_*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_
_*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_ ಬ್ರಾಹ್ಮಣ ಯುವಕರು ಕನ್ಯಾ ಸಿಗುತ್ತಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದು ಮತ್ತು ಬ್ರಾಹ್ಮಣ ಯುವತಿಯರು ಪ್ರೇಮಿಸಿ ಅನ್ಯಜಾತಿ ವಿವಾಹ ಆಗುತ್ತಿರುವುದು ಮುಖ್ಯಕಾರಣ. ಯಾರೋ ಒಬ್ಬ ವ್ಯಕ್ತಿ ಕನ್ಯಾ ಸಿಗದಿದ್ದರೆ ಅನ್ಯಜಾತಿ ವಿವಾಹ ಆಗಿ ತಪ್ಪೇನಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ. ಅದನ್ನು ಅನುಮೋದಿಸಿ ಹಲವಃ ಬ್ರಾಹ್ಮಣರು ಕಮೆಂಟ್ ಕೂಡ ಮಾಡಿದ್ದಾರೆ. ಆದರೆ ಇದು ಹೇಗೆಂದರೆ ನಿರುದ್ಯೋಗ ನಮಗೆ ಸಮಸ್ಯೆ ಅಂತ ಹೇಳಿ ಕಳ್ಳತನ , ಸುಲಿಗೆ, ರೌಡಿಯಿಸಂ ಮಾಡಲು ತೊಡಗಿದರೆ ತಪ್ಪು ಹೇಗೋ ಹಾಗೇ ಕನ್ಯಾ ಸಿಗುವುದಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದೂ ತಪ್ಪು. ಸಮಸ್ಯೆಗೆ ಪರಿಹಾರ ತಪ್ಪು ಮಾಡುವುದಲ್ಲ ಸಮಸ್ಯೆಯನ್ನೆ ಸರಿಮಾಡುವುದು. ಗೀತೆಯಲ್ಲಿ ಅರ್ಜುನ ಕೃಷ್ಣನಿಗೆ ಹೇಳುತ್ತಾನೆ ''ಯುದ್ಧ ಬೇಡ ಏಕೆಂದರೆ ಯುದ್ಧದಲ್ಲಿ ಅಪಾರ ಸೈನಿಕರು ಸಾಯುವುದರಿಂದ ಅವರ ಹೆಂಡತಿ ಮಕ್ಕಳು ಅನಾಥರಾಗುತ್ತಾರೆ ವರ್ಣ ಸಾಂಕರ್ಯ ಉಂಟಾಗಿ ಜನರು ಪತಿತರಾಗುತ್ತಾರೆ ನರಕಕ್ಕೆ ಗುರಿಯಾಗುತ್ತಾರೆ ಮತ್ತು ಅವರ ಪಿತೃಗಳು ಶ್ರಾದ್ಧಾದಿ ಕರ್ಮಗಳು ಇಲ್ಲದೆ ಸದ್ಗತಿ ಹೊಂದುವುದಿಲ್ಲ'' ಎಂದು ಹೇಳುತ್ತಾನೆ. ಮೇಲ್ನೋಟಕ್ಕೆ ಅರ್ಜುನನ ಮಾತು ಸರಿ ಎನಿಸಿದರೂ ಅವನದು ಅಜ್ಞಾನವೇ. ಏಕೆಂದರೆ ದುರ್ಯೋಧನ ರಾಜನಾಗಿದ್ದರೆ ಆ ರಾಜ್ಯವು ಎಲ್ಲಾ ರೀತಿಯಲ್ಲೂ ಪಾಪಗಳಿಂದ ತುಂಬಿಹೋಗಿ ಧರ್ಮವು ಪತನವಾಗಿ ಸರ್ವವೂ ನಾಶ...