*ನಾಳೆಯಿಂದ ಹೇಗೆ ಬದಲಾಗಿರುತ್ತೇನೇ ನೋಡು......


 *ನಾಳೆಯಿಂದ ಹೇಗೆ ಬದಲಾಗಿರುತ್ತೇನೇ ನೋಡು......*


ಅವಮಾನಿತನಿಂದ, ಸೋತವನಿಂದ, ಸಹಜವಾಗಿ  ಬರುವ ಮಾತು "ನಾಳೆಯಿಂದ ಹೇಗೆ ಬದಲಾಗುತ್ತೇನೆ ನೋಡು..." ಎಂದು.


ಅವಮಾನವಾಗಿದೆ, ಅಪಹಾಸ್ಯಕ್ಕೆ ತುತ್ತಾಗಿದಾನೆ,  ಸೋತು ಹೋಗಿದಾನೆ,  ಮನೆಯಲ್ಲಿ ಬೈದಿದ್ದಾರೆ ಎಂದಾದಾಗ ರಾತ್ರಿ ಮಲಗುವ ಮುಂಚೆ ಒಂದರ್ಧ ಘಂಟೆ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾನೆ. "ನಾನು ಬದಲಾಗಬೇಕು. ಅದೂ ಎಂದೋ ಅಲ್ಲ. ನಾಳೆ ಬೆಳಿಗ್ಗೆ ಆಗುವದರೊಳಗೆ" ಎಂದು.  ಈ ವಿಚಾರ ಬರುವದು ಸಹಜ. ಈ ವಿಚಾರ ಕಾರ್ಯರೂಪದಲ್ಲಿ ಬಂದರೆ ಅವನಷ್ಟು ಉನ್ನತಿ ಇನ್ಯಾರಿಗೂ ಇರದು. 


ಬೆಳಿಗ್ಗೆ ಆಯಿತು. ಸ್ವಲ್ಪ ಗಂಭೀರ. ಎಲ್ಲರಲ್ಲಿ ಬೆರೆಯುವದು ನಿಲ್ಲಿಸಿದ. ಏಕಾಂತ ಬಯಸಿದ. Strict ಆಗಿ ಓದಲಾರಂಭಿಸಿದ. ಹಲ್ಲು ಕಿಸಿಯೊದು ನಿಲ್ಲಿಸಿದ. ಹೀಗೆ ಒಂದೆರಡು ದಿನಗಳುರುಳಿತು ..... ಅಷ್ಟರಲ್ಲಿ ನಾಲ್ಕು ಜನ ಬಂದು "ಭಾಳ ಚೇಂಜ್ ಆಗಿಬಿಡಪ್ಪ" ಎಂದು ಹೇಳಿ ಹೊಗಳಿದರೋ ಮುಗಿತು  ಮತ್ತ ನಾಯಿ ಬಾಲ ಡೊಂಕೆ.....


ಇದೊಂದು ಬದಲಾವಣೆಯಾ? ? 


ಸರ್ವಥಾ ಅಲ್ಲ. ನನ್ನಲ್ಲಿ ಬದಲಾವಣೆ ಆಗಲಿಲ್ಲ. ನನ್ನ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಬಂತು ಅಷ್ಟೆ. ಇದು ನೈಜ ಬದಲಾವಣೆ ಎಂದು ಕರೆಯಲಾರದು. ನಮ್ಮ ಗುರುಗಳು ಒಂದು ಮಾತು ಹೇಳಬೇಕು " ನಿನ್ನಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದಾದರೆ ಅರ್ಧ ಘಂಟೆಯ ಸಮಯ. ಅರ್ಧಘಂಟೆಯ ಸುದೀರ್ಘ ವಿಚಾರ ಆಗ ತೆಗೆದುಕೊಂಡ ನಿರ್ಣಯಗಳು  ನಿನ್ನನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆ ಇತ್ತು ಎಂದಾಗಿದ್ದರೆ ಎಲ್ಲರೂ ರಾತೋ ರಾತ್ರಿ ಛೇಂಜ್ ಆಗಿಬಿಡುತ್ತಿದ್ದರು" ಎಂದು.


Negetiv ಜಿಡ್ಡುಗಳಿಂದಲೇ ನಿನಗೆ ಸೋಲು. ಅಪಹಾಸ. ಅವಮಾನ ಹೀಗಿರುವಾಗ ಈ ಜಿಡ್ಡು ಜಂಗು ಹೋಗಬೇಕಾದರೆ ಸುದೀರ್ಘ ಏಕಾಂತ ಬಯಸು. ೩೦ ದಿನ ೨೧ ದಿನ ೧೧ ದಿನ ಹೀಗೆ. 


