ್ತುವರ್ಷದ ಸುದೀರ್ಘ ತಪಸ್ಸಿಗೆ ಸಮ, ಅದು ಬಿಟ್ಟು ವೈಭವದಿಂದ ಮೂರುಹೊತ್ತು ತಿಂತೇವೆ ಎಂದರೆ ಮೂರ್ಖರನ್ನಲ್ಲದೆ ಇನ್ನೇನು ಮಾಡಿಯಾರು.. ?? ಯಾರ್ಯಾರು ಉಪಹಾರ ಮಾಡೀರೀ... ?? ಯಾರಿಲ್ಲ... ?? 

ಕಿಂಚಿತ್ತೂ ಸಾಧನೆ ಮಾಡಿಕೊಳ್ಳದೆ, ಅತ್ಯಂತ ಸುಲಭವಾಗಿ ಗುರುಗಳಿಗರ ಯತಿಗಳಿಗೆ ಧರ್ಮಕ್ಕೆ ವಿದ್ವಾಂಸರಿಗೆ ಬ್ರಾಹ್ಮಣರಿಗೆ ಚೆನ್ನಾಗಿ ನಿಂದಿಸುತ್ತೇನೆ. ಸಂಸ್ಥಾನಗಳಿಗೆ ಜರಿತೇನೆ.  ಈತರಹದ ಕೆಲಸ ಮೂರ್ಖರಲ್ಲದೇ ಇನ್ನಾರು ಮಾಡ್ತಾರೆ.

ನನಗೆ ನನ್ನದೂ ಆದ ಸುಖ ಸಮೃದ್ಧಿ ವೈಭವ ಸಿಗಲು ಬೇಕು ಧರ್ಮ. ಆ ಧರ್ಮವನ್ನು *ಧರ್ಮವೆಂಬ ಒಂದು ಪದಾರ್ಥವೂ ಇಲ್ಲವೇನೋ* ಎನ್ನುವಷ್ಟು ಕಡೆಗಾಣಿಸಿದ, ಗಾಳಿಗೆ ತೂರಿದ ನಾನೇ ತಾನೆ. ಅತ್ಯಂತ ಆರಂಭದ ಧರ್ಮ ಸಂಧ್ಯಾವಂದನೆ, ಇಂದು ಎರಡು ಹೊತ್ತು ಸಂಧ್ಯಾವಂದನ ಮಾಡುವವರು‌  ೨ - ೩ % ಜನ ಸಿಗಬಹುದೇನೋ. ಧರ್ಮವನ್ನೇ ಬಿಟ್ಟ ನಾನು  ಮೂರ್ಖನಲ್ಲವೇ....  

ಈಗ ಒಂದು ಲೇಖನೆ ಓದಿದೆ‌ *ನಮ್ಮಲ್ಲಿ ಮೂರ್ಖರು ಯಾರಿಲ್ಲ* ಎಂದು. ಕ್ಷಣ ಖುಶಿ ಆಯ್ತು. ಆ ಸುಖ ಕ್ಷಣವೇ ಅನಿಸುತು. ಮೂರ್ಖರು  ಯಾರಿಲ್ಲದಿರಬಹುದು *ನಾನು* ಅಂತೂ ಮಹಾ ಮೂರ್ಖನೇ ಎಂದು. ಹೀಗೆ ತಿಳಿದಾಗ ಸಮಾಧಾನ ಅನಿಸಿತು......

*ಭಕ್ತರ ಸಂಗಕೊಟ್ಟು, ಸಾಧನೆ ಮಾಡಿಸಿ, ಧರ್ಮದಲ್ಲಿರಿಸಿ, ಪಾಪ ಮಾಡಿಸದೆ, ನಮ್ಮ ಕಾಳಜಿ ವಹಿಸುವವರ, ನಿಸ್ವಾರ್ಥಿಗಳ ಸಹವಾಸದಲ್ಲಿರಿಸಿ,  ಧರ್ಮಾಡದ, ಜ್ಙಾನ ಬೆಳಿಸಿಕೊಳ್ಳದ, ಭಕ್ತಿ ಮಾಡು  ಮೂರ್ಖತನದ ದುರವಸ್ಥೆಯನ್ನು  ಕಳೆದು ರಕ್ಷಿಸು ಸಂರಕ್ಷಿಸು ಎಂದು ಅನೇಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.*

ಈ ತರಹದ ಮೂರ್ಖರ ದಿನಾಚರಣೆಯನ್ನು ನನ್ನಂತಹ ಶತಮೂರ್ಖನನ್ನು ನಿಮ್ಮಂತಹ ಶುದ್ಧಮನಸ್ಕರಲ್ಲಿ ಸೇರಿಸಿಕೊಳ್ಳಿ.... 

ಈ ಮೂರ್ಖರ ದಿನಾಚರಣೆಗೆ ಯಾರೆಲ್ಲ ಮೂರ್ಖರು ಬರುತ್ತೀರೋ ಬನ್ನಿ, ಮೂರ್ಖರೆಲ್ಲರೂ ಸೇರಿ ಮೂರ್ಖರದಿನಾಚರಣೆಯನ್ನು ಮಾಡೋಣ.... 😅😅😅*


*✍✍✍ನ್ಯಾಸ....*

ಗೋಪಾಲದಾಸ.

ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*