ಸುಕ್ಷೇತ್ರವಾದ ಬದರಿ, ಮಳಖೇಡ, ಮಂತ್ರಾಲಯ, ಮಹಿಷಿ, ತಿರುಕೊಯಿಲೂರು, ಉಡುಪಿ, ಪಾಜಕ ಇಂತಹ ಏಕಾಂತವಿರುವ ಊರಿಗೆ ಹೋಗು. ಅಲ್ಲಿ ನೀನು,  ನಿನ್ನ ಪುಸ್ತಕಗಳು, ಜಪದ ಮಾಲೆ, ನಿನ್ನ ಬದಲಾವಣೆಗೆ ಬೇಕಾದ ಯೋಚನೆಗಳು  ಇವಗಳನ್ನು ಮಾತ್ರ ತೆಗೆದುಕೊಂಡು ಹೋಗು. ಆಗ ಮಾತ್ರ ನಿನ್ನನ್ನು ನೀ ಬದಲಾಯಿಸಿಕೊಳ್ಳಲು ಸಾಧ್ಯ ಎಂದು.


ಬದಲಾವಣೆಗೋಸ್ಕರ ಮೀಸಲಿಟ್ಟ ನಮ್ಮ ಸುದೀರ್ಘ ಸಮಯ ಹಾಗೂ ನಮ್ಮ ಬುದ್ಧಿಶಕ್ತಿ, ಜೊತೆಗೆ ದೈವೀಶಕ್ತಿಯಬಲ, ಅನೇಕ ಅವಲೋಕೋನೆಗಳ ಅನುಭವ ಮತ್ತು ಇವುಗಳಿಂದ   ತೆಗೆದುಕೊಳ್ಳುವ ದೃಢ ನಿರ್ಣಯ ಇವುಗಳು ಮಾತ್ರ ನನ್ನನ್ನು ಆಮೂಲಾಗ್ರ ಬದಲಿಸಬಹುದು.  


ನನಗೆ ಆದ ಅಪಹಾಸ, ಯಾದರಿಂದ ಸೋಲು ಆಗಿದೆ, ಯಾವದರಿಂದ ಅವಮಾನ ಎಂದು ಅಳಿದು ತೂಗಿ ಯೋಚನೆ ಮಾಡಿ ವಿಚಾರಿಸಿ ಅದಕ್ಕೆ ಬದಲಾವಣೆಯ ಛಾಪು ತರಬಹುದು. ಇದರಮೇಲೆ ನಮ್ಮನ್ನು ಬದಲಾಯಿಸುವ ಆಧ್ಯಾತ್ಮಿಕ ಶಕ್ತಿಯನ್ನೂ ಬೆಳಿಸಿಕೊಳ್ಳಬಹುದು. ಆಗ ಆದ ಬದಲಾವಣೆ ಬಹಳ ದಿನ ಉಳಿಯುವಂತಹದ್ದು. ಆಗ ಸಾಧಿಸಿದ ಬದಲವಣೆಯಿಂದ  ಗೆದ್ದ ಹೆಮ್ಮೆ ಪಡೆಯಬಹುದು. 


 "ಈ ಸಂತೆಯಲ್ಲಿ ನಿನ್ನನ್ನು ನೀ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನೀನು ಅವರಂತೆ ಆಗಬಹುದು. ಅಂತೆಯೇ  ಏಕಾಂತ ಬಯಸು" ಆದ್ದರಿಂದಲೇ ಮಹಾಜ್ಙಾನಿಗಳೆಲ್ಲರೂ  ಏಕಾಂತ ಬಯಿಸಿದರು. ತಮ್ಮನ್ನು ಬದಲಾಯಿಸಿಕೊಳ್ಳುವದರಲ್ಲದೇ ತಮ್ಮನ್ನು ನಂಬಿದವರನ್ನೂ ಬದಲಾಯಿಸುವ ಕೌಶಲವನ್ನೂ ಪಡೆದರು. 

ಜಪ ತಪ ಅಧ್ಯಯನ ಗುರು ದೇವತಾ ದೇವರುಗಳ ಸುದೀರ್ಘಸೆವಾ ಹಾಗೂ ಅನುಗ್ರಹಗಳು ಮಾತ್ರ ನಮ್ಮನ್ನು ಬದಲಾಯಿಸಬಹುದು. ಅವುಗಳು ಸಿಗುವದು ಏಕಾಂತದಲ್ಲಿ, ಹಾಗೂ ಸುದೀರ್ಘ ಸಮಯವನ್ನು ಮೀಸಲಿಟ್ಟಾಗಲೇ......


ಆದ್ದರಿಂದ "ನಾಳೆಯಿಂದಲೇ ಬದಲಾಗುವೆ.." ಎನ್ನುವದು ತಗೆದು ವರ್ಷದಲ್ಲಿ ಕೆಲದಿನ ನಮ್ಮ ಬದಲಾವಣೆಗೇ ಕೆಲ ಜಪ ಪಾರಾಯಣ ತೀರ್ಥಯಾತ್ರೆ ಕೆಲಪುಸ್ತಕಗಳ ಅಧ್ಯಯನ ಇತ್ಯಾದಿಗಳಲ್ಲಿ ತೊಡಗಿಕೊಳ್ಳೋಣ... 



*✍🏽✍🏽..ನ್ಯಾಸ*

ಗೋಪಾಲ ದಾಸ

ವಿಜಯಾಶ್ರಮ, ಸಿರಿವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*